Karnataka HighCourt: ಹೈಕೋರ್ಟ್ ಆದೇಶ ಉಲ್ಲಂಘನೆ ಆರೋಪ : ಗೌಡಗೆರೆ ಪಿಡಿಒ ವಿರುದ್ದ ಎಸ್.ಎಸ್.ಡಿ ಪ್ರತಿಭಟನೆ

ಮಾತನಾಡಿದ ಸಮತಾ ಸೈನಿಕದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟೋ ಣಪ್ಪ ಗೌಡಗೆರೆ ಗ್ರಾಮ ಪಂಚಾಯಿತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಶೇ 100ರಷ್ಟು ದಲಿತರೇ ವಾಸವಿರುವ ಬಂದರಹಳ್ಳಿ ಗ್ರಾಮಕ್ಕೆ ಸರಿಯಾದ ಸ್ಮಶಾನ, ರಸ್ತೆ. ವಿದ್ಯುತ್, ಚರಂಡಿ, ಕುಡಿ ಯುವ ನೀರು ಸೇರಿದಂತೆ ಅಗತ್ಯವಾಗಿ ಇರಬೇಕಾದ ಮೂಲಭೂತ ಸೌಲಭ್ಯಗಳೇ ಮರೀಚಿಕೆ.ಈ ಬಗ್ಗೆ ಸಂಬಂಧ ಪಟ್ಟ ಎಲ್ಲಾ ಅಧಿಕಾರಿಗಳಿಗೆ ನೂರಾರು ಬಾರಿ ತಿಳಿಸಿದರು.

Chikkaballapur_16-2
Profile Ashok Nayak Jan 16, 2025 9:46 PM

Source : Chikkaballapur Reporter

ಚಿಕ್ಕಬಳ್ಳಾಪುರ: ಗ್ರಾಮಕ್ಕೆ ಸರಿಯಾದ ಮೂಲಸೌಲಭ್ಯಗಳನ್ನು ಒದಗಿಸುವಂತೆ ಹೈಕೋರ್ಟ್ ಆದೇಶ ನೀಡಿದ್ದರೂ ನ್ಯಾಯಾಲಯದ ಆದೇಶ ಜಾರಿಗೊಳಿಸದೇ ಉಲ್ಲಂಘನೆ ಮಾಡಿದ್ದಾರೆಂದು ಆರೋಪಿಸಿ ಜಿಲ್ಲೆಯ ಮಂಚೇನಹಳ್ಳಿ ತಾಲ್ಲೂಕಿನ ಗೌಡಗೆರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೋಕೇಶ್ ವಿರುದ್ದ ಗೌಡಗೆರೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಗುರುವಾರ ಸಮತಾ ಸೈನಿಕದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಸಮತಾ ಸೈನಿಕದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟೋ ಣಪ್ಪ ಗೌಡಗೆರೆ ಗ್ರಾಮ ಪಂಚಾಯಿತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಶೇ ೧೦೦ ರಷ್ಟು ದಲಿತರೇ ವಾಸವಿರುವ ಬಂದರಹಳ್ಳಿ ಗ್ರಾಮಕ್ಕೆ ಸರಿಯಾದ ಸ್ಮಶಾನ, ರಸ್ತೆ. ವಿದ್ಯುತ್, ಚರಂಡಿ, ಕುಡಿಯುವ ನೀರು ಸೇರಿದಂತೆ ಅಗತ್ಯವಾಗಿ ಇರಬೇಕಾದ ಮೂಲಭೂತ ಸೌಲಭ್ಯ ಗಳೇ ಮರೀಚಿಕೆ.ಈ ಬಗ್ಗೆ ಸಂಬಂಧ ಪಟ್ಟ ಎಲ್ಲಾ ಅಧಿಕಾರಿಗಳಿಗೆ ನೂರಾರು ಬಾರಿ ತಿಳಿಸಿದರು.

ಎಲ್ಲಾರೂ ಗ್ರಾಮ ಪಂಚಾಯಿತಿಗೆ ಅರ್ಜಿಕಳಿಸಿ ಸುಮ್ಮನಾಗುತ್ತಾರೆ. ಆದರೆ ಇಲ್ಲಿರುವ ಪಿಡಿಓ ಲೋಕೇಶ್‌ಗೆ ಮಾತ್ರ ಇದರ ಬಗ್ಗೆ ಗಮನ ಹರಿಸಲು ಸಮಯವೇ ಇಲ್ಲ.ಹೈಕೋರ್ಟ್ ಆದೇಶ ಕ್ಕೂ ಕಿಮ್ಮತ್ತು ನೀಡದ ಈತ ರಾಜಕೀಯ ಅಧಿಕಾರ ಬಳಸಿಕೊಂಡು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು.

ಇದೇ ಗ್ರಾಮದ ನಿವೃತ್ತ ಸರ್ಕಾರಿ ಅಧಿಕಾರಿ ನಾರಾಯಣಪ್ಪ ಹೈಕೋರ್ಟ್ ಮೊರೆ ಹೋಗಿದ್ದ ಕಾರಣ, ªಹೈ ಕೋರ್ಟ್ ನ್ಯಾಯಾಧೀಶರು, 2020ರಲ್ಲಿ ೨ತಿಂಗಳ ಒಳಗೆ ಸಂಬಂಧ ಪಟ್ಟ ಗ್ರಾಮಕ್ಕೆ ಜಿಲ್ಲಾಮಟ್ಟದ ಅಧಿಕಾರಿಗಳು ಭೇಟಿ ನೀಡಿ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಮತ್ತು ಸದರಿ ಗ್ರಾಮದಲ್ಲಿ ದಲಿತರ ಭೂಮಿ ಒತ್ತುವರಿ ಮಾಡಿರುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು ಸದರಿ ಜಾಗಗಳನ್ನು ವಾಪನ್ನು ಪಡೆಯ ಬೇಕೆಂದು ಸ್ಪಷ್ಟವಾದ ಅದೇಶ ಮಾಡಿದ್ದರು. ಆದರೆ ಪಿಡಿಓ ಲೋಕೇಶ್ ನ್ಯಾಯಾಲಯದ ಆದೇಶ ಜಾರಿಗೊಳಿಸದೇ  ಉಲ್ಲಂಘನೆ ಮಾಡಿದ್ದಾರೆಂದು ಆರೋಪಿಸಿದರು.

ಗೌಡಗೆರೆ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಸುಮಾರು ಆರು ವರ್ಷಗಳಿಂದ ಗ್ರೆಡ್ ೨ ಕಾರ್ಯದರ್ಶಿಯಾದ ಲೋಕೇಶ್ ರವರು ಪಿಡಿಓ  ಆಗಿ ಕೆಲಸ ಮಾಡುತ್ತಿದ್ದು, ಗ್ರೇಡ್ ೨ ಕಾರ್ಯದರ್ಶಿ ಆಗಿರುವ ಇವರು ತನ್ನ ರಾಜಕೀಯ ಪ್ರಭಾವದಿಂದ ಪಿಡಿಓ ಆಗಿದ್ದಾರೆ. ಸುಮಾರು ವರ್ಷಗಳಿಂದ ಇವರು ಸಾರ್ವಜನಿಕರಿಗೆ ಇನ್ನಿಲ್ಲದ ತೊಂದರೆ ಕೊಡುತ್ತಿದ್ದಾರೆ. ಇವರಿಗೆ ಕಾನೂನಿನ ಭಯ ಇಲ್ಲ, ಮೇಲಾಧಿಕಾರಿಗಳ, ಶಾಸಕ,ಸಂಸದ ಸೇರಿ ಯಾವುದೇ ಜನ ಪ್ರತಿನಿಧಿಗಳ ಭಯ ಇಲ್ಲ, ಕೊನೆಗೆ ಹೈ ಕೋರ್ಟ್ ಆದೇಶಕ್ಕೂ ಇವರು ಬೆಲೆ ಕೊಡಲ್ಲ, ಅಂದರೆ ಇವರ ಕಾರ್ಯವೈಖರಿ ಬಗ್ಗೆ ಯಾವ ರೀತಿ ಹೇಳಬೇಕೋ ಅರ್ಥ ಆಗುತ್ತಿಲ್ಲ,  ಅದೇ ರೀತಿ ಇಲ್ಲಿನ ಗ್ರಾಮ ಪಂಚಾಯತಿ ಗ್ರಂಥಾಲಯಕ್ಕೆ ಲಕ್ಷಾಂತರ ರೂಗಳ ಅನುದಾನ ನೀಡಿ ಡಿಜಿಟಲ್ ಗ್ರಂಥಾಲಯ ಎಂದು ಹೆಸರಿಸಿದ್ದಾರೆ. ಆದರೆ ಒಂದೂ ಕಂಪ್ಯೂಟರ್ ಇಲ್ಲ. ಪುಸ್ತಕ ಇಡಲು ಸಲ್ಪ್ ಗಳಿಲ್ಲದೇ ಕಸದ ರೀತಿ ಪುಸ್ತಕಗಳನ್ನು ಚೀಲದಲ್ಲಿ ತುಂಬಿಸಿ ಇರಿಸಿದ್ದಾರೆ. ಗ್ರಂಥಾಲಯದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಹರಿದ ಕೊಳಕಾದ ಭಾವಚಿತ್ರವನ್ನು ಗಮ್ ಟೇಪ್ ಹಾಕಿ ಗೋಡೆಗೆ ಅಂಟಿಸಿ ಅವರಿಗೂ ಅವಮಾನ ಮಾಡಿದ್ದಾರೆ. ಇಲ್ಲಿರುವ ಕೂಸಿನ ಮನೆಗೆ ಬೀಗ ಹಾಕಿದ್ದಾರೆ. ಸರ್ಕಾರದ ಯೋಜನೆಗಳ ಬಗ್ಗೆ ಗ್ರಾಮೀಣ ಜನತೆಗೆ ಅವಗಾಹನೆ ನೀಡದೆ ಹಣ ಲೂಟಿ ಮಾಡುವ ಕಾರ್ಯದಲ್ಲಿ ನಿರತ ರಾಗಿದ್ದಾರೆ ಎಂದರು.

ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆರವರು ಕೂಡಲೆ ಈ ಗ್ರಾಮ ಪಂಚಾಯತಿಗೆ ಬೇಟಿ ನೀಡಿ ಪಿಡಿಓ ಲೋಕೇಶ್ ವಿರುದ್ದ ಕಾನೂನು ಕ್ರಮ ಕೈಗೊಂಡು, ಬಂದರಹಳ್ಳಿ ಗ್ರಾಮಕ್ಕೆ ಮೂಲಭೂತ ಸೌಕರ್ಯ ಕಲ್ಪಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಎಸ್‌ಎಸ್‌ಡಿಯ ಈಶ್ವರಪ್ಪ, ವಿ.ಎನ್.ನಾರಾಯಣಪ್ಪ,ಅಶ್ವತ್ತಪ್ಪ,ಈಧರೆ ಪ್ರಕಾಶ್,ಆಂಜಿನಪ್ಪ,ಗೌರೀಶ್,ಮುನಿರಾಜು,ಲಕ್ಷ್ಮಮ್ಮ, ಗ್ರಾಮಸ್ಥರು ಇದ್ದರು.

ಇದನ್ನೂ ಓದಿ: Chikkaballapur News: ಯುವಶಕ್ತಿಯ ಸಬಲೀಕರಣವೇ ನನ್ನ ಧ್ಯೇಯವಾಗಿದೆ: ಸಂದೀಪ್ ರೆಡ್ಡಿ ಹೇಳಿಕೆ

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

urea
2:13 PM January 22, 2025

ಕೃಷಿ ಸಬ್ಸಿಡಿಗೆ ರೈತರು ಬಿಟ್ಟು ಉಳಿದವರೆಲ್ಲ ಫಲಾನುಭವಿಗಳು!

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು