ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

MLA S.N.Subbareddy: ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರಿಂದ ನೂತನ ಪಶು ಚಿಕಿತ್ಸಾಲಯ ಉದ್ಘಾಟನೆ

1962 ಸಂಖ್ಯೆಯ ತುರ್ತು ಚಿಕಿತ್ಸಾ ಸಂಚಾರಿ ಪಶು ಸಂಜೀವಿನಿ ಯೋಜನೆ ರೈತರು ಪ್ರಯೋಜನ ಪಡೆಯಿರಿ. ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ 1962 ಸಂಖ್ಯೆಯ ತುರ್ತು ಚಿಕಿತ್ಸಾ ಸಂಚಾರಿ ಪಶು ಸಂಜೀವಿನಿ ಯೋಜನೆಯು ತುರ್ತು ಸಂದರ್ಭದಲ್ಲಿ ರೈತರ ಜಾನುವಾರುಗಳಿಗೆ ಉಚಿತ ವೈದ್ಯಕೀಯ ಸೇವೆ ನೀಡುತ್ತಿದೆ.

ನೂತನ ಪಶು ಚಿಕಿತ್ಸಾಲಯ ಉದ್ಘಾಟನೆ

-

Ashok Nayak
Ashok Nayak Feb 12, 2026 11:56 AM

ಬಾಗೇಪಲ್ಲಿ: ತಾಲ್ಲೂಕು ಜೂಲಪಾಳ್ಯ ಗ್ರಾಮದಲ್ಲಿ ಸುಮಾರು 5 ವರ್ಷಗಳಿಂದ ಪಶು ಚಿಕಿತ್ಸಾಲ ಯದ ಅಗತ್ಯವಿದ್ದು, ಜನರ ಬೇಡಿಕೆಯಂತೆ ಜಾನುವಾರುಗಳ ಚಿಕಿತ್ಸೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಸ ಪಶು ಚಿಕಿತ್ಸಾಲಯ ಸಿ.ಎಸ್.ಆರ್ ಯುನೈಟೆಡ್ ವೇ ಹರ್ಬಲ್ ಲೈಫ್ ಎನ್.ಜಿ.ಓ ಸಂಸ್ಥೆ ಬೆಂಗಳೂರು ಇವರಿಂದ ನಿರ್ಮಿತವಾಗಿದೆ ಇಂದು ಉದ್ಘಾಟನಾ ಮಾಡುತ್ತಿರುವುದು ಸಂತಸ ವಾಗಿದೆ ಎಂದು ಶಾಸಕ ಎಸ್. ಎನ್.ಸುಬ್ಬಾರೆಡ್ಡಿ(MLA S.N.Subbareddy) ಹೇಳಿದರು.

ಇದರ ಜೊತೆಗೆ ಸಾರ್ವಜನಿಕರು ಪಶು ಸಂಗೋಪನಾ ಇಲಾಖೆಯ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಜೂಲಪಾಳ್ಯ ಗ್ರಾಮದಲ್ಲಿ ಬಹಳ ಸುಂದರವಾದ ಪಶುವೈದ್ಯ ಚಿಕಿತ್ಸಾಲಯ ನಿರ್ಮಾಣ ಕಾರ್ಯ ಮಾಡಿದ ಬೆಂಗಳೂರು ಸಿ.ಎಸ್.ಆರ್ ಯುನೈಟೆಡ್ ವೇ ಹರ್ಬಲ್ ಲೈಫ್ ಎನ್.ಜಿ.ಓ ಸಂಸ್ಥೆ ಗೆ ಧನ್ಯವಾದಗಳನ್ನು ತಿಳಿಸಿದರು.

ಇದನ್ನೂ ಓದಿ: Chikkaballapur News: ಬೇಸಿಗೆಯಲ್ಲಿ ನೀರಿಗೆ ಹಾಹಾಕಾರ ತಪ್ಪಿಸಲು ಖಾಸಗಿ ಕೊಳವೆ ಬಾವಿ ಮಾಲೀಕರ ಸಹಕಾರ ಪಡೆಯಲು ಡಿ.ಸಿ.ಸೂಚನೆ

ಪಶುವೈದ್ಯ ಡಾ.ಕೃಷ್ಣಮೂರ್ತಿ ಮಾತನಾಡಿ, 1962 ಸಂಖ್ಯೆಯ ತುರ್ತು ಚಿಕಿತ್ಸಾ ಸಂಚಾರಿ ಪಶು ಸಂಜೀವಿನಿ ಯೋಜನೆ ರೈತರು ಪ್ರಯೋಜನ ಪಡೆಯಿರಿ. ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ 1962 ಸಂಖ್ಯೆಯ ತುರ್ತು ಚಿಕಿತ್ಸಾ ಸಂಚಾರಿ ಪಶು ಸಂಜೀವಿನಿ ಯೋಜನೆಯು ತುರ್ತು ಸಂದರ್ಭದಲ್ಲಿ ರೈತರ ಜಾನುವಾರುಗಳಿಗೆ ಉಚಿತ ವೈದ್ಯಕೀಯ ಸೇವೆ ನೀಡುತ್ತಿದೆ.

108 ಆ್ಯಂಬುಲೆನ್ಸ್ ಸೇವೆಯ ಮಾದರಿಯಲ್ಲಿಯೇ ಮನೆ ಬಾಗಿಲಿಗೆ ಬಂದು ಜಾನುವಾರುಗಳಿಗೆ ಉಚಿತ ಚಿಕಿತ್ಸೆ ನೀಡುವ 1962 ಸಂಚಾರಿ ಪಶು ಸಂಜೀವಿನಿ ಯೋಜನೆಯು ತಾಲೂಕಿನ ಗ್ರಾಮೀಣ ಭಾಗದ ರೈತರಿಗೆ ಅಕ್ಷರಶಃ ರೈತ ಸಂಜೀವಿನಿ ಆಗಿದೆ.

MLA Subbarao

ಕೇಂದ್ರ ಮತ್ತು ರಾಜ್ಯಸರ್ಕಾರಗಳ ಸಹಯೋಗದೊಂದಿಗೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ 1962 ಸಂಖ್ಯೆಯ ತುರ್ತು ಚಿಕಿತ್ಸಾ ಸಂಚಾರಿ ಪಶು ಸಂಜೀವಿನಿ ಯೋಜನೆಯು ತುರ್ತು ಸಂದರ್ಭದಲ್ಲಿ ರೈತರ ಜಾನುವಾರುಗಳಿಗೆ ಉಚಿತ ವೈದ್ಯ ಕೀಯ ಸೇವೆ ನೀಡುತ್ತಿದೆ.

ಈ ಸೇವೆಯು ಸಂಪೂರ್ಣ ಉಚಿತವಾಗಿದೆ. ನಾನಾ ಕಾಯಿಲೆಗಳಿಂದ ಬಳಲುತ್ತಿರುವ ಜಾನುವಾರು ಗಳಿಗೆ ರೈತರು 1962- ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ತಮ್ಮ ವಿಳಾಸ ನೀಡಿದರೆ ವಾಹನ ಸಮೇತವಾಗಿ ಸಿಬ್ಬಂದಿ ತಮ್ಮ ಮನೆ ಬಾಗಿಲಿಗೆ ಬಂದು ಜಾನುವಾರುಗಳಿಗೆ ಉಚಿತ ಚಿಕಿತ್ಸೆ ನೀಡುತ್ತಾರೆ.

ನಾಯಿ, ಕೋಳಿ ಮತ್ತು ಬೆಕ್ಕು ಹೊರತುಪಡಿಸಿ ರೈತರ ಜಾನುವಾರುಗಳಿಗೆ ತುರ್ತು ಚಿಕಿತ್ಸೆ ನೀಡಲಾ ಗುತ್ತದೆ, ತಾಲೂಕಿನಲ್ಲಿ ಎರಡು ಸಂಚಾರಿ ಪಶು ಚಿಕಿತ್ಸಾ ವಾಹನಗಳ ಸೇವೆ ಲಭ್ಯವಿದೆ. ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೆಡಿಪಿ ಸದಸ್ಯರಾದ ಪಿ.ಮಂಜುನಾಥ್ ರೆಡ್ಡಿ,ಮಾಜಿ ತಾಲ್ಲೂಕು ಪಂಚಾಯತಿ ಸದಸ್ಯ ಬೂರಗಮಡಗು ನರಸಿಂಹಪ್ಪ, ಗ್ರಾಮ ಪಂಚಾಯತಿ ಸದಸ್ಯರು, ಸಾರ್ವಜನಿಕರು ಹಾಜರಿದ್ದರು.