Chikkaballapur News: ಮಕ್ಕಳಿಗೆ ಅವರಿಷ್ಟದ ಕ್ಷೇತ್ರದಲ್ಲಿ ಬೆಳೆಯಲು ಬಿಟ್ಟರೆ ಸಮಾಜಕ್ಕೆ ಆಸ್ತಿಯಾಗುತ್ತಾರೆ
ಪೋಷಕರು ನಿಮ್ಮ ಮಕ್ಕಳಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಅದರಲ್ಲಿ ಮುನ್ನುಗ್ಗಲು ಪ್ರೇರ ಣೆ ನೀಡಿ. ಬದಲಿಗೆ ನಮ್ಮ ದೊಡ್ಡಪ್ಪನ ಮನ ಡಾಕ್ಟರ್, ಇಂಜನಿಯರ್ ಆಗಿದ್ದಾರೆ. ನೀವೂ ಅದೇ ಆಗಬೇಕು ಎಂದು ನಿಮ್ಮ ಆಸೆಗಳನ್ನು ಅವರ ಮೇಲೆ ಹೊರಿಸಬೇಡಿ. ಬದಲಿಗೆ ಅವರಿಷ್ಟದ ಕ್ಷೇತ್ರ ದಲ್ಲಿ ಬೆಳೆಯಲು ಬಿಟ್ಟರೆ ಸಮಾಜಕ್ಕೆ ಆಸ್ತಿಯಾಗುತ್ತಾರೆ ಎಂದರು

ಮಕ್ಕಳನ್ನು ಅಂಕಗಳ ಹಿಂದೆ, ಹುಸಿ ಭ್ರಮೆಗಗಳ ಹಿಂದೆ ಓಡಿಸುವ ಬದಲಿಗೆ ಪರಿಪೂರ್ಣ ಜೀವನ ಮೌಲ್ಯಗಳನ್ನು ಧಾರೆಯೆರೆಯುವ ರಂಗಶಿಕ್ಷಣದತ್ತ ಆಕರ್ಷತರಾಗುವಂತೆ ಮಾಡಿದರೆ ಅವರ ಭವಿಷ್ಯ ಉಜ್ವಲವಾಗಲಿದೆ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ವಿ.ಅಭಿಲಾಷ್ ತಿಳಿಸಿದರು.

ಚಿಕ್ಕಬಳ್ಳಾಪುರ : ಮಕ್ಕಳನ್ನು ಅಂಕಗಳ ಹಿಂದೆ, ಹುಸಿ ಭ್ರಮೆಗಗಳ ಹಿಂದೆ ಓಡಿಸುವ ಬದಲಿಗೆ ಪರಿಪೂರ್ಣ ಜೀವನ ಮೌಲ್ಯಗಳನ್ನು ಧಾರೆಯೆರೆಯುವ ರಂಗಶಿಕ್ಷಣದತ್ತ ಆಕರ್ಷತರಾಗುವಂತೆ ಮಾಡಿದರೆ ಅವರ ಭವಿಷ್ಯ ಉಜ್ವಲವಾಗಲಿದೆ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ವಿ. ಅಭಿಲಾಷ್ ತಿಳಿಸಿದರು. ನಗರ ಹೊರವಲಯ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ಅನನ್ಯ ಕಲಾರಂಗ ಚಿಕ್ಕ ಬಳ್ಳಾಪುರ, ಗೌತಮಬುದ್ಧ ಫೌಂಡೇಷನ್ ಚಿಕ್ಕಬಳ್ಳಾಪುರ, ಧಾತ್ರಿ ರಂಗ ಸಂಸ್ಥೆ ಸಿರಿಗೆರೆ, ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು ಚಿಕ್ಕಬಳ್ಳಾಪುರ, ಕನ್ನಡ ಮತ್ತು ಸಂಸ್ಕೃ ತಿ ಇಲಾಖೆ ಚಿಕ್ಕಬಳ್ಳಾ ಪುರ ಇವರ ಸಹಯೋಗದಲ್ಲಿ ನಡೆಯುತ್ತಿರುವ ಕಾಲೇಜು ನಾಟಕೋತ್ಸವದ ಮೂರನೇ ದಿನ ವಿ.ಎನ್. ಅಶ್ವತ್ಥ ರಚಿತ, ಭೀಮೇಶ್ ದಾವಣಗೆರೆ ನಿರ್ದೇಶದ ಶ್ರೀ ಕೃಷ್ಣ ಸಂಧಾನ ಎಂಬ ನಗೆ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು.
ಇದನ್ನೂ ಓದಿ: Chikkaballapur(Chinthamani) News: ಮರುಗಮಲ್ಲ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಗುರುವಂದನಾ ಕಾರ್ಯಕ್ರಮ
ಪೋಷಕರು ನಿಮ್ಮ ಮಕ್ಕಳಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಅದರಲ್ಲಿ ಮುನ್ನುಗ್ಗಲು ಪ್ರೇರ ಣೆ ನೀಡಿ. ಬದಲಿಗೆ ನಮ್ಮ ದೊಡ್ಡಪ್ಪನ ಮನ ಡಾಕ್ಟರ್, ಇಂಜನಿಯರ್ ಆಗಿದ್ದಾರೆ. ನೀವೂ ಅದೇ ಆಗಬೇಕು ಎಂದು ನಿಮ್ಮ ಆಸೆಗಳನ್ನು ಅವರ ಮೇಲೆ ಹೊರಿಸಬೇಡಿ. ಬದಲಿಗೆ ಅವರಿಷ್ಟದ ಕ್ಷೇತ್ರ ದಲ್ಲಿ ಬೆಳೆಯಲು ಬಿಟ್ಟರೆ ಸಮಾಜಕ್ಕೆ ಆಸ್ತಿಯಾಗುತ್ತಾರೆ ಎಂದರು.
ಟಿ.ವಿ., ಸಿನಿಮಾ, ಮೊಬೈಲ್ ಪೇಸ್ ಬುಕ್ ಇತ್ಯಾದಿ ಸೋಷಿಯಲ್ ಮೀಡಿಯಾ ಜಮಾನಾದಲ್ಲಿ ಮಹಿಳಾ ಕಾಲೇಜಿನಲ್ಲಿ ನಾಟಕೋತ್ಸವ ನಡೆಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಕೆಲಸ. ಸಂಬಂಧ ಗಳಿಗೆ ಬೆಲೆಯಿಲ್ಲದ ಈ ಕಾಲದಲ್ಲಿ ಮಾನವೀಯ ಸಂಬAಧಗಳಿಗೆ ಜೀವ ತುಂಬುವ ನಾಟಕ ಪರಂ ಪರೆ ಬೆಳೆಯಬೇಕಿದೆ ಎಂದರು.

ಒತ್ತಡದ ಬದುಕಿನಿಂದ ಹೊರಬಂದು 2 ಗಂಟೆಯ ಕಾಲವಾದರೂ ಮನಸ್ಸಿಗೆ ಆನಂದ ನೀಡಿ ಲವಲವಿಕೆಯಿಂದ ನಾಳೆಗಳಿಗೆ ಸಿದ್ಧವಾಗಬೇಕಾದರೆ ಶ್ರೀಕೃಷ್ಣ ಸಂಧಾನ ಎಂಬ ನಗೆನಾಟಕವನ್ನು ಒಮ್ಮೆಯಾದರೂ ನೋಡಬೇಕು ಎಂದು ಹೇಳಿದರು.
ಪ್ರೊ.ಶಂಕರ್ ಮಾತನಾಡಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಚಂದ್ರಯ್ಯ ಅವರು ರಾಜ್ಯದಲ್ಲಿ ಯಾವ ಸರ್ಕಾರಿ ಕಾಲೇಜಿನಲ್ಲಿಯೂ ಮಾಡದ ಸಾಹಸಕ್ಕೆ ಕೈಹಾಕಿ ಅದರಲ್ಲಿ ಯಶಸ್ವಿಯಾಗಿದ್ದಾರೆ. ಹೆಣ್ಣು ಮಕ್ಕಳ ಮೂಲಕವೇ ಮಹಾರಾತ್ರಿ ನಾಟಕವನ್ನು ಪ್ರದರ್ಶಿಸಿರುವುದು ಒಳ್ಳೆಯ ಬೆಳವಣಿಗೆ. ಈ ರೀತಿಯ ಪ್ರಯೋಗಗಳು ಎಲ್ಲೆಡೆ ನಡೆಯಲಿ, ಗ.ನ.ಅಶ್ವತ್ಥ್ ಅವರ ನಿರ್ದೇಶನದಲ್ಲಿ ಇನ್ನಷ್ಟು ನಾಟಕಗಳು ಮೂಡಿಬರಲಿ ಎಂದು ಆಶಿಸಿದರು.
ಗೋಲ್ಡನ್ ಗ್ಲೀಮ್ಸ್ ಕಾಲೇಜಿನ ಪ್ರಾಂಶುಪಾಲ ಮುನಿಕೃಷ್ಣಪ್ಪ,ವಾರ್ತಾ ಇಲಾಖೆಯ ಮಂಜುನಾಥ್, ಆಕಾಶವಾಣಿ ವರದಿಗಾರ ಚಂದ್ರಶೇಖರ್ ಮಾತನಾಡಿದರು.
ಈ ವೇಳೆ ಪ್ರಾಂಶುಪಾಲ ಜಿ.ಡಿ.ಚಂದ್ರಯ್ಯ, ಗಾ.ನ.ಅಶ್ವಥ್, ಪ್ರಾಂಶುಪಾಲ ಜಿ.ಡಿ.ಚಂದ್ರಯ್ಯ, ತತ್ತೂರು ಲೋಕೇಶಪ್ಪ, ಪ್ರೊ.ಹರೀಶ್‌ಬಾಬು, ಡಾ.ರಾಮಕೃಷ್ಣಪ್ಪ, ಸಾಂಸ್ಕೃತಿಕ ಸಮಿತಿ ಸಂಚಾಲಕ ಪ್ರೊ.ಮೋಹನ್ ಕುಮಾರ್, ಸರ್ದಾರ್ ಚಾಂದ್ ಪಾಷ, ಕನ್ನಡ ಉಪನ್ಯಾಸಕರಾದ ಮುನಿರಾಜು ಎಂ ಅರಿಕೆರೆ, ಪ್ರೊ.ಕೃಷ್ಣಮೂರ್ತಿ, ವಿದ್ಯಾರ್ಥಿಗಳು ಪೋಷಕರು ಹಾಜರಿದ್ದರು.