ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chinthamani News: ಕಾಗತಿ ಗ್ರಾಮದಲ್ಲಿ ರೈತರಿಗೆ ಒಂದು ದಿನದ ತೋಟಗಾರಿಕೆ ತರಬೇತಿ ಕಾರ್ಯಕ್ರಮ

ಐ ಐ ಎಚ್ ಆರ್ ಪರವಾಗಿ ಆಗಮಿಸಿದ್ದ ಡಾ.ಚೇತನ್ ಅವರು ಮಣ್ಣು ಪರೀಕ್ಷೆ ಹಾಗೂ ಕೃಷಿ ಯಲ್ಲಿ ಸಾವಯವ ಉತ್ಪನ್ನಗಳ ಬಳಕೆಯ ಮಹತ್ವದ ಕುರಿತು ರೈತರಿಗೆ ಸವಿಸ್ತಾರವಾಗಿ ವಿವರಿಸಿ ದರು. ತರಬೇತಿಯ ಅಂಗವಾಗಿ ರೈತರಿಗೆ ಹೊಂಗೆ ಹಿಂಡಿ, ಬೇವಿನ ಹಿಂಡಿ ಹಾಗೂ ಮ್ಯಾಂಗೋ ಸ್ಪೆಷಲ್ ಒಳಗೊಂಡ ಕಿಟ್ ಪೆಟ್ಟಿಗೆಗಳನ್ನು ವಿತರಿಸಲಾಯಿತು.

ಕಾಗತಿ ಗ್ರಾಮದಲ್ಲಿ ರೈತರಿಗೆ ಒಂದು ದಿನದ ತೋಟಗಾರಿಕೆ ತರಬೇತಿ ಕಾರ್ಯಕ್ರಮ

-

Profile
Ashok Nayak May 9, 2026 10:24 PM

ಚಿಂತಾಮಣಿ: ತಾಲೂಕಿನ ಕಾಗತಿ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆ ಹಾಗೂ NRDS ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ರೈತರಿಗಾಗಿ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ವಿಶೇಷ ತರಬೇತಿ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

ಚಿಂತಾಮಣಿ ತಾಲೂಕಿನ ಕಾಗತಿ ಗ್ರಾಮದ ಸಮೀಪವಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರ ದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ರೈತರಿಗೆ ಆಧುನಿಕ ಕೃಷಿ ಪದ್ಧತಿಗಳ ಕುರಿತು ಮಾಹಿತಿ ನೀಡಲಾಯಿತು.

ತೋಟಗಾರಿಕೆ ಇಲಾಖೆಯ ಪರವಾಗಿ ಸಾಧನೆ ಎಸ್ ಏ ಡಿ ಎಚ್ ಬಾಲಕೃಷ್ಣ ಸರ್ ಅವರು ಹಾಗೂ ಎನ್ ಆರ್ ಡಿ ಎಸ್ ಸಂಸ್ಥೆಯ ಪರವಾಗಿ ಕಿರಣ್ ಅವರು ಭಾಗವಹಿಸಿ ರೈತರಿಗೆ ಉಪಯುಕ್ತ ಮಾಹಿತಿ ನೀಡಿದರು.

ಇದನ್ನೂ ಓದಿ: Chinthamani News: ರೇಷ್ಮೆ ತೋಟದ ಮೇಲೆ ಅಧಿಕಾರಿಗಳ ಕಣ್ಣು: ರೈತನ ಕಣ್ಣೀರು, ಆತ್ಮಹತ್ಯೆಯ ಎಚ್ಚರಿಕೆ

ಐ ಐ ಎಚ್ ಆರ್ ಪರವಾಗಿ ಆಗಮಿಸಿದ್ದ ಡಾ.ಚೇತನ್ ಅವರು ಮಣ್ಣು ಪರೀಕ್ಷೆ ಹಾಗೂ ಕೃಷಿಯಲ್ಲಿ ಸಾವಯವ ಉತ್ಪನ್ನಗಳ ಬಳಕೆಯ ಮಹತ್ವದ ಕುರಿತು ರೈತರಿಗೆ ಸವಿಸ್ತಾರವಾಗಿ ವಿವರಿಸಿದರು. ತರಬೇತಿಯ ಅಂಗವಾಗಿ ರೈತರಿಗೆ ಹೊಂಗೆ ಹಿಂಡಿ, ಬೇವಿನ ಹಿಂಡಿ ಹಾಗೂ ಮ್ಯಾಂಗೋ ಸ್ಪೆಷಲ್ ಒಳಗೊಂಡ ಕಿಟ್ ಪೆಟ್ಟಿಗೆಗಳನ್ನು ವಿತರಿಸಲಾಯಿತು.

4a

ಕಾರ್ಯಕ್ರಮದಲ್ಲಿ ಎನ್ ಆರ್ ಡಿ ಎಸ್ ಸಂಸ್ಥೆಯ ರಾಜಣ್ಣ ಕೆ.ಕೆ.ಮುಖಂಡರಾದ ರಾಮ ಚಂದ್ರ ಮತ್ತು ಶಿಲ್ಪಾ ಅವರು ಭಾಗವಹಿಸಿದ್ದರು.ಕೆಂಚಾರ್ಲಹಳ್ಳಿ ಹೋಬಳಿಯ ಶ್ರೀನಿವಾಸ್ ಹಾಗೂ ಮುರುಗಮಲ್ಲ ಹೋಬಳಿಯ ಆಶಾ ಸೇರಿದಂತೆ ಸ್ಥಳೀಯ ರೈತರು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.

ಸಾವಯವ ಗೊಬ್ಬರಗಳ ಬಳಕೆ ಮತ್ತು ವೈಜ್ಞಾನಿಕ ಮಣ್ಣು ಪರೀಕ್ಷೆಯ ಮೂಲಕ ರೈತರು ಹೇಗೆ ತಮ್ಮ ಇಳುವರಿಯನ್ನು ಹೆಚ್ಚಿಸಿಕೊಳ್ಳಬಹುದು ಎಂಬ ಬಗ್ಗೆ ಈ ಕಾರ್ಯಕ್ರಮವು ಬೆಳಕು ಚೆಲ್ಲುವಲ್ಲಿ ಸಹಕಾರಿಯಾಯಿತು.