ಚಿಂತಾಮಣಿ: ಸಚಿವ ಡಾ.ಎಂ ಸಿ ಸುಧಾಕರ್ ರವರ ಕೊಡುಗೆ ಮುಸ್ಲಿಂ ಸಮುದಾಯದ ಮೇಲೆ ಅಪಾರವಾಗಿದೆ, ಅವರ ಕುಟುಂಬದ ಮೇಲೆ ಸುಳ್ಳು ಹೇಳಿಕೆಗಳನ್ನು ನೀಡಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಲು ಹೊರಟಿರುವ ಮಾಜಿ ನಗರಸಭಾ ಸದಸ್ಯ ಮೊಹಮ್ಮದ್ ಶಫೀಕ್ ರವರು ನೀಡುತ್ತಿರುವ ಹೇಳಿಕೆಗಳನ್ನು ಈ ಕೂಡಲೇ ನಿಲ್ಲಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಸೈಯದ್ ಏಜಾಜ್ ಹೇಳಿದರು.
ಚಿಂತಾಮಣಿ ಹೊರವಲಯದ ಕರಿಯಪಲ್ಲಿಯಲಿರುವ ಶಾದಿ ಮಹಲ್ ನಲ್ಲಿ ಹಮ್ಮಿಕೊಳ್ಳ ಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದವರು ದಿವಂಗತ ಆಂಜನೇಯ ರೆಡ್ಡಿ ರವರು ಜಾಮಿಯಾ ಮಸೀದಿಗೆ ಅಂದಿನ ಕಾಲದಲ್ಲಿ ಒಂದು ಸೈಟನ್ನು ನೀಡಿದ್ದರು. ನಗರ ಭಾಗ ದಲ್ಲಿರುವ ಮುಸ್ಲಿಂ ವೆಲ್ಫೇರ್ ಶಾಲೆಯನ್ನು ನಗರ ಸಭೆಗೆ ಸೇರಿಸಿ ಅನುಕೂಲ ಮಾಡಿ ಕೊಟ್ಟಿದ್ದಕ್ಕೆ, ಅಪಾರ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರ ಮಕ್ಕಳು ಆ ಶಾಲೆಯಲ್ಲಿ ಇಂದು ವಿದ್ಯಾಭ್ಯಾಸ ಕಲಿಯುತ್ತಿದ್ದಾರೆ,ಇಂತಹ ಹಲವಾರು ಕೊಡುಗೆಗಳು ಮುಸ್ಲಿಂ ಸಮುದಾಯದ ಮೇಲೆ ದಿವಗಂತ ಆಂಜನೇಯ ರೆಡ್ಡಿ ಅವರ ಕುಟುಂಬದವರದು ಇದೆ ಎಂದು ಹೇಳಿದರು.
ಇದನ್ನೂ ಓದಿ: Chinthamani News: ಎಫ್ ಸಿ ಇಲ್ಲದ ಶಾಲಾ ವಾಹನಗಳಿಗೆ ಎಫ್ ಸಿ ಮಾಡಿಕೊಳ್ಳಲು ಖಡಕ್ ವಾರ್ನಿಂಗ್
ಮುಖಂಡರಾದ ಶೇಕ್ ಸಾಧಿಕ್ ರಜ್ವಿ ಮಾತನಾಡಿ, ಮಾಜಿ ನಗರಸಭಾ ಸದಸ್ಯ ಮೊಹ ಮ್ಮದ್ ಶಫೀಕ್ ಕಾಂಗ್ರೆಸ್ ಪಕ್ಷದ ವಿರೋಧಿ ಚಟುವಟಿಕೆಗಳು ಮಾಡುತ್ತಿದ್ದಾರೆ. ಮುಸ್ಲಿಂ ಸಮುದಾಯದವರು ಶಫೀಕ್ ಹಾಗೂ ಅವರ ಕುಟುಂಬವನ್ನು ನೋಡಿ ಯಾರು ಮತ ಕೊಡುವುದಿಲ್ಲ, ಸಚಿವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಮತ ನೀಡುತ್ತಾರೆ. ಮುಂಬರುವ ನಗರಸಭಾ ಚುನಾವಣೆಗಳಲ್ಲಿ ಅವರ ಕುಟುಂಬದಿಂದ ಏಳು ಜನ ಸ್ಪರ್ಧೆ ಮಾಡುತ್ತೇವೆ ಎಂದು ಹೇಳುತ್ತಾರೆ. ಏಳು ಜನ ಅವರ ಕುಟುಂಬದವರು ಗೆದ್ದು ಅವರ ನಾಯಕತ್ವವನ್ನು ತೋರಿಸಲಿ ಅವಾಗ ನಾನು ಅವರ ನಾಯಕತ್ವವನ್ನು ಒಪ್ಪುತ್ತೇನೆ ಎಂದು ಹೇಳಿದರು.
ಸೈಯದ್ ಮಾಲಿಕ್ ಪಾಷಾ ಮಾತನಾಡಿ ಚಿಂತಾಮಣಿ ನಗರಸಭೆ ಅಂದಿನ ಮಾಜಿ ಶಾಸಕರಾಗಿದ್ದ ಡಾ.ಎಂ ಸಿ ಸುಧಾಕರ್ ರವರ ತಕ್ಕೆಗೆ ತರಲು ನಮ್ಮ ಮನೆಯಿಂದಲೇ ಹಣ ತೆಗೆದುಕೊಂಡು ಹೋಗಿದ್ದಾರೆ,ಇಂತಹವರಿಂದ ಯಾರು ಸಹ ರಾಜಕೀಯ ಕಲಿಯುವ ಅವಶ್ಯಕತೆ ಇಲ್ಲ! ಮುಸ್ಲಿಂ ಸಮುದಾಯಕ್ಕೆ ಹಾಗೂ ಅವರ ವಾರ್ಡಿನ ಜನತೆಗೆ ಅವರ ಕೊಡುಗೆ ಏನು ಎಂದು ಮೊದಲು ಅವರೇ ಬೆನ್ನು ತಟ್ಟಿ ನೋಡಿಕೊಳ್ಳಲಿ ಎಂದು ಹೇಳಿದರು.
ಈ ವೇಳೆ, ಚಿನ್ನಸಂದ್ರ ಇಜಾಜ್, ವಕೀಲರಾದ ಬರೀದ್ ಮಾತನಾಡಿದರು.
ಮುಖಂಡರಾದ ಇಮ್ತಿಯಾಜ್ ಪಾಷಾ,ಸಿ ಕೆ ಎಲ್ ಚಾಂದ್ ಪಾಷ,ಲಾರಿ ಅಸೋಸಿಯೇಷನ್ ಅಧ್ಯಕ್ಷರಾದ ಕೆಜಿಎನ್ ಬಾಬು, ಶಬ್ಬಿರುದ್ದೀನ್, ತಾಜಮುಲ್ ಪಾಷಾ, ಸಮೀಉಲ್ಲಾ, ಫಾರೂಕ್ ಪಾಷಾ ಸೇರಿದಂತೆ ಮತ್ತಿತರರು ಇದ್ದರು.