ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಗ್ಯಾಸ್ ಗೋಡೌನ್ ಮುಂದೆ ಜನರ ಪರದಾಟ: ಪೂರೈಕೆ ತಡಕ್ಕೆ ಏಜೆನ್ಸಿ ಸ್ಪಷ್ಟನೆ !

ಹಲವಾರು ದಿನಗಳಿಂದ ಬುಕ್ಕಿಂಗ್ ಮಾಡಿದ್ದರೂ ಗ್ಯಾಸ್ ಸಿಗದ ಕಾರಣ ಮಹಿಳೆಯರು ಹಾಗೂ ಹಿರಿಯರು ಗೋಡೌನ್ ಮುಂದೆ ಸಾಲಿನಲ್ಲಿ ನಿಂತು ಕಾದು ಕುಳಿತಿರುವ ದೃಶ್ಯ ಕಂಡುಬಂದಿದೆ. “ಬುಕ್ ಮಾಡಿದರೂ ಗ್ಯಾಸ್ ಸಿಗುತ್ತಿಲ್ಲ. ದಿನಗಳಿಂದ ಕಾದರೂ ಸಿಲಿಂಡರ್ ಮನೆಗೆ ತಲುಪಿಲ್ಲ” ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.

ಸಿಲಿಂಡರ್ ಸಿಗದೆ ಸಾಲಿನಲ್ಲಿ ನಿಂತ ಜನರು: ಗೋಡೌನ್ ಮುಂದೆ ಗೊಂದಲ

-

Ashok Nayak
Ashok Nayak Mar 21, 2026 8:49 PM

ಶಿಡ್ಲಘಟ್ಟ: ನಗರದ ಹೊರವಲಯದಲ್ಲಿರುವ ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ಗ್ಯಾಸ್ ಗೋಡೌನ್ ಮುಂದೆ ಗ್ಯಾಸ್ ಸಿಲಿಂಡರ್ ಪಡೆಯಲು ಸಾರ್ವಜನಿಕರು ಪರದಾಟ ಪಡುವ ಸ್ಥಿತಿ ನಿರ್ಮಾಣವಾಗಿದೆ. ಬುಕ್ ಮಾಡಿದ ನಂತರವೂ ಸಮಯಕ್ಕೆ ಸಿಲಿಂಡರ್ ಮನೆಗಳಿಗೆ ತಲುಪುತ್ತಿಲ್ಲ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಲವಾರು ದಿನಗಳಿಂದ ಬುಕ್ಕಿಂಗ್ ಮಾಡಿದ್ದರೂ ಗ್ಯಾಸ್ ಸಿಗದ ಕಾರಣ ಮಹಿಳೆಯರು ಹಾಗೂ ಹಿರಿಯರು ಗೋಡೌನ್ ಮುಂದೆ ಸಾಲಿನಲ್ಲಿ ನಿಂತು ಕಾದು ಕುಳಿತಿರುವ ದೃಶ್ಯ ಕಂಡುಬಂದಿದೆ. “ಬುಕ್ ಮಾಡಿದರೂ ಗ್ಯಾಸ್ ಸಿಗುತ್ತಿಲ್ಲ. ದಿನಗಳಿಂದ ಕಾದರೂ ಸಿಲಿಂಡರ್ ಮನೆಗೆ ತಲುಪಿಲ್ಲ” ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: LPG Cylinder Shortage: ಮುಂದಿನ ವಾರದೊಳಗೆ ಹೋಟೆಲ್‌ಗಳಿಗೆ ಎಲ್‌ಪಿಜಿ ಸಿಲಿಂಡರ್‌ ಪೂರೈಕೆ ಸುಗಮ: ಸಚಿವ ಕೆ.ಎಚ್‌.ಮುನಿಯಪ್ಪ

ಬುಕ್ಕಿಂಗ್ ಇದ್ದರೂ ಗ್ಯಾಸ್ ಸಿಗುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸಮಸ್ಯೆಯನ್ನು ಪರಿಹರಿಸಬೇಕೆಂದು ಆಗ್ರಹಿಸಿದ್ದಾರೆ.

image

“ಕೆಲವು ತಾಂತ್ರಿಕ ಹಾಗೂ ಪೂರೈಕೆ ಸಂಬಂಧಿತ ಸಮಸ್ಯೆಯಿಂದ ಸ್ವಲ್ಪ ತಡವಾಗಿದೆ. ಆದರೆ ಬುಕ್ ಮಾಡಿದ ಎಲ್ಲಾ ಗ್ರಾಹಕರಿಗೂ ಕ್ರಮವಾಗಿ ಗ್ಯಾಸ್ ಸಿಲಿಂಡರ್ ಮನೆಗಳಿಗೆ ಕಳಿಸಿ ಕೊಡಲಾಗುತ್ತದೆ. ಜನರು ಆತಂಕಪಡಬಾರದು, ಶೀಘ್ರದಲ್ಲೇ ಪೂರೈಕೆ ಸಾಮಾನ್ಯ ಸ್ಥಿತಿಗೆ ಬರುತ್ತದೆ” ಎಂದು ತಿಳಿಸಿದ್ದಾರೆ."

- ವಿಶ್ವಾಸ್ ಮಾಲಿಕ ವೆಂಕಟೇಶ್ವರ ಗ್ಯಾಸ್ ಏಜೆನ್ಸಿ -