Chikkaballapur News: 31 ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಎಸ್ ಆರ್ ಶ್ರೀನಿವಾಸ್ ರವರಿಂದ ಭೂಮಿ ಪೂಜೆ
ತಾಲ್ಲೂಕಿನಲ್ಲಿ ಜಲ ಜೀವನ್ ಯೋಜನೆ ಕಳಪೆ ಕಾಮಾಗಾರಿ ಬಗ್ಗೆ ವ್ಯಾಪಕವಾಗಿ ಪೋನ್ ಗಳು ಬರುತ್ತಿದ್ದು ಶೀಘ್ರದಲ್ಲಿ ಎಲ್ಲ ಗ್ರಾಮ ಪಂಚಾಯಿತಿ ಪಿಡಿಓ ಹಾಗೂ ಇಂಜಿನಿಯರ್ ಗಳ ಸಭೆ ಕರೆದು ಚರ್ಚಿಸಿ ಸೂಕ್ತವಾಗಿ ಕೆಲಸ ಮಾಡಲು ಸೂಚಿಸುತ್ತೇನೆ.ಜತೆಗೆ ಗುತ್ತಿಗೆದಾರರು ಕೂಡ ಸರಿಯಾದ ಕೆಲಸ ಮಾಡಲಿಲ್ಲ ಅಂದರೇ ಅವರ ವಿರುದ್ದ ಕಾನೂನು ಕ್ರಮಕೈಗೊಳುತ್ತೇನೆ ಎಂದರು


ಗುಬ್ಬಿ: ಗಣಿ ಭಾಗದ ಪ್ರದೇಶಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಯೋಜನೆ ರೂಪಿಸಲಾಗಿದೆ ಎಂದು ಕೆ ಎಸ್ ಆರ್ ಟಿ ಸಿ ನಿಗಮ ಮಂಡಳಿ ಅಧ್ಯಕ್ಷ ಶಾಸಕ ಎಸ್.ಆರ್.ಶ್ರೀನಿ ವಾಸ್ ತಿಳಿಸಿದರು. ತಾಲ್ಲೂಕಿನ ಹಂಡನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ 31 ಕೋಟಿ ವೆಚ್ಚದ ರಸ್ತೆ ಕಾಮಾಗಾರಿಗೆ ಗುದ್ದಲಿ ಪೂಜೆ ಸಲ್ಲಿಸಿ ಮಾತನಾಡಿದ ಅವರು ಗಣಿ ಭಾಗದ ಪ್ರದೇಶಗಳಾದ ದೊಡ್ಡ ಗುಣಿ ಹಾಗೂ ಕೊಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಲಭೂತ ಸೌಕರ್ಯಗಳಾದ ಶಾಲೆ ರಸ್ತೆ , ಅಂಗನ ವಾಡಿ ಸೇರಿದಂತೆ ಹಲವು ಅಭಿವೃದ್ದಿ ಮಾಡಲು ಯೋಜನೆಯನ್ನು ರೂಪಿಸಲಾಗಿದೆ.
ಇದನ್ನೂ ಓದಿ: Chikkaballapur News: ಸಕಾಲಕ್ಕೆ ಬೀಜ ಗೊಬ್ಬರ ವಿತರಣೆಗೆ ಸಿಪಿಐಎಂ ಆಗ್ರಹ
ತಾಲ್ಲೂಕಿನಲ್ಲಿ ಜಲ ಜೀವನ್ ಯೋಜನೆ ಕಳಪೆ ಕಾಮಾಗಾರಿ ಬಗ್ಗೆ ವ್ಯಾಪಕವಾಗಿ ಪೋನ್ ಗಳು ಬರುತ್ತಿದ್ದು ಶೀಘ್ರದಲ್ಲಿ ಎಲ್ಲ ಗ್ರಾಮ ಪಂಚಾಯಿತಿ ಪಿಡಿಓ ಹಾಗೂ ಇಂಜಿನಿಯರ್ ಗಳ ಸಭೆ ಕರೆದು ಚರ್ಚಿಸಿ ಸೂಕ್ತವಾಗಿ ಕೆಲಸ ಮಾಡಲು ಸೂಚಿಸುತ್ತೇನೆ.ಜತೆಗೆ ಗುತ್ತಿಗೆದಾರರು ಕೂಡ ಸರಿಯಾದ ಕೆಲಸ ಮಾಡಲಿಲ್ಲ ಅಂದರೇ ಅವರ ವಿರುದ್ದ ಕಾನೂನು ಕ್ರಮಕೈಗೊಳುತ್ತೇನೆ ಎಂದರು. ತಾಲ್ಲೂಕಿ ನಲ್ಲಿ ಬಹುತೇಕ ಎಲ್ಲ ಗ್ರಾಮಗಳಿಗೂ ರಸ್ತೆ ನಿರ್ಮಾಣ ಮಾಡುವುದಕ್ಕೆ ಹಣವನ್ನು ಮುಂಜೂರು ಮಾಡಿದ್ದೇನೆ ಹಂತ ಹಂತವಾಗಿ ಕಾಮಗಾರಿಗಳನ್ನು ಮಾಡುತ್ತೆನೆ ಎಂದರು.
ಗೃಹ ಸಚಿವ ಪರಮೇಶ್ವರ್ ಅವರ ಮನೆ ಹಾಗೂ ಶಿಕ್ಷಣ ಸಂಸ್ಥೆಗಳ ಮೇಲೆ ಕಳೆದ ಆರು ವರ್ಷದ ಹಿಂದೆ ಇಡಿಯವರು ದಾಳಿ ಮಾಡಿದ್ದರು.ಮತ್ತೇ ಈಗ ಇಡಿ ಡ್ರೀಲ್ ಮಾಡುವ ಕೆಲಸವನ್ನ ವಿರೋಧ ಪಕ್ಷದವರೇ ಮಾಡಿರುತ್ತಾರೆ.ಇದೆಲ್ಲ ಎಲ್ಲರಿಗೂ ಗೋತ್ತಿದೆ.ವಿರೋಧ ಪಕ್ಷದವರಿಗೆ ಬೇರೆ ಏನು ಕೆಲಸ ಇದೆ ಇಡಿ ಡ್ರೀಲ್ ಮಾಡುವುದೆ ಅವರ ಉದ್ದೇಶವಾಗಿದೆ ಎಂದು ಪರೋಕ್ಷವಾಗಿ ಬಿಜೆಪಿ ಸರ್ಕಾರ ವಿರುದ್ದ ಗುಡುಗಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಜಗಧೀಶ್ ,ಶಂಕರಪ್ಪ ,ದೊಡ್ಡಕೆಂಪಯ್ಯ , ಪಿಡಿಓ ರಂಗರಾಜು, ವಿ ಎಸ್ ಎಸ್ ಎನ್ ಅಧ್ಯಕ್ಷ ರಮೇಶ್ ಮುಖಂಡರಾದ ಕೊಂಡ್ಲಿ ಜಗಧೀಶ್ ,ರಾಜು, ಪರಮಣ್ಣ , ಶಶಿಧರ್, ಈಶಣ್ಣ, ಕೊಟ್ಟಪ್ಪ ,ಮಂಜುನಾಥ್, ಗುತ್ತಿಗೆದಾರ ಸತೀಶ್ ,ವೀರಣ್ಣಗೌಡ ಭಾಗವಹಿಸಿದರು.