ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

MLA Pradeep Eshwar: ಕಮ್ಮಗುಟ್ಟಹಳ್ಳಿ ಗ್ರಾಮ ಪಂಚಾಯತಿ ಜನತೆಯ ಅಹವಾಲು ಆಲಿಸಿದ ಶಾಸಕ ಪ್ರದೀಪ್ ಈಶ್ವರ್

ಹಲವು ತಿಂಗಳ ನಂತರ ನಮ್ಮ ಊರಿಗೆ ನಮ್ಮ ಶಾಸಕ(Our MLA for our town) ಕಾರ್ಯ ಕ್ರಮದಡಿ ಶುಕ್ರವಾರ ತಾಲ್ಲೂಕಿನ ಕಮ್ಮಗುಟ್ಟಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಮಿಲು ಗುರ್ಕಿ, ವಕ್ರಹಳ್ಳಿ ಮತ್ತು ಜೀಗಾನಹಳ್ಳಿ ಗ್ರಾಮಗಳಿಗೆ ೩೬ ಇಲಾಖೆಗಳ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದು ಗ್ರಾಮದ ಜನತೆಯ ಅಹವಾಲು ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ದರು.

ಕಮ್ಮಗುಟ್ಟಹಳ್ಳಿ ಗ್ರಾಪಂ ಜನತೆಯ ಅಹವಾಲು ಆಲಿಸಿದ ಶಾಸಕ ಪ್ರದೀಪ್ ಈಶ್ವರ್

ಶಾಸಕ ಪ್ರದೀಪ್ ಈಶ್ವರ್ ಕಮ್ಮಗುಟ್ಟಹಳ್ಳಿ ಪಂಚಾಯಿತಿ ವ್ಯಾಪ್ತಿಯ ನಮಿಲು ಗುರ್ಕಿ, ವಕ್ರಹಳ್ಳಿ ಮತ್ತು ಜೀಗಾನಹಳ್ಳಿ ಗ್ರಾಮಗಳಿಗೆ ೩೬ ಇಲಾಖೆಗಳ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದು ಗ್ರಾಮದ ಜನತೆಯ ಅಹವಾಲು ಆಲಿಸಿದರು. -

Profile
Ashok Nayak Jun 6, 2026 8:47 AM

ಚಿಕ್ಕಬಳ್ಳಾಪುರ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸೇರಿದಂತೆ ಕ್ಷೇತ್ರದ ಎಲ್ಲಾ ವರ್ಗದ ಜನರೆ ನನ್ನ ಭವಿಷ್ಯವಾಗಿದ್ದು ನಿಮಗೆ ಮೂಲಭೂತ ಸೌಲಭ್ಯ ಒದಗಿಸುವುದೇ ನನ್ನ ಗುರಿಯಾಗಿದೆ ಎಂದು ಶಾಸಕ ಪ್ರದೀಪ್ ಈಶ್ವರ್ (MLA Pradeep Eshwar)ಹೇಳಿದರು.  

ಹಲವು ತಿಂಗಳ ನಂತರ ನಮ್ಮ ಊರಿಗೆ ನಮ್ಮ ಶಾಸಕ(Our MLA for our town) ಕಾರ್ಯ ಕ್ರಮದಡಿ ಶುಕ್ರವಾರ ತಾಲ್ಲೂಕಿನ ಕಮ್ಮಗುಟ್ಟಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಮಿಲು ಗುರ್ಕಿ, ವಕ್ರಹಳ್ಳಿ ಮತ್ತು ಜೀಗಾನಹಳ್ಳಿ ಗ್ರಾಮಗಳಿಗೆ ೩೬ ಇಲಾಖೆಗಳ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದು ಗ್ರಾಮದ ಜನತೆಯ ಅಹವಾಲು ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ದರು.

ಎಂದಿನಂತೆ, ವೃದ್ಧಾಪ್ಯ ವೇತನ, ರಸ್ತೆ, ಚರಂಡಿ, ಪಿಂಚಣಿ, ರೇಷನ್ ಕಾರ್ಡ್ ಸಮಸ್ಯೆ, ಆರೋಗ್ಯಕ್ಕೆ ನೆರವು, ಮಕ್ಕಳಿಗೆ ಹಾಸ್ಟೆಲ್ ಸಮಸ್ಯೆ, ಹೀಗೆ ನಾನಾ ಸಮಸ್ಯೆಗಳ ಬಗ್ಗೆ ಜನತೆ ಶಾಸಕರ ಗಮನ ಸೆಳೆದರು.

ಇದನ್ನೂ ಓದಿ: MLA Pradeep Eshwar: ಶಾಸಕ ಪ್ರದೀಪ್ ಈಶ್ವರ್ ಸಚಿವರಾಗಬೇಕು ಎಂಬುದು ಕ್ಷೇತ್ರದ ಜನತೆಯ ಆಶಯವಾಗಿದೆ : ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್

ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಿಂದ ಸಾಮಾನ್ಯ ಹುಡುಗ ನಾದ ನಾನು ಶಾಸಕನಾಗಿದ್ದೇನೆ. ಅವರ ಆಶಯಗಳಿಗೆ ಅನುಗುಣವಾಗಿ ಕ್ಷೇತ್ರದಲ್ಲಿ ಕಳೆದ 3 ವರ್ಷ ಗಳಿಂದ ದೀನ ದಲಿತರ, ಬಡವರ ಸೇವೆಯನ್ನು ನಿಸ್ವಾರ್ಥದಿಂದ ಮಾಡುತ್ತೇನೆ ಎಂದರು.

ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮದ ಮೂಲಕ ಕ್ಷೇತ್ರದ ಮೂಲೆ ಮೂಲೆಗಳ ಕುಗ್ರಾಮಗಳಿಗೆ ಭೇಟಿ ನೀಡುವುದರಿಂದ ಅಲ್ಲಿನ ಜನತೆಯ ಸಮಸ್ಯೆ ಅರಿತು ಅವರ ಸಮಸ್ಯೆಗಳಿಗೆ ಪರಿಹಾರ ನೀಡಲು ಸಾಧ್ಯವಾಗಿದೆ. ನನ್ನ ಕ್ಷೇತ್ರ ವ್ಯಾಪ್ತಿಯ 366 ಹಳ್ಳಿಗಳ ಪೈಕಿ ಇದುವರೆಗೂ ಸುಮಾರು 200 ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ಜನತೆಯ ಸಮಸ್ಯೆಗಳನ್ನು ಕಣ್ಣಾರೆ ಕಂಡಿದ್ದೇನೆ. ಈ ವೇಳೆ ಸಾಧ್ಯವಾದಷ್ಟೂ ಮಟ್ಟಿಗೆ ಪರಿಹಾರ ನೀಡಿದ್ದು, ಉಳಿದ ಸಮಸ್ಯೆಗಳ ಪರಿಹಾರಕ್ಕೆ  ಕಾಲಾವಕಾಶ ನೀಡಿದ್ದೇನೆ ಎಂದರು.

ನಾನು ನನ್ನ ಸ್ವಂತ ಹಣದಿಂದ ಕ್ಷೇತ್ರದ ಜನತೆಗೆ ಮಾಸಿಕ 15 ಲಕ್ಷ ವೆಚ್ಚದಲ್ಲಿ 10 ಉಚಿತ ಆಂಬ್ಯು ಲೆನ್ಸ್ ಸೇವೆ ನೀಡುತ್ತಿದ್ದೇನೆ. 70 ಸಾವಿರ ಮಹಿಳೆಯರಿಗೆ ಮೂರು ವರ್ಷ ವರಮಹಾಲಕ್ಷ್ಮೀ ಹಬ್ಬಕ್ಕೆ ಸೀರೆ ವಿತರಣೆ, ಶಾಲಾ- ಕಾಲೇಜು ಮಕ್ಕಳಿಗೆ ವಿದ್ಯಾರ್ಥಿವೇತನ ಕೊಡಲಾಗಿದೆ.

mla pradeep

ನನ್ನ ಕ್ಷೇತ್ರದ ವಿದ್ಯಾರ್ಥಿಗಳಿಗೆ ಮಾತ್ರ ಉಚಿತವಾಗಿ ನೀಟ್, ಸಿಇಟಿ, ವಾಣಿಜ್ಯ ವಿದ್ಯಾರ್ಥಿಗಳಿಗೆ ಸಿಎ ತರಬೇತಿ ಮತ್ತು ಪದವಿ ಪೂರೈಸಿದವರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಎಎಸ್, ಐಎಎಸ್, ಐಪಿಎಸ್, ಐಆರ್‌ಎಸ್ ಸೇರಿದಂತೆ ಎಲ್ಲಾ ತರಬೇತಿಗಳನ್ನು ವಸತಿ ಮತ್ತು ಊಟ ತಿಂಡಿಯೊಂದಿಗೆ ವ್ಯೆವಸ್ಥೆ ಮಾಡಿದ್ದು ಇದನ್ನು ಮುಂದುವರೆಸಲಾಗುವುದು. ಇದಕ್ಕೆ ವಾರ್ಷಿಕ ಸುಮಾರು 3 ರಿಂದ 4 ಕೋಟಿ ರೂಪಾಯಿಗಳು ವೆಚ್ಚವಾಗುತ್ತಿದ್ದು ಆಹಣವನ್ನು ತಾವೇ ಭರಿಸುತ್ತಿರುವುದಾಗಿ ತಿಳಿಸಿದರು.

ಸಚಿವ ಸ್ಥಾನ ಸಿಗುವ ಸಾಧ್ಯತೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಸಚಿವ ಸ್ಥಾನ ಪಡೆಯುವ ಆಸೆ ಇದೆ. ಆದರೆ ಕೊಟ್ಟರೂ, ಕೊಡದಿದ್ದರೂ ಪರವಾಗಿಲ್ಲ. ನಾವು ಅಧಿಕಾರಕ್ಕಾಗಿ ರಾಜಕೀಯಕ್ಕೆ ಬಂದಿಲ್ಲ, ಪಕ್ಷದ ಸಿದ್ಧಾಂತ ಮತ್ತು ಜನಸೇವೆ ಮಾಡುವ ಉದ್ದೇಶದಿಂದ ಬಂದಿದ್ದೇವೆ. ನಾನು ಒಬಿಸಿ ಸಮುದಾಯದ ಯುವ ನಾಯಕ. ರಾಜ್ಯದಲ್ಲಿ ಒಬಿಸಿ ಚಳವಳಿಯನ್ನು ಮತ್ತಷ್ಟು ಬಲಪಡಿಸುವುದು ನನ್ನ ಉದ್ದೇಶ. ಅಧಿಕಾರವೇ ಗುರಿಯಾಗಿದ್ದರೆ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ಕೆಲಸ ಮಾಡುತ್ತಿರಲಿಲ್ಲ ಎಂದು ಪ್ರದೀಪ್ ಈಶ್ವರ್ ಹೇಳಿದರು.    

ಈ ವೇಳೆ ತಹಸೀಲ್ದಾರ್ ರಶ್ಮೀ, ತಾಪಂ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಂಜುಳ, ಪಿಎಸ್‌ಐ ಗುಣವತಿ,ಪಿಡಿಓ ಮದ್ದಿರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗಭೂಷಣ್, ರಕ್ಷಿತ್ ರೆಡ್ಡಿ, ಎಲ್ಲಾ 36 ಇಲಾಖೆಗಳ ಅಧಿಕಾರಿಗಳು, ಮುಖಂಡರಾದ ಅಡ್ಡಗಲ್ ಶ್ರೀಧರ್, ದಿಬ್ಬೂರು ಸುಬ್ಬರಾಯಪ್ಪ, ನಾಗೇಶ್, ನಾಗೇಶ್ ರೆಡ್ಡಿ, ಬೈರೇಶ್, ರಮೇಶ್ ಬಾಬು, ಉಮೇಶ್, ವಿನಯ್ ಬಂಗಾರಿ, ಮತ್ತಿತರ ಗ್ರಾಮಸ್ಥರು ಇದ್ದರು.