ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Karnataka Madara Mahasabha: ಕರ್ನಾಟಕ ಮಾದರ ಮಹಾಸಭಾ ತಾಲೂಕು ಅಧ್ಯಕ್ಷರಾಗಿ ಕೊತ್ತನೂರು ಮುನಿಯಪ್ಪ ನೇಮಕ : ಪಟ್ರೇನಹಳ್ಳಿ ಕೃಷ್ಣಪ್ಪ ಹೇಳಿಕೆ

ಕರ್ನಾಟಕ ಮಾದಾರ ಮಹಾಸಭಾದ ತಾಲೂಕು ಅಧ್ಯಕ್ಷರಾಗಿ ಕೊತ್ತನೂರು ಮುನಿಯಪ್ಪ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಪಟ್ರೇನಹಳ್ಳಿ ಕೃಷ್ಣಪ್ಪ ತಿಳಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಕರ್ನಾಟಕ ಮಾದರ ಮಹಾಸಭಾದ ತಾಲೂಕು ಘಟಕದ ಪದಾಧಿಕಾರಿಗಳ ಪಟ್ಟಿ ಬಿಡುಗಡೆಗೊಳಿಸಿ ಮಾತನಾಡಿದರು

ಕರ್ನಾಟಕ ಮಾದರ ಮಹಾಸಭಾ ತಾಲೂಕು ಅಧ್ಯಕ್ಷರಾಗಿ ಕೊತ್ತನೂರು ಮುನಿಯಪ್ಪ ನೇಮಕ

ಕರ್ನಾಟಕ ಮಾದಾರ ಮಹಾಸಭಾದ ತಾಲೂಕು ಅಧ್ಯಕ್ಷರಾಗಿ ಕೊತ್ತನೂರು ಮುನಿಯಪ್ಪ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಪಟ್ರೇನಹಳ್ಳಿ ಕೃಷ್ಣಪ್ಪ ತಿಳಿಸಿದರು. -

Ashok Nayak
Ashok Nayak Feb 4, 2026 12:14 AM

ಚಿಕ್ಕಬಳ್ಳಾಪುರ : ಕರ್ನಾಟಕ ಮಾದಾರ ಮಹಾಸಭಾದ ತಾಲೂಕು ಅಧ್ಯಕ್ಷರಾಗಿ ಕೊತ್ತನೂರು ಮುನಿಯಪ್ಪ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಪಟ್ರೇನಹಳ್ಳಿ ಕೃಷ್ಣಪ್ಪ ತಿಳಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿ ಯಲ್ಲಿ ಕರ್ನಾಟಕ ಮಾದರ ಮಹಾಸಭಾದ ತಾಲೂಕು ಘಟಕದ ಪದಾಧಿಕಾರಿಗಳ ಪಟ್ಟಿ ಬಿಡುಗಡೆಗೊಳಿಸಿ ಮಾತನಾಡಿದರು.

ಮಾದಾರ ಮಹಾಸಭಾ ರಾಜ್ಯಾದ್ಯಂತ ಸಮಿತಿಗಳ ರಚನೆ ಮಾಡಿದ್ದು ಸಮುದಾಯವನ್ನು ಶೈಕ್ಷಣಿಕ ವಾಗಿ ಆರ್ಥಿಕವಾಗಿ ಸಬಲೀಕರಣಗೊಳಿಸುವ ಉದ್ದೇಶ ಹೊಂದಿದೆ. ಅದರಂತೆ ಚಿಕ್ಕಬಳ್ಳಾಪುರ ತಾಲೂಕು ಉಪಾಧ್ಯಕ್ಷರಾಗಿ ಬಾಲಕುಂಟಹಳ್ಳಿ ನಾಗರಾಜು, ಕಾರ್ಯದರ್ಶಿಯಾಗಿ ಬಾಪೂಜಿನಗರ ಆನಂದ್, ಖಜಾಂಚಿಯಾಗಿ ಮಂಚನಬಲೆ ಪ್ರಕಾಶ್, ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿ ಬಾಪೂಜಿ ನಗರದ ಅಣ್ಣಮ್ಮ, ಚದಲಪುರ ನಾಗರಾಜ್, ತಿಮ್ಮನಹಳ್ಳಿ ಪ್ರಭು, ಕಾಮರೆಡ್ಡಿಹಳ್ಳಿ ಉಮೇಶ್, ಪರೇಸಂದ್ರ ರಾಮಾಂಜಿನಪ್ಪ ನೇಮಕವಾಗಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: Chikkaballapur News: ಹೆಣ್ಣು ಮಕ್ಕಳಿಗೆ ಅವಕಾಶ ನೀಡಿದಾಗಲೇ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ : ಟಿ.ಜಿ.ಶಿವಶಂಕರೇಗೌಡ

ವಿಶೇಷ ಆಹ್ವಾನಿತರಾಗಿ ದಿನ್ನೆಹೊಸಹಳ್ಳಿ ಪೆದ್ದಣ್ಣ, ಬೀಡಗಾನಹಳ್ಳಿ ಗಂಗಾಧರಪ್ಪ, ಅಡವಿ ಗೊಲ್ಲ ವಾರಹಳ್ಳಿ ಮುನಿರಾಜು, ಶೆಟ್ಟಿಗೆರೆ ವೆಂಕಟೇಶ್, ಅಂಬೇಡ್ಕರ್ ನಗರದ ಸಿ.ವಿ.ವೆಂಕಟೇಶ್ ಆಯ್ಕೆ ಯಾಗಿದ್ದು, ಸಮಿತಿಯ ನೂತನ ಪದಾಧಿಕಾರಿಗಳು ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾದಿಗ ಸಮುದಾಯದವರನ್ನು ನೋಂದಾಯಿಸಿ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸ ಬೇಕೆಂದು ಕರೆ ನೀಡಿದರು.

ಕರ್ನಾಟಕ ಮಾದರ ಮಹಾಸಭಾ ಕಚೇರಿಯು ಬೆಂಗಳೂರಿನಲ್ಲಿ ಫೆ.4ರಂದು ಉದ್ಘಾಟನೆಯಾಗ ಲಿದ್ದು, ಮುಂದಿನ ದಿನಗಳಲ್ಲಿ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಲಿದೆ. ಸಮಿತಿಯು ಸಮುದಾಯಕ್ಕೆ ಶೈಕ್ಷಣಿಕ, ಸಾಮಾಜಿಕ ಶಕ್ತಿಯನ್ನು ನೀಡುವ ಮೂಲಕ ಪ್ರಬುದ್ಧ ಸಮಾಜಕಟ್ಟಲು ಶ್ರಮಿಸುತ್ತಿದೆ ಎಂದು ಹೇಳಿದರು.

ಈ ವೇಳೆ ಮುಖಂಡರಾದ ಬಿ.ಎನ್.ಗಂಗಾಧರ್, ತಾ.ಪಂ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ನಗರಸಭಾ ಮಾಜಿ ಸದಸ್ಯ ವೇಣು, ಸಮುದಾಯದ ಹಿರಿಯ ಮುಖಂಡ ಮುನಿಕೃಷ್ಣಪ್ಪ ಇದ್ದರು.