ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಮೈಲಪನಹಳ್ಳಿಯಲ್ಲಿ ಲೇಔಟ್ ಅಭಿವೃದ್ಧಿಪಡಿಸಿ ಜನತೆಗೆ ನೀಡಿದರೆ ೧೦ ಲಕ್ಷ ನೀಡುವೆ : ಸಂದೀಪ್‌ರೆಡ್ಡಿ ಭರವಸೆ

ಮೈಲಪನಹಳ್ಳಿ ಗ್ರಾಮದಲ್ಲಿ ಬಲಾಢ್ಯರಿಂದ ಒತ್ತುವರಿ ಆಗಿರುವ ಸರಕಾರಿ ಭೂಮಿಯನ್ನು ಜಿಲ್ಲಾಡಳಿತ ಅಥವಾ ಸರಕಾರ ತನ್ನ ವಶಕ್ಕೆ ಪಡೆದು ಅಲ್ಲಿ ಲೇಔಟ್ ಅಭಿವೃದ್ಧಿಪಡಿಸಿ ಅರ್ಹ ನಿವೇಶನ ರಹಿತರಿಗೆ ಹಂಚುವುದಾದರೆ ನಮ್ಮ ಭಗತ್‌ಸಿಂಗ್ ಚಾರಿಟೇಬಲ್ ಟ್ರಸ್ಟ್ವತಿಯಿಂದ ಲೇಔಟ್ ಅಭಿವೃದ್ದಿಗೆ ೧೦ ಲಕ್ಷರೂ ಅನುದಾನ ನೀಡುವುದಾಗಿ ಘೋಷಿಸಿದರು.

ಲೇಔಟ್ ಅಭಿವೃದ್ಧಿಪಡಿಸಿ ಜನತೆಗೆ ನೀಡಿದರೆ ೧೦ ಲಕ್ಷ ನೀಡುವೆ

ಸರಕಾರ ಮೈಲಪನಹಳ್ಳಿ ಗ್ರಾಮದ ನಿವೇಶನ ಸಮಸ್ಯೆ ಕೂಡಲೇ ಪರಿಹರಿಸಿ ಎಂದು ಭಗತ್ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್‌ ರೆಡ್ಡಿ ಆಗ್ರಹಿಸಿದರು. -

Ashok Nayak
Ashok Nayak Nov 16, 2025 12:16 AM

ಚಿಕ್ಕಬಳ್ಳಾಪುರ: ಸ್ವಾತಂತ್ರ್ಯ ಬಂದು ೭೮ ವರ್ಷ ಕಳೆದರೂ ಕೂಡ ಗ್ರಾಮೀಣ ಪ್ರದೇಶದಲ್ಲಿ ಇನ್ನೂ  ಕೂಡ ನಿವೇಶನ ರಹಿತರಿಗೆ ನಿವೇಶನ ವಿತರಿಸುವ ಕೆಲಸವನ್ನು ಆಳುವ ಸರಕಾರ ಗಳು ಮಾಡದಿರುವುದು ದುರಂತವೇ ಸರಿ.ಇನ್ನಾದರೂ ಸರಿಯೆ ಮೈಲಪನಹಳ್ಳಿ ಗ್ರಾಮದಲ್ಲಿ ಎದುರಾಗಿರುವ ನಿವೇಶನ ರಹಿತರ ಸಮಸ್ಯೆಯನ್ನು ಈ ಕೂಡಲೇ ಜಿಲ್ಲಾಡಳಿತ ಮತ್ತು ಸರಕಾರ ಬಗೆಹರಿಸುವ ಕೆಲಸ ಮಾಡಬೇಕು ಎಂದು ಭಗತ್‌ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್‌ರೆಡ್ಡಿ ಆಗ್ರಹಿಸಿದರು.

ತಾಲೂಕಿನ ಮೈಲಪನಹಳ್ಳಿ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ನಿವೇಶನ ರಹಿತರು ನಡೆಸುತ್ತಿರುವ ಪ್ರತಿಭಟನೆಯ ಸ್ಥಳಕ್ಕೆ ಶನಿವಾರ ಭೇಟಿ ನೀಡಿದ್ದ ಸಂದೀಪ್‌ರೆಡ್ಡಿ ಸಂತ್ರಸ್ಥರ ಅಳಲು ಆಲಿಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದರು.

ಮೈಲಪನಹಳ್ಳಿ ಗ್ರಾಮದಲ್ಲಿ ಬಲಾಢ್ಯರಿಂದ ಒತ್ತುವರಿ ಆಗಿರುವ ಸರಕಾರಿ ಭೂಮಿಯನ್ನು ಜಿಲ್ಲಾಡಳಿತ ಅಥವಾ ಸರಕಾರ ತನ್ನ ವಶಕ್ಕೆ ಪಡೆದು ಅಲ್ಲಿ ಲೇಔಟ್ ಅಭಿವೃದ್ಧಿಪಡಿಸಿ ಅರ್ಹ ನಿವೇಶನ ರಹಿತರಿಗೆ ಹಂಚುವುದಾದರೆ ನಮ್ಮ ಭಗತ್‌ಸಿಂಗ್ ಚಾರಿಟೇಬಲ್ ಟ್ರಸ್ಟ್ವತಿ ಯಿಂದ ಲೇಔಟ್ ಅಭಿವೃದ್ದಿಗೆ ೧೦ ಲಕ್ಷರೂ ಅನುದಾನ ನೀಡುವುದಾಗಿ ಘೋಷಿಸಿದರು.

ಇದನ್ನೂ ಓದಿ: Chikkaballapur News: ನಗರದ ರಾಜಬೀದಿಗಳಲ್ಲಿ ಮಕ್ಕಳನ್ನು ಎತ್ತಿನ ಗಾಡಿಗಳಲ್ಲಿ ಕೂರಿಸಿ ಮೆರವಣಿಗೆ

ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಅವರು ಅವರಿವರ ಮಾತಿಗೆ ಕಿವಿಗೊ ಟ್ಟು ಅನಾಹುತ ಮಾಡಿಕೊಳ್ಳಬೇಡಿ.ನ್ಯಾಯ ಮಾರ್ಗದಲ್ಲಿಯೇ ನಡೆದು ನಮ್ಮ ಹಕ್ಕು ಗಳನ್ನು ನಾವು ಪಡೆಯೋಣ ಎಂದು ಇದೇ ವೇಳೆ ಕಿವಿಮಾತು ಹೇಳಿದರು.

ನಿವೇಶನ ರಹಿತರಿಗೆ ನಿವೇಶನ ಕೊಡಿಸುವ ನಿಟ್ಟಿನಲ್ಲಿ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ರಾಜಕಾರಣಿಗಳು ಅಕ್ರಮ ಮಾರ್ಗದಲ್ಲಿ ಎಷ್ಟು ಬೇಕಾದರೂ ಸಂಪತ್ತು ಗಳಿಸಬಹುದು.ಆದರೆ ಬಡವರು ಯಾವುದೇ ಓಬಿರಾಯನ ಕಾಲದಲ್ಲಿ ಒಂದು ಮನೆ ಕಟ್ಟಿಕೊಂಡಿರುತ್ತಾರೆ.ಅAತವರು ಮತ್ತೊಂದು ಮನೆ ಕೇಳಿದರೆ, ನಿವೇಶನ ಕೇಳಿದರೆ ತಪ್ಪಾ? ಎಂದು ಪ್ರಶ್ನಿಸಿದ ಅವರು ರಾಜಕಾರಣಿಗಳು ಮಾಡುವುದು ತಪ್ಪು ಅಲ್ಲ ಎನ್ನುವುದಾದರೆ, ಜನಸಾಮಾನ್ಯರು ಆಸೆ ಪಡುವುದು. ಬಡವರು ನಿವೇಶನ ಕೋರುವುದು ತಪ್ಪೇ ಅಲ್ಲ.ಆದರೆ ಈನಿಟ್ಟಿನಲ್ಲಿ ಅಂಬೇಡ್ಕರ್ ಕೊಟ್ಟಿರುವ ಸಂವಿಧಾನಕ್ಕೆ ಬದ್ಧವಾಗಿ ನಡೆದುಕೊಳ್ಳೋಣ. ಕೇವಲ ಪೋಟೋ ಇಟ್ಟುಕೊಂಡರೆ ಸಾಲದು ಅವರ ಆಶಯಗಳಿಗೆ ಜೀವತುಂಬುವ ಕೆಲಸ ಮಾಡೋಣ ಎಂದರು.

ರೈತರ ಜಮೀನುಗಳು, ಸರಕಾರಿ ಕಾಲುವೆಗಳ ಮೇಲೆ ಗುಡಿಸಲು ಹಾಕಿದ್ದರೆ ಈಗಲೇ ತೆರವು ಗೊಳಿಸಿ.ರಾಜ್ಯ ಸರಕಾರದ ಅಧಿಕಾರಿಗಳು, ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕೆ ಬಂದು ಇಲ್ಲಿ ರಾಜಕಾಲುವೆ ಇದ್ದಿದೇ ಆದಲ್ಲಿ, ಇಲ್ಲಿ ಹತ್ತಾರು ವರ್ಷಗಳಿಂದ ನೀರು ಹರಿದಿಲ್ಲ ಎನ್ನುವುದಾದರೆ ಜನರಿಗಾಗಿ ಕಾನೂನು ತಿದ್ದುಪಡಿ ಮಾಡಿ ಎಂದು ಒತ್ತಾಯಿಸಿದರು.

ಶಾಸಕ ಸಂಸದರಿಗೆ ಮನವಿ ಮಾಡುತ್ತೇನೆ. ರಾಜಕಾರಣವನ್ನು ಚುನಾವಣೆ ಸಮಯದಲ್ಲಿ ಮಾತ್ರ ಮಾಡೋಣ. ಗೆಲ್ಲುವ ಮುನ್ನ ದಂಡಿಯಾಗಿ ಭರವಸೆ ಕೊಡುತ್ತೀರಿ, ಗೆದ್ದ ಮೇಲೆ ಕೆಟ್ಟರಾಜಕಾರಣಿಯಾಗಿ ಬದಲಾಗಿ ಬಿಡುತ್ತೀರಿ.ಇದಾಗದೆ ಜನರನ್ನು, ಕೊಟ್ಟ ಭರವಸೆ ಗಳನ್ನು ಮರೆತು ಬಿಡುತ್ತೀರಿ. ಇದು ಮಾಡದೆ ಜನರ ಕಷ್ಟಸುಖಗಳಿಗೆ ಸ್ಪಂದನೆ ನೀಡುವ ಕೆಲಸ ಮಾಡೋಣ.

ನ.೨೦ರಂದು ಇಲ್ಲಿನ ಭೂಮಿ ಅಳತೆ ಮಾಡಲು ಅಧಿಕಾರಿಗಳು ಬರುತ್ತಾರೆ.ಉದ್ವೇಗಕ್ಕೆ ಒಳಗಾಗದೆ ಅವರಿಗೆ ಸಹಕಾರ ನೀಡೋಣ, ನಿಮ್ಮನ್ನು ಎದುರು ಹಾಕಿಕೊಂಡು ಒಕ್ಕಲೆಬ್ಬಿ ಸುವ ಕೆಲಸವನ್ನು ಯಾವ ಸರಕಾರವೂ ಮಾಡಲು ಸಾಧ್ಯವಿಲ್ಲ. ಇಲ್ಲಿ ಎಷ್ಟು ಜನಕ್ಕೆ ಸೈಟ್ ಸಿಗುತ್ತೋ ಪಡೆಯೋಣ, ಉಳಿದವರಿಗೆ ಎಲ್ಲಿ ಜಾಗ ಇದೆಯೋ ಅಲ್ಲಿ ಕೊಡಿಸುವ ಕಲಸ ವನ್ನು ಹೋರಾಟಗಾರರು ನಾವು ನೀವು ಎಲ್ಲಾ ಮಾಡೋಣ. ಕಾನೂನು ಮೂಲಕವೇ ಪರಿಹಾರ ಪಡೆಯೋಣ ಎಂದು ಕಿವಿ ಮಾತು ಹೇಳಿದರು.

ಈ ವೇಳೆ ಗಡಿನಾಡು ರೈತಸಂಘದ ವೆಂಕಟೇಶ್, ಮುನಿರಾಜು, ರಾಜಶೇಖರ್, ಮತ್ತಿತರರು ಇದ್ದರು.