Chikkaballapur News: ಮಹಿಳೆಯರು ಅಬಲೆಯರಲ್ಲ ಸಬಲೆಯರು ಎಂದು ದೃಢಪಡಿಸಿ ಮುಂದೆ ಸಾಗಬೇಕಿದೆ: ತಹಶೀಲ್ದಾರ್ ಗಗನಸಿಂಧು
ಇಂತಹ ವ್ಯವಸ್ಥೆಯ ನಡುವೆಯೂ ಕೂಡ ಅನಾದಿಕಾಲದಿಂದ ಈವರೆಗೆ ಮಹಿಳೆ ಸಾಧಿಸಿರುವ ಸಾಧನೆಗಳು, ಮೂಡಿಸಿರುವ ಹೆಜ್ಜೆ ಗುರುತುಗಳು ಸಾಮಾನ್ಯವಲ್ಲ. ಅವರೇ ಕ್ಷೇತ್ರಗಳಲ್ಲಿ ಇಂತಹ ಅಸಾಮಾನ್ಯ ಸಾಧನೆ ಮಾಡಿರುವ ಹೆಣ್ಣುಮಕ್ಕಳನ್ನು ಆರಿಸಿ ಅಂತ ರಾಷ್ಟ್ರೀಯ ಮಹಿಳಾ ದಿನಾಚರಣೆಯ ನೆಪದಲ್ಲಿ ಇಲ್ಲಿಗೆ ಕರೆಸಿ ಅಭಿನಂದಿಸುತ್ತಿರುವುದು ಸಂತೋಷದ ಸಂಗತಿ.
ಮಹಿಳೆಯರು ಅಬಲೆಯರಲ್ಲ ಸಬಲೆಯರು ಎಂದು ದೃಢಪಡಿಸಿ ಮುಂದೆ ಸಾಗಬೇಕಿದೆ ಎಂದು ತಹಶೀಲ್ದಾರ್ ಗಗನಸಿಂಧು ಹೇಳಿದರು -
ಚಿಕ್ಕಬಳ್ಳಾಪುರ: ಸಮಾಜ ಮಹಿಳೆಯರ ಹಕ್ಕುಗಳನ್ನು ರಕ್ಷಿಸಲಿಲ್ಲ ಎಂದರೆ ಅದಕ್ಕೆ ಅರ್ಥ ವಿರುವುದಿಲ್ಲ.ಸ್ವಾತಂತ್ರ್ಯ ಬಂದು 78 ವರ್ಷವಾದರೂ ಮಹಿಳೆಯರು ಮತ್ತು ಹುಡುಗಿ ಯರಿಗೆ ಸಂಪುರ್ಣ ಕಾನೂನು ರಕ್ಷಣೆ ಇಲ್ಲ ಎಂದು ದೂರುವುದಕ್ಕಿಂದ ನಾವು ಅಬಲೆಯ ರಲ್ಲ ಸಬಲರು ಎಂದು ದೃಢಪಡಿಸಿ ಸಾಗಬೇಕಿದೆ ಎಂದು ಶಿಡ್ಲಘಟ್ಟ ತಾಲೂಕು ತಹಶೀಲ್ದಾರ್ ಗಗನಸಿಂಧು ತಿಳಿಸಿದರು.
ನಗರ ಹೊರವಲಯ ಎಸ್‌ಜೆಸಿಐಟಿ ತಾಂತ್ರಿಕ ಕಾಲೇಜು ಆವರಣದ ಸಭಾಂಗಣದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಈ ಹೊತ್ತಿಗೂ ಕೂಡ ಯಾವುದೇ ಕ್ಷೇತ್ರವಿರಲಿ ಅಲ್ಲಿ ಪುರುಷ ಪ್ರಧಾನ ವ್ಯವಸ್ಥೆಯ ಕಬಂಧ ಬಾಹುಗಳು ಬಿಗಿಯಾಗಿರುತ್ತವೆ. ಇದನ್ನು ಬೇಧಿಸಿ ಮುನ್ನಡೆಯುವುದು ಸುಲಭವಲ್ಲ. ಇಂತಹ ವ್ಯವಸ್ಥೆಯ ನಡುವೆಯೂ ಕೂಡ ಅನಾಧಿಕಾಲದಿಂದ ಈವರೆಗೆ ಮಹಿಳೆ ಸಾಧಿಸಿ ರುವ ಸಾಧನೆಗಳು, ಮೂಡಿಸಿರುವ ಹೆಜ್ಜೆ ಗುರುತುಗಳು ಸಾಮಾನ್ಯವಲ್ಲ. ಅವರೇ ಕ್ಷೇತ್ರಗಳಲ್ಲಿ ಇಂತಹ ಅಸಾಮಾನ್ಯ ಸಾಧನೆ ಮಾಡಿರುವ ಹೆಣ್ಣುಮಕ್ಕಳನ್ನು ಆರಿಸಿ ಅಂತ ರಾಷ್ಟ್ರೀಯ ಮಹಿಳಾ ದಿನಾಚರಣೆ(National Women's Day)ಯ ನೆಪದಲ್ಲಿ ಇಲ್ಲಿಗೆ ಕರೆಸಿ ಅಭಿನಂದಿಸುತ್ತಿರುವುದು ಸಂತೋಷದ ಸಂಗತಿ. ಇಲ್ಲಿನ ವಿದ್ಯಾರ್ಥಿನಿಯರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ದಿಟ್ಟವಾದ ಹೆಜ್ಜೆಗಳನ್ನು ಇಡುವ ಮೂಲಕ ನಮ್ಮ ಬದುಕಿನ ದಾರಿಯನ್ನು ನಾವೇ ಕಂಡುಕೊಳ್ಳಬೇಕು ಎಂದರು.
ಇದನ್ನೂ ಓದಿ: Women's Day: ಮಹಿಳಾ ದಿನದ ಹಿನ್ನೆಲೆ: ಲಯನ್ಸ್ ಡಿಸ್ಟ್ರಿಕ್ಟ್ 317ಎಫ್ ನಿಂದ ಮಹಿಳೆಯರಿಗೆ 15 ಇ-ಆಟೋ ವಿತರಣೆ
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶಿಡ್ಲಘಟ್ಟ ತಹಸೀಲ್ದಾರ್ ಗಗನಸಿಂಧು, ಶಾಂತಿ ನಿಕೇತನ್ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಭಾರತಿ ಶ್ರೀನಿವಾಸ್, ಶ್ರೀಮತಿ ಪ್ರಿಯದರ್ಶಿನಿ ಗೋಪಾಲ್‌ಗೌಡ, ಟೆಕ್ನಿಕಲ್ ಮ್ಯಾನೇಜರ್, ಎಲ್ ಅಂಡ್ ಟಿ, ಬೆಂಗಳೂರು, ಶ್ರೀಮತಿ ಅಂಬು ಜಾಕ್ಷಿ, ರೈತ ಮಹಿಳೆ ಹಾಗೂ ಶ್ರೀಮತಿ ತನುಶ್ರೀ ರಾಮ್, ಕಾರ್ಯದರ್ಶಿಗಳು, ಆರ್.ಕೆ.ಗ್ರೂಪ್ ಆಫ್ ಇನ್ಸ್ʼಸ್ಟಿಟ್ಯೂಷನ್ಸ್, ಚಿಂತಾಮಣಿ ರವರನ್ನು ಆಹ್ವಾನಿಸಲಾಗಿತ್ತು. ಡಾ.ಜಿ.ಟಿ ರಾಜು, ಪ್ರಾಂಶುಪಾಲರು, ಶ್ರೀ ರಂಗಸ್ವಾಮಿ.ಜಿ.ಆರ್, ಆಡಳಿತಾಧಿಕಾರಿಗಳು, ಡಾ.ಮಂಜುನಾಥ್ ಕುಮಾರ್ ಬಿ.ಹೆಚ್, ಮುಖ್ಯಸ್ಥರು, ಗಣಕಯಂತ್ರ ವಿಭಾಗ, ಡೀನ್ ಅಕಾಡೆ ಮಿಕ್ಸ್, ಡಾ.ದೀಪ ಎಂ.ಎಸ್, ಮುಖ್ಯಸ್ಥರು, ವಾಯುಯಾನ ವಿಭಾಗ, ಸಿ.ಒ.ಇ ಮತ್ತು ಡಾ.ಭಾರತಿ ಎಂ, ಮುಖ್ಯಸ್ಥರು, ಗಣಕಯಂತ್ರ ವಿಜ್ಞಾನ ಮತ್ತು ವಿನ್ಯಾಸ, ಜತೆಗೆ ಎಲ್ಲಾ ವಿಭಾಗದ ಮುಖ್ಯಸ್ಥರು, ಮಹಿಳಾ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿನಿಯರು ಭಾಗವಹಿಸಿ ಮೆರುಗು ನೀಡಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಮಹಿಳಾ ಸಾಧಕೀಯರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಾ ಸರಸ್ವತಿ ಪ್ರಶಸ್ತಿಗೆ ಡಾ.ಭಾನುಮತಿ ಎಸ್, ಮುಖ್ಯಸ್ಥರು, ಮಾಹಿತಿ ತಂತ್ರಜ್ಞಾನ ವಿಭಾಗ ಇವರು ಪಾತ್ರರಾದರು.
ಈ ಕಾರ್ಯಕ್ರಮದಲ್ಲಿ ಡಾ.ಜಿ.ಟಿ ರಾಜು, ಪ್ರಾಂಶುಪಾಲರು, ಎಸ್.ಜೆ.ಸಿ.ಐ.ಟಿ ರವರು ಮಾತನಾಡಿ, ಎಲ್ಲಾ ಮಹಿಳಾ ಸಹೋದ್ಯೋಗಿಗಳಿಗೆ ಮಹಿಳಾದಿನಾಚರಣೆಯ ಶುಭಾಷಯ ಕೋರಿದರು, ಮಹಿಳೆ ಎಲ್ಲಾ ಹಾದಿಗಳಿಗೂ ಮೂಲ, ತಮ್ಮ ಕಾರ್ಯಗಳನ್ನು ಸುಭದ್ರವಾಗಿ ನಿರ್ವಹಿಸುತ್ತಾಳೆ, ಪುರುಷರ ಪ್ರಪಂಚ ಮಹಿಳೆ, ಸಂಸ್ಕಾರ, ಆಚಾರ ವಿಚಾರಗಳಿಗೆ ಮೂಲ, ಎಂದು ಹೇಳಿ ತಮ್ಮ ಹಾಡಿನ ಮೂಲಕ ಗಮನ ಸೆಳೆದರು. ವಿದ್ಯಾರ್ಥಿನಿಯರಿಂದ ನೃತ್ಯ, ಗಾಯನವನ್ನು ಹಮ್ಮಿಕೊಳ್ಳಲಾಗಿತ್ತು.