ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bagepally News: ಎಲ್ಲರನ್ನು ಸಮಾನತೆ ದೃಷ್ಟಿಕೋನದಿಂದ ನೋಡುವಂತೆ ತಿಳಿಸಿದ ವಿಶ್ವಮಾನ ಕನಕದಾಸರು: ರಾಮಸುಬ್ಬಮ್ಮ

ಕನಕದಾಸರು ಒಂದು ವರ್ಗದ ಸೀಮಿತವಾಗಿಲ್ಲ. ಅವರು ಕಾವ್ಯ ಹಾಗೂ ಕೀರ್ತನೆಗಳ ಮೂಲಕ ಸಮಾಜದಲ್ಲಿ ಬೇರೂರಿದ್ದ ಕಂದಾಚಾರಗಳನ್ನು ಹೋಗಲಾಡಿಸಲು ಶ್ರಮಿಸಿ, ಸಾಹಿತ್ಯಕ್ಕೆ ತನ್ನದೆ ಆದ ಕೊಡುಗೆ ನೀಡಿ, ಎಲ್ಲರನ್ನು ಸಮಾನತೆ ದೃಷ್ಟಿಕೋನದಿಂದ ನೋಡುವಂತೆ ತಿಳಿಸಿ ವಿಶ್ವಮಾನವರಾದರು

ಎಲ್ಲರನ್ನು ಸಮಾನತೆ ದೃಷ್ಟಿಕೋನದಿಂದ ನೋಡುವಂತೆ ತಿಳಿಸಿದ ವಿಶ್ವಮಾನ ಕನಕದಾಸರು

-

Ashok Nayak
Ashok Nayak Nov 9, 2025 6:39 PM

ಬಾಗೇಪಲ್ಲಿ: ದಾಸಶ್ರೇಷ್ಠ ಕನಕದಾಸ ಸಮಾಜದಲ್ಲಿನ ಮೂಢ ನಂಬಿಕೆ, ಜಾತಿ ಪದ್ಧತಿ ಸೇರಿದಂತೆ ಅನಿಷ್ಟ ಪದ್ಧತಿಗಳ ವಿರುದ್ದ ಧ್ವನಿ ಎತ್ತಿ, ಸಮಾಜದ ಅಂಕು-ಡೊಂಕುಗಳನ್ನು ತಿದ್ದಿದ ಮಹಾನ್ ದಾರ್ಶನಿಕರು ಎಂದು ಘಂಟಂವಾರಿಪಲ್ಲಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ರಾಮಸುಬ್ಬಮ್ಮ ಜಿ ಹೇಳಿದರು.

ಇಲ್ಲಿನ ತಾಲೂಕು ಕಸಭಾ ಹೋಬಳಿ ಘಂಟಂವಾರಿಪಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ
ನಡೆದ ಕನಕದಾಸ ಜಯಂತಿ ಅಂಗವಾಗಿ ಅವರ ಭಾವಚಿತ್ರಪಟಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಇದನ್ನೂ ಓದಿ: Bagepally News: ವಯೋ ನಿವೃತ್ತ ಶಿಕ್ಷಕರ ಸನ್ಮಾನ ಹಾಗೂ ಪುಸ್ತಕ ಬಿಡುಗಡೆ

ಕನಕದಾಸರು ಒಂದು ವರ್ಗದ ಸೀಮಿತವಾಗಿಲ್ಲ. ಅವರು ಕಾವ್ಯ ಹಾಗೂ ಕೀರ್ತನೆಗಳ ಮೂಲಕ ಸಮಾಜದಲ್ಲಿ ಬೇರೂರಿದ್ದ ಕಂದಾಚಾರಗಳನ್ನು ಹೋಗಲಾಡಿಸಲು ಶ್ರಮಿಸಿ, ಸಾಹಿತ್ಯಕ್ಕೆ ತನ್ನದೆ ಆದ ಕೊಡುಗೆ ನೀಡಿ, ಎಲ್ಲರನ್ನು ಸಮಾನತೆ ದೃಷ್ಟಿಕೋನದಿಂದ ನೋಡುವಂತೆ ತಿಳಿಸಿ ವಿಶ್ವಮಾನವರಾದರು ಎಂದರು.

ಈ ಸಂದರ್ಭದಲ್ಲಿ ಎನ್.ಸಂಧ್ಯಾ,ಎಲ್.ರವಿ,ನಾರಾಯಣ ಸ್ವಾಮಿ, ಜಿ.ವಿ.ಚಂದ್ರಶೇಖರ, ಜಿ.ಲಕ್ಷ್ಮೀದೇವಮ್ಮ ಸಿಬ್ಬಂದಿ ವರ್ಗ ರಘುನಾಥ ಹಾಗೂ ಶಾಲಾ ಮಕ್ಕಳು ಇತರರು ಇದ್ದರು.