ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bagepally News: ಭೋವಿ ಸಮುದಾಯದ ಶಂಕರಪ್ಪಗೆ ನ್ಯಾಯ ಕೊಡುವಲ್ಲಿ ಪೊಲೀಸರು ವಿಫಲ :  ಭೋವಿ ಸಂಘದ ಜಿಲ್ಲಾಧ್ಯಕ್ಷ ಪಿ.ಡಿ.ವೆಂಕಟರವಣ ಆರೋಪ

ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಜಾತಿನಿಂದನೆ ಕೇಸು ದಾಖಲಾಗಿದ್ದರೂ ಸಹ ಇದುವರೆವಿಗೂ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ ಎಂದು ಆರೋಪಿಸಿದ ಅವರು ತಹಶೀಲ್ದಾರ್ ,ಉಪನೊಂದ ಣಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಮ್ಮ ಸಮುದಾಯದ ಶಂಕರಪ್ಪ ಅನ್ಯಾಯವಾಗಿದೆ, ನ್ಯಾಯ ಸಿಗದಿದ್ದರೆ ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ದ ಭೋವಿ ಸಂಘದ ವತಿಯಿಂದ ಹೋರಾಟಕ್ಕೆ ಮುಂದಾಗಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು

ಭೋವಿ ಸಮುದಾಯದ ಶಂಕರಪ್ಪಗೆ ನ್ಯಾಯ ಕೊಡುವಲ್ಲಿ ಪೊಲೀಸರು ವಿಫಲ

ಬಾಗೇಪಲ್ಲಿ ಪತ್ರಕರ್ತರ ಭವನದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಭೋವಿ ಸಂಘದ ಜಿಲ್ಲಾಧ್ಯಕ್ಷ ಪಿ.ಡಿ.ವೆಂಕಟರವಣ ಮಾತನಾಡಿದರು. -

Ashok Nayak Ashok Nayak Oct 13, 2025 11:56 PM

ಬಾಗೇಪಲ್ಲಿ: ಜಮೀನು ವಿಚಾರದಲ್ಲಿ ತಾಲೂಕಿನ ಕಸಬಾ ಹೋಬಳಿ ಅಬಕವಾರಿಪಲ್ಲಿ ಗ್ರಾಮದ ಭೋವಿ ಸಮುದಾಯದ ಶಂಕರಪ್ಪ ಮತ್ತು ಅವರ ಕುಟುಂಬದವರ ಮೇಲೆ ತಾಲೂಕಿನ ಪುಟ್ಟಪರ್ತಿ ಗ್ರಾಮದ ನವೀನ್ ಮತ್ತಿತರರು ಹಲ್ಲೆ ನಡೆಸಿ, ಜಾತಿ ನಿಂದನೆ ವಿಚಾರವಾಗಿ ಬಾಗೇಪಲ್ಲಿ ಪೊಲೀಸರು ಜಾತಿನಿಂದನೆ ಪ್ರಕರಣ ದಾಖಲಿಸಿಕೊಂಡಿದ್ದರೂ ಸಹ ಇದುವರೆವಿಗೂ ಆರೋಪಿಗಳನ್ನು ಬಂಧಿಸದೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಭೋವಿ ಸಂಘದ ಜಿಲ್ಲಾಧ್ಯಕ್ಷ ಪಿ.ಡಿ.ವೆಂಕಟರವಣ ಆರೋಪಿಸಿದರು.

ಪಟ್ಟಣದ ಪತ್ರಕರ್ತರ ಭವನದಲ್ಲಿ  ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ಅಬಕವಾರಿಪಲ್ಲಿ ಗ್ರಾಮದ ಭೋವಿ ಸಮುದಾಯದ ಶಂಕರಪ್ಪ ಕೂಲಿ ಮಾಡಿ ಜೀವನ ನಡೆಸಿ ಕೊಂಡು ಬರುತ್ತಿದ್ದಾರೆ. ೧೯೯೪ರಲ್ಲಿ ಇದೇ ಗ್ರಾಮದ ನಾಗಪ್ಪ ಬಿನ್ ನಾರಾಯಣಪ್ಪ, ನಾಗಿರೆಡ್ಡಿ ಬಿನ್ ನಾರಾಯಣರೆಡ್ಡಿ ಎಂಬುವವರಿಗೆ ಇದೇ ಗ್ರಾಮದ ೨೫ರಲ್ಲಿ ೨ಎ.೧೮ ಗು. ಜಮೀನು ಮಂಜೂರು ಆಗಿದ್ದು ಸಾಗವಳಿ ಚೀಟಿ ನೀಡಿರುತ್ತಾರೆ. ಸಾಗುವಳಿ ಚೀಟಿ ಪ್ರಕಾರ ೧೫ ವರ್ಷಗಳ ಪರಭಾರೆ ಮಾಡಬಾರದು ಎಂಬ ಷರತ್ತಿನ ಕಾರಣದಿಂದ ಅವಧಿ ಮುಗಿದ ನಂತರ ನೋಂದಣಿ ಮಾಡಿಸಿಕೊಡುವುದಾಗಿ ೧೯೯೬ರಲ್ಲಿ ಸ್ವಾಧೀನ ಕ್ರಯದ ಕರಾರು ಪತ್ರ ಬರೆದುಕೊಟ್ಟು ಶಂಕರಪ್ಪ ರವರಿಗೆ ಸ್ವಾಧೀನ ಬಿಟ್ಟುಕೊಟ್ಟಿರುವ ಹಿನ್ನಲೆಯಲ್ಲಿ ಶಂಕರಪ್ಪನವರು ಇದುವರೆವಿಗೂ ಈ ಜಮೀನಿನಲ್ಲಿ ಸ್ವಾಧೀನದಲ್ಲಿದ್ದು ಬೆಳೆ ಬೆಳೆಯುತ್ತಿದ್ದಾರೆ ಎಂದರು.

ಇದನ್ನೂ ಓದಿ: Bagepally News: ದಲಿತ ಹಿಂದುಳಿದ, ಅಲ್ಪಸಂಖ್ಯಾತರೇ ಕಾಂಗ್ರೆಸ್ ಬಿಜೆಪಿಯ ರಾಜಕೀಯ ದಾಳಗಳು : ಡಾ.ಅನಿಲ್‌ಕುಮಾರ್ ಅಭಿಮತ
೧೫ ವರ್ಷಗಳ ಪರಭಾರೆ ಷರತ್ತು ಅವಧಿ ಮುಗಿದಿದ್ದು ಜಮೀನನನ್ನು ನಮ್ಮ ಹೆಸರಿಗೆ ನೊಂದಣಿ ಮಾಡಿಸಿಕೊಡುವಂತೆ ಕೇಳಿದಕ್ಕೆ ನಾಗಿರೆಡ್ಡಿರವರು ಒಪ್ಪಿಲ್ಲ. ಇದರಿಂದ ಜಮೀನು ನನ್ನ ಹೆಸರಿಗೆ ನೊಂದಣಿ ಮಾಡದೆ ವಂಚಿಸಿದ್ದು ನನಗೆ ನ್ಯಾಯಕೊಡಿಸುವಂತೆ ಕೋರಿ ಶಂಕರಪ್ಪ ೨೦೨೧ರಲ್ಲಿ ಪಟ್ಟಣದ ಸಿವಿಲ್ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿದ್ದಾರೆ ಎಂದ ಅವರು
ನ್ಯಾಯಾಲಯ ದಲ್ಲಿ ಕೇಸು ನಡೆಯುತ್ತಿದ್ದರೂ ಸಹ ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ಜಮೀನು ನವೀನ್ ಎಂಬುವವರ ಹೆಸರಿಗೆ ಆಕ್ರಮವಾಗಿ ನೊಂದಣಿ ಮಾಡಲಾಗಿದೆ.

ಈ ಸಂಬಂಧ ಶಂಕರಪ್ಪ ಅವರ ಹೆಸರಿಗೆ ಖಾತಾ ಮಾಡಬಾರದು ಎಂದು ತಹಶೀಲ್ದಾರ್ ರವರಿಗೆ ತಕರಾರು ಅರ್ಜಿ ಸಲ್ಲಿಸಿದ್ದರೂ ಸಹ ಶಂಕರಪ್ಪಗೆ ನ್ಯಾಯ ಒದಗಿಸುವಲ್ಲಿ ತಹಶೀಲ್ದಾರ್ ಸಹ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ದೂರಿದರು.

ಈ ವಿಚಾರವಾಗಿ ನವೀನ್ ಮತ್ತು ಇತರರು ಜಮೀನು ಸ್ವಾಧೀನ ಬಿಟ್ಟು ಕೊಡುವಂತೆ ಭೋವಿ ಸಮುದಾಯದ ಶಂಕರಪ್ಪ ಮತ್ತು ಅವರ ಕುಟುಂಬದವರ ಮೇಲೆ ದೌರ್ಜನ್ಯದಿಂದ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ. ಈ ಸಂಬಂಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಜಾತಿನಿಂದನೆ ಕೇಸು ದಾಖಲಾಗಿದ್ದರೂ ಸಹ ಇದುವರೆವಿಗೂ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ ಎಂದು ಆರೋಪಿಸಿದ ಅವರು ತಹಶೀಲ್ದಾರ್ ,ಉಪನೊಂದಣಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಮ್ಮ ಸಮುದಾಯದ ಶಂಕರಪ್ಪ ಅನ್ಯಾಯವಾಗಿದೆ, ನ್ಯಾಯ ಸಿಗದಿದ್ದರೆ ಮುಂದಿನ ದಿನಗಳಲ್ಲಿ ಸಂಬAಧಪಟ್ಟ ಅಧಿಕಾರಿಗಳ ವಿರುದ್ದ ಭೋವಿ ಸಂಘದ ವತಿಯಿಂದ ಹೋರಾಟಕ್ಕೆ ಮುಂದಾಗಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಭೋವಿ ಸಂಘದ ತಾಲೂಕು ಅಧ್ಯಕ್ಷ ವಿನಯ್, ಗ್ರಾಮಸ್ಥರಾದ ಆದಿಮೂರ್ತಿ, ಶ್ರೀರಾಮಪ್ಪ, ವೆಂಕಟರಾಮಪ್ಪ, ರಾಮಪ್ಪ, ವಿಶ್ವನಾಥ್, ಸುರೇಶ್ ಮತ್ತು ವಂಚನೆಗೆ ಒಳಗಾಗಿರುವ ಶಂಕರಪ್ಪ ಮತ್ತು ಕುಟುಂಬಸ್ಥರು ಇದ್ದರು.