Chikkaballapur News: ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಅಂಗವಾಗಿ ದುರ್ಗಾ ಪೂಜೆ, ಅತಿ ರುದ್ರ ಮಹಾ ಯಜ್ಞ ಆರಂಭ: ಭಕ್ತಿಯಿಂದ ಕೈಮುಗಿದ ಧನ್ಯರಾದ ಭಕ್ತರು
ಶೃಂಗೇರಿ ಹಾಗೂ ವಿವಿಧ ಭಾಗಗಳಿಂದ ಬಂದಿರುವ ೧೨೧ ಪುರೋಹಿತರು ಮಂತ್ರ ಪಠಣ ಗಳೊಂದಿಗೆ ಶಾಸ್ತ್ರೋಕ್ತವಾಗಿ ಅತಿ ರುದ್ರ ಮಹಾ ಯಜ್ಞದ ವಿಧಿ ವಿಧಾನಗಳನ್ನು ಆರಂಭಿಸಿದರು. ಗಣಪತಿ ಪೂಜೆಯೊಂದಿಗೆ ಯಾಗವನ್ನು ಆರಂಭಿಸಲಾಯಿತು. ನವರಾತ್ರಿ ಹೋಮ ಹಾಗೂ ದುರ್ಗಾ ಪೂಜೆಯು ಸತ್ಯ ಸಾಯಿ ಗ್ರಾಮದಲ್ಲಿ ನಡೆಯಲಿದೆ.

-

ಚಿಕ್ಕಬಳ್ಳಾಪುರ: ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ'ದ 38ನೇ ದಿನವಾದ ಸೋಮ ವಾರ ೧೧ ದಿನಗಳ ನವರಾತ್ರಿ ಉತ್ಸವ ಪ್ರಾರಂಭವಾಯಿತು.
ಮೊದಲ ದಿನ ಅತಿ ರುದ್ರ ಮಹಾಯಜ್ಞವು ಸಡಗರ ಸಂಭ್ರಮ ಹಾಗೂ ವೈಭವದಿಂದ ಆರಂಭವಾಯಿತು. ಸದ್ಗುರು ಶ್ರೀ ಮಧುಸೂದನ ಸಾಯಿ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಚಾಲನೆ ನೀಡಿದರು.
ಶೃಂಗೇರಿ ಹಾಗೂ ವಿವಿಧ ಭಾಗಗಳಿಂದ ಬಂದಿರುವ ೧೨೧ ಪುರೋಹಿತರು ಮಂತ್ರ ಪಠಣ ಗಳೊಂದಿಗೆ ಶಾಸ್ತ್ರೋಕ್ತವಾಗಿ ಅತಿ ರುದ್ರ ಮಹಾ ಯಜ್ಞದ ವಿಧಿ ವಿಧಾನಗಳನ್ನು ಆರಂಭಿಸಿ ದರು. ಗಣಪತಿ ಪೂಜೆಯೊಂದಿಗೆ ಯಾಗವನ್ನು ಆರಂಭಿಸಲಾಯಿತು. ನವರಾತ್ರಿ ಹೋಮ ಹಾಗೂ ದುರ್ಗಾ ಪೂಜೆಯು ಸತ್ಯ ಸಾಯಿ ಗ್ರಾಮದಲ್ಲಿ ನಡೆಯಲಿದೆ.
ಇದನ್ನೂ ಓದಿ: China Masters: ಫೈನಲ್‌ನಲ್ಲಿ ಭಾರತದ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಜೋಡಿಗೆ ಆಘಾತ!
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಸದ್ಗುರು ಶ್ರೀ ಮಧುಸೂದನ ಸಾಯಿ, ಲೋಕ ಕಲ್ಯಾಣಕ್ಕಾಗಿ ಯಾಗಗಳನ್ನು ಮಾಡುತ್ತಿದ್ದೇವೆ. ಇದರಲ್ಲಿ ಬೇರೆ ಯಾವುದೇ ಉದ್ದೇಶವಿಲ್ಲ. ಜಗತ್ತಿನಲ್ಲಿ ಸಮೃದ್ಧಿ ಮತ್ತು ಶಾಂತಿ ನೆಲೆಸಬೇಕೆಂದು ನಮ್ಮ ಪ್ರಾರ್ಥನೆ. ಇದಕ್ಕಾಗಿ ಅತಿ ರುದ್ರ ಮಹಾ ಯಜ್ಞವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
ಈ ಯಾಗವು ಜಗತ್ತಿಗೆ ಸಮೃದ್ಧಿಯನ್ನು ತರಲಿದೆ. ಲೋಕ ಹಿತ, ಲೋಕ ಕಲ್ಯಾಣ ಹಾಗೂ ಪರಹಿತಕ್ಕಾಗಿ ಇವನ್ನು ಮಾಡುತ್ತಿದ್ದೇವೆ. ಇವುಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಪೂಜೆ ಮಾಡಿದಾಗ ಎಲ್ಲ ದೇವತೆಗಳ ಆಶೀರ್ವಾದ ಖಂಡಿತ ಸಿಗುತ್ತದೆ. ಇವತ್ತು ದೇವಲೋಕ ದಲ್ಲಿ ಇರುವಂತೆ ಭಾಸವಾಗುತ್ತಿದೆ. ಎಲ್ಲ ದೇವತೆಗಳೂ ಇಲ್ಲಿದ್ದಾರೆ. ಅಧಿ ದೇವತೆಗಳು, ಕ್ಷೇತ್ರದ ದೇವತೆಗಳ ಉಪಸ್ಥಿತಿಯೂ ಇಲ್ಲಿದೆ. ಇವರ ಆಶೀರ್ವಾದ ಪಡೆಯುವ ನಾವು ತುಂಬಾ ಅದೃಷ್ಟಶಾಲಿಗಳು. ದೇವತೆಗಳು ಭೌತಿಕವಾಗಿ ಲಭ್ಯವಿಲ್ಲದಿದ್ದರೂ ಸೂಕ್ಷ್ಮ ಶಕ್ತಿಗಳಾಗಿ ನಂದಿಗೆ ಇದ್ದಾರೆ ಎಂದರು.
ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಅವರ ಇಡೀ ಜೀವನದಲ್ಲಿ ಪ್ರೀತಿ ಮತ್ತು ಸೇವೆ ವ್ಯಾಪಿಸಿ ಕೊಂಡಿದ್ದರು. ಅವರನ್ನು ಶಿವಶಕ್ತಿ ಎಂದು ನಂಬಿ ಪೂಜಿಸಲಾಗುತ್ತಿದೆ. ಜಗತ್ತಿ ನಾದ್ಯಂತ ಎಲ್ಲಾ ಭಕ್ತರಿಗೆ ನಮ್ಮ ಪ್ರೀತಿ ಮತ್ತು ಸೇವೆ ಯಾವಾಗಲೂ ಇರುತ್ತದೆ. ೨೦೧೫ ರಲ್ಲಿ ಅತಿ ರುದ್ರ ಮಹಾ ಯಾಗ ನಡೆಸುವಂತೆ ಸತ್ಯ ಸಾಯಿ ಬಾಬಾ ಹೇಳಿದ್ದರು. ಅದರಂತೆ ಯಾಗವನ್ನು ನಡೆಸಿಕೊಂಡು ಬರುತ್ತಿದ್ದೇವೆ. ಅತಿ ರುದ್ರ ಮಹಾ ಯಾಗ ಆರಂಭಿಸಿದ ನಂತರ ಈ ಭಾಗದಲ್ಲಿ ಮಳೆ ಉತ್ತಮವಾಯಿತು. ದೇವರ ಅನುಗ್ರಹದಿಂದ ಕಳೆದ ೧೦ ವರ್ಷಗಳಿಂದ ಈ ಪ್ರದೇಶದಲ್ಲಿ ನೀರಿಗೆ ಕೊರತೆಯಾಗಿಲ್ಲ. ಯಜ್ಞಗಳು ಮಳೆ ಬರಲು ಸಹಕಾರಿ ಎಂದರು.
ಭಾರತಕ್ಕೆ ಸ್ವಾತಂತ್ರ‍್ಯ ಬಂದು ೧೦೦ ವರ್ಷಗಳಾಗುವ ಹೊತ್ತಿಗೆ ಜಿಡಿಪಿಯಲ್ಲಿ ವಿಶ್ವದಲ್ಲೇ ಅಗ್ರ ಸ್ಥಾನಕ್ಕೇರುತ್ತದೆ. ದೇಶದಲ್ಲಿರುವ ಹೆಚ್ಚಿನ ಯುವಜನರು ಪ್ರತಿಭಾನ್ವಿತರಾಗಿದ್ದಾರೆ. ಇವರೆಲ್ಲರೂ ದೇಶವನ್ನು ಖಚಿತವಾಗಿ ಮುಂದಕ್ಕೆ ಕೊಂಡೊಯ್ಯುತ್ತಾರೆ. ಪ್ರಧಾನಿ ಮತ್ತವರ ಸಂಪುಟದಲ್ಲಿರುವ ಶೋಭಾ ಕರಂದ್ಲಾಜೆ ಸೇರಿದಂತೆ ಎಲ್ಲರೂ ಅದ್ಭುತವಾಗಿ ಕೆಲಸ ಮಾಡು ತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಸರ್ ಎಂ ವಿಶ್ವೇಶ್ವರಯ್ಯ ಅವರ ಹುಟ್ಟಿದ ಸ್ಥಳದಿಂದಾಗಿ ಗುರುತಿಸಿಕೊಂಡಿದ್ದ ಮುದ್ದೇನಹಳ್ಳಿಯು ಇದೀಗ ಸಾಮಾಜಿಕ ಮತ್ತು ಧಾರ್ಮಿಕ ಸೇವೆಗಳಿಂದ ಗುರುತಿಸಿಕೊಳ್ಳುತ್ತಿದೆ. ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಮುದ್ದೇನಹಳ್ಳಿಯನ್ನು ಸಂಪೂರ್ಣವಾಗಿ ಬದಲಾಯಿಸಿದ್ದಾರೆ. ಸದ್ಗುರುಗಳು ಈ ಸ್ಥಳವನ್ನು ಸ್ವರ್ಗವನ್ನಾಗಿ ಬದಲಾಯಿಸಿದ್ದಾರೆ. ಅವರಿಗೆ ಧನ್ಯವಾದ ಹೇಳುತ್ತೇನೆ ಎಂದರು.
ದೇಶದಲ್ಲೇ ಅತ್ಯುತ್ತಮ ಆಸ್ಪತ್ರೆಯನ್ನು ನಿರ್ಮಿಸಿ ಆರೋಗ್ಯ ಸೇವೆಯನ್ನು ನೀಡುವ ನಿಟ್ಟಿ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ ಮತ್ತು ಪೌಷ್ಟಿಕ ಆಹಾರ ನೀಡುವ ಕೆಲಸ ಮಾಡು ತ್ತಿದ್ದಾರೆ. ಒಂದು ಹೊಸ ಜಗತ್ತನ್ನು ನಿರ್ಮಾಣ ಮಾಡಬೇಕೆಂಬ ಸದ್ಗುರುಗಳ ಸಂಕಲ್ಪಕ್ಕೆ ನಾವೆಲ್ಲರೂ ಕೈಜೋಡಿಸಬೇಕು, ಅವ???ಂದಿಗೆ ಮುಂದಕ್ಕೆ ಸಾಗಬೇಕು. ಅವರ ಸಂಕಲ್ಪ ತುಂಬಾ ದೊಡ್ಡದಾಗಿದ್ದು, ನಾವೆಲ್ಲರೂ ಅವರೊಂದಿಗೆ ನಿಲ್ಲೋಣ ಎಂದು ಹೇಳಿದರು.