ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ನಗರದ ರಾಜಬೀದಿಗಳಲ್ಲಿ ಮಕ್ಕಳನ್ನು ಎತ್ತಿನ ಗಾಡಿಗಳಲ್ಲಿ ಕೂರಿಸಿ ಮೆರವಣಿಗೆ

ವಿಶೇಷವೆಂದರೆ ಪೂರ್ಣಪ್ರಜ್ಞಾ ಶಾಲೆಯ ಪುಟಾಣಿಗಳು ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಧಿ ಕಾರಿ ಪಿ.ಎನ್.ರವೀಂದ್ರ, ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ಅವರಿಗೆ ಶುಭ ಕೋರಿದರೆ, ಪ್ರತಿಯಾಗಿ ಅವರೂ ಕೂಡ ಹೂಗುಚ್ಚ ನೀಡುವ ಮೂಲಕ ಪುಟಾಣಿಗಳಿಗೆ ಮಕ್ಕಳ ದಿನಾಚರಣೆಯ ಶುಭಾಶಯ ಕೋರಿದರು

ಪೂರ್ಣ ಪ್ರಜ್ಞ ಶಾಲೆಯಲ್ಲಿ ವಿನೂತನವಾಗಿ ಮಕ್ಕಳ ದಿನಾಚರಣೆ ಆಚರಣೆ

-

Ashok Nayak
Ashok Nayak Nov 15, 2025 1:12 AM

ಚಿಕ್ಕಬಳ್ಳಾಪುರ : ಪೂರ್ಣಪ್ರಜ್ಞ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ವಿನೂತನವಾಗಿ ಆಚರಿಸುವ ಮೂಲಕ ಮಕ್ಕಳ ಮನಸ್ಸಿಗೆ ಮುದ ನೀಡಿದರು. ಯಂತ್ರ ನಾಗರೀಕತೆಯ ನಾಗಾಲೋಟದಲ್ಲಿ ಎತ್ತಿನ ಬಂಡಿಗಳನ್ನು ನವವಧುವಿನಂತೆ ಸಿಂಗರಿಸಿ ಅವುಗಳಲ್ಲಿ ಮಕ್ಕಳನ್ನು ಕೂರಿಸಿ ರಾಜಬೀದಿಗಳಲ್ಲಿ ಮೆರವಣಿಗೆ ಮಾಡಿಸಿದ್ದು ಪೋಷಕರು ಮತ್ತು ನಾಗರೀಕರ ಮನಸೂರೆಗೊಂಡಿತು.

ನಗರದ ಬಿ.ಬಿ.ರಸ್ತೆಯಲ್ಲಿರುವ ಪೂರ್ಣಪ್ರಜ್ಞಾ ಶಾಲೆಯಲ್ಲಿ ಶುಕ್ರವಾರ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಶಾಲಾವರಣದಲ್ಲಿ ಮಕ್ಕಳನ್ನು ಪಾಠಪ್ರವಚನಗಳಿಂದ ಬಿಡುಗಡೆಗೊಳಿಸ ಲಾಗಿತ್ತು. ಹೊಸಬಟ್ಟೆ ಧರಿಸಿ ನಕ್ಕು ನಲಿದ ಮಕ್ಕಳಿಗೆ ಶಾಲೆಯಲ್ಲಿಯೇ ಊಟ ಉಣಬಡಿಸ ಲಾಗಿತ್ತು. ಮಕ್ಕಳ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳು ಮತ್ತು ಶಿಕ್ಷಕರ ಕಲರವ ಮುಗಿಲು ಮುಟ್ಟಿತ್ತು.

ವಿಶೇಷವೆಂದರೆ ಪೂರ್ಣಪ್ರಜ್ಞಾ ಶಾಲೆಯ ಪುಟಾಣಿಗಳು ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ಅವರಿಗೆ ಶುಭಕೋರಿದರೆ, ಪ್ರತಿಯಾಗಿ ಅವರೂ ಕೂಡ ಹೂಗುಚ್ಚ ನೀಡುವ ಮೂಲಕ ಪುಟಾಣಿಗಳಿಗೆ ಮಕ್ಕಳ ದಿನಾಚರಣೆಯ ಶುಭಾಶಯ ಕೋರಿದರು.

ಇದನ್ನೂ ಓದಿ: Chikkaballapur News: ಎನ್‌ಡಿಎ ಮೈತ್ರಿ ಕೂಟದ ಸಂಖ್ಯೆ 800 ಮಾಡಿದ ರಾಹುಲ್‌ಗೆ ಧನ್ಯವಾದ ಹೇಳಿದ ಬಿಜೆಪಿ ಜಿಲ್ಲಾಧ್ಯಕ್ಷ

ಈ ವೇಳೆ ಮಾತನಾಡಿದ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಶೈಲಜಾ ವೆಂಕಟೇಶ್ ಮಾತ ನಾಡಿ, ಈ ಬಾರಿ ನಮ್ಮ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಣೆ ಮಾಡಲಾಯಿತು.ಮಕ್ಕಳ ಹಕ್ಕುಗಳ ಬಗ್ಗೆ,ಅವರ ಬಾಲ್ಯ, ಭವಿಷ್ಯವನ್ನು ಹೇಗೆ ಕಟ್ಟಿಕೊಡ ಬೇಕು ಎಂಬುದನ್ನು ಪೋಷಕರಿಗೆ ತಿಳಿಸಲಾಯಿತು. ಆಧುನಿಕ ಜೀವನದ ಬದುಕಿನಲ್ಲಿ ಮುಳುಗದೆ ಗ್ರಾಮೀಣ ಜೀವನವನು ಅರಿಯುವ ಕೆಲಸ ಮಾಡಲಾಗಿದೆ.ಇದು ಅತ್ಯಂತ ಸಂತೋಷ ತಂದಿದೆ ಎಂದರು.

ಶಾಲೆಯ ಪ್ರಾಂಶುಪಾಲರಾದ ರಾಧಿಕ ಮೊದಲಿಗೆ ಎಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತೇನೆ ಎಂದು ಮಾತು ಆರಂಭಿಸಿದ ಅವರು ನಮ್ಮ ಶಾಲೆಯಲ್ಲಿ ಈ ಬಾರಿ ಮಕ್ಕಳನ್ನು ಎತ್ತಿನ ಬಂಡಿಯಲ್ಲಿ ಕೂರಿಸಿಕೊಂಡು ನಗರ ಸಂಚಾರ ಮಾಡಿಸುವ ಮೂಲಕ ನಾವು ನಾಗರೀಕರಿಗೆ ಯಂತ್ರನಾಗರೀಕತೆ ಬಿಟ್ಟು ಸಾಂಪ್ರದಾಯಿಕ ಕೃಷಿ ಪದ್ದತಿಗೆ ಮರಳಬೇಕು.ಗೋ ಸಂಸ್ಕೃತಿಯನ್ನು ಪೋಷಣೆ ಮಾಡಬೇಕು ಎಂಬುದನ್ನು ಸಾರಲಾ ಯಿತು.

ಮೇಲಾಗಿ ನಗರ ಸಂಚಾರದ ವೇಳೆಯಲ್ಲಿ ಬಾಲ್ಯ ವಿವಾಹ,ಬಾಲಕಾರ್ಮಿಕ ಪದ್ಧತಿ,ಮಕ್ಕಳ ಹಕ್ಕುಗಳ ರಕ್ಷಣೆ ಇತ್ಯಾದಿಗಳ ಬಗ್ಗೆ ನಾಗರೀಕರಿಗೆ ಮನವರಿಕೆ ಮಾಡಿಕೊಡಲಾಯಿತು. ನಾವೆಲ್ಲರೂ ಬಾಲ್ಯದಲ್ಲಿ ಮಕ್ಕಳೇ ಆಗಿರುತ್ತೇವೆ. ಹೀಗಾಗಿ ಮಕ್ಕಳ ದಿನಾಚರಣೆಯನ್ನು ಎಲ್ಲರೂ ಕೂಡಿ ಹಬ್ಬದ ರೀತಿಯಲ್ಲಿ ಸಂಭ್ರಮದಿAದ ಆಚರಿಸಬೇಕು ಎಂದು ಹೇಳಿದರು.

೯ನೇ ತರಗತಿ ವಿದ್ಯಾರ್ಥಿನಿ ಶಾನ್ವಿ ಮಾತನಾಡಿ ಪಂಡಿತ್ ಜವಹರಲಾಲ್ ನೆಹರು ಅವರ ಜನ್ಮದಿನವನ್ನು ನಾವಿಂದು ಮಕ್ಕಳ ದಿನಾಚರಣೆಯಾಗಿ ಆಚರಿಸುತ್ತಿದ್ದೇವೆ.೧೮೮೮ ನವೆಂಬರ್ ೧೪ರಂದು ಅಹಮದಾಬಾದ್‌ನಲ್ಲಿ ಮೋತಿಲಾಲ್ ನೆಹರು, ಸ್ವರೂಪರಾಣಿ ಪುತ್ರರಾಗಿ ಜನಿಸುವ ನೆಹರು ದೇಶದ ಮೊದಲ ಪ್ರಧಾನಿ ಆಗಿದ್ದವರು.ಅವರ ಹುಟ್ಟುಹಬ್ಬ ವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸುತ್ತಿರುವುದು ತುಂಬಾ ಖುಷಿಯ ಸಂಗತಿ. ಶಿಕ್ಷಕರು ನಾನಾ ಕಾರ್ಯಕ್ರಮಗಳ ಮೂಲಕ ಮಕ್ಕಳನ್ನು ರಂಜಿಸಿದ್ದು ಅತ್ಯಂತ ಖುಷಿಯ ವಿಚಾರವಾಗಿದೆ ಎಂದರು.

ಶಾಲೆಯಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿ ಮಕ್ಕಳ ದಿನಾಚರಣೆ ಆಚರಿಸ ಲಾಯಿತು. ಈವೇಳೆ ಮಕ್ಕಳು ಮತ್ತು ಶಿಕ್ಷಕರಿಂದ ಹಾಡು, ಕುಣಿತ,ಹಾಸ್ಯ,ನಾಟಕ ಹೀಗೆ ನಾನಾ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು.