ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bagepally News: ಸಮುದಾಯ ಹೈಟಕ್ ಶೌಚಾಲಯಕ್ಕೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭೂಮಿ ಪೂಜೆ

ನೀರಿನ ವ್ಯವಸ್ಥೆ ಇಲ್ಲದೆ ಬಯಲು ಶೌಚಕ್ಕೂ ತೊಂದರೆಯಾಗುತ್ತಿತ್ತು. ಜೊತೆಗೆ, ಜನರು ಬಯಲಿನಲ್ಲಿಯೇ ಮಲ-ಮೂತ್ರ ವಿಸರ್ಜನೆ ಮಾಡುತ್ತಿದ್ದರಿಂದ ದೇವಸ್ಥಾನದ ಪರಿಸರವೂ ಹದಗೆಟ್ಟಿತ್ತು. ಇದನ್ನು ಗಮನಿಸಿದ  ರೈಟು ಲೈವ್ ಎನ್.ಜಿ.ಓ ಸಂಸ್ಥೆ ದೇವಸ್ಥಾನದ ನೈರ್ಮಲ್ಯ ಹಾಗೂ ಆರೋಗ್ಯ ಕಾಪಾಡಲು ಸಮುದಾಯ ಶೌಚಾಲಯದ ಅವಶ್ಯಕತೆಯಿದೆ ಎಂಬುದನ್ನರಿತು, ಅದರ ನಿರ್ಮಾಣಕ್ಕೆ ನಿರ್ಧರಿಸ ಲಾಗಿದೆ

ಸಮುದಾಯ ಹೈಟಕ್ ಶೌಚಾಲಯಕ್ಕೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭೂಮಿ ಪೂಜೆ

-

Ashok Nayak Ashok Nayak Sep 25, 2025 8:48 AM

ಬಾಗೇಪಲ್ಲಿ: ರೈಟು ಲೈವ್ ಎನ್.ಜಿ.ಓ ಸಂಸ್ಥೆ ಸಹಭಾಗಿತ್ವದಲ್ಲಿ 8 ಲಕ್ಷ ವೆಚ್ಚದಲ್ಲಿ ದೇವಲಯದ ಸಮದಾಯ ಶೌಚಾಲಯ ನಿರ್ಮಾಣಕ್ಕೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹಾಗೂ ತಹಸೀಲ್ದಾರ್ ಮನೀಷಾ ಎನ್ ಪತ್ರಿ ಭೂಮಿ ಪೂಜೆ ನರವೇರಿಸಿದರು.

ತದನಂತರ ಮಾತನಾಡಿ, ಪಟ್ಟಣದ ಹೊರವಲಯದ ಗಡಿದಂ ಐತಿಹಾಸಿಕ ಪ್ರಸಿದ್ಧವಾದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿ ಮದುವೆ, ಶುಭ ಸಮಾರಂಭ, ಜಾತ್ರೆ, ಹರಿಸೇವೆಗಳು, ಗ್ರಾಮಸ್ಥರ ಸಭೆಗಳು, ಸ್ವ ಸಹಾಯ ಸಂಘಗಳ ಸಭೆ, ಸ್ತ್ರೀ ಶಕ್ತಿ ಸಂಘಗಳ ಸಭೆ ಮುಂತಾದ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಹಾಗೂ ಪ್ರಸಿದ್ಧಿ ಐತಿಹಾಸಿಕ ದೇವಾಲಕ್ಕೆ ಪ್ರವಾಸಿಗರು ಭೇಟಿ, ಜಾತ್ರೆ, ಹಬ್ಬ ಅಥವಾ ಯಾವುದೇ ಕಾರ್ಯಕ್ರಮಗಳ ಸಂದರ್ಭಗಳಲ್ಲಿ ಅತಿ ಹೆಚ್ಚು ಜನಸಂದಣಿ ಸೇರುವ ಈ ಜಾಗದಲ್ಲಿ ಬೇರೆ ಊರುಗಳಿಂದ ಆಗಮಿಸಿದ ಜನರು ಮಲ-ಮೂತ್ರ ವಿಸರ್ಜನೆಗೆ ಬಯಲು ಕಡೆಗೆ ಹೋಗಬೇಕಾದ ಪರಿಸ್ಥಿತಿ ಇತ್ತು. ಮಹಿಳೆಯರು ಮತ್ತು ಹದಿ ಹರೆಯದ ಹೆಣ್ಣು ಮಕ್ಕಳಿಗೆ ಬಯಲಿಗೆ ಹೋಗುವುದು ಅಷ್ಟು ಸುಲಭದ ಮಾತಾಗಿರಲಿಲ್ಲ.

ಇದನ್ನೂ ಓದಿ: Bagepally News: ಪಡಿತರ ಅಕ್ಕಿ ಅಕ್ರಮ ಮಾರಾಟ ದಂಧೆಗೆ ಕಡಿವಾಣ ಹಾಕಿ

ಅಲ್ಲದೆ, ನೀರಿನ ವ್ಯವಸ್ಥೆ ಇಲ್ಲದೆ ಬಯಲು ಶೌಚಕ್ಕೂ ತೊಂದರೆಯಾಗುತ್ತಿತ್ತು. ಜೊತೆಗೆ, ಜನರು ಬಯಲಿನಲ್ಲಿಯೇ ಮಲ-ಮೂತ್ರ ವಿಸರ್ಜನೆ ಮಾಡುತ್ತಿದ್ದರಿಂದ ದೇವಸ್ಥಾನದ ಪರಿಸರವೂ ಹದಗೆಟ್ಟಿತ್ತು. ಇದನ್ನು ಗಮನಿಸಿದ  ರೈಟು ಲೈವ್ ಎನ್.ಜಿ.ಓ ಸಂಸ್ಥೆ ದೇವಸ್ಥಾನದ ನೈರ್ಮಲ್ಯ ಹಾಗೂ ಆರೋಗ್ಯ ಕಾಪಾಡಲು ಸಮುದಾಯ ಶೌಚಾಲಯದ ಅವಶ್ಯಕತೆಯಿದೆ ಎಂಬುದನ್ನರಿತು, ಅದರ ನಿರ್ಮಾಣಕ್ಕೆ ನಿರ್ಧರಿಸಿಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರೈಟು ಲೈವ್ ಎನ್.ಜಿ.ಓ ಸಂಸ್ಥೆಯ ಅಧಿಕಾರಿಗಳಾದ ಹರೀಶ್ ಮಾತನಾಡಿ ದೇವಾಲಯದ ಸಮಾದಾಯ ಹೈಟಕ್ ಶೌಚಾಲಯಕ್ಕೆ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಹಾಗೂ ತಹಸೀಲ್ದಾರ್ ಮನೀಷಾ ಎನ್ ಪತ್ರಿ ಸಮದಾಯ ಶೌಚಾಲಯಕ್ಕೆ ಭೂಮಿ ಪೂಜೆ ನರವೇಸಿದ್ದಾರೆ ಈ ಶೌಚಾಲಯಗಳ ಹಾಗೂ ಸಾರ್ವಜನಿಕ ಸ್ನಾನ ಗೃಹಗಳು ಹೈಟಕ್ ಮಾದರಿಯಲ್ಲಿ ನಿರ್ಮಾಣ ಮಾಡಲಾಗುತ್ತದೆ.

ಇದರ ವೆಚ್ಚವನ್ನು ಸಮಾಜ ಸೇವಕರಾದ ಉಮಾ ವೆಂಕಟ್ ಅವರು ನೀಡುತ್ತಿದ್ದು ಗಡಿದಂ ದೇವಸ್ಥಾನದ ಸಮಾದಯ  ಶೌಚಾಲಯ ಎಲ್ಲರಿಗೂ ಅನುಕೂಲ ಆಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಶ್ರೀನಿವಾಸ ರೆಡ್ಡಿ, ಪಿ.ಮಂಜುನಾಥ ರೆಡ್ಡಿ, ಲಕ್ಷ್ಮೀ ನರಸಿಂಹಪ್ಪ,ಶ್ರೀರಾಮ ರೆಡ್ಡಿ ಹಾಗೂ ಸಾರ್ವಜನಿಕರು ಹಾಜರಿದ್ದರು.