ಗೌರಿಬಿದನೂರು: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಶಾಖೆಯು ನಗರದ ಡಾ. ಎಚ್ಚೆನ್ ಕಲಾಭವನ ದಲ್ಲಿ ಡಿ.20ರಂದು ಸರ್ಕಾರಿ ನೌಕರರ ಸಮಾವೇಶ ಮತ್ತು ಅಭಿನಂದನಾ ಸಮಾರಂಭವನ್ನು ಹಮ್ಮಿಕೊಂಡಿದೆ ಎಂದು ಸರಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಆರ್. ಮಂಜುನಾಥ ತಿಳಿಸಿದ್ದಾರೆ.
ಇದನ್ನೂ ಓದಿ: Gauribidanur News: ನಾಳೆ ಶಿವಾಜಿ ಪ್ರತಿಮೆ ಅನಾವರಣ
ನಗರದ ತಾಲೂಕು ಪಂಚಾಯತಿಯ ಸಾಮರ್ಥ್ಯ ಸೌಧದಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿ ಯನ್ನು ಉದ್ದೇಶಿಸಿ ಮಾತನಾಡಿದ ಅವರು, ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡರು(MLA K.H. Puttaswamy Gowda) ಕಾರ್ಯಕ್ರಮ ಉದ್ಘಾಟಿಸಲಿದ್ದು, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್. ಷಡಕ್ಷರಿ, ತಹಸೀಲ್ದಾರ್ ಕೆ.ಎಂ. ಅರವಿಂದ್, ತಾಪಂ ಇಓ ಜಿ.ಕೆ. ಹೊನ್ನಯ್ಯ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಚನ್ನಪ್ಪ ಎಸ್ ಗೌಡ ನಾಯ್ಕರ್, ಬಿಇಓ ಜಿ. ಗಂಗರೆಡ್ಡಿ ಭಾಗವಹಿಸ ಲಿದ್ದು, ತಾಲೂಕು ಅಧ್ಯಕ್ಷ ಎನ್.ಆರ್. ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಡಿ. ಶಿವಶಂಕರ್, ಖಜಾಂಚಿ ಎಲ್.ಎ. ಶ್ರೀಧರ್, ರಾಜ್ಯ ಪರಿಷತ್ ಸದಸ್ಯ ಎಂ.ಎನ್. ಕೃಷ್ಣಪ್ಪ, ಕಾರ್ಯಾಧ್ಯಕ್ಷ ಜೆ. ರಾಜೇಶ್, ಉಪಾಧ್ಯಕ್ಷ ಅಂಜಿನಪ್ಪ, ಕೆ. ರವಿ, ಅಮರ ನಾರಾಯಣ್, ನಾರಾಯಣಪ್ಪ ಬಾಬು, ಪುಷ್ಪಲತಾ, ಪೀರುಖಾನ್ ಹಾಗೂ ಇನ್ನಿತರರು ಭಾಗವಹಿಸಿದ್ದರು.