ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shidlaghatta News: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಚಾಲನೆ ತಹಶೀಲ್ದಾರ್ ಗಗನ ಸಿಂಧು

ಇದೊಂದು ರಾಜ್ಯ ಸರ್ಕಾರದ ಮಹತ್ವದ ಕೆಲಸ. ಎಲ್ಲ ಗಣತಿದಾರರು ತಮ್ಮ ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕು. ರಾಜ್ಯ ಸರ್ಕಾರದ ಆದೇಶದಂತೆ ಸೆಪ್ಟೆಂಬರ್‌ 22ರಿಂದ ಅಕ್ಟೋಬರ್‌ 7ರವರೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯಲಿದೆ. ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಲಾಗುತ್ತಿದೆ. ಹೀಗಾಗಿ, ತಾಲೂಕು ಮಟ್ಟದ ಅಧಿಕಾರಗಳಿಗೆ ತರಬೇತಿ ನೀಡಲಾಗಿದೆ. ಅವರುಗಳಿಗೆ ಅಗತ್ಯ ಕೈಪಿಡಿ ಮತ್ತು ಆ್ಯಪ್ ಬಗ್ಗೆಯೂ ತಿಳಿಸಲಾಗಿದೆ”

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಚಾಲನೆ ತಹಶೀಲ್ದಾರ್ ಗಗನ ಸಿಂಧು

-

Ashok Nayak Ashok Nayak Sep 22, 2025 10:02 PM

ಶಿಡ್ಲಘಟ್ಟ ; ರಾಜ್ಯ ಸರ್ಕಾರದ ನಿರ್ದೇಶನದಂತೆ ಸೆಪ್ಟೆಂಬರ್‌ 22ರಿಂದ ಅಕ್ಟೋಬರ್ 7ರವರೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಿದ್ಧತೆ ಮಾಡಿಕೊಂಡಿದ್ದು, ಪ್ರತಿ ಗಣತಿದಾರನಿಗೆ 150 ಮನೆಗಳ ಜವಾಬ್ದಾರಿ ವಹಿಸಿದೆ ಎಂದು  ತಹಶೀಲ್ದಾರ್  ಗಗನ ಸಿಂಧು ತಿಳಿಸಿದರು.

ತಾಲ್ಲೂಕಿನ ಬಶೇಟಹಳ್ಳಿ ಗ್ರಾಮದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧ ಪಟ್ಟಂತೆ ಸೋಮವಾರ ಹಮ್ಮಿಕೊಂಡಿದ್ದ ಗಣತಿದಾರರಿಗೆ ಬಗ್ಗೆ ಜನರಿಗೆ ಅರಿವು ಮೂಡಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಇದನ್ನೂ ಓದಿ: Shidlaghatta News: ವಿಶ್ವದ ಮೊದಲ ಎಂಜಿನಿಯರ್ ಸಮುದಾಯ ಎಂದರೆ ವಿಶ್ವಕರ್ಮರಾಗಿದ್ದಾರೆ ಎಂದು ಶಾಸಕ ಬಿ.ಎನ್ ರವಿಕುಮಾರ್

ಇದೊಂದು ರಾಜ್ಯ ಸರ್ಕಾರದ ಮಹತ್ವದ ಕೆಲಸ. ಎಲ್ಲ ಗಣತಿದಾರರು ತಮ್ಮ ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕು. ರಾಜ್ಯ ಸರ್ಕಾರದ ಆದೇಶದಂತೆ ಸೆಪ್ಟೆಂಬರ್‌ 22ರಿಂದ ಅಕ್ಟೋಬರ್‌ 7ರವರೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯಲಿದೆ. ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಲಾಗುತ್ತಿದೆ. ಹೀಗಾಗಿ, ತಾಲೂಕು ಮಟ್ಟದ ಅಧಿಕಾರಗಳಿಗೆ ತರಬೇತಿ ನೀಡಲಾಗಿದೆ. ಅವರುಗಳಿಗೆ ಅಗತ್ಯ ಕೈಪಿಡಿ ಮತ್ತು ಆ್ಯಪ್ ಬಗ್ಗೆಯೂ ತಿಳಿಸಲಾಗಿದೆ” ಎಂದರು.

ತಾಲ್ಲೂಕಿನಲ್ಲಿ ಬಹುತೇಕ ಮನೆಗಳಿಗೆ ಸ್ಟಿಕ್ಕರ್ ಅಂಟಿಸಿ. ಪ್ರತಿ ಗಣತಿದಾರರು ಸುಮಾರು 150 ಮನೆಗಳಿಗೆ ಸಮಿಕ್ಷೆ ಮಾಡಬೇಕಾಗಿದೆ. ಈ ಸಮೀಕ್ಷೆ ನಿಗದಿತ ಅವಧಿಯೊಳಗೆ ಮುಗಿಸ ಬೇಕು. ಗಣತಿದಾರರು ಕೇಳುವ 60 ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಆಶಾ ಕಾರ್ಯಕರ್ತೆ ಯರ ಮೂಲಕ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ” ಎಂದು ಹೇಳಿದರು.

ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್, ಸೇರಿದಂತೆ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಿಬ್ಬಂದಿ, ರಾಜಸ್ವ ನಿರೀಕ್ಷಕರು ಬಶೆಟ್ಟಳ್ಳಿ ಹೋಬಳ ಹಾಜ ರಿದ್ದರು.