ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬಂಗಾರಕ್ಕಾಗಿ ಹೆಲಿಕಾಪ್ಟರ್ ಸರ್ವೆ: ಗುಡಿಬಂಡೆ ಸುತ್ತಮುತ್ತ ಜಮೀನು ದರ ಏರಿಕೆ ನಿರೀಕ್ಷೆ.

ಕರ್ನಾಟಕದಲ್ಲಿ ಒಂದು ಕಾಲಕ್ಕೆ ಕೋಲಾರದ ಚಿನ್ನದ ಗಣಿ ಖ್ಯಾತಿ ಪಡೆದಿತ್ತು. ನಂತರ ಈ ಸಾಲಿಗೆ ಹಟ್ಟಿ ಚಿನ್ನದ ಗಣಿ ಸೇರ್ಪಡೆಯಾಗಿ ನಿನ್ನೆ ಮೊನ್ನೆಯವರೆಗ ಚಿನ್ನವನ್ನು ಇಲ್ಲಿಂದ ಪಡೆಯಲಾಗುತ್ತಿತ್ತು. ಆದರೆ ಸುಮಾರು ಒಂದುವರೆ ದಶಕಗಳ ಹಿಂದಯೇ ಕೋಲಾರದ ಚಿನ್ನದ ಗಣಿ ಮುಚ್ಚಲ್ಪಟ್ಟಿದ್ದು ಪ್ರಸ್ತುತ ಚಿನ್ನದ ದರ ದಿನೇ ದಿನೇ ಏರಿಕೆಯಾಗುತ್ತಿರುವುದರಿಂದ ಕೆ.ಜಿ.ಎಫ್ ಗಣಿಯನ್ನು ಪುನಾರಂಭ ಮಾಡಲು ಕೇಂದ್ರ ಸರ್ಕಾರ ಮರು ಚಿಂತನೆ ನಡೆಸುತ್ತಿರುವ ಹೊತ್ತಿನಲ್ಲಿ ಯೇ, ಮತ್ತೊಂದು ಚಿನ್ನದ ನಿಕ್ಷೇಪ ಗುಡಿಬಂಡೆಯ  ಸಮೀಪ ಇರುವ ಬಗ್ಗೆ ಸೆರ್ವೆ ಕಾರ್ಯದಲ್ಲಿ ಬೆಳಕಿಗೆ ಬಂದಿದೆ

ಕೆ.ಜಿ.ಎಫ್ ಆಂದ್ರಪ್ರದೇಶದ ಕದಿರಿ ಬೆನ್ನಲ್ಲೇ ಗುಡಿಬಂಡೆ ಗೌರಿಬಿದನೂರು ಪ್ರದೇಶದಲ್ಲಿ ಚಿನ್ನಕ್ಕೆ ಹುಡುಕಾಟ

ಗುಡಿಬಂಡೆ: ಕೆ.ಜಿ.ಎಫ್ ಮತ್ತು ಅಂಧ್ರಪ್ರದೇಶದ ಕದಿರಿಯ ಸುತ್ತ ಮುತ್ತ ಚಿನ್ನಕ್ಕಾಗಿ ಹೆಲಿಕಾಪ್ಟರ್ ಸರ್ವೆ ಪ್ರಾರಂಭವಾಗಿದ್ದು ಇದಕ್ಕೆ ಹೊ ಸೇರ್ಪಡೆ ಎಂಬಂತೆ ಜಿಲ್ಲೆಯ ಗುಡಿಬಂಡೆಯ ಸುತ್ತ ಮುತ್ತಲು ಸಹ ಹಳದಿ ಲೋಹಕ್ಕಾಗಿ ಹೆಲಿಕ್ಯಾಪ್ಟರ್ ಸರ್ವೆ ಕಾರ್ಯ ಪ್ರಾರಂಭವಾಗಿರುವುದು ಸಾರ್ವಜನಿಕರಲ್ಲಿ ವಿಚಿತ್ರ ಕುತೂಹಲ ಉಂಟಾಗುವಂತೆ ಮಾಡಿದೆ.

ಹೌದು. ಕರ್ನಾಟಕದಲ್ಲಿ ಒಂದು ಕಾಲಕ್ಕೆ ಕೋಲಾರದ ಚಿನ್ನದ ಗಣಿ ಖ್ಯಾತಿ ಪಡೆದಿತ್ತು. ನಂತರ ಈ ಸಾಲಿಗೆ ಹಟ್ಟಿ ಚಿನ್ನದ ಗಣಿ ಸೇರ್ಪಡೆಯಾಗಿ ನಿನ್ನೆ ಮೊನ್ನೆಯವರೆಗ ಚಿನ್ನವನ್ನು ಇಲ್ಲಿಂದ ಪಡೆಯಲಾಗುತ್ತಿತ್ತು. ಆದರೆ ಸುಮಾರು ಒಂದುವರೆ ದಶಕಗಳ ಹಿಂದಯೇ ಕೋಲಾರದ ಚಿನ್ನದ ಗಣಿ ಮುಚ್ಚಲ್ಪಟ್ಟಿದ್ದು ಪ್ರಸ್ತುತ ಚಿನ್ನದ ದರ ದಿನೇ ದಿನೇ ಏರಿಕೆಯಾಗುತ್ತಿರುವುದರಿಂದ ಕೆ.ಜಿ.ಎಫ್ ಗಣಿಯನ್ನು ಪುನಾರಂಭ ಮಾಡಲು ಕೇಂದ್ರ ಸರ್ಕಾರ ಮರು ಚಿಂತನೆ ನಡೆಸುತ್ತಿರುವ ಹೊತ್ತಿನಲ್ಲಿ ಯೇ, ಮತ್ತೊಂದು ಚಿನ್ನದ ನಿಕ್ಷೇಪ ಗುಡಿಬಂಡೆಯ  ಸಮೀಪ ಇರುವ ಬಗ್ಗೆ ಸೆರ್ವೆ ಕಾರ್ಯದಲ್ಲಿ ಬೆಳಕಿಗೆ ಬಂದಿದೆ ಎಂಬ ಮಾಹಿತಿಯಿದೆ.

ಚಿಕ್ಕಬಳ್ಳಾಪುರ ಜಿಲ್ಲೆಗೆ ಹೊಂದಿಕೊಂಡಿರುವ ಪಕ್ಕದ ಆಂಧ್ರಪ್ರದೇಶದ ಗಡಿಯಾದ ಕದಿರಿಯಲ್ಲಿ 1 ಟನ್ ಮಣ್ಣಿನಲ್ಲಿ 4 ಗ್ರಾಂ ಚಿನ್ನ ಲಭ್ಯವಾಗುವಂತಹ ಮಾಹಿತಿ ಹೆಲಿಕಾಪ್ಟರ್ ಸರ್ವೆಯ ಮಾಹಿತಿ ಯಿಂದ ತಿಳಿದು ಬಂದಿರುವುದು ಅಚ್ಚರಿಗೆ ಕಾರಣವಾಗಿದೆ.

ಇದನ್ನೂ ಓದಿ: Gudibande News: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಲಿಕಾ ಹಬ್ಬ ಸಹಕಾರಿ: ಬಿಇಒ ಕೃಷ್ಣಕುಮಾರಿ

ಕದಿರಿ ಪ್ರದೇಶದಲ್ಲಿ ಚಿನ್ನ ದೊರಕುತ್ತದೆ ಎಂಬ ಮಾಹಿತಿಯ ಬೆನ್ನೆಲ್ಲೇ, ಆಂಧ್ರಪ್ರದೇಶದ ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ಗುಡಿಬಂಡೆ ತಾಲ್ಲೂಕಿನಲ್ಲಿ ಕೂಡ ಚಿನ್ನದ ನಿಕ್ಷೇಪಕ್ಕಾಗಿ ಹೆಲಿ ಕಾಪ್ಟರ್ ಸರ್ವೆ ಕಾರ್ಯನಡೆಯುತ್ತಿರುವುದು ಸ್ಥಳೀಯರಲ್ಲಿ ಸಂತಸದ ಜೊತೆಯಲ್ಲೇ ಆತಂಕಕ್ಕೆ ಹೀಡುಮಾಡಿದೆ, ಈ ಭಾಗದಲ್ಲೂ ಚಿನ್ನದ ನಿಕ್ಷೇಪ ಲಭ್ಯವಾದಲ್ಲಿ ಸರ್ಕಾರ ಎಲ್ಲಿ ಭೂ ಸ್ವಾಧೀನ ನಡೆಸುತ್ತದೆಯೋ ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ.

ಚಿನ್ನದ ಖನಿಜ ನಿಕ್ಷೇಪದ ಗಾತ್ರ ಮತ್ತು ವ್ಯಾಪ್ತಿಯನ್ನು ಅಂದಾಜಿಸುವ ಉದ್ದೇಶದಿಂದ ಇಲ್ಲಿ ಸಮೀಕ್ಷೆಗಳು ಆರಂಭವಾಗಿದ್ದು, ಖನಿಜ ಸಂಪತ್ತು ಗುರುತಿಸುವ ಉದ್ದೇಶದಿಂದ ವೈಮಾನಿಕ ಸಮೀಕ್ಷೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

ಗುಡಿಬಂಡೆ ಪ್ರದೇಶದಲ್ಲಿ ಕೇವಲ ಗ್ರಾನೈಟ್, ಕಲ್ಲು ನಿಕ್ಷೇಪಗಳು ಲಭ್ಯವಾಗಿ, ಅವುಗಳ ಬೇಡಿಕೆ ಸಹ ಎಲ್ಲೆಡೆಯಲ್ಲೂ ಹೆಚ್ಚಿದೆ. ಇಂತಹ ಬರಡು ನೆಲದಲ್ಲಿ ಚಿನ್ನದ ನಿಕ್ಷೇಪಗಳು ಲಭ್ಯವಾಗುವುದೇ ಎಂಬ ಅನುಮಾನಗಳು ಒಂದೆಡೆಯಾದರೆ, ವೈಮಾನಿಕ ಸಮೀಕ್ಷೆ ಈ ಭಾಗದಲ್ಲಿ ನಡೆಯುತ್ತಿರುವುದರಿಂದ ಚಿನ್ನದ ನಿಕ್ಷೇಪ ಏನಾದರೂ ಕಂಡು ಬಂದಿದೆಯೇ ಎಂಬ ಊಹಾಪೋಹಗಳು ಸಹ ಜನರಲ್ಲಿ ಗರಿಗೆದರಿವೆ.

ಗುಡಿಬಂಡೆ ತಾಲೂಕು ಬೆಂಗಳೂರಿಗೆ ಕೂಗಳತೆ ದೂರದಲ್ಲಿದ್ದು, ಈ ಭಾಗದಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ಪರಿಣಾಮ ತಾಲೂಕಿನಲ್ಲಿ ಜಮೀನುಗಳ ಬೆಲೆ ಗಗನಕ್ಕೆ ಏರಿದೆ. ಮುಖ್ಯ ವಾಗಿ ವಾಣಿಜ್ಯ ಮಳಿಗೆ, ಹೋಟೆಲ್, ಪೆಟ್ರೋಲ್ ಬಂಕ್, ಕೃಷಿ ಉದ್ದೇಶ ಸೇರಿದಂತೆ ಹಲವು ಉದ್ದೇಶ ಗಳಿಗೆ ಈ ಭಾಗದಲ್ಲಿ ಭೂಮಿಯ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಲೇ ಬರುತ್ತಿದೆ.

ಇಂತಹ ಹೊತ್ತಿನಲ್ಲಿ ಈ ಭಾಗದಲ್ಲಿ  ಚಿನ್ನದ ನಿಕ್ಷೇಪದ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ. ಎಲ್ಲಿಯಾದರು ಒಂದು ಭಾಗದಲ್ಲಿ ನಿಕ್ಷೇಪದ ಕುರುಹುಗಳು ಕಂಡು ಬಂದಲ್ಲಿ ಹಳದಿ ಲೋಹದ ಬೆಲೆ ಏರಿದಂತೆ ಜಮೀನಿನ ಬೆಲೆ ಏಕಾಏಕಿ ಏರಿಕೆಯಾಗುವ ಸಂಭವವಿದೆ ಎಂದು ಸ್ಥಳಿಯರು ಹೇಳುತ್ತಿದ್ದಾರೆ.

ಈ ಭಾಗದಲ್ಲಿ ಸರ್ವೆಕಾರ್ಯ 15 ರಿಂದ 20 ದಿನಗಳ ಕಾಲ ನಡೆಯಲಿದ್ದುಎಂಬ ಮಾಹಿತಿಯಿದ್ದು, ಎಲ್ಲೆಲ್ಲಿ ಚಿನ್ನದ ನಿಕ್ಷೇಪ ಕಂಡು ಬರಲಿದೆ? ಎಂಬುದು ಸರ್ವೆ ಕಾರ್ಯ ಮುಕ್ತಾಯದ ನಂತರವೇ ಸ್ಪಷ್ಟವಾಗಿ ತಿಳಿಯಲಿದೆ. ಆದರೂ ಹೆಲಿಕಾಪ್ಟರ್ ಹಾರಾಟದಿಂದ ಭೀತಿಗೆ ಒಳಗಾಗಿರುವ ಈ ಭಾಗದ ಜನತೆ ನಮ್ಮ ತಾಲೂಕಿನ ವ್ಯಾಪ್ತಿಯಲ್ಲೂ ಚಿನ್ನ ನಿಕ್ಷೇಪ ಲಭ್ಯವಾಗಲಿದೆಯೋ ಇಲ್ಲವೋ ಎಂಬ ಕುತೂಹಲ ಮಾತ್ರ ಜೀವಂತವಾಗಿಟ್ಟುಕೊಂಡಿದ್ದಾರೆ.

*

ತಾಲೂಕಿನ ಬೀಚಗಾನಹಳ್ಳಿ ಕ್ರಾಸ್‌ನಿಂದ ಸರ್ವೆ ಕಾರ್ಯಪ್ರಾರಂಭ ಮಾಡಿದ್ದು, ಈಗಾಗಲೇ ಕದಿರಿಯಲ್ಲಿ ಚಿನ್ನದ ನಿಕ್ಷೇಪ ಲಭ್ಯವಾಗಿದೆ ಎನ್ನುತ್ತಿದ್ದಾರೆ. ಈ ಭಾಗದಲ್ಲೂ ಕೂಡ ಚಿನ್ನ ಲಭ್ಯವಾಗಲಿದೆಯೇ ಎಂಬ ಕುತೂಹಲ ಕೆರಳಿಸಿದೆ. ಹಾಗೊಮ್ಮೆ ನಿಕ್ಷೇಪ ಪತ್ತೆಯಾದರೆ ಈಗಿರುವ ಜಮೀನಿನ ದರ ದುಪ್ಪಟ್ಟಾಗಲಿದೆ.ಕೃಷಿ ಭೂಮಿ ಮರೀಚಿಕೆಯಾದರೂ ತಪ್ಪಿಲ್ಲ
-ಪಾಪಿರೆಡ್ಡಿ, ರ‍್ರಲಕ್ಕೇನಹಳ್ಳಿ ನಿವಾಸಿ ಗುಡಿಬಂಡೆ

ಜಿಲ್ಲೆಯಲ್ಲಿ ೪ ತಿಂಗಳ ಕಾಲ ಸರ್ವೆ ನಡೆಯಲಿದೆ: ಡಿ.ಸಿ
ಜಿಲ್ಲೆಯಲ್ಲಿ ಜಿಯಾಲಜಿಕಲ್ ಸರ್ವೆ ಇಂಡಿಯಾ ಮತ್ತು ಜಿಯೋ ಫಿಸಿಕಲ್ ಇನ್ಸಿ÷್ಟಟ್ಯೂಟ್ ಆಫ್ ಇಂಡಿಯಾ ಇವರ ಕೋರಿಕೆಯ ಮೇಲೆ ೨೦೧೯-೨೦ ರಲ್ಲಿ ಈ ಭೂಭಾಗದಲ್ಲಿ ಬೇಸ್ ಮೆಟಲ್ ಎಂದು ಕರೆಯಲಾಗುವ ಬಂಗಾರ, ತಾಮ್ರ,ಅಲ್ಯುಮಿನಿಯಂ ಇತ್ಯಾದಿ ಖನಿಜ ನಿಕ್ಷೇಪಗಳ ಸರ್ವೆ ಆಗಿದೆ. ಅದರ ಮುಂದುವರೆದ ಭಾಗವಾಗಿ ಹೆಲಿಕಾಪ್ಟರ್‌ಗಳನ್ನು ಬಳಸಿಕೊಂಡು ಆಳವಾದ ಸರ್ವೆ ಮಾಡಲು ನಮಗೆ ಅನುಮತಿ ಕೋರಿದ್ದರು. ಪಕ್ಕದ ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ಕದಿರಿಯಲ್ಲಿ ಮುಗಿಸಿ ನಮ್ಮ ಜಿಲ್ಲೆಗೆ ಬಂದಿದ್ದಾರೆ. ಜಿಯೋಲಜಿಕಲ್ ಸರ್ವೆ ಆಫ್ ಇಂಡಿಯಾ, ಮಿನಿಸ್ಟಿçà ಆಫ್ ಮೈನ್ಸ್ ಅಂಡ್ ಜಿಯಾಲಜಿ ಇವರ ವತಿಯಿಂದ ನಿಕ್ಷೇಪಗಳ ಸಮಗ್ರ ಸಮೀಕ್ಷೆ ನಡೆಯುತ್ತಿದೆ.ನಮ್ಮಿಂದ ಆದರ್ಶ ಶಾಲೆಯ ಆವರಣದಲ್ಲಿ ಹೆಲಿಕಾಪ್ಟರ್ ನಿಲ್ದಾಣಕ್ಕೆ ಅವಕಾಶ ಕೋರಿದ್ದಾರೆ.ಇದೇ ರೀತಿ ಸರ್ವೆಗೂ ಕೇಳಿದ್ದಾರೆ.ಈ ಸರ್ವೆ ಈಗಾಗಲೇ ಪ್ರಾರಂಭವಾಗಿದ್ದು ಮೇ೩೧ ರವರೆಗೆ ಮುಂದಿನ ನಾಲ್ಕು ತಿಂಗಳ ಕಾಲ ನಡೆಯಲಿದ್ದು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ನಡೆಯಲಿದೆ.ನಿಕ್ಷೇಪ ಇರುವ ಬಗ್ಗೆ ವೈಜ್ಞಾನಿಕ ವರದಿಯನ್ನು ಕೇಂದ್ರಕ್ಕೆ  ಸಲ್ಲಿಸಲಿದೆ. ನಾಗರೀಕರು ಹೆಲಿಕಾಪ್ಟರ್ ಹಾರಾಟದ ಬಗ್ಗೆ ಆತಂಕಗೊಳ್ಳುವ ಅಗತ್ಯವಿಲ್ಲ.ನಾಗರೀಕರಿಗೆ ತೊಂದರೆ ಆಗದ ರೀತಿಯಲ್ಲಿ ಈ ಸವೇ ನಡೆಯಲಿದೆ
-ಜಿ.ಪ್ರಭು ಜಿಲ್ಲಾಧಿಕಾರಿ ಚಿಕ್ಕಬಳ್ಳಾಪುರ ಜಿಲ್ಲೆ.