ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gauribidanur News: ಅಕ್ಷರಾಭ್ಯಾಸಕ್ಕೆ ಚಾಲನೆ: ರಾಮಕೃಷ್ಣ ಶಾರದಾದೇವಿ ವಿದ್ಯಾ ಮಂದಿರದಲ್ಲಿ ಕಾರ್ಯಕ್ರಮ

ತಾಲೂಕಿನ ಕಲ್ಲಂತರಾಯನ ಗುಟ್ಟೆ ಕಲ್ಲುಡಿಯಲ್ಲಿರುವ ಶ್ರೀ ರಾಮ ಕೃಷ್ಣ ಶಾರದಾದೇವಿ ವಿದ್ಯಾ ಮಂದಿರದಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿ ಯಾಗಿ ಚಿಕ್ಕಬಳ್ಳಾಪುರದ ರಾಮಕೃಷ್ಣ-ವಿವೇಕಾನಂದ ಆಶ್ರಮದ ಪೂಜ್ಯ ಸ್ವಾಮಿ ಪೂರ್ಣಾ ನಂದಜಿ ಮಹಾರಾಜ್ ಭಾಗವಹಿಸಿ, ಜ್ಞಾನದ ಅಧಿದೇವತೆಯಾದ ತಾಯಿ ಸರಸ್ವತಿಯ ಆಶೀರ್ವಾದ ದೊಂದಿಗೆ ಮಕ್ಕಳ ಹೊಸ ಕಲಿಕೆಯ ಪಯಣ ಯಶಸ್ವಿಯಾಗಲಿ ಎಂದು ಹಾರೈಸಿದರು.

ರಾಮಕೃಷ್ಣ ಶಾರದಾದೇವಿ ವಿದ್ಯಾ ಮಂದಿರದಲ್ಲಿ ಕಾರ್ಯಕ್ರಮ

-

Profile
Ashok Nayak Jul 5, 2026 11:26 PM

ಗೌರಿಬಿದನೂರು: ತಾಲೂಕಿನ ಕಲ್ಲಂತರಾಯನ ಗುಟ್ಟೆ ಕಲ್ಲುಡಿಯಲ್ಲಿರುವ ಶ್ರೀ ರಾಮ ಕೃಷ್ಣ ಶಾರದಾದೇವಿ ವಿದ್ಯಾಮಂದಿರದಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಚಿಕ್ಕಬಳ್ಳಾಪುರದ ರಾಮಕೃಷ್ಣ-ವಿವೇಕಾನಂದ ಆಶ್ರಮದ ಪೂಜ್ಯ ಸ್ವಾಮಿ ಪೂರ್ಣಾನಂದಜಿ ಮಹಾರಾಜ್ ಭಾಗವಹಿಸಿ, ಜ್ಞಾನದ ಅಧಿದೇವತೆಯಾದ ತಾಯಿ ಸರಸ್ವತಿಯ ಆಶೀರ್ವಾದದೊಂದಿಗೆ ಮಕ್ಕಳ ಹೊಸ ಕಲಿಕೆಯ ಪಯಣ ಯಶಸ್ವಿಯಾಗಲಿ ಎಂದು ಹಾರೈಸಿದರು. ಶಿಕ್ಷಣವು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಭದ್ರ ಬುನಾದಿಯಾಗಿದ್ದು, ಶಿಕ್ಷಕರು ಮತ್ತು ಪೋಷಕರು ಮಕ್ಕಳಲ್ಲಿ ಉತ್ತಮ ಸಂಸ್ಕಾರ ಹಾಗೂ ಮೌಲ್ಯಗಳನ್ನು ಬೆಳೆಸುವ ಹೊಣೆಗಾರಿಕೆ ಹೊಂದಿದ್ದಾರೆ ಎಂದು ತಮ್ಮ ಪ್ರವಚನದಲ್ಲಿ ತಿಳಿಸಿದರು.

ಇದನ್ನೂ ಓದಿ: Gauribidanur News: ಅರ್ಹ ಮತದಾರರ ಹೆಸರು ಕೈಬಿಟ್ಟು ಹೋಗದಂತೆ ಜವಾಬ್ದಾರಿ ವಹಿಸಿ: ಎನ್. ಎಚ್.ಶಿವಶಂಕರರೆಡ್ಡಿ ಕರೆ

ಕಾರ್ಯಕ್ರಮದಲ್ಲಿ ಶ್ರೀ ಬಾಲಾಜಿ ಶರ್ಮಾ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.

ಶಾಲೆಯ ಅಧ್ಯಕ್ಷ ರಾಜೇಂದ್ರ ವಿ.ಡಿ., ಕಾರ್ಯದರ್ಶಿ ರಾಘವೇಂದ್ರ ವಿ.ಡಿ., ಪ್ರಾಂಶುಪಾಲ ಪ್ರಕಾಶ್ ಕುಮಾರ್ ಎನ್., ಟಿ.ವಿ. ಪ್ರಕಾಶ್, ಅರ್ಚನಾ, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವು ಭಕ್ತಿಪೂರ್ವಕ ಹಾಗೂ ಸಂಭ್ರಮದ ವಾತಾವರಣದಲ್ಲಿ ನಡೆಯಿತು.