Chimul Election: ಬಿಳಿ ತಲೆಯ ಖಾಲಿ ಡಬ್ಬಗಳು ಸೋತಿದ್ದು, ಕೂಲಿ ಪಡೆದ ತೃಪ್ತಿಯಿದೆ: ಭರಣಿ ವೆಂಕಟೇಶ್
ನನ್ನ ಗೆಲುವಿನಲ್ಲಿ ಪಕ್ಷಾತೀತವಾಗಿ ಅನೇಕರು ಶ್ರಮಿಸಿದ್ದಾರೆ. ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ( Former MLA KP Bachegowda) ಆರೋಗ್ಯ ಸರಿಯಿಲ್ಲದಿದ್ದರೂ ಕೂಡ ನನ್ನ ಪರವಾಗಿ ಒಂದು ದಿನ ಬಹಿರಂಗ ಪ್ರಚಾರಕ್ಕೆ ಬಂದಿದ್ದಲ್ಲದೆ ಮನೆಯಲ್ಲಿದ್ದುಕೊಂಡೇ ನನ್ನ ಪರವಾಗಿ ಕೆಲಸ ಮಾಡಿದ್ದಾರೆ. ನುಗಿತಹಳ್ಳಿ ರವಿ 10 ದಿನಗಳ ಕಾಲ ನನ್ನ ಜತೆಗಿದ್ದು ಎಲ್ಲಾ ರೀತಿಯ ಸಹಾಯ ಮಾಡಿದ್ದಾರೆ.
ಭರಣಿ ವೆಂಕಟೇಶ್ -
ಚಿಕ್ಕಬಳ್ಳಾಪುರ: ಚಿಮುಲ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ನಾನೇ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಕೆಲವರು ನನ್ನ ವಿರುದ್ಧ ಯಲುವಹಳ್ಳಿ ರಮೇಶಣ್ಣ ಅವರನ್ನು ನಿಲ್ಲಿಸಿದರು. ಏನೇನೋ ಕೆಟ್ಟದಾಗಿ ಪ್ರಚಾರ ಮಾಡಿದರು. ಆದರೂ ಕಳೆದ 5 ವರ್ಷಗಳಿಂದ ಹಾಲು ಉತ್ಪಾದಕರಿಗಾಗಿ ನಾನು ಹರಿಸಿದ್ದ ಬೆವರಿಗೆ ಮತದಾರರು ಗೆಲುವಿನ ಕೂಲಿ ಕೊಟ್ಟಿದ್ದಾರೆ ಎಂಬ ಸಂತೋಷವಿದೆ ಎನ್ನುವುದು ಭರಣಿ ವೆಂಕಟೇಶ್ ಅವರ ಆತ್ಮವಿಶ್ವಾಸದ ಮಾತು.
ಹೌದು. ಭಾನುವಾರ ಜೂನಿಯರ್ ಕಾಲೇಜು ಆವರಣದಲ್ಲಿ ನಡೆದ ಚಿಮುಲ್ ಚುನಾವಣೆಯಲ್ಲಿ 24 ಮತಗಳ ಅಂತರದಿಂದ ಗೆಲುವು ಸಾಧಿಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದರು.
ನನ್ನ ಗೆಲುವಿನಲ್ಲಿ ಪಕ್ಷಾತೀತವಾಗಿ ಅನೇಕರು ಶ್ರಮಿಸಿದ್ದಾರೆ. ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ(
Former MLA KP Bachegowda) ಆರೋಗ್ಯ ಸರಿಯಿಲ್ಲದಿದ್ದರೂ ಕೂಡ ನನ್ನ ಪರವಾಗಿ ಒಂದು ದಿನ ಬಹಿರಂಗ ಪ್ರಚಾರಕ್ಕೆ ಬಂದಿದ್ದಲ್ಲದೆ ಮನೆಯಲ್ಲಿದ್ದುಕೊಂಡೇ ನನ್ನ ಪರವಾಗಿ ಕೆಲಸ ಮಾಡಿದ್ದಾರೆ. ನುಗಿತಹಳ್ಳಿ ರವಿ 10 ದಿನಗಳ ಕಾಲ ನನ್ನ ಜತೆಗಿದ್ದು ಎಲ್ಲಾ ರೀತಿಯ ಸಹಾಯ ಮಾಡಿದ್ದಾರೆ. ಹೀಗೆ ಎಲ್ಲಾ ಮತದಾರರು ನನ್ನ ಮೇಲೆ ವಿಶ್ವಾಸವಿಟ್ಟು ನನಗೆ ಮತ ಹಾಕಿಸಿದ್ದಾರೆ.ಅವರೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ಇದನ್ನೂ ಓದಿ: Congress into power in Chimul: ಕುಬೇರರ ಚುನಾವಣೆಗೆ ಸವಾಲು ಹಾಕುವಂತೆ ನಡೆದ ಹಾಲು ಉತ್ಪಾದಕರ ಸಹಕಾರಿ ಸಂಘದ ಚುನಾವಣೆ
ಯಲುವಹಳ್ಳಿ ರಮೇಶ್ ಅವರಿಗೆ ವಯಸ್ಸಾಗಿದೆ. ಭರಣಿ ಅವರಿಗೇ ಬೆಂಬಲಿಸಿ ಎಂದು ಅನೇಕರು ಹೇಳಿದ್ದರೂ ಹಠಕ್ಕೆ ಬಿದ್ದು ಅಭ್ಯರ್ಥಿ ಮಾಡಿದರು. ಈಗ ಮತದಾರರು ನನ್ನ ಗೆಲ್ಲಿಸಿ ಅವರನ್ನು ಸೋಲಿಸಿದ್ದಾರಲ್ಲ. ಇದಕ್ಕೆ ಏನು ಹೇಳುತ್ತೀರಿ? ಅಯ್ಯೋ ಯಾರು ಏನೇ ಹೇಳಿದರೂ ಮತದಾರರ ಪ್ರೀತಿಗೆ ಎಂದಿಗೂ ಮೋಸ ಮಾಡುವುದಿಲ್ಲ. 24 ಗಂಟೆಯೂ ನನ್ನ ಪೋನ್ ಆಫ್ ಮಾಡುವುದೇ ಇಲ್ಲ. ಇದು ನನ್ನ ಬದ್ಧತೆ. ರಮೇಶಣ್ಣ ಅವರ ಬಳಿ ದುಡ್ಡಿಗಾಗಿ ಹೋಗಿದ್ದವರು ಬೆಳಗ್ಗೆ ಒಂದು ಪಕ್ಷ ರಾತ್ರಿಗೆ ಇನ್ನೊಂದು ಪಕ್ಷ ಎನ್ನುವ ಖಾಲಿ ಡಬ್ಬಗಳ ಶಬ್ದಕ್ಕೆ ಅಂಜುವವ ನಾನಲ್ಲ. ಮತದಾರರು ಬಹಳ ಗೌಪ್ಯವಾಗಿ ಆಶೀರ್ವಾದ ಮಾಡಿದ್ದಾರೆ ಎಂಬುದು ಗೊತ್ತಾಯಿತಲ್ಲ ಎಂದು ತಿರುಗೇಟು ನೀಡಿದರು.
ಬಿಜೆಪಿ ಅಭ್ಯರ್ಥಿ ವಾಪಸ್ಸು ಪಡೆದಿದ್ದರಿಂದ ನಿಮಗೆ ಗೆಲುವು ಆಯಿತಾ ಎಂಬ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನನಗೆ ಅನೇಕರು ಮತ ಹಾಕಿದ್ದಾರೆ. ಶಾಸಕರು ಬಹಳ ದೊಡ್ಡವರು, ಅವರು ಚುನಾವಣೆಗೆ ನಿಂತಾಗ ಅವರಿಗೆ ಯಾವ ಊರು ಯಾವದಾರಿ ಗೊತ್ತಿರಲಿಲ್ಲ. ಕ್ಷೇತ್ರದ ಉದ್ದಗಲಕ್ಕೂ ಅವರ ಪರವಾಗಿ ಪ್ರಚಾರ ಮಾಡಿ ತನುಮನ ಚೆಲ್ಲಿ ಗೆಲ್ಲಿಸಲಾಗಿದೆ. ನನ್ನ ವಿರುದ್ಧ ಮತ ಚಲಾಯಿಸ ಬೇಕೆಂದು ಕೋಲಾರಕ್ಕೆ ಡೆಲಿಗೇಟ್ಸ್ಗಳನ್ನು ಕರೆದುಕೊಂದು ಹೋಗಿಟ್ಟಿದ್ದರು. ಅವರು ನನ್ನ ವಿರುದ್ಧ ಪ್ರಚಾರ ಮಾಡಿದರೂ ಮತದಾರರು ಕೈಹಿಡಿದರಲ್ಲಾ. ಭರಣಿ ವೆಂಕಟೇಶ್ ಕೆಲಸಗಾರ ಕೆಲಸಕ್ಕೆ ಕೂಲಿ ಕೊಟ್ಟಿದ್ದಾರೆ. ಶಾಸಕರು ಪೆರೇಸಂದ್ರ ಭಾಗದಲ್ಲಿ ಪಕ್ಷದ ಅಭ್ಯರ್ಥಿ ರಾಜಣ್ಣರಿಗೆ ಕೆಲಸ ಮಾಡಿಲ್ಲ. ಮಾಡಿದ್ದರೆ ಅವರು ಗೆಲ್ಲುತ್ತಿದ್ದರು.ರಾಜಣ್ಣ ಕಣ್ಣೀರಿಗೆ ಮುಂದಿನ ದಿನಗಳಲ್ಲಿ ಉತ್ತರ ದೊರೆಯಲಿದೆ ಎಂದರು.
ಚಿಮುಲ್ ಅಧ್ಯಕ್ಷಸ್ಥಾನಕ್ಕೆ ನಾನು ಸ್ಪರ್ಧೆ ಮಾಡುವಷ್ಟು ದೊಡ್ಡವನಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಈಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅವರ ತೀರ್ಮಾನಕ್ಕೆ ನಾವೆಲ್ಲಾ ಬದ್ಧರಿದ್ದೇವೆ ಎಂದರು.