ಅಭಯಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಹನುಮನಿಗೆ ಪಂಜುರ್ಲಿ ಅಲಂಕಾರ
ತಾಲ್ಲೂಕಿನ ಕೋಟಗಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ವೀರಪಲ್ಲಿ ಗ್ರಾಮದ ಶ್ರೀ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ ಪ್ರಯುಕ್ತ ಅಂಜನಿಸುತ ಫೌಂಡೇಶನ್ ಅಧ್ಯಕ್ಷ ಪ್ರದೀಪ್ ಆಂಜನೇಯ ರೆಡ್ಡಿ ಅವರ ನೇತೃತ್ವದಲ್ಲಿ ಇಂದು ಹನುಮನಿಗೆ ಪಂಜುರ್ಲಿ ಅಲಂಕಾರ ಕಂಡು ಭಕ್ತಾದಿಗಳು ಮೂಕ ವಿಸ್ಮಿತರಾದರು.
-
ಚಿಂತಾಮಣಿ: ತಾಲ್ಲೂಕಿನ ಕೋಟಗಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ವೀರಪಲ್ಲಿ ಗ್ರಾಮದ ಶ್ರೀ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ ಪ್ರಯುಕ್ತ ಅಂಜನಿಸುತ ಫೌಂಡೇಶನ್ ಅಧ್ಯಕ್ಷ ಪ್ರದೀಪ್ ಆಂಜನೇಯ ರೆಡ್ಡಿ ಅವರ ನೇತೃತ್ವದಲ್ಲಿ ಇಂದು ಹನುಮನಿಗೆ ಪಂಜುರ್ಲಿ ಅಲಂಕಾರ ಕಂಡು ಭಕ್ತಾದಿಗಳು ಮೂಕ ವಿಸ್ಮಿತರಾದರು.
ಇದನ್ನೂ ಓದಿ: Chikkaballapur News: ಎಚ್.ಐ.ವಿ ಸೋಂಕು ಹರಡುವಿಕೆ ತಡೆಗಟ್ಟಲು ಜಾಗೃತಿ ಮೂಡಿಸಿ: ನ್ಯಾ.ಟಿ.ಪಿ.ರಾಮಲಿಂಗೇಗೌಡ
ಪ್ರತಿವರ್ಷವೂ ಹನುಮ ಜಯಂತಿ ಮಾರನೇ ದಿನ ಅಭಯಾಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಹೂವಿನ ಅಲಂಕಾರ ನಡೆಯವ ಪೂಜೆ ಇಂದು ವಿಶೇಷವಾಗಿತ್ತು.
ಪಂಜುರ್ಲಿ ಹನುಮನಿಗೆ ಭಕ್ತಾದಿಗಳು ಹೋಮ ಹವನ ಪೂಜೆ ನೆರವೇರಿಸಿದರು. ದೇವರ ಮೂರ್ತಿಗೆ ಅಭಿಷೇಕ ಮಾಡಿ, ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆಯಿಂದ ಸಂಜೆವರೆಗೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಹನುಮ ಭಕ್ತರು ಆಂಜನೇಯ ದೇವಸ್ಥಾನಗಳಿಗೆ ಶಕ್ತಿ ಸ್ವರೂಪನಾದ ಹನುಮ ದೇವರ ಮೂರ್ತಿಯ ದರ್ಶನ ಪಡೆದರು. ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಮಾಡಿದರು.