ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chikkaballapur News: ಸ್ಟೇಟ್ ಗೇಮ್ಸ್ ತೀರ್ಪುಗಾರರಾಗಿ ಮಂಚನಬಲೆ ಶ್ರೀನಿವಾಸ್ ಆಯ್ಕೆ

ತುಮಕೂರಿನ ನೂತನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಜ19ರಿಂದ 23ರವರೆಗೆ ಸ್ಟೇಟ್ ಗೇಮ್ಸ್ (ಎಲ್ಲಾ ತರಹದ ಗುಂಪು ಆಟಗಳು) ಹಾಗೂ ಅಥ್ಲೆಟಿಕ್ಸ್ ಸ್ಪರ್ಧೆಗಳು ನಡೆಯಲಿವೆ. ಈ ಕ್ರೀಡಾಕೂಟದ ಉದ್ಘಾಟಕರಾಗಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜ್ಯ ಅಥ್ಲೆಟಿಕ್ ಸಂಸ್ಥೆಯ ಅಧ್ಯಕ್ಷರು ಹಾಗೂ ಗೃಹ ಸಚಿವ ಡಾ|| ಜಿ.ಪರಮೇಶ್ವರ್, ರಾಜ್ಯ ಒಲಂಪಿಕ್ಸ್ ಸಂಸ್ಥೆಯ ಅಧ್ಯಕ್ಷರಾದ ಕೆ.ಗೋವಿಂದರಾಜು ಆಗಮಿಸು ತ್ತಿದ್ದಾರೆ.

ಸ್ಟೇಟ್ ಗೇಮ್ಸ್ ತೀರ್ಪುಗಾರರಾಗಿ ಮಂಚನಬಲೆ ಶ್ರೀನಿವಾಸ್ ಆಯ್ಕೆ

-

Ashok Nayak
Ashok Nayak Jan 16, 2026 11:17 PM

ಚಿಕ್ಕಬಳ್ಳಾಪುರ: ತುಮಕೂರಿನ ನೂತನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಜ19ರಿಂದ 23ರವರೆಗೆ ಸ್ಟೇಟ್ ಗೇಮ್ಸ್ (ಎಲ್ಲಾ ತರಹದ ಗುಂಪು ಆಟಗಳು) ಹಾಗೂ ಅಥ್ಲೆಟಿಕ್ಸ್ ಸ್ಪರ್ಧೆಗಳು ನಡೆಯಲಿವೆ. ಈ ಕ್ರೀಡಾಕೂಟದ ಉದ್ಘಾಟಕರಾಗಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜ್ಯ ಅಥ್ಲೆಟಿಕ್ ಸಂಸ್ಥೆಯ ಅಧ್ಯಕ್ಷರು ಹಾಗೂ ಗೃಹ ಸಚಿವ ಡಾ|| ಜಿ.ಪರಮೇಶ್ವರ್, ರಾಜ್ಯ ಒಲಂಪಿಕ್ಸ್ ಸಂಸ್ಥೆಯ ಅಧ್ಯಕ್ಷರಾದ ಕೆ.ಗೋವಿಂದರಾಜು ಆಗಮಿಸು ತ್ತಿದ್ದಾರೆ.

ಇದನ್ನೂ ಓದಿ: Chikkaballapur News: ಜ.17.ರಂದು ಕೋಲಾರದಲ್ಲಿ ಬಯಲು ಸೀಮೆಯ ಮೂರು ಜಿಲ್ಲೆಗಳ ನೀರಾವರಿಗಾಗಿ ಜಲಾಗ್ರಹ ಸಮಾವೇಶ: ಆರ್.ಆಂಜನೇಯರೆಡ್ಡಿ

ಕ್ರೀಡಾಕೂಟದ ಸಮಾರೋಪ (ಮುಕ್ತಾಯ) ಸಮಾರಂಭಕ್ಕೆ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್  ಆಗಮಿಸಲಿದ್ದಾರೆ.

ಈ ಕ್ರೀಡಾಕೂಟಕ್ಕೆ ತಾಂತ್ರಿಕ ತೀರ್ಪುಗಾರರಾಗಿ ಅಂತರಾಷ್ಟ್ರೀಯ ತೀರ್ಪುಗಾರ ಮಂಚನಬಲೆ ಶ್ರೀನಿವಾಸ್ ರವರು ಕಾರ್ಯನಿರ್ವಹಿಸಲಿದ್ದಾರೆ. ತೀರ್ಪುಗಾರರಾಗಿ ಆಯ್ಕೆಯಾಗಿರುವ ಮಂಚನಬಲೆ ಶ್ರೀನಿವಾಸ್ ಅವರನ್ನು ಚಿಕ್ಕಬಳ್ಳಾಪುರ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಕೆ.ವಿ.ನವೀನ್‌ ಕಿರಣ್ ಶುಭ ಹಾರೈಸಿದ್ದಾರೆ.