ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gudibande News: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಲಿಕಾ ಹಬ್ಬ ಸಹಕಾರಿ: ಬಿಇಒ ಕೃಷ್ಣಕುಮಾರಿ

ವಿದ್ಯಾರ್ಥಿಗಳು ನಾವೀನ್ಯತೆ ಯಿಂದ ಯೋಚಿಸಿ ತಮ್ಮ ಸಾಮರ್ಥ್ಯವನ್ನು ಭದ್ರಗೊಳಿಸಿಕೊಳ್ಳುವುದು ಈ ಹಬ್ಬದ ಉದ್ದೇಶ ವಾಗಿದೆ. ಕಲಿಕಾ ಹಬ್ಬದಲ್ಲಿ ಭಾಗವಹಿಸುವುದೇ ಮುಖ್ಯ, ಇಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಗೆಲ್ಲುವ ಛಲವನ್ನು ಬೆಳೆಸಿಕೊಳ್ಳುವುದು ಕಲಿಕೆಯ ಭಾಗವಾಗಿದೆ. ಸರ್ಕಾರಿ ಶಾಲೆಗಳನ್ನು ಸದೃಢ ಗೊಳಿಸುವ ನಿಟ್ಟಿನಲ್ಲಿ ಇಲಾಖೆಯು ಈ ಕಾರ್ಯಕ್ರಮವನ್ನು ಕೇವಲ ಸರ್ಕಾರಿ ಶಾಲಾ ಮಕ್ಕಳಿ ಗಾಗಿ ಆಯೋಜಿಸುತ್ತಿದೆ.

ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಲಿಕಾ ಹಬ್ಬ ಸಹಕಾರಿ

ಪಟ್ಟಣದ ಪಿಎಂಶ್ರೀ ಶಾಲೆಯಲ್ಲಿ ಶಿಕ್ಷಣ ಇಲಾಖೆಯ ವತಿಯಿಂದ ಕ್ಲಸ್ಟರ್‍ ಮಟ್ಟದ ಕಲಿಕಾ ಹಬ್ಬವನ್ನು ಆಯೋಜಿಸಲಾಗಿತ್ತು. -

Ashok Nayak
Ashok Nayak Jan 17, 2026 11:31 PM

ಗುಡಿಬಂಡೆ: ವಿದ್ಯಾರ್ಥಿಗಳ ಮೆದುಳಿಗೆ ಜ್ಞಾನ ತುಂಬುವ ವಿಶಿಷ್ಟ ಕಲಿಕಾ ಪದ್ಧತಿಯೇ ಶಿಕ್ಷಣ ಇಲಾಖೆಯ ಕಲಿಕಾ ಹಬ್ಬವಾಗಿದ್ದು, ಇದು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಕುಮಾರಿ ತಿಳಿಸಿದರು.

ಪಟ್ಟಣದ ಪಿಎಂಶ್ರೀ ಶಾಲೆಯಲ್ಲಿ ಶಿಕ್ಷಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಕ್ಲಸ್ಟರ್‍ ಮಟ್ಟದ ಕಲಿಕಾ ಹಬ್ಬವನ್ನು ಉದ್ಘಾಟಿಸಿ ಮಾತಾಡಿದ ಅವರು, ವಿದ್ಯಾರ್ಥಿಗಳು ನಾವೀನ್ಯತೆ ಯಿಂದ ಯೋಚಿಸಿ ತಮ್ಮ ಸಾಮರ್ಥ್ಯವನ್ನು ಭದ್ರಗೊಳಿಸಿಕೊಳ್ಳುವುದು ಈ ಹಬ್ಬದ ಉದ್ದೇಶ ವಾಗಿದೆ. ಕಲಿಕಾ ಹಬ್ಬದಲ್ಲಿ ಭಾಗವಹಿಸುವುದೇ ಮುಖ್ಯ, ಇಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಗೆಲ್ಲುವ ಛಲವನ್ನು ಬೆಳೆಸಿಕೊಳ್ಳುವುದು ಕಲಿಕೆಯ ಭಾಗವಾಗಿದೆ. ಸರ್ಕಾರಿ ಶಾಲೆಗಳನ್ನು ಸದೃಢ ಗೊಳಿಸುವ ನಿಟ್ಟಿನಲ್ಲಿ ಇಲಾಖೆಯು ಈ ಕಾರ್ಯಕ್ರಮವನ್ನು ಕೇವಲ ಸರ್ಕಾರಿ ಶಾಲಾ ಮಕ್ಕಳಿಗಾಗಿ ಆಯೋಜಿಸುತ್ತಿದೆ. ಪುಸ್ತಕದ ಹೊರೆಯನ್ನು ಕಡಿಮೆ ಮಾಡಿ, ಚಟುವಟಿಕೆಗಳ ಮೂಲಕ ಮೂಲ ಶಿಕ್ಷಣ ಮತ್ತು ಸಂಖ್ಯಾ ಗಣಿತವನ್ನು ಸುಲಭವಾಗಿ ಕಲಿಸುವುದು ಇದರ ಗುರಿ ಎಂದರು.

ಇದನ್ನೂ ಓದಿ: Gudibande News: ದಲಿತ ಸಂಘಟನೆಗಳ ಒಕ್ಕೂಟದಿಂದ ಜಾಗೃತಿ ಪಾದಯಾತ್ರೆ: ಭೀಮ-ಅಕ್ಷರ ಜ್ಯೋತಿಗೆ ಅದ್ಧೂರಿ ಚಾಲನೆ

ಬಳಿಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಾಲಾಜಿ ಮಾತನಾಡಿ, ಹಿಂದಿನ ಕಾಲದಲ್ಲಿ ನಾವುಗಳು ಧಾರ್ಮಿಕ ಸಂಪ್ರದಾಯಗಳ ಹಬ್ಬಗಳನ್ನು ಮಾತ್ರ ಕಾಣುತ್ತಿದ್ದೆವು. ಆದರೆ ಇಂದು ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಪ್ರೋತ್ಸಾಹಕ್ಕಾಗಿ ಕಲಿಕಾ ಹಬ್ಬವನ್ನು ಆಯೋಜಿಸಿರು ವುದು, ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಪೂರಕವಾಗಿದೆ. ಸತತ ಪ್ರಯತ್ನದಿಂದ ಮಾತ್ರ ನಾವು ಜೀವನದಲ್ಲಿ ಗೆಲುವು ಸಾಧಿಸಲು ಸಾಧ್ಯವಿದ್ದು, ವಿದ್ಯಾರ್ಥಿಗಳು ಪ್ರಯತ್ನದ ಮೂಲಕ ಸಾಧನೆ ಮಾಡಬೇಕಿದೆ. ಇನ್ನೂ ಶಿಕ್ಷಕರಿಗೆ ಮಕ್ಕಳೇ ದೇವರುಗಳು, ಮಕ್ಕಳು ಚೆನ್ನಾಗಿದ್ದರೇ ನಾವು ಚೆನ್ನಾಗಿರು ತ್ತೇವೆ. ಮಕ್ಕಳಲ್ಲಿನ ಪ್ರತಿಭೆಯನ್ನು ಹೊರತರುವಂತಹ ಈ ರೀತಿಯ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚು ಮಕ್ಕಳು ಭಾಗವಹಿಸುವಂತೆ ಶಿಕ್ಷಕರೂ ಹಾಗೂ ಪೋಷಕರು ಸಹಕರಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಪಪಂ ಸದಸ್ಯ ಅಂಬರೀಶ್ ಮಕ್ಕಳಿಗೆ ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿದರು. ಈ ಸಮಯದಲ್ಲಿ ಕ್ಲಸ್ಟರ್‍ ಮಟ್ಟದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆ ಗಳಲ್ಲಿ ಭಾಗವಹಿಸಿದ್ದರು. ಈ ವೇಳೆ ಬಿ.ಆರ್‍.ಸಿ ಸಂಯೋಜಕ ರಾಘವೇಂದ್ರ, ಶಿಕ್ಷಕರ ಸಂಘದ ಶ್ರೀರಾಮಪ್ಪ, ಶ್ರೀರಾಮರೆಡ್ಡಿ, ಇಸಿಒಗಳಾದ ಶ್ರೀನಿವಾಸ್, ನಂಜುಂಡಪ್ಪ, ಬಿಆರ್‌ಪಿ ಭಾರತಿ, ಚಂದ್ರಶೇಖರ್‍, ಅನಿತಾ, ಶಾಲೆಯ ಮುಖ್ಯ ಶಿಕ್ಷಕ ಶಂಕರ್‍ ಸೇರಿದಂತೆ ಹಲವರು ಇದ್ದರು.