ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಹೆಚ್.ಎನ್.ವ್ಯಾಲಿ ೩ನೇ ಹಂತದ ಶುದ್ಧೀಕರಣ ರೈತರಿಂದ ಕೂಗು ಬಂದರೆ ಮಾಡುವ ಭರವಸೆ

ಎತ್ತಿನಹೊಳೆ ಯೋಜನೆಗೆ ಒಟ್ಟು ೨೩೨೫೧ ಕೋಟಿ ಪರಿಷ್ಕೃತ ಅಂದಾಜು ಮಾಡಲಾಗಿದ್ದು, ಇಲ್ಲಿಯ ವರೆಗೂ ೧೭೧೪೭ ಕೋಟಿ ಖರ್ಚು ಮಾಡಲಾಗಿದ್ದು ಇಲ್ಲಿ ಲಭ್ಯವಿರುವ ೨೪.೧ ಟಿಎಂಸಿ ನೀರಿನಲ್ಲಿ ಕುಡಿಯಲು ಮಾತ್ರ ೧೪ ಟಿಎಂಸಿ ನೀರು ಬಳಕೆಯಾಗಲಿದೆ. ಉಳಿದ ೮ ಟಿಎಂಸಿ ಕೃಷಿಗೆ ಒದಗಿಸಲಾಗು ವುದು.

ಸಫಲವಾದ ನಂದಿಬೆಟ್ಟದ ಸಚಿವ ಸಂಪುಟ ಸಭೆ :  ಜಿಲ್ಲೆಗೆ ಬಂದ 700 ಕೋಟಿ ಅನುದಾನ

Profile Ashok Nayak Jul 3, 2025 1:26 AM

ಚಿಕ್ಕಬಳ್ಳಾಪುರ : ಬರಪೀಡಿತ ಜಿಲ್ಲೆಯಾದ ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆಯಿಂದ ನೀರನ್ನು ಹರಿಸಿಯೇ ಸಿದ್ದ ಎನ್ನುವ ಮುಖ್ಯಮಂತ್ರಿಗಳ ಘೋಷಣೆಯು ನೀರಿನ ಬಗ್ಗೆ ಸ್ಪಷ್ಟ ಸಂದೇಶವನ್ನು ರವಾನಿಸುವ ಮೂಲಕ ಸಚಿವ ಸಂಪುಟ ಸಭೆ ಸಫಲತೆ ಪಡೆಯಿತು.

ಹೌದು ಜು.೨ರಂದು ನಂದಿಬೆಟ್ಟದ ಮೇಲೆ ನಡೆದ ಸಚಿವ ಸಂಪುಟ ಸಭೆಯ ಮೇಲೆ ಬೆಂಗಳೂರು ಕಂದಾಯ ವಿಭಾಗದ ಜಿಲ್ಲೆಗಳಲ್ಲಿ ನಿರೀಕ್ಷೆ ಹೆಚ್ಚಿದ್ದಂತೆ, ಜಿಲ್ಲೆಯ ಕನಸುಗಳೂ ಜೋರಾಗಿದ್ದವು.

ಈ ಪೈಕಿ ಜಿಲ್ಲೆಗೆ ಶುದ್ಧಕುಡಿಯುವ ನೀರನ್ನು ಒದಗಿಸಿ ಎನ್ನುವು ಕೂಗು ಮುಗಿಲು ಮುಟ್ಟಿತು.ಇಂದು ನಡೆದ ಸಭೆಯಲ್ಲಿ ಈ ಬಗ್ಗೆ ಸುಧೀರ್ಘ ಚರ್ಚೆ ನಡೆಸಿ ಅದಕ್ಕೆ ಅಂತಿಮ ರೂಪ ನೀಡಲಾಗಿದ್ದು ೨೦೨೭ಕ್ಕೆ ನೀರು ಹರಿಯುವುದು ಖಚಿತ, ಈ ಯೋಜನೆಗೆ ಬೇಕಾದ ಅನುದಾನವನ್ನು ನೀಡಲು ಸರಕಾರ ಬದ್ಧ ಎನ್ನುವ ಸಂದೇಶವನ್ನು ರವಾನಿಸಿದರು.

ಇದನ್ನೂ ಓದಿ: Chikkaballapur News: ಕೇಂದ್ರ ರೇಷ್ಮೆ ಮಂಡಳಿಯ ಸದಸ್ಯರಾಗಿ ನೇಮಕವಾದ ಮಳ್ಳೂರು ಶಿವಣ್ಣನವರಿಗೆ ಸನ್ಮಾನ

ಹತ್ತಿರವಾದ ಎತ್ತಿನ ಹೊಳೆ

ಎತ್ತಿನಹೊಳೆ ಯೋಜನೆಗೆ ಒಟ್ಟು ೨೩೨೫೧ ಕೋಟಿ ಪರಿಷ್ಕೃತ ಅಂದಾಜು ಮಾಡಲಾಗಿದ್ದು, ಇಲ್ಲಿಯವರೆಗೂ ೧೭೧೪೭ ಕೋಟಿ ಖರ್ಚು ಮಾಡಲಾಗಿದ್ದು ಇಲ್ಲಿ ಲಭ್ಯವಿರುವ ೨೪.೧ ಟಿಎಂಸಿ ನೀರಿನಲ್ಲಿ ಕುಡಿಯಲು ಮಾತ್ರ ೧೪ ಟಿಎಂಸಿ ನೀರು ಬಳಕೆಯಾಗಲಿದೆ. ಉಳಿದ ೮ ಟಿಎಂಸಿ ಕೃಷಿಗೆ ಒದಗಿಸಲಾಗುವುದು.ಮೂಲತಃ ಕುಡಿಯುವ ನೀರಿನ ಯೋಜನೆ ಇದಾಗಿದ್ದು ಇದಕ್ಕೆ ಮೊದಲ ಆಧ್ಯತೆ ನೀಡಲಾಗುವುದು ಎನ್ನುವುದು ಮುಖ್ಯಮಂತ್ರಿಗಳ ಮಾತಾಗಿತ್ತು.

ಎತ್ತಿನಹೊಳೆಯಲ್ಲಿ ೯೮೦೭ಕೋಟಿ ಮೊತ್ತದಲ್ಲಿ ಗ್ರಾವಿಟಿ ಮುಖ್ಯ ಕೆನಲ್‌ನ ಕೆಲಸ 85% ಮುಗಿದಿದೆ. ಹೆಚ್ಚುವರಿಯಾಗಿ ಇದಕ್ಕೆ ೮೦೦೦ ಕೋಟಿ ಬೇಕಾಗಿದೆ. ಬಾಕಿ ಉಳಿದಿರುವುದು ೬೦೦೦ ಕೋಟಿ. ಒಟ್ಟು ೯ ಜಿಲ್ಲೆಗಳ ೭೫ ಲಕ್ಷ ಜನರಿಗೆ ಇದರಿಂದ ಕುಡಿಯುವ ನೀರು ಕೊಡಬಹುದು. ಹೀಗಾಗಿ ಈ ಸಂಪುಟ ಸಭೆಯಲ್ಲಿ  ಚರ್ಚೆಯಾಗಿದೆ. ಮುಂದಿನ ಕ್ಯಾಬಿನೆಟ್‌ನಲ್ಲಿ ನಿರ್ಣಯಿಸಲು ತೀರ್ಮಾನಿಸಲಾಗಿದೆ ಎನ್ನುವ ಮೂಲಕ ನಮ್ಮ ಆಧ್ಯತೆ ಶುದ್ದನೀರು ಕೊಡುವುದೇ ಆಗಿದೆ ಎನ್ನುವ ಮೂಲಕ ಎತ್ತಿನ ಹೊಳೆ ಹತ್ತಿರ ಎಂಬ ಸಂದೇಶವನ್ನು ಸರಕಾರ ರವಾನಿಸಿತು.

ಮೂರನೇ ಹಂತದ ಶುದ್ಧೀಕರಣ ದೂರ
ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಲು ಕಾರಣವಾಗಿರುವ ಹೆಚ್.ಎನ್.ವ್ಯಾಲಿ ನೀರನ್ನು ಸದ್ಯ ಎರಡು ಹಂತದಲ್ಲಿ ಶುದ್ಧೀಕರಿಸಿ ಹರಿಸಲಾಗುತ್ತಿದ್ದು ಈ ನೀರನ್ನು ರೈತರು ಕೃಷಿಗೆ ಬಳಸುತ್ತಿರುವು ದರಿಂದ ರೋಗರುಜಿಗಳ ಸಹಿತ ಅಪಾಯ ಹೆಚ್ಚು.ದಯವಿಟ್ಟು ೩ ಹಂತದಲ್ಲಿ ಶುದ್ಧೀಕರಣ ಮಾಡಿ ಹರಿಸಿ ಎಂದು ಜನತೆ ಕೇಳುತ್ತಿದ್ದಾರೆ.ಆದರೆ ಸರಕಾರ ಮಾತ್ರ ಇತ್ತ ಗಮನ ಹರಿಸಿದಂತೆ ಕಾಣುತ್ತಿಲ್ಲ. ಮುಖ್ಯಮಂತಿಗಳು ಹೇಳುವಂತೆ ರೈತರು ಬೇಡಿಕೆಯಿಟ್ಟರೆ ೩ನೇ ಹಂತದ ಶುದ್ಧೀಕರಣ ಮಾಡುತ್ತೇವೆ ಎನ್ನುತ್ತಾರೆ.

ಆದರೆ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಇದು ಹೆಚ್.ಎನ್,ವ್ಯಾಲಿ ಯೋಜನೆ ಕುಡಿಯುವ ನೀರಿನ ಯೋಜನೆ ಅಲ್ಲ. ಈನೀರನ್ನು ಜನಜಾನುವಾರುಗಳ ಬಳಖೆ. ಕೃಷಿ ಬಳಕೆಗೆ ಬಳಸುವಂತಿಲ್ಲ. ಕೇವಲ ಅಂತರ್ಜಲ ಮರುಪೂರಣಕ್ಕೆ ಬಳಸಬೇಕು. ಹೀಗಾಗಿ ೩ನೇ ಹಂತದ ಶುದ್ಧೀಕರನದ ಅಗತ್ಯ ಬರುವುದಿಲ್ಲ ಎನ್ನುತ್ತಾರೆ. ಹೀಗಾಗಿ ೩ನೇ ಹಂತದ ಶುದ್ಧೀಕರಣ ದೂರ ದೂರವೇ ಇದೆ.

ಚಿಂತಾಮಣಿಗೆ ಬಂಪರ್
೧೪ನೇ ಸಚಿವ ಸಂಪುಟ ಸಭೆಯು ಚಿಂತಾಮಣಿಗೆ ಬಂಪರ್‌ಕೊಡುಗೆ ನೀಡಿದೆ.೨೨ಕೋಟಿ ವೆಚ್ಚದಲ್ಲಿ ಮುರಾರ್ಜಿ ದೇಸಾಯಿ ಶಾಲೆ, ೫೬ ಕೋಟಿ ವೆಚ್ಚದಲ್ಲಿ ಕೈವಾರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ವನ್ನು ಮೇಲ್ದರ್ಜೆಗೆ ಏರಿಸುವುದು, ೩೬ಕೋಟಿ ವೆಚ್ಚದಲ್ಲಿ ಚಿಂತಾಮಣಿ ತಾಲೂಕಿನ ಭಕ್ತರಹಳ್ಳಿ ಅರಸೀಕೆರೆಯ  ಕೆಳಭಾಗದಲ್ಲಿ ಹೊಸ ಕೆರೆ ನಿರ್ಮಾಣ,೨೩೭ ಕೋಟಿ ವೆಚ್ಚದಲ್ಲಿ ಶಿಡ್ಲ÷ಘಟ್ಟದ ೪೫ಕೆರೆಗಳು, ಚಿಂತಾಮಣಿ ತಾಲೂಕಿನ ೧೧೯ ಕರೆಗಳಿಗೆ ಶುದ್ದೀಕರಿಸಿದ ಹೆಚ್.ಎನ್.ವ್ಯಾಲಿ ನೀರನ್ನು ಹರಿಸುವ ಯೋಜನೆಯ ಲಾಭ ಪಡೆದಿದ್ದಾರೆ.

ಶಿಡ್ಲಘಟ್ಟಕ್ಕೂ ಉಂಟು ಪಾಲು
ನಂದಿಬೆಟ್ಟದ ಸಚಿವ ಸಂಪುಟ ಸಭೆಯು ಶಿಡ್ಲಘಟ್ಟ ತಾಲೂಕಿನ ಅಮರಾವತಿ ವಿಶ್ವವಿದ್ಯಾಲಯದ ಎರಡನೇ ಹಂತದ ಕಾಮಗಾರಿಗೆ ೧೨೩.೫೦ಕೋಟಿ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ,೨೩೭ ಕೋಟಿ ವೆಚ್ಚದಲ್ಲಿ ಶಿಡ್ಲ÷ಘಟ್ಟದ ೪೫ಕೆರೆಗಳಿಗೆ ಹೆಚ್.ಎನ್.ವ್ಯಾಲಿ ನೀರನ್ನು ಹರಿಸುವುದಕ್ಕೆ ಅನುಮೋದನೆ ಸಿಕ್ಕಿದೆ.

ಬಾಗೇಪಲ್ಲಿ ಭಾಗ್ಯನಗರ
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರ ಮುತುವರ್ಜಿ ಮತ್ತು ಕಾಳಜಿಯ ಕಾರಣದಿಂದ ಬಾಗೇಪಲ್ಲಿ ನಗರದ ಹೆಸರನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡಿ ಸಚಿವ ಸಂಪುಟ ಸಭೆ ಅನುಮತಿಸಿದೆ.ಇದೇ ರೀತಿ ಶಾಸಕರ ಬೇಡಿಕೆಯಾದ ಕುಡಿಯುವ ನೀರಿನ ಯೋಜನೆಯಾದ ಗಂಟಲಮಲ್ಲಮ್ಮ ಕಣಿವೆ ಯೋಜನೆಗೆ ೧೮೯ಕೋಟಿ ಆಡಳಿತಾತ್ಮಕ ಅನುಮೋದನೆಯನ್ನು ಸರಕಾರ ನೀಡಿದೆ.

ಚಿಕ್ಕಬಳ್ಳಾಪುರ
ಜಿಲ್ಲಾ ಕೇಂದ್ರವಾದ ಚಿಕ್ಕಬಳ್ಳಾಪುರದ ಅಭಿವೃದ್ಧಿಗೆ ಹೊಸ ಯೋಜನೆ ಜಾರಿ ಮಾಡದಿದ್ದರೂ ನಂದಿ ಬೆಟ್ಟದ ಮೇಲೆ ಪ್ರವಾಸೋಧ್ಯಮ ಇಲಾಖೆಯಿಂದ ೫೦ ಕೋಟಿ ವೆಚ್ಚದಲ್ಲಿ ಮಯೂರ ಪೈನ್‌ಟಾಪ್ ಸನ್‌ರೈಸ್ ರೆಸ್ಟೋರೆಂಟ್‌ಗೆ ಮುಖ್ಯಮಂತ್ರಿಗಳು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಇದಕ್ಕೂ ಕೂಡ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.ಕ್ರೀಡಾಂಗಣ ಅಭಿವೃದ್ದಿಗೆ ಹಣ ನಿಗದಿ ಮಾಡಲಾಗಿದೆ.ಹೈಟಕ್ ಹೂವಿನ ಮಾರುಕಟ್ಟೆ ನಿರ್ಮಾಣವನ್ನು ಪಿಪಿಪಿ ಮಾದರಿ ಕೈಬಿಟ್ಟು ಸರಕಾರವೇ ಮಾಡಲಿದೆ ಇದಕ್ಕಾಗಿ ೧೪೧ಕೋಟಿ ಆಡಳಿತಾತ್ಮಕ ಅನುಮೋಧನೆ ನೀಡಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಎಂಆರ್‌ಐ ಸ್ಯಾನಿಂಗ್ ಯಂತ್ರಕ್ಕೆ ೧೧ಕೋಟಿ ನೀಡಲಾಗಿದೆ.

ಕಾರ್ಮಿಕ ಮಕ್ಕಳ ವಸತಿ ಶಾಲೆ
ರಾಜ್ಯದ ೩೧ ಜಿಲ್ಲೆಗಳಲ್ಲಿ ಎಲ್ಲೆಲ್ಲಿ ಕಾರ್ಮಿಕರು ಹೆಚ್ಚಾಗಿದ್ದಾರೋ ಅಂತಲ್ಲಿ ೨೨ ಕೋಟಿ ವೆಚ್ಚದಲ್ಲಿ ವಸತಿಶಾಲೆಗಳನ್ನು ತೆರೆದು ಅಲ್ಲಿ ಕಾರ್ಮಿಕರ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಸರಕಾರ ಈ ಸಭೆಯಲ್ಲಿ ತೀರ್ಮಾನ ಮಾಡಿದ್ದು ಅದರಂತೆ ಜಿಲ್ಲೆಗೂ ಒಂದು ಶಾಲೆ ಬರಲಿದೆ.
ಒಟ್ಟಾರೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ೪೮ ವಿವಿದ ವಿಷಯಗಳ ಮೇಲೆ ಚರ್ಚೆ ನಡೆಸಿದ್ದು ೩೪೦೦ಕೋಟಿಗೆ ಆಡಳಿತಾತ್ಮಕ ಅನುಮೋಧನೆ ನೀಡಲಾಗಿದೆ.ಇದರಲ್ಲಿ ಬೆಂಗಳೂರು ಕಂದಾಯ ವೃತ್ತದ ಜಿಲ್ಲೆಗಳಿಗೆ ಮಾತ್ರ  ಸೇರಿದಂತೆ ೩೧ ವಿಷಯಗಳು ಚರ್ಚೆಯಾಗಿ ೨೨೫೦ ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದರು.

ನೂತನ ತಾಲೂಕಾದ ಮಂಚೇನಹಳ್ಳಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆ ಗೇರಿಸಲು ಆಡಳಿತಾತ್ಮಕ ಅನುಮೋಧನೆ ನೀಡಲಾಗಿದೆ. ಗೌರಿಬಿದನೂರು ಹೊರತುಪಡಿಸಿ ಉಳಿದೆಲ್ಲಾ ತಾಲೂಕುಗಳಿಗೆ ಈ ಸಚಿವ ಸಂಪುಟ ಸಭೆಯಲ್ಲಿ ಅನುಕೂಲ ಮಾಡಿಕೊಡಲಾಗಿದೆ.

ಜಿಲ್ಲೆಯ ಆಶೋತ್ತರಗಳೇನು ಎನ್ನುವ ಬಗ್ಗೆ ವಿಶ್ವವಾಣಿ ಪತ್ರಿಕೆ ಮಾಡಿದ್ದ ವರದಿಯಲ್ಲಿನ ಬಹುತೇಕ ಅಂಶಗಳಿಗೆ ಈ ಸಭೆಯಲ್ಲಿ ಅನುದಾನ ದೊರೆತಿದೆ.ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್, ಶಾಸಕ ಪ್ರದೀಪ್ ಈಶ್ವರ್ ಅವರ ದುರದೃಷ್ಟಿಯ ಕಾರಣವಾಗಿ ಜಿಲ್ಲೆಗೆ ಭರಪೂರ ಅನುದಾನ ಹರಿದು ಬಂದಿದ್ದು ಆಗಬೇಕಾದ ಕೆಲಸ ಕಾರ್ಯಗಳು ಬೆಟ್ಟದಷ್ಟಿವೆ. ಮುಂದಿನ ದಿನಗಳಲ್ಲಿ ಇವಕ್ಕೆ ಅನುಮೋಧನೆ ಪಡೆದು ಅಭಿವೃದ್ದಿ ಮಾಡುವ ಭರವಸೆಯನ್ನು ತುಂಬಿದ್ದಾರೆ.