ಚಿಂತಾಮಣಿ: ವಿದ್ಯಾರ್ಥಿಗಳೇ ಪೋಷಕರಿಗೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ ಎಂದು ಬುದ್ಧಿವಾದ ಹೇಳಬೇಕು ಎಂದು ಚಿಂತಾಮಣಿ ಉಪವಿಭಾಗದ ಡಿ ವೈ ಎಸ್ ಪಿ ಮುರುಳಿಧರ್ ಹೇಳಿದರು.
ಚಿಂತಾಮಣಿ ತಾಲ್ಲೂಕಿನ ಕೈವಾರ ಗ್ರಾಮದ ಶ್ರೀ ಬೈರೇಶ್ವರ ವಿದ್ಯಾಸಂಸ್ಥೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ,ಸಾರಿಗೆ ಇಲಾಖೆ, ವಕೀಲರ ಸಂಘ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ 37 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದ ನಂತರ ಮಾತನಾಡಿದರು.
ಚಿಂತಾಮಣಿ ನಗರ ಭಾಗದಲ್ಲಿರುವ ಟ್ರಾಫಿಕ್ ಸಿಗ್ನಲ್ಸ್ ಅನ್ನು ಬಹಳಷ್ಟು ಮಂದಿ ಪಾಲನೆ ಮಾಡುತ್ತಿಲ್ಲ ಜೀಬ್ರಾ ಕ್ರಾಸಿಂಗ್ ಬಿಟ್ಟು ಮುಂದೆ ವಾಹನಗಳನ್ನು ನಿಲ್ಲಿಸುತ್ತಾರೆ, ಪೊಲೀಸರು ಟ್ರಾಫಿಕ್ ಸಿಗ್ನಲ್ ನಲ್ಲಿ ನಿಂತಿದ್ದಾರೆ ಮಾತ್ರ ಕಾನೂನನ್ನು ಪಾಲನೆ ಮಾಡುತ್ತಾರೆ,ಪೊಲೀಸರ ಭಯ ಬಿಟ್ಟು ತಾವು ಖುದ್ದಾಗಿ ಕಾನೂನನ್ನು ಪಾಲನೆ ಮಾಡಬೇಕಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Chimul Election: ಬಿಳಿ ತಲೆಯ ಖಾಲಿ ಡಬ್ಬಗಳು ಸೋತಿದ್ದು, ಕೂಲಿ ಪಡೆದ ತೃಪ್ತಿಯಿದೆ: ಭರಣಿ ವೆಂಕಟೇಶ್
ಚಿಂತಾಮಣಿ ಸಹಾಯಕ ಸಾರಿಗೆ ಇಲಾಖೆಯ ಅಧಿಕಾರಿ ಬೈರಾರೆಡ್ಡಿರವರು ಮಾತನಾಡಿ, ರಸ್ತೆ ಅಪಘಾತಕ್ಕೆ ಕಾರಣ ಹಾಗೂ ಸಂಚಾರಿ ನಿಯಮಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ರಸ್ತೆ ಅಪಘಾತಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಿದರು.ಪೋಷಕರು ತಮ್ಮ ಮಕ್ಕಳಿಗೆ 18 ವರ್ಷ ವಯೋಮಿತಿ ಮೀರಿದ ನಂತರವೇ ವಾಹನ ಚಲಾಯಿಸುವಂತೆ ನೋಡಿಕೊಳ್ಳಬೇಕು. ಎಲ್.ಎಲ್.ಆರ್.ಹಾಗೂ ಡಿ.ಎಲ್. ಪಡೆದ ನಂತರವೇ ವಾಹನವನ್ನು ಚಲಾಯಿಸಲು ವಾಹನವನ್ನು ನೀಡಿದಲ್ಲಿ ಕಾನೂನು ನಿಯಮಗಳನ್ನು ಪಾಲಿಸಿದಂತಾಗುತ್ತದೆ ಎಂದರು.
ವೇದಿಕೆ ಕಾರ್ಯಕ್ರಮಕ್ಕಿಂತ ಮುಂಚೆ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿ ರಸ್ತೆ ಸುರಕ್ಷತೆ ಹಾಗೂ ವಾಹನ ಚಾಲನೆ ಮಾಡುವುದರ ಬಗ್ಗೆ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಮೋಟಾರ್ ವಾಹನ ನಿರೀಕ್ಷಕರಾದ ದಾಸೇಗೌಡ, ಎ ಆರ್ ಟಿ ಓ ಕಚೇರಿಯ ಅಧೀಕ್ಷಕರಾದ ದೇವರಾಜ್, ಎಫ್ ಡಿ ಏ ಶ್ರೀನಿವಾಸ್, ಶಾಲೆಯ ಅಧ್ಯಕ್ಷರಾದ ಸುಬ್ಬರೆಡ್ಡಿ, ಹೋಂ ಗಾರ್ಡ್ ಮಂಜು,ಸೇರಿದಂತೆ ಶಾಲೆಯ ಪ್ರಾಂಶುಪಾಲರು,ಶಿಕ್ಷಕರು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.