TET Examination: ಬಿಗಿ ಪೊಲೀಸ್ ಭದ್ರತೆಯ ನಡುವೆ ಜಿಲ್ಲೆಯಾದ್ಯಂತ ಯಶಸ್ವಿಯಾಗಿ ನಡೆದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ
ನಗರದ ೧೫ ಪರೀಕ್ಷಾ ಕೇಂದ್ರಗಳಲ್ಲಿ ಬೆಳಿಗ್ಗೆ ೯.೩೦ ರಿಂದ ೧೨ ಗಂಟೆವರೆಗೆ ಬೆಳಗಿನ ಪಾಳಿಯ ಪರೀಕ್ಷೆ ಯು ೬ ಕೇಂದ್ರಗಳಲ್ಲಿ ನಡೆದರೆ, ೨ ರಿಂದ ೪-೩೦ರ ತನಕ ಮದ್ಯಾಹ್ನದ ಪಾಳಿಯಲ್ಲಿ ೧೫ ಕೇಂದ್ರಗಳಲ್ಲಿ ನಡೆಯಿತು. ಎಲ್ಲಾ ಕೇಂದ್ರಗಳಲ್ಲಿ ಕೂಡ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಪರೀಕ್ಷೆಗೆ ಬೇಕಾದ ಮೂಲಸೌಕರ್ಯಗಳನ್ನು ಜಿಲ್ಲಾಡಳಿತ ಮತ್ತು ಜಿಲ್ಲಾ ಸಾಕ್ಷರತಾ ಮತ್ತು ಶಾಲಾ ಶಿಕ್ಷಣ ಇಲಾಖೆ ಒದಗಿಸಿತ್ತು.
-
ನೋಂದಣಿಯಾದ ಒಟ್ಟು ವಿದ್ಯಾರ್ಥಿಗಳು-೫೪೮೩, ಹಾಜರಾದವರು-೫೧೬೭, ಗೈರು ಹಾಜರಿ-೩೧೬
ಚಿಕ್ಕಬಳ್ಳಾಪುರ: ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಜಿಲ್ಲೆಯ ೧೫ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಗೊಂದಲವಿಲ್ಲದೆ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಪರೀಕ್ಷೆ ಯಶಸ್ವಿ ಯಾಗಿ ನಡೆಯಿತು.
ಬೆಳಗ್ಗೆ ಮತ್ತು ಮಧ್ಯಾಹ್ನ ಎರಡು ಪಾಳಿಗಳಲ್ಲಿ ನಡೆದ ಪರೀಕ್ಷೆಗೆ ಒಟ್ಟು- ೫೪೮೩ ಮಂದಿ ನೋಂದ ಣಿ ಮಾಡಿಕೊಂಡಿದ್ದು ಈ ಪೈಕಿ ಬೆಳಗ್ಗೆ ೧೩೬೪, ಮಧ್ಯಾಹ್ನ-೩೮೧೮ ಮಂದಿ ಹಾಜರಾಗಿದ್ದರೆ, ಬೆಳಗ್ಗೆ-೧೦೮. ಮದ್ಯಾಹ್ನ ೨೦೮ ಮಂದಿ ಗೈರು ಹಾಜರಾಗಿದ್ದರು.
ನಗರದ ೧೫ ಪರೀಕ್ಷಾ ಕೇಂದ್ರಗಳಲ್ಲಿ ಬೆಳಿಗ್ಗೆ ೯.೩೦ ರಿಂದ ೧೨ ಗಂಟೆವರೆಗೆ ಬೆಳಗಿನ ಪಾಳಿಯ ಪರೀಕ್ಷೆಯು ೬ ಕೇಂದ್ರಗಳಲ್ಲಿ ನಡೆದರೆ, ೨ ರಿಂದ ೪-೩೦ರ ತನಕ ಮದ್ಯಾಹ್ನದ ಪಾಳಿಯಲ್ಲಿ ೧೫ ಕೇಂದ್ರಗಳಲ್ಲಿ ನಡೆಯಿತು. ಎಲ್ಲಾ ಕೇಂದ್ರಗಳಲ್ಲಿ ಕೂಡ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಪರೀಕ್ಷೆಗೆ ಬೇಕಾದ ಮೂಲಸೌಕರ್ಯಗಳನ್ನು ಜಿಲ್ಲಾಡಳಿತ ಮತ್ತು ಜಿಲ್ಲಾ ಸಾಕ್ಷರತಾ ಮತ್ತು ಶಾಲಾ ಶಿಕ್ಷಣ ಇಲಾಖೆ ಒದಗಿಸಿತ್ತು.
ಪರೀಕ್ಷಾ ಕೇಂದ್ರ ೫೦೦ ಮೀಟರ್ ವ್ಯಾಪ್ತಿಯಲ್ಲಿ ೧೪೪ ಸೆಕ್ಷನ್ ಜಾರಿಯಲ್ಲಿದ್ದು ಪ್ರತಿ ಪರೀಕ್ಷಾ ಕೇಂದ್ರಕ್ಕೆ ಇಬ್ಬರು ಆರೋಗ್ಯ ತಪಾಸಣಾ ಸಿಬ್ಬಂದಿ, ಇಬ್ಬರು ಪೊಲೀಸ್ ಸಿಬ್ಬಂದಿಗಳ ನಿಯೋಜನೆ ಮಾಡಿದ್ದು, ಪ್ರತಿಯೊಬ್ಬ ಪರೀಕ್ಷಾರ್ಥಿಯನ್ನು ತಪಾಸಣೆ ಮಾಡಿಯೇ ಕೇಂದ್ರಕ್ಕೆ ಪ್ರವೇಶ ನೀಡಲಾ ಗಿದ್ದು ಬಯೋಮೆಟ್ರಿಕ್, ಸಿಸಿಟಿವಿ ವೆಬ್ ಕ್ಯಾಸ್ಟಿಂಗ್ ಕಣ್ಗಾವಲಲ್ಲಿ ಪರೀಕ್ಷೆ ನಡೆಯಿತು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆ ಮಾದರಿಯಲ್ಲಿಯೇ ವೆಬ್ ಕ್ಯಾಸ್ಟಿಂಗ್ ಅಡಿಯಲ್ಲಿ ಪರೀಕ್ಷೆಯನ್ನು ಶಾಲಾ ಶಿಕ್ಷಣ ಇಲಾಖೆ ಕೇಂದ್ರಿಕೃತ ದಾಖಲಾತಿ ಘಟಕದ ಮಾರ್ಗಸೂಚಿಗಳನ್ವಯ ಎಲ್ಲೂ ಕೂಡ ಪರೀಕ್ಷಾ ಪಾವಿತ್ರ್ಯಕ್ಕೆ ಭಂಗವಾಗದಂತೆ ಕಟ್ಟುನಿಟ್ಟಾಗಿ ಜಿಲ್ಲಾಡಳಿತ ಮತ್ತು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ನಡೆಸಿತು.
ಪರೀಕ್ಷಾರ್ಥಿಗಳಿಗೆ ಅಗತ್ಯವಾಗಿ ಬೇಕಾದ ಕುಡಿಯುವ ನೀರು, ಶೌಚಾಲಯ, ಬೆಳಕು ಇತ್ಯಾದಿ ವ್ಯವಸ್ಥೆಯನ್ನು ಒದಗಿಸಲಾಗಿತ್ತು.ಇದೇ ಮೊದಲ ಬಾರಿಗೆ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿಯೂ ಕೂಡ ವಿಶೇಷ ಚೇತನ ಪರೀಕ್ಷಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ಮತ್ತು ಹೆಚ್ಚುವರಿಯಾಗಿ ೫೦ ನಿಮಿಷ ಗಳ ಕಾಲಾವಕಾಶವನ್ನು ಕೂಡ ಒದಗಿಸಲಾಗಿತ್ತು.
ಒಟ್ಟಾರೆ ಪರೀಕ್ಷಾ ಪೂರ್ವ, ಪರೀಕ್ಷಾವಧಿ ಮತ್ತು ಪರೀಕ್ಷಾ ನಂತರದ ಕಾರ್ಯಗಳನ್ನು ಪ್ರತಿ ಯೊಬ್ಬರೂ ಅಚ್ಚುಕಟ್ಟಾಗಿ ಮಾಡಿದ ಪರಿಣಾಮ ಭಾಬುವಾರ ಜಿಲ್ಲೆಯಲ್ಲಿ ನಡೆದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದೆ ಸುಸೂತ್ರವಾಗಿ ನಡೆದಿದ್ದು ಪರೀಕ್ಷಾರ್ಥಿಗಳ ಸಂತೋಷಕ್ಕೆ ಕಾರಣವಾಗಿತ್ತು.
ಜಿಲ್ಲೆಯಲ್ಲಿ ಭಾನುವಾರ ನಡೆದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಅತ್ಯಂತ ಯಶಸ್ವಿಯಾಗಿ ಮುಗಿದಿದೆ. ನೋಂದಣಿಯಾದ ಒಟ್ಟು ವಿದ್ಯಾರ್ಥಿಗಳು-೫೪೮೩ ಪೈಕಿ ೫೧೬೭ ಹಾಜರಾಗಿ ಪರೀಕ್ಷೆ ಬರೆದರೆ, ೩೧೬ ಗೈರು ಹಾಜರಾಗಿದ್ದರು. ಇದಕ್ಕಾಗಿ, ಕೊಠಡಿ ಮೇಲ್ವಿಚಾರಕರು, ಸ್ಥಾನಿಕ ಜಾಗೃತದಳ ಸದಸ್ಯ, ಮಾರ್ಗಾಧಿಕಾರಿ, ವೀಕ್ಷಕರು,ಮುಖ್ಯ ಅಧೀಕ್ಷಕರು, ಪೊಲೀಸ್ ಸಿಬ್ಬಂದಿ, ಶುಶ್ರೂಷಕರು ಸುಮಾರು ೪೦೦ ಮಂದಿ ಕಾರ್ಯನಿರ್ವಹಿಸಿದ್ದಾರೆ.
೧೫ ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲೂ ಕೂಡ ಸಣ್ಣ ಪ್ರವಾದವಾಗಲಿ, ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮಗಳಿಗೆ ಇತ್ಯಾದಿಗಳಿಲ್ಲದೆ ಸುಸೂತ್ರವಾಗಿ ಪರೀಕ್ಷೆ ನಡೆಯಲು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಭಾಸ್ಕರ್ ಅವರ ಮಾರ್ಗದರ್ಶನ ಮತ್ತು ಇಲಾಖೆ ಅಧಿಕಾರಿ ಗಳ ಮುತುವರ್ಜಿಯೇ ಕಾರಣ ಎಂಬುದು ಜಿಲ್ಲಾ ಸಾಕ್ಷರತೆ ಮತ್ತು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ವಿ.ರಮೇಶ್ ಅವರ ಮಾತಾಗಿತ್ತು.