Chinthamani News: ಕೈವಾರದಲ್ಲಿ ಆರಾಧನೆ ಪ್ರಯುಕ್ತ ಹೋಮ
ಆರಾಧನಾ ಮಹೋತ್ಸವದ ಹಿಂದಿನ ದಿನದಂದು ವಿಶೇಷ ಹೋಮ ನಡೆಸಿಕೊಂಡು ಬರುವುದು ಸಂಪ್ರದಾಯವಾಗಿದೆ. ಅರ್ಚಕ ವೃಂದದವರು ಶಾಸ್ತ್ರೋಕ್ತವಾಗಿ ಹೋಮವನ್ನು ನಡೆಸಿಕೊಟ್ಟರು. ಕಲಶಗಳನ್ನು ಸ್ಥಾಪಿಸಿ ಪೂಜಿಸಲಾಯಿತು. ಪಂಚಾಕ್ಷರೀ ಹೋಮದೊಂದಿಗೆ ಗಣಪತಿ, ರಾಮತಾರಕ ಹೋಮಗಳನ್ನು ನೆರವೇರಿಸಲಾಯಿತು. ಈ ಹೋಮದಲ್ಲಿ ನೂರಾರು ಸಾಧು-ಸಂತ ಭಕ್ತರು ಭಾಗವಹಿಸಿದ್ದರು. ಪೂರ್ಣಾಹುತಿಯನ್ನು ಸಮರ್ಪಿಸಲಾಯಿತು.
-
ಚಿಂತಾಮಣಿ: ಶ್ರೀಕ್ಷೇತ್ರ ಕೈವಾರದ ಸದ್ಗುರು ಶ್ರೀ ಯೋಗಿನಾರೇಯಣ ಮಠದ ಸಂಕೀರ್ತನಾ ಮಂದಿರದಲ್ಲಿ ಯೋಗಿನಾರೇಯಣ ತಾತಯ್ಯನವರ 191ನೇ ಜೀವ ಸಮಾಧಿ ಪ್ರವೇಶ ಪರ್ವ ಆರಾಧನಾ ಮಹೋತ್ಸವದ ಅಂಗವಾಗಿ ಪ್ರತಿವರ್ಷದಂತೆ ಲೋಕ ಕಲ್ಯಾಣಾರ್ಥವಾಗಿ ವಿಶೇಷ ಹೋಮವನ್ನು ಶ್ರದ್ಧಾ ಭಕ್ತಿಗಳಿಂದ ನೆರವೇರಿಸಲಾಯಿತು.
ಆರಾಧನಾ ಮಹೋತ್ಸವದ ಹಿಂದಿನ ದಿನದಂದು ವಿಶೇಷ ಹೋಮ ನಡೆಸಿಕೊಂಡು ಬರುವುದು ಸಂಪ್ರದಾಯವಾಗಿದೆ. ಅರ್ಚಕ ವೃಂದದವರು ಶಾಸ್ತ್ರೋಕ್ತವಾಗಿ ಹೋಮವನ್ನು ನಡೆಸಿಕೊಟ್ಟರು. ಕಲಶಗಳನ್ನು ಸ್ಥಾಪಿಸಿ ಪೂಜಿಸಲಾಯಿತು. ಪಂಚಾಕ್ಷರೀ ಹೋಮದೊಂದಿಗೆ ಗಣಪತಿ, ರಾಮತಾರಕ ಹೋಮಗಳನ್ನು ನೆರವೇರಿಸಲಾಯಿತು. ಈ ಹೋಮದಲ್ಲಿ ನೂರಾರು ಸಾಧು-ಸಂತ ಭಕ್ತರು ಭಾಗವಹಿಸಿದ್ದರು. ಪೂರ್ಣಾಹುತಿಯನ್ನು ಸಮರ್ಪಿಸಲಾಯಿತು. ಹೋಮದ ನಂತರ ಅಷ್ಟಾವಧಾನ ಸೇವೆಯನ್ನು ಸಲ್ಲಿಸಿ ಮಹಾಮಂಗಳಾರತಿಯನ್ನು ಸಮರ್ಪಿಸಲಾಯಿತು. ಗರ್ಭಗುಡಿಯಲ್ಲಿರುವ ತಾತಯ್ಯನವರ ಮೂಲವಿಗ್ರಹಕ್ಕೆ ವಿಶೇಷ ಆಲಂಕಾರವನ್ನು ಮಾಡಲಾಗಿತ್ತು.
ಇದನ್ನೂ ಓದಿ: Chinthamani News: ಚಿಂತಾಮಣಿಯಲ್ಲಿ ಬೃಹತ್ ಉಚಿತ ಹೃದಯ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ
ಕೈವಾರ ಕ್ಷೇತ್ರದ ಶ್ರೀ ಯೋಗಿನಾರೇಯಣ ಮಠದ ಟ್ರಸ್ಟ್ನ ಉಪಾಧ್ಯಕ್ಷರಾದ ಜೆ.ವಿಭಾಕರರೆಡ್ಡಿ, ಖಜಾಂಚಿಗಳಾದ ಆರ್.ಪಿ.ಎಂ.ಸತ್ಯನಾರಾಯಣ್ ದಂಪತಿಗಳು ಪೂಜೆಯಲ್ಲಿ ಭಾಗವಹಿಸಿದ್ದರು. ಶ್ರೀಮತಿ ಜಯಕುಮಾರಮ್ಮ ಎಂ.ಆರ್.ಜಯರಾಮ್, ಸಂಕೀರ್ತನಾ ಯೋಜನೆ ಸಂಚಾಲಕರಾದ ವಾನರಾಶಿ ಬಾಲಕೃಷ್ಣ ಭಾಗವತರ್ ಮುಂತಾದವರು ಉಪಸ್ಥಿತರಿದ್ದರು. ಭಕ್ತರು ತಂಡೋ ಪತಂಡವಾಗಿ ಆಗಮಿಸಿ ರಾತ್ರಿಯಿಡೀ ಅಖಂಡ ಭಜನೆ ಸಂಕೀರ್ತನೆಯಲ್ಲಿ ಭಾಗವಹಿಸಿದ್ದರು.
ಆರಾಧನೆ ಇಂದು (೧೭.೬.೨೬-ಬುಧವಾರ) :
ಶ್ರೀಕ್ಷೇತ್ರ ಕೈವಾರದ ಶ್ರೀಯೋಗಿ ನಾರೇಯಣ ಸಭಾಂಗಣದಲ್ಲಿ ಇಂದು ಸದ್ಗುರು ತಾತಯ್ಯನವರ 191ನೇ ಆರಾಧನಾ ಮಹೋತ್ಸವ ನಡೆಯಲಿದೆ. ಆರಾಧನಾ ಮಹೋತ್ಸವದ ಪ್ರಯುಕ್ತ ಸದ್ಗುರು ಕೈವಾರ ತಾತಯ್ಯನವರು ರಚಿಸಿರುವ ಕಾಲಜ್ಞಾನ, ಕೀರ್ತನೆ, ಶತಕಗಳ ಮೂಲ ತಾಳೆಗರಿಗಳಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಲಾಗುವುದು. ಬೆಳಿಗ್ಗೆ ೮ ಗಂಟೆಗೆ ಸದ್ಗುರು ತಾತಯ್ಯನವರ ಉತ್ಸವ ವಿಗ್ರಹವನ್ನು ಹಾಗೂ ತಾಳೆಗರಿಗಳನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಸಭಾಂಗಣಕ್ಕೆ ವಿಶೇಷ ಮೆರವಣಿಗೆಯೊಂದಿಗೆ ಕರೆತರಲಾಗುವುದು. ತಾತಯ್ಯನವರಿಗೆ ವಿಶೇಷ ಅಭಿಷೇಕ, ಅಷ್ಟವಧಾನ ಸೇವೆ, ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಪ್ರತಿವರ್ಷದಂತೆ ಈ ಸಮಾರಂಭದಲ್ಲಿ ಭಾಗವಹಿಸುವ ಎಲ್ಲಾ ಸಾಧು-ಸತ್ಪುರುಷರಿಗೆ ಕಾಷಾಯ ವಸ್ತ್ರವನ್ನು ಉಚಿತವಾಗಿ ನೀಡಲಾಗುತ್ತದೆ. ಸದ್ಗುರು ತಾತಯ್ಯನವರಿಗೆ 2025-26ನೇ ಸಾಲಿನ ವಾರ್ಷಿಕ ವರದಿಯನ್ನು ಧರ್ಮಾಧಿಕಾರಿಗಳಾದ ಡಾ||ಎಂ.ಆರ್.ಜಯರಾಮ್ ರವರು ಸಮರ್ಪಿಸಿ, ತಾತಯ್ಯನವರ ಗುರುಚಿಂತನಾ ಸಂದೇಶವನ್ನು ನೀಡುವರು.