ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನಗಳು ಹತ್ತಿಕ್ಕಲ್ಪಡುತ್ತಿರುವುದು ಆತಂಕಕಾರಿ ಸಂಗತಿ

ಆಕೆ ಸಮಾಜ ದಲ್ಲಿ ತಾಯಿಯಾಗಿ, ಅತ್ತೆಯಾಗಿ, ಮಗಳಾಗಿ ಗೆಳತಿಯಾಗಿ ಹೆಂಡತಿಯಾಗಿ ಬಹುಮುಖ ಪಾತ್ರ ನಿರ್ವಹಿಸಿದರೂ ಅವಳ ಶ್ರಮಕ್ಕೆ, ಕಾಯಕಕ್ಕೆ ಗೌರವ ದೊರೆಯುತ್ತಿಲ್ಲ. ಪುರುಷರ ಶೋಷಣೆ ಒಂದು ರೀತಿಯದ್ದಾದರೆ, ಮಹಿಳೆಯರಿಂದಲೇ ಹೆಣ್ಣಿನ ಶೋಷಣೆ ಇನ್ನೊಂದು ರೀತಿ ಯಾಗಿದೆ. ಇವೆಲ್ಲಾ ತಪ್ಪಬೇಕಾದರೆ ಸಂಘಟಿರಾಗಿ ನಮ್ಮ ಹಕ್ಕುಗಳಿಗೆ ನಾವು ಹೋರಾಟ ಮಾಡ ಬೇಕು ಎಂದು ಕರೆ ನೀಡಿದರು.

ಮಹಿಳಾ ದಿನಾಚರಣೆ ಸಮಸ್ತ ಸ್ತ್ರೀಕುಲದ ಅಸ್ಮಿತೆಯ ಸಂಕೇತ : ವಿದ್ಯಾರ್ಥಿ ಗಗನ

ಮಹಿಳಾ ದಿನಾಚರಣೆ ಸಮಸ್ತ ಸ್ತ್ರೀಕುಲದ ಅಸ್ಮಿತೆಯ ಸಂಕೇತವಾಗಿದೆ ಎಂದು ವಿದ್ಯಾರ್ಥಿ ಗಗನ ಅಭಿಪ್ರಾಯಪಟ್ಟರು.

Profile Ashok Nayak Mar 9, 2025 7:27 PM

ಚಿಕ್ಕಬಳ್ಳಾಪುರ : ವಿಶ್ವಮಹಿಳಾ ದಿನಾಚರಣೆ ಎನ್ನುವುದು ಸಮಸ್ತ ಸ್ತ್ರೀಕುಲವು ಪ್ರಬುದ್ಧ ಸಮಾಜ ಕಟ್ಟಲು ಶ್ರಮಿಸಿರುವ ಅಸ್ಮಿತೆಯ ಸಂಕೇತವಾಗಿದೆ ಎಂದು ಬಿ.ಎ.ವಿದ್ಯಾರ್ಥಿನಿ ಕುಮಾರಿ ಗಗನ ಅಭಿಪ್ರಾಯಪಟ್ಟರು. ನಗರ ಹೊರವಲಯ ಮಹಿಳಾ ಪ್ರಥಮದರ್ಜೆ ಕಾಲೇಜಿನ ೫ ಕಾರ್ ಎನ್‌ಸಿಸಿ ಬೆಟಾಲಿಯನ್ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಮರಬೆಳೆಸಿ ಭೂಮಿ ಉಳಿಸಿ ಜಾಗೃತಿ ಜಾಥಾದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನಗಳು ಹತ್ತಿಕ್ಕಲ್ಪಡುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಹೆಣ್ಣು ಏನೆಲ್ಲಾ ಸಾಧನೆ ಮಾಡಿದರೂ ಹೆಜ್ಜೆಗುರುತು ಮೂಡಿಸಿದರೂ ಲೆಕ್ಕಕ್ಕೆ ತೆಗೆದುಕೊಳ್ಳದ ಈ ವ್ಯವಸ್ಥೆ ದೇಹದ  ಮೂಲಕವೇ ಅವಳನ್ನು ಅಳೆಯುವುದು ತಪ್ಪು.

ಇದನ್ನೂ ಓದಿ: Child Dies: ಲಸಿಕೆ ಹಾಕಿದ ಕೆಲವೇ ಹೊತ್ತಿನಲ್ಲಿ 5 ತಿಂಗಳ ಮಗು ಸಾವು

ಆಕೆ ಸಮಾಜ ದಲ್ಲಿ ತಾಯಿಯಾಗಿ, ಅತ್ತೆಯಾಗಿ, ಮಗಳಾಗಿ ಗೆಳತಿಯಾಗಿ ಹೆಂಡತಿಯಾಗಿ ಬಹುಮುಖ ಪಾತ್ರ ನಿರ್ವಹಿಸಿದರೂ ಅವಳ ಶ್ರಮಕ್ಕೆ, ಕಾಯಕಕ್ಕೆ ಗೌರವ ದೊರೆಯುತ್ತಿಲ್ಲ. ಪುರುಷರ ಶೋಷಣೆ ಒಂದು ರೀತಿಯದ್ದಾದರೆ, ಮಹಿಳೆಯರಿಂದಲೇ ಹೆಣ್ಣಿನ ಶೋಷಣೆ ಇನ್ನೊಂದು ರೀತಿ ಯಾಗಿದೆ. ಇವೆಲ್ಲಾ ತಪ್ಪಬೇಕಾದರೆ ಸಂಘಟಿರಾಗಿ ನಮ್ಮ ಹಕ್ಕುಗಳಿಗೆ ನಾವು ಹೋರಾಟ ಮಾಡ ಬೇಕು ಎಂದು ಕರೆ ನೀಡಿದರು.

ಕಾಲೇಜಿನಿಂದ ಶಿಡ್ಲಘಟ್ಟ ವೃತ್ತದವರೆಗೆ ಜಾಗೃತಿ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ಸಾಗಿದ ೫ಕಾರ್ ಎನ್‌ಸಿಸಿ ಬೆಟಾಲಯನ್ ಸಾರ್ವಜನಿರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಿದರು.
ಈ ವೇಳೆ ದೈಹಿಕ ಶಿಕ್ಷಣ ನಿರ್ದೇಶಕಿ, ಹಾಗೂ ಎನ್‌ಒ ಶಾರದಮ್ಮ ಮತ್ತು ವಿದ್ಯಾರ್ಥಿಗಳು ಇದ್ದರು.