ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bagepally News: ಬಡ ದಲಿತ ಕುಟುಂಬದ ಗುಡಿಸಲನ್ನು ತೆರವುಗೊಳಿಸಿದರೆ ಜೈಭೀಮ್ ಸಂಘಟನೆಯಿಂದ ಪ್ರತಿಭಟನೆ ಎಚ್ಚರಿಕೆ ರವಾನೆ

ನಿರಾಶ್ರಿತರಾಗಿರುವ ಇವರು ತುಂಬಾ ಬಡವರು, ಪ.ಜಾತಿಗೆ ಸೇರಿದವರಾಗಿರುತ್ತಾರೆ. ಈ ಕುಟುಂಬ ದವರು ನಿರ್ಮಿಸಿಕೊಂಡಿರುವ ಗುಡಿಸಲು ತೆರವುಗೊಳಿಸುವ ಕ್ರಮವನ್ನು ಕೈ ಬಿಡಿ ಇಲ್ಲವೇ ಅವರಿಗೆ ಇದೇ ಗ್ರಾಮದಲ್ಲಿನ ಸರ್ಕಾರಿ ಜಾಗದಲ್ಲಿ ನಿವೇಶನ ಮಂಜೂರು ಮಾಡಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಿ ತೆರವು ಗೊಳಿಸಿದರೆ ನಮ್ಮದೇನು ಅಭ್ಯಂತರವಿಲ್ಲ, ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಗುಡಿಸಲು ತೆರುವುಗೊಳಿಸುವಂತಹ ಕ್ರಮ ಸರಿಯಲ್ಲ ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂದರು.

ಬಡ ದಲಿತ ಕುಟುಂಬದ ಗುಡಿಸಲನ್ನು ತೆರವುಗೊಳಿಸಿದರೆ ಪ್ರತಿಭಟನೆ

ಬಡ ದಲಿತ ಕುಟುಂಬ ನಿರ್ಮಿಸಿಕೊಂಡು ವಾಸವಿರುವ ಗುಡಿಸಲನ್ನು ತೆರವುಗೊಳಿಸಿದರೆ ಅಧಿಕಾರಿಗಳು ವಿರುದ್ಧ ಪ್ರತಿಭಟನೆ ನಡೆಸಿದರು. -

Ashok Nayak
Ashok Nayak Jan 20, 2026 10:50 PM

ಬಾಗೇಪಲ್ಲಿ: ಹತ್ತಾರು ವರ್ಷಗಳಿಂದ ಶಿವಪುರ ಗ್ರಾಮದ ಸರ್ಕಾರಿ ಜಾಗದಲ್ಲಿ ಗುಡಿಸಲನ್ನು ನಿರ್ಮಿಸಿಕೊಂಡು ಜೀವನ ಮಾಡುತ್ತಿರುವ ದಲಿತರ ಗುಡಿಸಿಲನ್ನು ತೆರವುಗೊಳಿಸಿದರೆ ಅಂತಹವರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಜೈ ಭೀಮ್ ಅಖಿಲ ಭಾರತ ಹೋರಾಟ ಸಮಿತಿ(Jai Bhim All India Struggle Committee)ಯ ಜಿಲ್ಲಾಧ್ಯಕ್ಷ ಎಂ.ವಿ. ಲಕ್ಷ್ಮೀನರಸಿಂಹಪ್ಪ ಆಗ್ರಹಿಸಿದರು.

ಪಟ್ಟಣದ ಪತ್ರಕರ್ತರ ಭವನದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ಶಿವಪುರ ಗ್ರಾಮದ ರಾಣಿ ಮತ್ತು ಈಶ್ವರಪ್ಪ ದಂಪತಿಗಳು ತಮ್ಮ ಇಬ್ಬರ ಮಕ್ಕಳೊಂದಿಗೆ ಕಳೆದ ಹತ್ತಾರು ವರ್ಷಗಳಿಂದ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆ ಪಕ್ಕದಲ್ಲಿ ಸಣ್ಣದಾಗಿ ಗುಡಿಸಿಲು ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಇವರಿಗೆ ಈ ಗ್ರಾಮದಲ್ಲಿ ಯಾವುದೆ ಮನೆ ಜಮೀನು ಇಲ್ಲದ ನಿರಾಶ್ರಿತರಾಗಿದ್ದಾರೆ. ಈ ಸಂಬಂಧ 2024ರಲ್ಲಿ ಗ್ರಾ,ಪಂ ಅಧಿಕಾರಿಗಳು ವಸತಿ ರಹಿತರು ಎಂಬುದಾಗಿ ಧೃಢೀಕರಣ ಪತ್ರವನ್ನು ಸಹ ನೀಡಿದ್ದಾರೆ. ಆದರೆ ಇತ್ತೀಚಿಗೆ ಇದೇ ಗ್ರಾಮದ ಹಲವು ಬಲಾಢ್ಯರ ಒತ್ತಡಕ್ಕೆ ಮಣಿದ ಗ್ರಾ.ಪಂ, ಮತ್ತು ತಾಲೂಕು ಆಡಳಿತ ಗುಡಿಸಲು ಮನೆಯನ್ನು ತೆರವುಗೊಳಿಸುವಂತೆ ಈಶ್ವರಪ್ಪ ಕುಟುಂಬಕ್ಕೆ ನೋಟಿಸ್ ನೀಡುವುದಲ್ಲದೆ ನೀವು ತೆರವುಗೊಳಿಸಿ ಇಲ್ಲದಿದ್ದರೆ ಜೆಸಿಬಿ ಯಂತ್ರಗಳ ಮೂಲಕ ಬಲವಂತವಾಗಿ ತೆರವುಗೊಳಿಸಬೇಕಾಗುತ್ತೆ ಎಂಬುದಾಗಿ ಬೆದರಿಸಿರುವುದು ಸರಿಯಲ್ಲ. ಇವರಿಗೆ ಪರ್ಯಾಯ ವ್ಯವಸ್ಥೆ ಮಾಡದೆ ತೆರವುಗೊಳಿಸಿದರೆ ಪ್ರತಿಭಟನೆ ಖಚಿತ ಎಂದು ತಿಳಿಸಿದರು.

ಇದನ್ನೂ ಓದಿ: Bagepally News: ಬಡ ಕುಟುಂಬಗಳಿಂದ ಬಂದ ಹಾಸ್ಟೆಲ್ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ತಮ್ಮ ಭವಿಷ್ಯ ರೂಪಿಸಿಕೊಳ್ಳುವ ಅವಕಾಶ

ನಿರಾಶ್ರಿತರಾಗಿರುವ ಇವರು ತುಂಬಾ ಬಡವರು, ಪ.ಜಾತಿಗೆ ಸೇರಿದವರಾಗಿರುತ್ತಾರೆ. ಈ ಕುಟುಂಬ ದವರು ನಿರ್ಮಿಸಿಕೊಂಡಿರುವ ಗುಡಿಸಲು ತೆರವುಗೊಳಿಸುವ ಕ್ರಮವನ್ನು ಕೈ ಬಿಡಿ ಇಲ್ಲವೇ ಅವರಿಗೆ ಇದೇ ಗ್ರಾಮದಲ್ಲಿನ ಸರ್ಕಾರಿ ಜಾಗದಲ್ಲಿ ನಿವೇಶನ ಮಂಜೂರು ಮಾಡಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಿ ತೆರವುಗೊಳಿಸಿದರೆ ನಮ್ಮದೇನು ಅಭ್ಯಂತರವಿಲ್ಲ, ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಗುಡಿಸಲು ತೆರುವುಗೊಳಿಸುವಂತಹ ಕ್ರಮ ಸರಿಯಲ್ಲ ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂದರು.

ಇದೇ ಗ್ರಾಮದ ಬಲಾಢ್ಯರಾದ ಸೂರ್ಯನಾರಾಯಣ ರೆಡ್ಡಿ ಎಂಬುವವರು ಸರ್ವೆ.ನಂ 57ರಲ್ಲಿ 5 ಎಕರೆ ಸರ್ಕಾರಿ ಜಮೀನ ಕಬ್ಜ ಮಾಡಿರುತ್ತಾರೆ, ಗ್ರಾಮದ ಸರ್ವೆ.ನಂ 14ರ ಸ್ಮಶಾನದ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ, ನಾಗರಾಜು ಮತ್ತು ಮೋಹನರೆಡ್ಡಿ ಎಂಬುವವರು ಸರ್ಕಾರಿ ಶಾಲೆಯ ಜಾಗವನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದಾರೆ.

ಪ್ರತಾಪ್ ರೆಡ್ಡಿ ಎಂಬುವರು ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಯನ್ನೇ ಆಕ್ರಮಿಸಿಕೊಂಡು ವಾಣಿಜ್ಯ ಮಾಳೆಗೆಗಳನ್ನು ನಿರ್ಮಿಸಿದ್ದಾರೆ. ಆಕ್ರಮವಾಗಿ ಸರ್ಕಾರಿ ಜಾಗವನ್ನು ಆಕ್ರಮಿಸಿಕೊಂಡಿ ರುವ ಜಾಗದಲ್ಲಿ ವಾಣಿಜ್ಯ ಮಾಳಿಗೆಗಳನ್ನು ನಿರ್ಮಿಸಲು ಗ್ರಾ.ಪಂ ಅಧಿಕಾರಿಗಳು ಇ ಖಾತೆಯನ್ನು ಸಹ ಮಾಡಿದ್ದಾರೆ ಇಂತಹ ಆಕ್ರಮಗಳನ್ನು ನಡೆಸಿರುವ ಬಲಾಢ್ಯರುಗಳ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.

ಜೈ ಭೀಮ್ ಅಖಿಲ ಭಾರತ ಹೋರಾಟ ಸಮಿತಿ ಜಿಲ್ಲಾ ಗೌರವಾಧ್ಯಕ್ಷ ಜಿ.ಎಲ್ ರಾಮಾಂಜನೇಯಪ್ಪ ಮಾತನಾಡಿ, ತಾಲೂಕಿನ ಘಂಟಂವಾರಿಪಲ್ಲಿ ಗ್ರಾ.ಪಂ ವ್ಯಾಪ್ತಿಯಲ್ಲಿ ರಿಯಲ್ ಎಸ್ಟೇಟ್‌ನವರು ಕೆರೆ ಕುಂಟೆ ಸೇರಿದಂತೆ ಸರ್ಕಾರಿ ಜಾಗಗಳನ್ನು ನಂಗಿ ನೀರು ಕುಡಿಯುತ್ತಿದ್ದರೂ ಹಾಗೂ ರಸ್ತೆಗಳನ್ನು ಆಕ್ರಮಿಸಿಕೊಂಡು ವಾಣಿಜ್ಯ ಮಾಳಿಗೆಗಳನ್ನು ನಿರ್ಮಿಸಿಕೊಂಡಿದ್ದರೂ ಸಹ ಇಲ್ಲಿನ ತಹಸೀಲ್ದಾರ್ ಸೇರಿದಂತೆ ಸಂಬAಧಪಟ್ಟ ಅಧಿಕಾರಿಗಳು ಮೌನಕ್ಕೆ ಜಾರಿದ್ದಾರೆ. ಆದರೆ ಮನೆ, ನಿವೇಶನ ಇಲ್ಲದ ಬಡ ದಲಿತ ಕುಟುಂಬ ಸರ್ಕಾರಿ ಜಾಗದಲ್ಲಿ ಸಣ್ಣದಾಗಿ ತಾತ್ಕಾಲಿಕವಾಗಿ ಗುಡಿಸಲು ನಿರ್ಮಿಸಿ ಕೊಂಡು ಜೀವನ ನಡೆಸುತ್ತಿರುವ ಗುಡಿಸಲನ್ನು ತೆರುವುಗೊಳಿಸಲು ತಾಲೂಕು ಆಡಳಿತ ಮುಂದಾ ಗಿರುವ ಕ್ರಮವನ್ನು ತೀವ್ರವಾಗಿ ಖಂಡಿಸಿದರು.

ಇದೇ ವೇಳೆ, ನಿರಾಶ್ರಿತೆ ರಾಣಿ ಮಾತನಾಡಿ, ನಮಗೆ ಗ್ರಾಮದಲ್ಲಿ ನಮಗೆ ಮನೆ ಇಲ್ಲ ಇದರಿಂದ ನಾನು ಸೇರಿದಂತೆ ನನ್ನ ಗಂಡ ಈಶ್ವರಪ್ಪ, ಇಬ್ಬರು ಮಕ್ಕಳು ಕಳೆದ ಹಲವಾರು ವರ್ಷಗಳಿಂದ ರಸ್ತೆ ಪಕ್ಕದ ಸರ್ಕಾರಿ ಜಾಗದಲ್ಲಿ ಸಣ್ಣದಾಗಿ ಗುಡಿಸಲು ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದೇವೆ. ಈಗ ತಾಲೂಕು ಆಡಳಿತ ನಾವು ವಾಸವಿರುವ ಗುಡಿಸಲನ್ನು ತೆರವುಗೊಳಿಸುವಂತೆ ಕಿರುಕುಳ ನೀಡು ತ್ತಿದ್ದಾರೆ. ನಮಗೆ ವಾಸಕ್ಕೆ ಮನೆ ಇಲ್ಲದೆ ಇರುವುದರಿಂದ ಇಲ್ಲಿ ಗುಡಿಸಲು ನಿರ್ಮಿಸಿಕೊಂಡಿದ್ದೇನೆ. ನಮಗೆ ಸರ್ಕಾರಿ ಜಾಗದಲ್ಲಿ ಮನೆ ವ್ಯವಸ್ಥೆ ಮಾಡಿಕೊಡುವಂತೆ ತಾಲೂಕು ಆಡಳಿತಕ್ಕೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜೈ ಭೀಮ್ ಅಖಿಲ ಭಾರತ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷ ದಸಯ್ಯ ಗಾರಿಪಲ್ಲಿ ನಾಗಪ್ಪ, ತಾಲೂಕು ಅಧ್ಯಕ್ಷ ವಿಜಯ್, ಉಪಾಧ್ಯಕ್ಷ ಆನಂದ್, ಕಾರ್ಯದರ್ಶಿ ಮುನಿಸ್ವಾಮಿ, ಖಜಾಂಚಿ ವೆಂಕಟೇಶ್,ಉಪಕಾರ್ಯದರ್ಶಿ ಶ್ರೀನಿವಾಸ್ ಹಾಗೂ ಈಶ್ವರಪ್ಪ ಮತ್ತು ಕುಟುಂಬದವರು ಇದ್ದರು.