ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಾರ್ವಜನಿಕ ಹೋರಾಟಕ್ಕೆ ಮುಂದಿನ ರೂಪುರೇಷೆ: ಫ್ರೀಡಂ ಪಾರ್ಕ್ ಸತ್ಯಾಗ್ರಹ, ಪಾದಯಾತ್ರೆ ಮುಂದೂಡಿಕೆ:ವೈ.ಎನ್. ಮಂಜುನಾಥ್ ಸ್ಪಷ್ಟನೆ

ಮನವಿ ಸಲ್ಲಿಸುವ ಶೈಲಿ ಹಾಗೂ ನಿಯಮಗಳ ಕುರಿತು ಅವರು ಕೆಲವು ಸಲಹೆ-ಸೂಚನೆಗಳನ್ನು ನೀಡಿದ್ದು, ಸಂಬಂಧಪಟ್ಟ ಸಚಿವರಿಗೆ ಮಾಹಿತಿ ನೀಡಿ ಸಮಯಾವಕಾಶ ನೀಡುವಂತೆ ಕೋರಿದ್ದಾರೆ. ಕಾನೂನುಬದ್ಧವಾಗಿ ಹಾಗೂ ವ್ಯವಸ್ಥಿತವಾಗಿ ಹೋರಾಟ ಮುಂದುವರಿಸಲು ಕನಿಷ್ಠ ಒಂದು ತಿಂಗಳ ಕಾಲಾವಕಾಶ ಬೇಕಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ

ಸಾರ್ವಜನಿಕ ಹೋರಾಟಕ್ಕೆ ಮುಂದಿನ ರೂಪುರೇಷೆ

-

Profile
Ashok Nayak Aug 29, 2026 6:17 PM

ಚಿಂತಾಮಣಿ: ತಮ್ಮ ಹಳ್ಳಿಯಿಂದ ದೆಹಲಿವರೆಗಿನ ನಾಲ್ಕು ಹಂತದ ಹೋರಾಟದ ಭಾಗವಾಗಿ ಹಮ್ಮಿಕೊಳ್ಳಲಾಗಿದ್ದ ಸೆಪ್ಟೆಂಬರ್ 1 ರಿಂದ 3 ರವರೆಗಿನ ಪಾದಯಾತ್ರೆ ಹಾಗೂ ಸೆಪ್ಟೆಂಬರ್ 4 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಸಲು ಉದ್ದೇಶಿಸಿದ್ದ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ವೈ.ಎನ್.ಮಂಜುನಾಥ್ ಅವರು ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಫ್ರೀಡಂ ಪಾರ್ಕ್‌ನಲ್ಲಿ ಧರಣಿ ನಡೆಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗಿತ್ತು.ಜೊತೆಗೆ ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳ ಕಚೇರಿಗೂ ಮನವಿ ಪತ್ರ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಹಾಗೂ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಬಿ.ವಿ.ಶ್ರೀಧರ್ ಅವರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದರು.

ಇದನ್ನೂ ಓದಿ; Chikkaballapur News: ಸ್ವಚ್ಛತೆ ಕಾಪಾಡಲು ಗ್ರಾಮ ಪಂಚಾಯಿತಿಗಳೊಂದಿಗೆ ಸಾರ್ವಜನಿಕರು ಸಹಕರಿಸಬೇಕು: ಸಿಇಒ ಡಾ.ವೈ.ನವೀನ್ ಭಟ್

ಮನವಿ ಸಲ್ಲಿಸುವ ಶೈಲಿ ಹಾಗೂ ನಿಯಮಗಳ ಕುರಿತು ಅವರು ಕೆಲವು ಸಲಹೆ-ಸೂಚನೆಗಳನ್ನು ನೀಡಿದ್ದು, ಸಂಬಂಧಪಟ್ಟ ಸಚಿವರಿಗೆ ಮಾಹಿತಿ ನೀಡಿ ಸಮಯಾವಕಾಶ ನೀಡುವಂತೆ ಕೋರಿದ್ದಾರೆ.ಕಾನೂನುಬದ್ಧವಾಗಿ ಹಾಗೂ ವ್ಯವಸ್ಥಿತವಾಗಿ ಹೋರಾಟ ಮುಂದುವರಿಸಲು ಕನಿಷ್ಠ ಒಂದು ತಿಂಗಳ ಕಾಲಾವಕಾಶ ಬೇಕಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

"ಇಲ್ಲಿಯವರೆಗೆ'ಯರಕೋಟೆ ಮಂಜು ಒಬ್ಬನೇ ಹೋರಾಟ ಮಾಡುತ್ತಿದ್ದಾನೆ'ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ.ಆದರೆ ನಾನು ಮಾಡುತ್ತಿರುವುದು ನನ್ನ ಸ್ವಂತಕ್ಕಲ್ಲ,ಸಾರ್ವಜನಿಕರ ಹಿತಕ್ಕಾಗಿ.ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸದ ಕಾರಣ,ಚಿಂತಾಮಣಿ ತಾಲೂಕಿನ 322 ಹಳ್ಳಿಗಳ ಸಾಮಾನ್ಯ ಜನರ ಪರಿಸ್ಥಿತಿಯನ್ನು ಅವಲೋಕಿಸಿ, ಯುವಕ-ಯುವತಿ ಯರನ್ನು ಒಗೂಡಿಸಿ ಒಂದು ಅಧಿಕೃತ ಸಂಘಟನೆಯನ್ನು ನೋಂದಣಿ ಮಾಡಲು ತೀರ್ಮಾನಿಸ ಲಾಗಿದೆ. ಮುಂದಿನ ದಿನಗಳಲ್ಲಿ ಈ ಸಂಘಟನೆಯ ಬ್ಯಾನರ್ ಅಡಿಯಲ್ಲೇ ಹಂತ-ಹಂತವಾಗಿ ಹೋರಾಟಗಳನ್ನು ಮುಂದುವರಿಸಲಾಗುವುದು,ಎಂದು ಮಂಜುನಾಥ್ ತಿಳಿಸಿದರು.