Shidlaghatta News: ಜಿಎಸ್‌ಟಿ ಕಡಿತದಿಂದ ಬಡವರು ಮತ್ತು ಮಧ್ಯಮ ವರ್ಗದವರಿಗೆ ಹೆಚ್ಚು ಅನುಕೂಲವಾಗಲಿದೆ : ಸೀಕಲ್ ರಾಮಚಂದ್ರಗೌಡ
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜನಾಕಾಂಕ್ಷೆಯಲ್ಲಿದ್ದ ಜಿಎಸ್‌ಟಿ ಸುಧಾರಣೆಗಳನ್ನು ಜಾರಿಗೆ ತಂದಿರುವುದು ದೇಶಾದ್ಯಂತ ಹರ್ಷ ಹಾಗೂ ಆಶಾಭಾವನೆ ಮೂಡಿಸಿದೆ. ಈ ನಿರ್ಧಾರವು ಕೇವಲ ತೆರಿಗೆ ವ್ಯವಸ್ಥೆಯ ಬದಲಾವಣೆಯಲ್ಲ, ಇದು ಆರ್ಥಿಕ ಪಾರದರ್ಶಕತೆ, ವ್ಯವಹಾರ ಸುಲಭತೆ ಮತ್ತು ಜನಸ್ನೇಹಿ ಆಡಳಿತದ ಹೊಸ ಅಧ್ಯಾಯವಾಗಿದೆ

ಜಿಎಸ್‌ಟಿ ಕಡಿತದಿಂದ ಬಡವರು ಮತ್ತು ಮಧ್ಯಮ ವರ್ಗದವರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಹೇಳಿದರು. -

ಶಿಡ್ಲಘಟ್ಟ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮಾಡಿರುವ ಜಿಎಸ್‌ಟಿ ಕಡಿತ ನಿರ್ಧಾರವು ದೇಶದ ಜನರಿಗೆ ದಸರಾ ಉಡುಗೊರೆಯಾಗಿದೆ. ಇದರಿಂದಾಗಿ ಅಗತ್ಯ ವಸ್ತುಗಳ ಬೆಲೆ ಇಳಿಯಲು ಸಹಾಯವಾಗಲಿದ್ದು, ಉತ್ಪಾದನಾ ಕ್ಷೇತ್ರಕ್ಕೆ ದೊಡ್ಡ ಶಕ್ತಿಯನ್ನು ತುಂಬಿ ಬಡವರು ಮತ್ತು ಮಧ್ಯಮ ವರ್ಗದವರಿಗೆ ಹೆಚ್ಚು ಅನುಕೂಲ ಮಾಡಿ ಕೊಡಲಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಸೀಕಲ್ ರಾಮಚಂದ್ರಗೌಡ ಸಂತಸ ವ್ಯಕ್ತಪಡಿಸಿದರು.
ನಗರದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ಜಿ.ಎಸ್.ಟಿ ಇಳಿಕೆಯ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜಿಎಸ್‌ಟಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕನಸಿನ ಕೂಸು. ಅದನ್ನು ನನಸು ಮಾಡಿದ್ದು ನರೇಂದ್ರ ಮೋದಿ ಸರ್ಕಾರ. ಇದರಲ್ಲಿ ಯಾವುದೇ ರಾಜಕೀಯ ದುರಾಲೋಚನೆ ಇರಲಿಲ್ಲ ಎಂದರು.
ಇದನ್ನೂ ಓದಿ: Shidlaghatta News: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಚಾಲನೆ ತಹಶೀಲ್ದಾರ್ ಗಗನ ಸಿಂಧು
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜನಾಕಾಂಕ್ಷೆಯಲ್ಲಿದ್ದ ಜಿಎಸ್‌ಟಿ ಸುಧಾರಣೆಗಳನ್ನು ಜಾರಿಗೆ ತಂದಿರುವುದು ದೇಶಾದ್ಯಂತ ಹರ್ಷ ಹಾಗೂ ಆಶಾಭಾವನೆ ಮೂಡಿಸಿದೆ. ಈ ನಿರ್ಧಾರವು ಕೇವಲ ತೆರಿಗೆ ವ್ಯವಸ್ಥೆಯ ಬದಲಾವಣೆಯಲ್ಲ, ಇದು ಆರ್ಥಿಕ ಪಾರದರ್ಶಕತೆ, ವ್ಯವಹಾರ ಸುಲಭತೆ ಮತ್ತು ಜನಸ್ನೇಹಿ ಆಡಳಿತದ ಹೊಸ ಅಧ್ಯಾಯವಾಗಿದೆ ಎಂದರು.
ನಗರದ ಕೋಟೆ ವೃತ್ತದಿಂದ ಬಿಜೆಪಿ ಬಿಜೆಪಿ ಸೇವಾ ಸೌಧ ವರಿಗೂ ಕಾಲ್ನಡಿಗೆ ಜಾತ ಮೂಲಕ ಜಿ.ಎಸ್.ಟಿ ಇಳಿಕೆಯ ಉಡುಗೊರೆಗೆ.ಮೋದಿ ಸರ್ಕಾರಕ್ಕೆ ಧನ್ಯವಾದಗಳು ತಿಳಿಸಿದರು.
ಸಂದರ್ಭದಲ್ಲಿ ಮಾಜಿ ಶಾಸಕ ಎಂ ರಾಜಣ್ಣ,ಚಿಂತಾಮಣಿ ವೇಣುಗೋಪಾಲ್,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಧು ಸೂರ್ಯನಾರಾಯಣ,ಅಶೋಕ್ ಹಿರಿಯ ಮುಖಂಡ ಲಕ್ಷ್ಮಿ ನಾರಾಯಣ ಗುಪ್ತ,ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ ನಿರ್ಮಲಮ್ಮ, ಜಿಲ್ಲಾ ಕಾರ್ಯದರ್ಶಿ ನಂದೀಶ್, ತಾಲೂಕು ಅಧ್ಯಕ್ಷ ಸೀಕಲ್ ಆನಂದ್ ಗೌಡ, ತಾಲೂಕು ಮಹಿಳಾ ಘಟಕದ ಅಧ್ಯಕ್ಷ ಚಾತುರ್ಯ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಮುಖಂಡರುಗಳು ಹಾಜರಿದ್ದರು.