MLA Pradeep Eshwar: 21ಕ್ಕೆ ಅರಮನೆ ಮೈದಾನದಲ್ಲಿ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಅವರ ಪದಗ್ರಹಣ : ಶಾಸಕ ಪ್ರದೀಪ್ ಈಶ್ವರ್
ಕೆಪಿಸಿಸಿ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ಕೆ.ಹರಿಪ್ರಸಾದ್(B K Hariprasad) ಹಿಂದುಳಿದ ವರ್ಗಗಳ ನಾಯಕ.ಅವರ ಪದಗ್ರಹಣ ಕಾರ್ಯಕ್ರಮವು ಜೂ.21ರಂದು ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ನಮ್ಮ ಕ್ಷೇತ್ರದಿಂದ 2.5 ಸಾವಿರ ಮಂದಿ 50 ಬಸ್ಸುಗಳಲ್ಲಿ ಭಾಗಿಯಾ ಗಲಿದ್ದೇವೆ
ಪ್ರದೀಪ್ ಈಶ್ವರ್ -
ಚಿಕ್ಕಬಳ್ಳಾಪುರ: ಕೆಪಿಸಿಸಿ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ಕೆ.ಹರಿಪ್ರಸಾದ್(B K Hariprasad) ಹಿಂದುಳಿದ ವರ್ಗಗಳ ನಾಯಕ.ಅವರ ಪದಗ್ರಹಣ ಕಾರ್ಯಕ್ರಮವು ಜೂ.21ರಂದು ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ನಮ್ಮ ಕ್ಷೇತ್ರದಿಂದ 2.5 ಸಾವಿರ ಮಂದಿ 50 ಬಸ್ಸುಗಳಲ್ಲಿ ಭಾಗಿಯಾಗಲಿದ್ದೇವೆ ಎಂದು ಶಾಸಕ ಪ್ರದೀಪ್ ಈಶ್ವರ್(MLA Pradeep Eshwar) ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ, ಮತ್ತು ಪಕ್ಷದ ನೂತನ ಅಧ್ಯಕ್ಷರು ಕೆಪಿಸಿಸಿ(KPCC)ಯ ತಳಮಟ್ಟದ ಕಾರ್ಯಕರ್ತರಾಗಿ ದುಡಿದು ವಿವಿಧ ವಿಭಾಗಗಳಲ್ಲಿ ಸಕ್ರಿಯ ವಾಗಿ ತೊಡಗಿಸಿಕೊಂಡು ತಮ್ಮ ಸಂಘಟನಾ ಚಾತುರ್ಯ ತೋರಿದವರು. ಇವರಿಬ್ಬರ ಕಾಂಬಿನೇಷನ್‌ನಲ್ಲಿ 2028ಕ್ಕೆ ಕಾಂಗ್ರೆಸ್ ಮ್ಯಾಜಿಕ್ ಮಾಡಲಿದ್ದು 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ನಮ್ಮ ಪಕ್ಷ ಗೆಲುವು ಸಾಧಿಸಲಿದೆ. ಒಬಿಸಿ ನಾಯಕನಿಗೆ ಅಧ್ಯಕ್ಷಪಟ್ಟ ಒಲಿದು ಬಂದಿದೆ. ನಾನೂ ಕೂಡ ಒಬಿಸಿ ಹುಡುಗನಾಗಿ ಅದನ್ನು ಸ್ವಾಗತಿಸುತ್ತೇನೆ ಎಂದರು.
2026ರ ನೀಟ್ ಕೋಚಿಂಗ್(NEET Coaching) ಕ್ಷೇತ್ರದ ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಆತ್ಮ ವಿಶ್ವಾಸ ಮೂಡಿಸುವಲ್ಲಿ ಯಶಸ್ವಿಯಾಗಿದ್ದು ನೀಟ್‌ನಲ್ಲಿ ಒಳ್ಳೆಯ ಸ್ಥಾನ ಪಡೆದಿದ್ದರು. ದುರಾ ದೃಷ್ಟಕ್ಕೆ ಮರುಪರೀಕ್ಷೆ ಇದೇ ಜೂ.21ಕ್ಕೆ ನಡೆಯಲಿದೆ. ಇದೇ ರೀತಿ, ಇಂದು ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಕಾರ್ಯಕ್ರಮ ಪ್ರಾರಂಭವಾಗಿದೆ. ಶೀಘ್ರವೇ 56 ಸಾವಿರ ಹುದ್ದೆಗಳನ್ನು ನನ್ನ ಸರಕಾರ ತುಂಬುತ್ತಿದೆ. ಇಲ್ಲಿ ತರಬೇತಿ ಪಡೆಯುವ ನೂರಾರು ವಿದ್ಯಾರ್ಥಿಗಳಲ್ಲಿ 30 ರಿಂದ 40 ಮಕ್ಕಳಾದರೂ ಎ.ಸಿ. ತಹಶೀಲ್ದಾರ್, ಪೊಲೀಸ್ ಇನ್ಸ್ಪೆಕ್ಟರ್ ಆಗಲಿ ಎನ್ನುವುದು ನನ್ನ ಮಹದಾಸೆ. ಆಗುತ್ತಾರೆ ಎಂಬ ವಿಶ್ವಾಸವಿದೆ.
ಇದನ್ನೂ ಓದಿ: MLA Pradeep Eshwar: ಸಾಧಿಸುವ ಛಲದೊಂದಿಗೆ ನಿರಂತರ ಪರಿಶ್ರಮವಿದ್ದಲ್ಲಿ ಗುರಿ ಮುಟ್ಟಲು ಸಾಧ್ಯ: ಶಾಸಕ ಪ್ರದೀಪ್ ಈಶ್ವರ್
ಮುಂದಿನ ಚುನಾವಣೆ ಬಗ್ಗೆ ಯೋಚಿಸುವವನು ನಾನಲ್ಲ. ಭಗವಂತ ಒಂದು ಅವಕಾಶ ಕೊಟ್ಟಿ ದ್ದಾನೆ. ಅದನ್ನು ಬಳಸಿಕೊಂಡು ನನ್ನ ಕ್ಷೇತ್ರದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಪ್ರತಿ ಭಾನುವಾರ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಹೆಸರಾಂತ ಕೋಚಿಂಗ್ ಸೆಂಟರ್ ಪರಿಣಿತರು ಬಂದು ತರಬೇತಿ ಮಾಡಲಿದ್ದಾರೆ. ಯುವಕ ಯುವತಿಯರು ಇದರ ಸದುಪ ಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡುತ್ತೇನೆ ಎಂದರು.
ನಾನು ಮಾತು ಕೊಟ್ಟಂತೆ ಚುನಾವಣೆಗೂ ಮುನ್ನ ಶಿಕ್ಷಣ ಕ್ಷೇತ್ರದಲ್ಲಿ, ಆರೋಗ್ಯ ಕ್ಷೇತ್ರದಲ್ಲಿ ಮಾಡಿ ರುವ ಸಾಧನೆಗಳ ಪಟ್ಟಿ ಬಿಡುಗಡೆ ಮಾಡುತ್ತೇನೆ. ಕ್ಷೇತ್ರದ ಎಲ್ಲಾ ನನ್ನ ತಾಯಂದಿರು ನನ್ನ ಮೇಲೆ ನಂಬಿಕೆಯಿಟ್ಟಿದ್ದಾರೆ. ಅವರ ನಂಬಿಕೆ ಉಳಿಸಿಕೊಂಡು ಹೋಗುವ ಕೆಲಸ ಮಾಡುತ್ತೇನೆ. ಗೃಹ ಜ್ಯೋತಿ, ಗೃಹಲಕ್ಷ್ಮೀ ಪಂಚ ಗ್ಯಾರೆಂಟಿಗಳ ಜತೆಗೆ ನನ್ನ ಅಮ್ಮಾ ಆಂಬುಲೆನ್ಸು, ಸ್ಕಾಲರ್‌ಶಿಪ್, ವರಮಹಾಲಕ್ಷ್ಮೀ ಬಾಗೀನ ಹೀಗಿ ಅನೇಕ ಕಾರ್ಯಕ್ರಮಗಳನ್ನು ಕೊಟ್ಟಿದ್ದೇನೆ. ಇವೆಲ್ಲಾ ಒಳ್ಳೆಯ ದಾಗುತ್ತದೆ. ಜನರ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದರು.
ಗೃಹಜ್ಯೋತಿ, ಗೃಹಲಕ್ಷ್ಮೀ ಯೋಜನೆ(Grihajyoti, Griha Laxmi Yojana)ಯ ಫಲಾನುಭವಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು ಎಂಬ ಬಗ್ಗೆ ನನಗೆ ಸಂಪೂರ್ಣವಾಗಿ ಮಾಹಿತಿಯಿಲ್ಲ. ಮಾಹಿತಿ ಪಡೆದು ಮಾತನಾಡುತ್ತೇನೆ. ಆದರೆ ಈ ಯೋಜನೆ ಫಲಾನುಭವಿಗಳ ಒಂದಷ್ಟು ಮಂದಿ ಐಟಿ ವ್ಯಾಪ್ತಿಗೆ ಬರುವವರಿದ್ದಾರೆ. ಅಂತಹವರನ್ನು ಹೊರಗಿಡುವ, ಯಾರಿಗೆ ಅವಕಾಶ ದೊರೆತಿಲ್ಲವೋ ಅವರನ್ನು ಸೇರಿಸುವ ಕೆಲಸ ಒಳ್ಳೆಯದೇ ಅಲ್ಲವೇ? ಎಂದರು.
ಮುದ್ದೇನಹಳ್ಳಿಯ ಬಳಿ ಬಸ್ಟಾಪ್ ಮಾಡಿ ಬ್ಯೂಲ್ಡಪ್ ಕೋಡೋಕೆ ದೊಡ್ಡ ಪೋಟೋ ಹಾಕಿ ಕೊಳ್ಳೋಕೆ ಮುಂದಾದರೆ ಸುಮ್ಮನಿರಬೇಕಾ? ಆಸ್ಪತೆಗೆ ಬರುವ ಬಡವರ ಹೊಟ್ಟೆ ತುಂಬಿಸುವ ಇಂದಿರಾ ಕ್ಯಾಂಟೀನ್ ಮಾಡುವುದು ಬೇಡವಾ? ಎಂದ ಅವರು ಈವಾಗಲ್ಲ ಎಸಿ ಅವರು ಇಂದಿರಾ ಕ್ಯಾಂಟೀನ್‌ಗೆ ಮೀಸಲಿಟ್ಟಿರುವ ಜಾಗದಲ್ಲಿ ಬಸ್ಟಾಪ್ ಮಾಡಲು ಹೋಗಿದ್ದಾರೆ. ಕಾರಣ ಏನು ಗೊತ್ತಾ ನನ್ನನ್ನು ಬೈಯ್ಯಲು ಟೀಕಿಸಲು ಇವರಿಗೆ ಬೇರೆ ಕಾರಣಗಳು ಯಾವುದೂ ಸಿಕ್ಕಿಲ್ಲ. ಒಂಥರಾ ಮಾನಸಿಕ ಅಸ್ವಸ್ಥತೆ ಕಾಣುತ್ತಿದೆ. ಹೀಗಾಗಿ ಇದನ್ನು ಬಳಸಿಕೊಂಡಿದ್ದಾರೆ ಎಂದರು.
ಬಹುಶಃ ಇಂದಿರಾ ಕ್ಯಾಂಟೀನ್ ಇಲ್ಲಿ ಬಂದರೆ ಸುತ್ತ ಮುತ್ತಲಿರುವ ಹೋಟೆಲ್‌ಗಳಿಗೆ ತೊಂದರೆ ಆಗಲಿದೆ ಎನ್ನುವ ಮಾಫಿಯಾ ಇದನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ನನಗೆ ಅನಿಸುತ್ತದೆ ಎಂದು ಹೇಳಿದರು.
ಹೆಚ್.ಎನ್.ವ್ಯಾಲಿ(H N Valley) ನೀರಿನ 3ನೇ ಹಂತದ ಶುದ್ಧೀಕರಣ ಮಾಡಬೇಕು ಎನ್ನುವ ನನ್ನ ಬದ್ಧತೆಯಲ್ಲಿ ಬದಲಾವಣೆಯಿಲ್ಲ. ಎಲ್ಲಾ ನೀರಾವರಿ ಹೋರಾಟಗಾರರಿಗೆ ಹೇಳುತ್ತೇನೆ. ನಾನೂ ಕೂಡ ೩ನೇ ಹಂತದ ಶುದ್ಧಿಕರಣದ ಪರವಾಗಿ ಇರುವವನು. ಆದರೆ ನನ್ನೊಬ್ಬನಿಂದಲೇ ಈ ಕೆಲಸ ಮಾಡಲು ಆಗುವುದಿಲ್ಲ. ಚಿಂತಾಮಣಿ ಶಾಸಕರು ಮಾಜಿ ಸಚಿವ ಡಾ.ಎಂ.ಸಿ.ಸುಧಾಕರ್(Dr M C Sudhakar) ನನಗಿಂತ ಹಿರಿಯರು, ಅನುಭವಸ್ಥರು, ಬಾಗೇಪಲ್ಲಿ ಸುಬ್ಬಾರೆಡ್ಡಿ ಕೂಡ ಅನುಭವಸ್ಥರೇ ಆಗಿದ್ದಾರೆ. ಅವರಿಗೆ ಪವರ್ ಇದೆ. 5 ಜನ ಶಾಸಕರನ್ನು ಒಪ್ಪಿಸಿ ಎಲ್ಲರೂ ಹೋಗಿ ಮುಖ್ಯಮಂತ್ರಿ ಗಳನ್ನು ಮನವೊಲಿಸೋಣ. ಎಲ್ಲಾ ಬಿಟ್ಟು ನನ್ನನ್ನು ಹಿಡಿಸುಕೊಂಡರೆ ಹೇಗೆ ಎಂದು ಪ್ರಶ್ನಿಸಿದರು.
ಸಿಂಗಾಟಕದಿರೇನಹಳ್ಳಿ ಗ್ರಾಮದ ಸಮಸ್ಯೆ ಬಗ್ಗೆ ಮಾಧ್ಯಮದವರು ಶಾಸಕರ ಗಮನ ಸೆಳೆದಾಗ ಮಾತನಾಡಿದ ಅವರು 2022ರಲ್ಲಿ ಲತಾ ಅವರು ಜಿಲ್ಲಾಧಿಕಾರಿ. ಡಾ.ಕೆ.ಸುಧಾಕರ್ ಜಿಲ್ಲಾ ಉಸ್ತುವಾರಿ ಸಚಿವ ಆಗಿದ್ದಾಗ 20 ಸಾವಿರ ಎಕರೆ ಭೂಮಿಯನ್ನು ಡೀಮ್ಡ್ ಫಾರೆಸ್ಟ್'ಗೆ ಸೇರಿಸಿ ಬಿಟ್ಟಿದ್ದಾರೆ. ನಾವು ಯಾರಿಗಾದರೂ ಒಂದಷ್ಟು ಭೂಮಿ ಮಂಜೂರು ಮಾಡೋಣ ಎಂದರೆ ಅದು ಫಾರೆಸ್ಟ್ ಲ್ಯಾಂಡ್ ಎನ್ನುವ ಪರಿಸ್ಥಿತಿಯಿದೆ. ಇದನ್ನು ಮನಗಂಡೇ ಡಾ.ಎಂ.ಸಿ.ಸುಧಾಕರ್ ನಾವೆಲ್ಲಾ ಸೇರಿ ಸುಪ್ರಿಂಕೋರ್ಟಿನಲ್ಲಿ ಅಫಿಡವಿಟ್ ಹಾಕಿದ್ದೇವೆ. ಜನತೆಯಲ್ಲಿ ಮನವಿ ಮಾಡುತ್ತೇನೆ. ಫಾರೆಸ್ಟ್ ಸೆಂಟ್ರಲ್ ಸಮಸ್ಯೆ. ಈಬಗ್ಗೆ ಏನೇ ಆದರೂ ಸಂಸದರ ಹತ್ತಿರ ಹೋಗಬೇಕು. ನಾನೂ ಕೂಡ ಸಂಸದ ರಲ್ಲಿ ಮನವಿ ಮಾಡುತ್ತೇನೆ. ಸರ್ ನಿಮ್ಮ ಅರಣ್ಯ ಇಲಾಖೆ ಅಧಿಕಾರಿಗಳಿಂದ ರೈತರಿಗೆ ಕಿರುಕುಳ ಆಗುತ್ತಿದೆ. ದಯವಿಟ್ಟು ಅವರಿಗೆ ತಿಳಿ ಹೇಳಿ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದರು.
ಸಿಂಗಾಟಕದಿರೇನಹಳ್ಳಿ ಗ್ರಾಮದ ಭೂಮಿ ಡೀಮ್ಡ್ ಫಾರೆಸ್ಟ್ ವ್ಯಾಪ್ತಿಗೆ ಬರುವುದಿಲ್ಲ ಎಂದು ರಾಜಾ ಕಾಂತ್ ಹೇಳುತ್ತಿದ್ದಾರಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಹಾಗಾದರೆ ಅವರು ಇದು ಡೀಮ್ಟ್ ಫಾರೆಸ್ಟ್ ವ್ಯಾಪ್ತಿಗೆ ಬರುವುದಿಲ್ಲ ಎಂದು ಎನ್‌ಒಸಿ ಕೊಡಿಸಲು ಹೇಳಿ, ನಾನೇ ಮುಂದೆ ನಿಂತು ಈ ಸಮಸ್ಯೆ ಬಗೆಹರಿಸುತ್ತೇನೆ ಎಂದರು.