B M Prameela Mahadev: ದಸರಾ ಪ್ರಧಾನ ಕವಿಗೋಷ್ಠಿಗೆ ಆಯ್ಕೆಯಾದ ಪ್ರಮೀಳ ಮಹದೇವಗೆ ಕಸಾಪ ಸನ್ಮಾನ
ಮೈಸೂರು ದಸರಾ(Dasara) ನಾಡಹಬ್ಬದ ಪ್ರಧಾನ ಕವಿಗೋಷ್ಠಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಸಾಹಿತಿ ಹಾಗೂ ಅಧ್ಯಾಪಕಿ, ‘ಸಿರಿಮಲ್ಲಿಗೆ’ ಖ್ಯಾತಿಯ ಬಿ.ಎಂ.ಪ್ರಮೀಳ ಮಹದೇವ(B M Prameela Mahadev) ಆಯ್ಕೆಯಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ತು(Kannada Sahithya parishad) ವತಿಯಿಂದ ಅವರನ್ನು ಸನ್ಮಾನಿಸಲಾಯಿತು.
-
ಚಿಕ್ಕಬಳ್ಳಾಪುರ: ಮೈಸೂರು ದಸರಾ(Dasara) ನಾಡಹಬ್ಬದ ಪ್ರಧಾನ ಕವಿಗೋಷ್ಠಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಸಾಹಿತಿ ಹಾಗೂ ಅಧ್ಯಾಪಕಿ, ‘ಸಿರಿಮಲ್ಲಿಗೆ’ ಖ್ಯಾತಿಯ ಬಿ.ಎಂ.ಪ್ರಮೀಳ ಮಹದೇವ(B M Prameela Mahadev) ಆಯ್ಕೆಯಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ತು(Kannada Sahithya parishad) ವತಿಯಿಂದ ಅವರನ್ನು ಸನ್ಮಾನಿಸಲಾಯಿತು.
ಅ.17ರಂದು ಮೈಸೂರಿನ ಬಿ.ಎಂ. ಶ್ರೀ ಸಭಾಂಗಣದಲ್ಲಿ ನಡೆಯಲಿರುವ ಪ್ರಧಾನ ಕವಿಗೋಷ್ಠಿ ಯಲ್ಲಿ ಅವರು ಕಾವ್ಯವಾಚನ ಮಾಡಲಿದ್ದಾರೆ. ಸಾಹಿತಿ ಡಾ.ಪ್ರತಿಭಾ ನಂದಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಡಾ. ಅಲ್ಲಮಪ್ರಭು ಬೆಟ್ಟದೂರು ಅಧ್ಯಕ್ಷತೆ ವಹಿಸಲಿದ್ದಾರೆ.
ಇದನ್ನೂ ಓದಿ: Kannada Sahithya Parishad: ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರೆಲ್ಲರ ಅಸ್ಮಿತೆ : ಜಿಲ್ಲಾಧ್ಯಕ್ಷ ಕೋಡಿರಂಗಪ್ಪ
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಮೀಳ ಮಹದೇವ, ವಿಶ್ವವಿಖ್ಯಾತ ಮೈಸೂರು ದಸರಾ ಪ್ರಧಾನ ಕವಿಗೋಷ್ಠಿಗೆ ಜಿಲ್ಲೆಯ ಪ್ರತಿನಿಧಿಯಾಗಿ ಆಯ್ಕೆಯಾಗಿರುವುದು ಜೀವನದ ಅವಿಸ್ಮರಣೀಯ ಕ್ಷಣ ವಾಗಿದೆ. ಕಸಾಪದ ಸನ್ಮಾನ ಸಾಹಿತ್ಯ ಕೃಷಿಗೆ ಮತ್ತಷ್ಟು ಪ್ರೋತ್ಸಾಹ ನೀಡಿದೆ ಎಂದರು. ತಮ್ಮ ‘ಅಗ್ನಿಶಿಖೆ’ ಕವನ ಸಂಕಲನ ಹಾಗೂ ‘ಜಾನಪದ ದೀವಿಗೆ’ ಕೃತಿಗಳು ಪ್ರಕಟಣೆಗೆ ಸಿದ್ಧವಾಗಿದ್ದು, ಶೀಘ್ರದಲ್ಲೇ ಬಿಡುಗಡೆಗೊಳಿಸುವುದಾಗಿ ತಿಳಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಕೋಡಿ ರಂಗಪ್ಪ, ತಾಲೂಕು ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ, ಕಾರ್ಯದರ್ಶಿ ಕೆ.ಎಂ. ರೆಡ್ಡಪ್ಪ, ಕೋಶಾಧ್ಯಕ್ಷ ಡಿ.ಎ. ಶ್ರೀರಾಮ ಸೇರಿದಂತೆ ಸಾಹಿತಿಗಳು ಉಪಸ್ಥಿತರಿದ್ದರು.