ಗಂಡನನ್ನು ಬಿಟ್ಟು ಬರದಿದ್ದಕ್ಕೆ ಪ್ರೇಯಸಿಗೆ ಬೆಂಕಿ ಹಚ್ಚಿ ಕೊಂದ ಲವರ್!
ದೊಡ್ಡಬಳ್ಳಾಪುರ ತಾಲೂಕಿನ ಜಿಂಕೆ ಬಚ್ಚಹಳ್ಳಿ ಬಳಿ ಕಾರಿನಲ್ಲಿ ಸುಜಾಳ ಎಂಬ ಮಹಿಳೆಯನ್ನು ಕೊಲೆ ಮಾಡಿ, ಬಳಿಕ ಕಾರಿಗೆ ಬೆಂಕಿ ಇಡಲಾಗಿತ್ತು. ಕೊಲೆ ಮಾಡಿದ್ದ ಆರೋಪಿಯ ಮೃತದೇಹ ಬೆಂಗಳೂರಿನ ಬಿಡದಿ ಬಳಿ ರೈಲ್ವೇ ನಿಲ್ದಾಣ ಬಳಿ ಪತ್ತೆಯಾಗಿದ್ದು. ಮಹಿಳೆ ತನ್ನ ಗಂಡನನ್ನು ಬಿಟ್ಟು ಬಾರದ ಹಿನ್ನೆಲೆಯಲ್ಲಿ ಪ್ರಿಯಕರನೇ ಕೊಲೆ ಮಾಡಿದ್ದ ಎಂಬುವುದು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ.
ಕೊಲೆಯಾದ ಸುಜಾತಾ ಮತ್ತು ಆರೋಪಿ ರಾಮಾಂಜಿನಪ್ಪ. -
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿದ್ದ ಕಾರಿನಲ್ಲಿ ಮಹಿಳೆ ಸಜೀವ ದಹನ ಪ್ರಕರಣಕ್ಕೆ (Murder Case) ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಪತಿಯನ್ನು ಬಿಟ್ಟು ಬರಲು ಒಪ್ಪದಿದ್ದಕ್ಕೆ ಪ್ರಿಯತಮೆಯನ್ನು ಕಾರಿನಲ್ಲೇ ಕೊಲೆ ಮಾಡಿ, ಬೆಂಕಿ ಹಚ್ಚಿದ ಬಳಿಕ ವ್ಯಕ್ತಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವುದು ತನಿಖೆ ವೇಳೆ ಬಯಲಾಗಿದೆ.
ಪ್ರಿಯಕರ ರಾಮಾಂಜಿನಪ್ಪ ಪ್ರಿಯತಮೆ ಸುಜಾತಳನ್ನು (35) ಕಾರಿನಲ್ಲಿ ಕೊಲೆ ಮಾಡಿ, ನಂತರ ಪೆಟ್ರೋಲ್ ಸುರಿದು ಬೆಂಕಿಯಿಟ್ಟಿದ್ದಾನೆ. ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ಸುಜಾತಾ ದೇವನಹಳ್ಳಿ ಮೂಲದವರು ಎನ್ನಲಾಗಿದೆ.
ಮೃತ ಸುಜಾತಾ ಹಾಗೂ ರಾಮಾಂಜಿನಪ್ಪ ನಡುವೆ ಅನೈತಿಕ ಸಂಬಂಧ ಹೊಂದಿದ್ದರು. ಇದೇ ಕಾರಣದಿಂದಾಗಿ ಕಳೆದ 4 ತಿಂಗಳ ಹಿಂದೆ ರಾಮಾಂಜಿನಪ್ಪ ಹೆಂಡತಿಯಿಂದ ಡಿವೋರ್ಸ್ ಪಡೆದುಕೊಂಡಿದ್ದ. ಬಳಿಕ ಸುಜಾತಳಿಗೂ ಗಂಡನ ಬಿಟ್ಟು ಬರುವಂತೆ ಟಾರ್ಚರ್ ಮಾಡುತ್ತಿದ್ದ. ಆದರೆ ಸುಜಾತ ಗಂಡನ ಬಿಟ್ಟು ಬರಲು ಒಪ್ಪಿರಲಿಲ್ಲ. ಹೀಗಾಗಿ ಸಿಟ್ಟಿನಲ್ಲಿ ಏ.2ರಂದು ದೊಡ್ಡಬಳ್ಳಾಪುರ ತಾಲೂಕಿನ ಜಿಂಕೆ ಬಚ್ಚಹಳ್ಳಿ ಬಳಿ ಕಾರಿನಲ್ಲಿ ಸುಜಾಳನ್ನು ಹೊಡೆದು ಕೊಲೆ ಮಾಡಿ, ಬಳಿಕ ಕಾರಿಗೆ ಬೆಂಕಿಯಿಟ್ಟು ಪರಾರಿಯಾಗಿದ್ದ.
ಪೊಲೀಸರು ಕಾರು ಪರಿಶೀಲನೆ ಮಾಡಿದಾಗ ಮಾರಸಂದ್ರದ ಸುರೇಶ್ ಅವರದ್ದು ಎಂದು ಗೊತ್ತಾಗಿತ್ತು. ಬಳಿಕ ಸುರೇಶ್ ಕಾರನ್ನು ರಾಮಾಂಜಿನಪ್ಪ ತೆಗೆದುಕೊಂಡು ಹೋಗಿರುವುದಾಗಿ ತಿಳಿದುಬಂದಿತ್ತು. ಇದೀಗ ಬೆಂಗಳೂರಿನ ಬಿಡದಿ ಬಳಿ ರೈಲ್ವೇ ನಿಲ್ದಾಣ ಬಳಿ ರಾಮಾಂಜಿನಪ್ಪ ಶವ ಪತ್ತೆಯಾಗಿದ್ದು, ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.
ಬೇಸಿಗೆ ರಜೆಗೆ ತಾತನ ಮನೆಗೆ ಬಂದಿದ್ದ ಮೊಮ್ಮಗ ಅಪಘಾತದಲ್ಲಿ ಸಾವು
ಚಾಮರಾಜನಗರ: ಬೇಸಿಗೆ ರಜೆಗೆ ತಾತನ ಮನೆಗೆ ಬಂದಿದ್ದ ಮೊಮ್ಮಗ, ಸೈಕಲ್ ಸವಾರಿ ಮಾಡುವಾಗ ಗೂಡ್ಸ್ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ಕೊಳ್ಳೇಗಾಲದ ಹರಳೆ - ಅಣಗಳ್ಳಿ ಗ್ರಾಮದ ರಸ್ತೆಯಲ್ಲಿ ನಡೆದಿದೆ.
Bike Accident: ಔರಾದ್‌ನಲ್ಲಿ ಎರಡು ಬೈಕ್‌ಗಳ ಮುಖಾಮುಖಿ ಡಿಕ್ಕಿ: ಓರ್ವ ಸ್ಥಳದಲ್ಲೇ ಸಾವು!
ಬೆಂಗಳೂರು ನಿವಾಸಿಯಾದ ಆನಂದ್ರಾಜ್ ಎಂಬವರ ಮಗ ಯಶವಂತ್(11) ಮೃತ ಬಾಲಕ. ಬೇಸಿಗೆ ರಜೆ ಹಿನ್ನೆಲೆ ಅಣಗಳ್ಳಿ ಗ್ರಾಮದ ಶಿವಲಿಂಗಯ್ಯ ಎಂಬವರ ಮನೆಗೆ ಈತ ಬಂದಿದ್ದ. ಆಟ ಆಡಲೆಂದು ಕುಟುಂಬಸ್ಥರು ಯಶವಂತ್ಗೆ ಸೈಕಲ್ ಕೊಡಿಸಿದ್ದರು. ಮಂಗಳವಾರ ಬೆಳಗ್ಗೆ ಈತ ಸೈಕಲ್ ಸವಾರಿ ಮಾಡುವಾಗ ಗೂಡ್ಸ್ ವಾಹನವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಕೊಳ್ಳೇಗಾಲ ಪೊಲೀಸರು ಭೇಟಿ ಕೊಟ್ಟು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಉಪ ವಿಭಾಗ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.