ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chikkaballapur News: ಅರೂರು ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಜಿ.ವಿ.ಜಗದೀಶ್, ಉಪಾಧ್ಯಕ್ಷರಾಗಿ ಆದಿನಾರಾಯಣಪ್ಪ (ಕೊಂಡಪ್ಪ) ಅವಿರೋಧ ಆಯ್ಕೆ

ಅರೂರು ವ್ಯವಸಾಯೋತ್ಪನ್ನ ಸಹಕಾರ ಸಂಘಕ್ಕೆ ಐವತ್ತು ವರ್ಷಗಳ ಇತಿಹಾಸವಿದ್ದು, ಹಿರಿಯರು ಸಂಘವನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಬಂದಿದ್ದಾರೆ. ಸಂಘ ಯಾವತ್ತೂ ಡಿಫಾಲ್ಟ್ ಆಗಿಲ್ಲ.ಹಿರಿಯರ ಮಾರ್ಗದರ್ಶನದಲ್ಲಿ ಸಂಘಕ್ಕೆ ಮತ್ತಷ್ಟು ಒಳ್ಳೆಯ ಹೆಸರು ತರುವ ಉದ್ದೇಶ ಹೊಂದಿದ್ದೇವೆ. ರಾಜ್ಯದ ಟಾಪ್ ಟೆನ್ ಸಹಕಾರ ಸಂಘಗಳ ಪಟ್ಟಿಯಲ್ಲಿ ನಮ್ಮ ಸಂಘ ಇರಬೇಕು ಎಂಬ ಗುರಿ ಹೊಂದಿದ್ದೇವೆ.

ಅರೂರು ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಜಿ.ವಿ.ಜಗದೀಶ್ ಅವಿರೋಧ ಆಯ್ಕೆ

-

Ashok Nayak
Ashok Nayak Feb 16, 2026 8:18 PM

ಚಿಕ್ಕಬಳ್ಳಾಪುರ: ಅರೂರು ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಜಿ.ವಿ.ಜಗದೀಶ್, ಉಪಾಧ್ಯಕ್ಷ ರಾಗಿ ಆದಿನಾರಾಯಣಪ್ಪ (ಕೊಂಡಪ್ಪ) ಅವಿರೋಧ ಆಯ್ಕೆಯಾಗಿದ್ದಾರೆ.

ತಾಲ್ಲೂಕಿನ ಅರೂರು ವ್ಯವಸಾಯ ಸೇವಾ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಜಿ.ವಿ.ಜಗದೀಶ್ ಹಾಗೂ ಉಪಾಧ್ಯಕ್ಷರಾಗಿ ಆದಿನಾರಾಯಣಪ್ಪ (ಕೂಂಡಪ್ಪ)ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಶಂಸ ತಬರೇಜ್ ಘೋಷಿಸಿದರು.

ಸಂಘದ ಕಚೇರಿಯಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಬೇರೆ ಯಾರು ಉಮೇದು ವಾರಿಕೆ ಸಲ್ಲಿಸದ ಹಿನ್ನೆಲೆಯಲ್ಲಿ ಇಬ್ಬರೂ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ  ಘೋಷಿಸಿದರು.

ಇದನ್ನೂ ಓದಿ: Chikkaballapur News: ಜಿಲ್ಲಾ ಉಸ್ತುವಾರಿ ಸಚಿವರಿಂದ ಸೋಮವಾರ ರಾಗಿ ಖರೀದಿಗೆ ಚಾಲನೆ: ಜಿಲ್ಲಾಧಿಕಾರಿ ಜಿ ಪ್ರಭು

ಆಯ್ಕೆ ಬಳಿಕ ಅಪಾರ ಸಂಖ್ಯೆಯಲ್ಲಿ ಹಾಜರಿದ್ದ ಬೆಂಬಲಿಗರು ಮತ್ತು ಅಭಿಮಾನಿಗಳು ನೂತನ ಅಧ್ಯಕ್ಷ–ಉಪಾಧ್ಯಕ್ಷರಿಗೆ ಹಾರ ಹಾಕಿ ಅಭಿನಂದಿಸಿ ಬಳಿಕ ಸಿಹಿ ಹಂಚಿ ಸಂಭ್ರಮಿಸಿ ದರು. ನಿಮ್ಮ ಅವಧಿಯಲ್ಲಿ ಸಂಘ ಇನ್ನಷ್ಟು ಅಭಿವೃದ್ಧಿ ಕಾಣಲಿ, ರೈತರಿಗೆ ಅನುಕೂಲ ವಾಗುವ ಕಾರ್ಯಗಳಿಗೆ ಪ್ರಥಮ ಆದ್ಯತೆ ನೀಡಿ ಕೆಲಸ ಮಾಡಬೇಕು ಎಂದು ಆಶಿಸಿದರು.

ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷ ಜಿ.ವಿ.ಜಗದೀಶ್, ಫೆ.1ರಂದು ನಡೆದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯ ನಂತರ ಇಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಹೆಚ್ಚಿನ ಸದಸ್ಯರ ಬೆಂಬಲ ನಮ್ಮ ಪರವಾಗಿದ್ದ ರಿಂದ ನಾಮಪತ್ರ ಸಲ್ಲಿಸಿದ್ದೇವೆ. ಬೇರಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದೇವೆ ಬೆಂಬಲ ಸೂಚಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದರು.

ಅರೂರು ವ್ಯವಸಾಯೋತ್ಪನ್ನ ಸಹಕಾರ ಸಂಘಕ್ಕೆ ಐವತ್ತು ವರ್ಷಗಳ ಇತಿಹಾಸವಿದ್ದು, ಹಿರಿಯರು ಸಂಘವನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಬಂದಿದ್ದಾರೆ. ಸಂಘ ಯಾವತ್ತೂ ಡಿಫಾಲ್ಟ್ ಆಗಿಲ್ಲ.ಹಿರಿಯರ ಮಾರ್ಗದರ್ಶನದಲ್ಲಿ ಸಂಘಕ್ಕೆ ಮತ್ತಷ್ಟು ಒಳ್ಳೆಯ ಹೆಸರು ತರುವ ಉದ್ದೇಶ ಹೊಂದಿದ್ದೇವೆ. ರಾಜ್ಯದ ಟಾಪ್ ಟೆನ್ ಸಹಕಾರ ಸಂಘಗಳ ಪಟ್ಟಿಯಲ್ಲಿ ನಮ್ಮ ಸಂಘ ಇರಬೇಕು ಎಂಬ ಗುರಿ ಹೊಂದಿದ್ದೇವೆ. ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ರೈತ ಸ್ನೇಹ ಆಡಳಿತ ನೀಡುವ ಮೂಲಕ ಸಂಘವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಈ ವೇಳೆ ಶಾಸಕ ಪ್ರದೀಪ್ ಈಶ್ವರ್ ಅವರ ಸಹಕಾರಕ್ಕಾಗಿ ಧನ್ಯವಾದಗಳನ್ನು ತಿಳಿಸಿದ ಅವರು ಶಾಸಕರ ಮಾರ್ಗದರ್ಶನದಲ್ಲಿ ಜನಪರ ಆಡಳಿತ ನೀಡುವ ಮೂಲಕ ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು.

ಈ ವೇಳೆ ಹಿರಿಯ ಮುಖಂಡರಾದ ಪಿ. ಎನ್ ರವೀಂದ್ರ ರೆಡ್ಡಿ, ದಿನೇಶ್, ಶಾಸಕ ಪ್ರದೀಪ್ ಈಶ್ವರ ಸಹೋದರ ಚೇತನ್,ನಾಗಭೂಷಣ್,

ಎ.ಮಂಜುನಾಥ್ ಅರೂರು, ಡಿ.ಗೋಪಾಲ್, ಭಾನು ಪ್ರಕಾಶ್, ಆನಂದ್ ರೆಡ್ಡಿ, ಶಿವರಾಮ್, ಗಡ್ಡಮ್ ನಾಗರಾಜ್, ಸೀತಾರಾಮಪ್ಪ, ವಿಜಯಕುಮಾರ್, ಮುನಿರೆಡ್ಡಿ, ಲಕ್ಷ್ಮಯ್ಯ, ಡಿಶ್ ಮಂಜು, ಕೆ ಟಿ ಎಸ್ ರಾಜಣ್ಣ, ಬೈರೆಶ್ ಬ್ರದರ್ಸ್ ಇತರರು ಉಪಸ್ಥಿತರಿದ್ದರು.