MP Dr.K.Sudhakar: ಅಂಗನವಾಡಿ ಕಾರ್ಯಕರ್ತೆಯರ ಬಗ್ಗೆ ಸಂಸತ್ತಿನಲ್ಲಿ ದನಿ ಎತ್ತಿದ ಸಂಸದ ಡಾ.ಕೆ.ಸುಧಾಕರ್
ಮಕ್ಕಳು ಮತ್ತು ತಾಯಂದಿರ ಆರೈಕೆ ಹಾಗೂ ಪೋಷಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಗಬೇಕಾದ ಗೌರವ, ಸಾಮಾಜಿಕ ಭದ್ರತೆ ಮತ್ತು ನ್ಯಾಯಯುತ ವೇತನದ ಅಗತ್ಯವನ್ನು ಸದನದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದೇನೆ
-
ಚಿಕ್ಕಬಳ್ಳಾಪುರ : ನಮ್ಮ ರಾಜ್ಯ ಸೇರಿದಂತೆ ದೇಶಾದ್ಯಂತ ಲಕ್ಷಾಂತರ ಅಂಗನವಾಡಿ ಹಾಗೂ ಬಿಸಿ ಯೂಟ ಕಾರ್ಯಕರ್ತೆಯರ ನ್ಯಾಯಯುತವಾದ ಬೇಡಿಕೆಗಳ ಬಗ್ಗೆ ಗುರುವಾರ ಸಂಸತ್ ಅಧಿವೇಶನ ದ ಶೂನ್ಯ ವೇಳೆಯಲ್ಲಿ ಸಂಸದ ಡಾ.ಕೆ.ಶುಧಾಕರ್ ವಿಷಯ ಪ್ರಸ್ತಾಪಿಸಿ ಚರ್ಚೆಗೆ ಅವಕಾಶ ಕೋರಿದ ಪ್ರಸಂಗ ನಡೆದಿದೆ.
ಈ ಬಗ್ಗೆ ಮಾತನಾಡಿರುವ ಸಂಸದ ಡಾ.ಕೆ.ಸುಧಾಕರ್ ಮಕ್ಕಳು ಮತ್ತು ತಾಯಂದಿರ ಆರೈಕೆ ಹಾಗೂ ಪೋಷಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಗಬೇಕಾದ ಗೌರವ, ಸಾಮಾಜಿಕ ಭದ್ರತೆ ಮತ್ತು ನ್ಯಾಯಯುತ ವೇತನದ ಅಗತ್ಯವನ್ನು ಸದನದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದೇನೆ.
ಹಲವು ದಶಕಗಳಿಂದ ಕನಿಷ್ಟ ಗೌರವಧನಕ್ಕೆ ಕರ್ತವ್ಯ ನಿರ್ವಹಿಸುತ್ತಿರುವ ಈ ವರ್ಗಕ್ಕೆ ನ್ಯಾಯ ಕೊಡಿಸುವ ಪ್ರಯತ್ನ ಮಾಡಿದ್ದೇನೆ.ಪ್ರಧಾನಿ ನರೇಂದ್ರ ಮೋದಿಯವರು ಖಂಡಿತ ನ್ಯಾಯ ಕೊಡುವ ಭರವಸೆಯಿದೆ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಸAಸದ ಸುಧಾಕರ್ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಮನವಿಗಳು ಹೀಗಿವೆ. ೧. ಗೌರವಧನ ಪರಿಷ್ಕರಣೆ: ಹಣದುಬ್ಬರಕ್ಕೆ ಅನುಗುಣವಾಗಿ ಗೌರವಧನವನ್ನು ಹೆಚ್ಚಿಸಬೇಕು. ೨. ಸಾಮಾಜಿಕ ಭದ್ರತೆ: ಪಿಂಚಣಿ ಮತ್ತು ವಿಮೆ ಸೇರಿದಂತೆ ಸಮಗ್ರ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ವಿಸ್ತರಿಸಬೇಕು. ೩. ಕೆಲಸಕ್ಕೆ ಮಾನ್ಯತೆ: ಇವರ ಕಾರ್ಯವನ್ನು 'ಅಗತ್ಯ ಸಾರ್ವಜನಿಕ ಸೇವೆ' ಎಂದು ಗುರುತಿಸಬೇಕು.೪. ಸಮಾನ ಮಾನದಂಡ: ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆ ನಡೆಸಿ ಅಂಗನವಾಡಿ ಕಾರ್ಯಕರ್ತೆಯ ರಿಗೆ ದೇಶಾದ್ಯಂತ ಸಮಾನ ಕನಿಷ್ಠ ವೇತನ ಮತ್ತು ಸೇವಾ ಮಾನದಂಡಗಳನ್ನು ನಿಗದಿಪಡಿಸಬೇಕು.
ಕೇಂದ್ರ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗೆ ಸ್ಪಂದಿಸಿ ಅವರ ಹಿತಾಸಕ್ತಿ ಕಾಪಾಡಲಿದೆ ಎನ್ನುವ ಸಂಪೂರ್ಣ ವಿಶ್ವಾಸವಿದೆ ಎಂದಿದ್ದಾರೆ.