ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Pradeep Eshwar: ಖಬರ್ದಾರ್‌ ಕುಮಾರಣ್ಣ, ತಾಕತ್ತಿದ್ರೆ ಚಿಕ್ಕಬಳ್ಳಾಪುರದಲ್ಲಿ ಬಂದು ನಿಂತ್ಕೋ: ಎಚ್‌ಡಿಕೆಗೆ ಪ್ರದೀಪ್‌ ಈಶ್ವರ್‌ ಸವಾಲು

ನಾನು ಶೋಷಿತ ವರ್ಗದ ಶಾಸಕ, ನನ್ನನ್ನು, ನನ್ನ ಕುಟುಂಬವನ್ನು ಅವಮಾನ ಮಾಡಿದ್ದೀರಿ. ನಮ್ಮ ಸಮುದಾಯದ ಜಯಂತಿಗಳಲ್ಲಿ ನಿಮ್ಮನ್ನು ಅವಮಾನ ಮಾಡಿದ್ದೀವಾ? ನಾನು ತುಂಬಾ ತಾಳ್ಮೆಯಿಂದ ಇದ್ದೇನೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ಕಿಡಿಕಾರಿದ್ದಾರೆ.

ಖಬರ್ದಾರ್‌ ಕುಮಾರಣ್ಣ, ನಿಮ್ಮ ಚೇಲಾಗಳಿಗೆ ನಾನು ಹೆದರಲ್ಲ

ಶಾಸಕ ಪ್ರದೀಪ್‌ ಈಶ್ವರ್‌ ಮತ್ತು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ -

Prabhakara R
Prabhakara R Jun 27, 2026 9:05 PM

ಚಿಕ್ಕಬಳ್ಳಾಪುರ: ನಗರದ ಕನ್ನಡ ಭವನದಲ್ಲಿ ನಡೆದ ಕೆಂಪೇಗೌಡ ಜಯಂತಿ ಆಚರಣೆ ವೇಳೆ ಶಾಸಕ ಪ್ರದೀಪ್ ಈಶ್ವರ್‌ (Pradeep Eshwar) ಅವರನ್ನು ವೇದಿಕೆಯಿಂದ ಆಚೆ ಕಳುಹಿಸುವಂತೆ ಎಚ್‌.ಡಿ. ಕುಮಾರಸ್ವಾಮಿ, ಸಂಸದ ಡಾ.ಕೆ ಸುಧಾಕರ್ ಬೆಂಬಲಿಗರು ಶನಿವಾರ ಗಲಾಟೆ ಮಾಡಿದ್ದಾರೆ. ಈ ಬಗ್ಗೆ ಕಾರ್ಯಕ್ರಮದ ಬಳಿಕ ಆಕ್ರೋಶ ಹೊರಹಾಕಿರುವ ಕಾಂಗ್ರೆಸ್‌ ಶಾಸಕ ಪ್ರದೀಪ್ ಈಶ್ವರ್‌ ಅವರು, ನಾನು ಜಿಲ್ಲೆಯ ಶೋಷಿತ ಸಮುದಾಯದ ಶಾಸಕ. ಕಾರ್ಯಕ್ರಮಕ್ಕೆ ಕರೆದು ಅವಮಾನ ಮಾಡೋದು ಸರಿನಾ? ಜಿಲ್ಲೆಯಲ್ಲಿ ಶೋಷಿತರು, ಅಲ್ಪಸಂಖ್ಯಾತರು ಬದುಕುಬಾರದಾ? ಎಂದು ಪ್ರಶ್ನೆ ಮಾಡಿದ್ದಾರೆ.

ಕುಮಾರಣ್ಣ , ನೀನು ಡಿಕೆ ಅವರನ್ನೂ ಸಹಿಸಲ್ಲ, ಚೆಲುವಣ್ಣನನ್ನೂ ಸಹಿಸಲ್ಲ. ಓಬಿಸಿ ಶಾಸಕನನಾದ ನನ್ನನ್ನೂ ಸಹಿಸಲ್ಲ. ನಾನು ಶೋಷಿತ ವರ್ಗದ ಶಾಸಕ, ನನ್ನನ್ನು, ನನ್ನ ಕುಟುಂಬವನ್ನು ಅವಮಾನ ಮಾಡಿದ್ದೀರಿ. ನಮ್ಮ ಸಮುದಾಯದ ಜಯಂತಿಗಳಲ್ಲಿ ನಿಮ್ಮನ್ನು ಅವಮಾನ ಮಾಡಿದ್ದೀವಾ? ನಾನು ತುಂಬಾ ತಾಳ್ಮೆಯಿಂದ ಇದ್ದೇನೆ. ನಾವು ನಿಮ್ಮ ಮನೆ ಕೂಲಿ ಕಾರ್ಮಿಕರು, ವಾಚ್ ಮ್ಯಾನ್ ಅಂದುಕೊಂಡಿದ್ದೀರಾ? ಎಂದು ವಾಗ್ದಾಳಿ ನಡೆಸಿದ್ದಾರೆ.

ನಾನು ಇವತ್ತು ತಾಳ್ಮೆಯಿಂದ ಇದ್ದೇನೆ. ಕುಮಾರಣ್ಣ ನೀವು ಓಬಿಸಿ ಹುಡುಗಗನ್ನ ಟಾರ್ಗೆಟ್ ಮಾಡಿದ್ದೀರಾ? ನಾನು ಒಬ್ಬನೇ ಒಕ್ಕಲಿಗ ನಾಯಕ ಡಿಕೆಶಿ ಪರವಾಗಿ ನಿಂತಿರೋದು. ನಿಮಗೆ ಕ್ಷೇತ್ರದಲ್ಲಿ ಒಕ್ಕಲಿಗರೂ ಬೆಳೀಬಾರದೂ, ಬೇರೆಯವರೂ ಬೆಳೆಯಬಾರದಾ? ಎಂದು ಕಿಡಿಕಾರಿದ್ದಾರೆ.

ಆರ್​ಎಸ್​ಎಸ್​​​​​ ವಿರುದ್ಧ ಅವಹೇಳನಕಾರಿ ಪೋಸ್ಟ್​; ಗೃಹ ಸಚಿವ ಪ್ರಿಯಾಂಕ್‌ ಖರ್ಗೆ, ನಲಪಾಡ್‌ಗೆ ಕೋರ್ಟ್‌ ನೋಟಿಸ್‌

ಖಬರ್ದಾರ್‌ ಕುಮಾರಣ್ಣ, ನಿಮ್ಮ ಚೇಲಾಗಳಿಗೆ ನಾನು ಹೆದರಲ್ಲ ಎಂದು ಎಚ್ಚರಿಕೆ ನೀಡಿದ ಅವರು, ಕುಮಾರಣ್ಣ, ನಿನ್ನ ಚೇಲಾಗಳಿಗೆ ಹೆದರುವ ಮಗ ಅಲ್ಲ ನಾನು. ರವಿಕುಮಾರ್ ಕೈಯಲ್ಲಿ ಚಾಲೆಂಜ್ ಮಾಡಿಸೋದು ಅಲ್ಲ. ನಿನಗೆ ತಾಕತ್‌ ಇದ್ರೆ ನೀನು ಬಂದು ಚಿಕ್ಕಬಳ್ಳಾಪುರದಲ್ಲಿ ನಿಂತ್ಕೋ ಅಂತ ಸವಾಲು ಹಾಕಿದ್ದಾರೆ.