Gauribidanur News: ನಾಳೆ ಶಿವಾಜಿ ಪ್ರತಿಮೆ ಅನಾವರಣ
ತಾಲೂಕಿನ ತೊಂಡೇಬಾವಿ ಹೋಬಳಿಯ ದ್ಯಾವಸಂದ್ರ ಗ್ರಾಮದಲ್ಲಿ ಡಿ-14 ರಂದು ಭಾನುವಾರ ಶ್ರೀ ಛತ್ರಪತಿ ಶಿವಾಜಿ ಯುವಕರ ಬಳಗದ ವತಿಯಿಂದ ,ಹಿಂದುವಿ ಸಾಮ್ರಾಜ್ಯ ಸ್ಥಾಪಕ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಅನಾವರಣಗೊಳಿಸುವ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದೆ
-
ಗೌರಿಬಿದನೂರು:ತಾಲೂಕಿನ ತೊಂಡೇಬಾವಿ ಹೋಬಳಿಯ ದ್ಯಾವಸಂದ್ರ ಗ್ರಾಮದಲ್ಲಿ ಡಿ.14 ರಂದು ಭಾನುವಾರ ಶ್ರೀ ಛತ್ರಪತಿ ಶಿವಾಜಿ ಯುವಕರ ಬಳಗದ ವತಿಯಿಂದ ,ಹಿಂದುವಿ ಸಾಮ್ರಾಜ್ಯ ಸ್ಥಾಪಕ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಅನಾವರಣಗೊಳಿಸುವ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ: Gauribidanur News: ಪ್ರತಿಭಾ ಕಾರಂಜಿ, ಪಂಚಮಿಗೆ ಪ್ರಥಮ ಬಹುಮಾನ
ಡಿ.14 ಭಾನುವಾರ ಬೆಳಗ್ಗೆ ದ್ಯಾವಸಂದ್ರ ಗ್ರಾಮದಲ್ಲಿ ಗಂಗೆಪೂಜೆ,ಗೋಪೂಜೆ ಮುಂತಾದ ದೇವತಾ ಕಾರ್ಯಗಳ ನಂತರ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಉತ್ಸವ ಮೂರ್ತಿಯನ್ನು ಹೂವಿನ ಪಲ್ಲಕಿಯಲ್ಲಿ ಶ್ರೀ ಶನೇಶ್ವರ ದೇವಸ್ಥಾನದಿಂದ ಮೆರವಣಿಗೆ ಮೂಲಕ ತರಲಾಗುವುದು, ಮೆರವಣಿಗೆ ಯಲ್ಲಿ ವೀರಗಾಸೆ ,ಡೊಳ್ಳುಕುಣಿತ,ನಾದಸ್ವರಗಳ ತಂಡಗಳು ಪಾಲ್ಗೊಳ್ಳಲಿದ್ದು ,ಶಿವಾಜಿ ಮಹಾ ರಾಜರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಕ್ಷೇತ್ರದ ಶಾಸಕ ಕೆಎಚ್.ಪುಟ್ಟಸ್ವಾಮಿಗೌಡರು ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಸಂಸದ ಡಾ.ಕೆ ಸುಧಾಕರ್ ,ಕರ್ನಾಟಕ ಕ್ಷತ್ರಿಯ ಮರಾಠ ಒಕ್ಕೂಟದ ಅಧ್ಯಕ್ಷ ಶ್ಯಾಮಸುಂದರ್ ಗಾಯಕ್ವಾಡ್, ಕರ್ನಾಟಕ ಕ್ಷತ್ರಿಯ ಮರಾಠ ಒಕ್ಕೂಟದ ಉಪಾಧ್ಯಕ್ಷ ಡಿಎಂ.ಲಕ್ಷ್ಮಣ್ ರಾವ್, ಕೋಚಿಮುಲ್ ನಿರ್ದೇಶಕ ಜೆ.ಕಾಂತರಾಜು, ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರಾಮರೆಡ್ಡಿ, ಮುಖ್ಯ ಭಾಷಣಕಾರರಾಗಿ ಸಾಹಿತಿ ಜಗನ್ನಾಥ್ ರಾವ್ ಬಹುಳೆ ಹಾಗೂ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.