ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gauribidanur News: ಅಡ್ಡದಾರಿಗೆ ಹಲವು ಮುಖ; ಗುರಿ ಸಾಧನೆಗೆ ಒಂದೇ ದಾರಿ: ಶ್ರೀ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ

ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಿದರೆ ,ಅವರು ಮತ್ತಷ್ಟು ಉತ್ಸಾಹದಿಂದ ಶ್ರದ್ಧೆಯಿಂದ ವ್ಯಾಸಂಗ ಮಾಡಿ, ಉನ್ನತ ಹುದ್ದೆಗೆ ಹೋಗುವಂತಾಗಲಿ ಎಂಬ ಉದ್ದೇಶದಿಂದ ಕಳೆದ ನಾಲ್ಕು ವರ್ಷದಿಂದ ನಿರಂತರ ವಾಗಿ ಕ್ಷೇತ್ರದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೆರವೇರಿಸಲಾಗುತ್ತಿದೆ

ಅಡ್ಡದಾರಿಗೆ ಹಲವು ಮುಖ; ಗುರಿ ಸಾಧನೆಗೆ ಒಂದೇ ದಾರಿ

ಅಡ್ಡ ದಾರಿ ಹಿಡಿಯಲಿಕ್ಕೆ ನೂರು ದಾರಿ,ಗುರಿ ಸಾಧಿಸಲಿಕ್ಕೆ ಒಂದೇ ದಾರಿ,ಅದು ಪರಿಶ್ರಮದ ದಾರಿ ಎಂದು ಶಿವಗಂಗೆಯ ಶ್ರೀಕ್ಷೇತ್ರದ ಮೇಲನಗವಿ ವೀರ ಸಿಂಹಾಸನ ಮಠದ ಶ್ರೀ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು. -

Ashok Nayak Ashok Nayak Sep 25, 2025 8:19 AM

ಗೌರಿಬಿದನೂರು : ಅಡ್ಡ ದಾರಿ ಹಿಡಿಯಲಿಕ್ಕೆ ನೂರು ದಾರಿ,ಗುರಿ ಸಾಧಿಸಲಿಕ್ಕೆ ಒಂದೇ ದಾರಿ,ಅದು ಪರಿಶ್ರಮದ ದಾರಿ ಎಂದು ಶಿವಗಂಗೆಯ ಶ್ರೀಕ್ಷೇತ್ರದ ಮೇಲನಗವಿ ವೀರ ಸಿಂಹಾಸನ ಮಠದ ಶ್ರೀ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.

ನಗರದ ನದಿದಡದ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಕೆ,ಎಚ್,ಪಿ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರದಲ್ಲಿ, ೨೦೨೪-೨೫ ಸಾಲಿನಲ್ಲಿ ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೆರೆವೇರಿಸಿ ಮಾತನಾಡುತ್ತಿದ್ದರು.

ಈ ಭಾಗದ ಶಾಸಕರಾದ ಪುಟ್ಟಸ್ವಾಮಿಗೌಡರು ಸೇವೆ ಮಾಡಲಿಕೋಸ್ಕರ ಅಧಿಕಾರಕ್ಕೆ ಬಂದಂತಿದ್ದಾರೆ. ಇಂತಹವರ ಸಂಖ್ಯೆ ಹೆಚ್ಚಬೇಕಿದೆ ಎಂದು ಶಾಸಕರ ಸೇವಾ ಚಟುವಟಿಕೆಗಳನ್ನು ಶ್ಲಾಘಿಸಿದರು.

ಇದನ್ನೂ ಓದಿ: Chikkaballapur News:: ಡಿಸ್ಕವರಿ ವಿಲೇಜ್‌ನಲ್ಲಿ ಪೌರಕಾರ್ಮಿಕರ ದಿನಾಚರಣೆ ಆಯೋಜಿಸಿದ ನಗರಸಭೆ

ಶಾಸಕ ಕೆಎಚ್ ಪುಟ್ಟಸ್ವಾಮಿಗೌಡರು ಮಾತನಾಡುತ್ತಾ, ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಿದರೆ ,ಅವರು ಮತ್ತಷ್ಟು ಉತ್ಸಾಹದಿಂದ ಶ್ರದ್ಧೆಯಿಂದ ವ್ಯಾಸಂಗ ಮಾಡಿ, ಉನ್ನತ ಹುದ್ದೆಗೆ ಹೋಗುವಂತಾಗಲಿ ಎಂಬ ಉದ್ದೇಶದಿಂದ ಕಳೆದ ನಾಲ್ಕು ವರ್ಷದಿಂದ ನಿರಂತರ ವಾಗಿ ಕ್ಷೇತ್ರದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೆರವೇರಿಸಲಾಗುತ್ತಿದೆ ಎಂದರು.

ಮಾಜಿ ಶಾಸಕಿ ಎನ್.ಜ್ಯೋತಿರೆಡ್ಡಿ ಮಾತನಾಡುತ್ತಾ  ಶಾಸಕರಿಂದ ಪುರಸ್ಕರಿಸಲ್ಪಟ್ಟ ಪ್ರತಿಭಾವಂತ ವಿದ್ಯಾರ್ಥಿಗಳು,ಮತಷ್ಟು ಇನ್ನಷ್ಟು ವ್ಯಾಸಂಗ ಮಾಡಿ ಸಮಾಜದಲ್ಲಿ ಉನ್ನತ ಪದವಿ ಪಡೆಯಲಿ ಎಂದರು.

ಸಮಾರAಭದಲ್ಲಿ ಉಪಸ್ಥಿತರಿದ್ದ ಹಿಂದುಳಿದ ವರ್ಗಗಳ ಮುಖಂಡ ಆರ್ ಅಶೋಕ್ ಕುಮಾರ್ ಮಾತನಾಡುತ್ತಾ, ಸೇವೆಯಿಂದಲೆ ಗುರುತಿಸಿಕೊಂಡವರು ,ಸೇವೆಯಿಂದಲೆ ಶಾಸಕರಾದವರು ,ಶಾಸಕರಾದ ನಂತರವೂ ತಮ್ಮ ಸಮಾಜಮುಖಿ ಕೆಲಸಗಳನ್ನು ನಿರಂತರವಾಗಿ ಮುಂದುವರಿಸಿ ಕೊಂಡು ಹೋಗುತ್ತಿರುವ ಶಾಸಕ ಕೆಎಚ್ ಪುಟ್ಟಸ್ವಾಮಿಗೌಡರು ಸತತವಾಗಿ ನಾಲ್ಕನೇ ವರ್ಷವೂ ಸುಮಾರು ಮುನ್ನೂರು ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ತಲಾ ಐದು ಸಾವಿರ ರೂಪಾಯಿ ಗಳ ಪ್ರೋತ್ಸಾಹ ಹಣ,ಇಂಗ್ಲಿಷ್ ಡಿಕ್ಷನರಿ, ನೆನಪಿನ ಕಾಣಿಕೆ ನೀಡಿ, ಪ್ರತಿಭಾ ಪುರಸ್ಕಾರದ ಮೂಲಕ ಪ್ರೋತ್ಸಾಹಿಸುತ್ತಿರುವುದು ಅತ್ಯಂತ ಶ್ಲಾಘನೀಯ ವಿಚಾರ ಎಂದರು.

ಸಮಾರAಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಗಂಗರೆಡ್ಡಿ, ತಾಲೂಕು ನಾಯಕರ ಸಂಘದ ಅಧ್ಯಕ್ಷ ಬಾಬಣ್ಣ ,ಕೋಚಿಮುಲ್ ನಿರ್ದೇಶಕ ಜೆ ಕಾಂತರಾಜು ,ಪಿಎಲ್ಡಿ ಬ್ಯಾಂಕ್ ನಿರ್ದೇಶಕ ವಿಜಯ ರಾಘವ್, ತರಿದಾಳು ಚಿಕ್ಕಣ್ಣ,ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್, ಬಿವಿ ಗೋಪಿ ನಾಥ್, ಅಲ್ಲಂಪಲ್ಲಿ ವೇಣು, ನಾಗೇಂದ್ರ, ನಗರಸಭೆ ಸದಸ್ಯರಾದ ರಾಜಕುಮಾರ, ಶ್ರೀರಾಮಪ್ಪ ,ಪದ್ಮಾವತಮ್ಮ, ಶ್ರೀಕಾಂತ್ , ಮಂಜುಳಾ,ಅಮರನಾಥ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.