Sadhguru Shri Madhusudan Sai: ಒಟ್ಟಾಗಿ ಕೆಲಸ ಮಾಡಿದರೆ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ : ಶ್ರೀ ಮಧುಸೂದನ ಸಾಯಿ
ಸಾರ್ವಜನಿಕ ಹಣ, ಆಸ್ತಿಯನ್ನು ಪಾರದರ್ಶಕವಾಗಿ ನಿಸ್ವಾರ್ಥ ಅಥವಾ ವಸ್ತುನಿಷ್ಠತೆಯ ತತ್ವಗಳ ಮೇಲೆ ನಿರ್ವಹಿಸಬೇಕು. ನಮ್ಮ ವೆಚ್ಚವನ್ನು ಕನಿಷ್ಠ ಮಟ್ಟದಲ್ಲಿರಿಸಿಕೊಳ್ಳುವುದು ಮತ್ತು ಸಾಧ್ಯವಾದಷ್ಟು ಕಾಳಜಿಯನ್ನು ವಹಿಸುತ್ತಿದ್ದೇವೆ. ದಕ್ಷತೆಯ ಜೊತೆಗೆ ವೆಚ್ಚಗಳನ್ನು ಕಡಿಮೆ ಮಾಡಿ ವೇಗವಾಗಿ ಕೆಲಸಗಳು ನಡೆಯುವಂತೆ ನೋಡಿಕೊಳ್ಳುತ್ತಿದ್ದೇವೆ.
-
ಚಿಕ್ಕಬಳ್ಳಾಪುರ: ಎಲ್ಲರೂ ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಸಮಸ್ಯೆಗಳನ್ನು ಬಗೆಹರಿ ಸಲು ಸಾಧ್ಯ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದ್ದಾರೆ.
ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಸಾಂಸ್ಕೃತಿಕ ಉತ್ಸವ'ದ ೮೭ನೇ ದಿನವಾದ ಸೋಮವಾರ ಆಶೀರ್ವಚನ ನೀಡಿದ ಸದ್ಗುರು, ಸತ್ಯ ಸಾಯಿ ಸಂಸ್ಥೆಗೆ ಬೆಂಬಲ ನೀಡುತ್ತಿರುವ, ನಮ್ಮೊಂದಿಗೆ ಕೆಲಸ ಮಾಡುತ್ತಿರುವ ಕೆಲವು ಕಾರ್ಪೊರೇಟ್ ಕೇಂದ್ರಗಳಿಗೆ ಗೌರವ ನೀಡುವ ಸಲುವಾಗಿ ಸಿಎಸ್ ಆರ್ ಪುರಸ್ಕಾರವನ್ನು ನೀಡಲಾಗುತ್ತಿದೆ. ನಾವು ಒಟ್ಟಾಗಿ ಹೋದಾಗ ಎಲ್ಲರೂ ಒಟ್ಟಾಗಿ ಬೆಳೆಯಬಹುದು. ಯಾರೋ ಒಬ್ಬರಿಂದ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ ಎಂದರು.
ಇದನ್ನೂ ಓದಿ: Sadguru Sri Madhusudan Sai: ಮುಂಬರುವ ದಿನಗಳಲ್ಲಿ ಭಾರತ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮುತ್ತದೆ: ಶ್ರೀ ಮಧುಸೂದನ ಸಾಯಿ
ಸಾರ್ವಜನಿಕ ಹಣ, ಆಸ್ತಿಯನ್ನು ಪಾರದರ್ಶಕವಾಗಿ ನಿಸ್ವಾರ್ಥ ಅಥವಾ ವಸ್ತುನಿಷ್ಠತೆಯ ತತ್ವಗಳ ಮೇಲೆ ನಿರ್ವಹಿಸಬೇಕು. ನಮ್ಮ ವೆಚ್ಚವನ್ನು ಕನಿಷ್ಠ ಮಟ್ಟದಲ್ಲಿರಿಸಿಕೊಳ್ಳುವುದು ಮತ್ತು ಸಾಧ್ಯವಾದಷ್ಟು ಕಾಳಜಿಯನ್ನು ವಹಿಸುತ್ತಿದ್ದೇವೆ. ದಕ್ಷತೆಯ ಜೊತೆಗೆ ವೆಚ್ಚಗಳನ್ನು ಕಡಿಮೆ ಮಾಡಿ ವೇಗವಾಗಿ ಕೆಲಸಗಳು ನಡೆಯುವಂತೆ ನೋಡಿಕೊಳ್ಳುತ್ತಿದ್ದೇವೆ. ಇದೇ ಕಾರಣಕ್ಕಾಗಿ ನಮ್ಮ ಈ ಸಂಸ್ಥೆಯನ್ನು ಇದೊಂದು ವೇಗವಾಗಿ ಮುಂದಕ್ಕೆ ತಂದಿದ್ದೇವೆ ಎಂದು ವಿವರಿಸಿದರು.
ಅತಿಥಿ ದೇಶ ಸಿಂಗಾಪುರ ಬಗ್ಗೆ ಮಾತನಾಡಿದ ಸದ್ಗುರು, ಮಲೇಷ್ಯಾದಿಂದ ಸಿಂಗಾಪುರ ಬೇರ್ಪಟ್ಟಾಗ ನೈಸರ್ಗಿಕ ಸಂಪನ್ಮೂಲ ಸೇರಿದಂತೆ ಏನೂ ಇಲ್ಲದ ಸ್ಥಿತಿಯಲ್ಲಿತ್ತು. ಆದರೆ ನಂತರ ತಮ್ಮ ಕಠಿಣ ಪರಿಶ್ರಮ ಮತ್ತು ಪ್ರತಿಭೆಯಿಂದ ದೇಶವನ್ನು ಕಟ್ಟಿದ್ದಾರೆ. ಇದೀಗ ಸಿಂಗಾಪುರದ ೬೦ನೇ ಹುಟ್ಟುಹಬ್ಬ ಆಚರಿಸುತ್ತಿರುವ ಎಲ್ಲಾ ಸಿಂಗಾಪುರ ಸಹೋದರ, ಸಹೋದರಿಯರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ನಾನು ೧೦ ವರ್ಷಗಳಿಂದ ಸಿಂಗಾಪುರಕ್ಕೆ ಹಲವಾರು ಬಾರಿ ಭೇಟಿ ನೀಡಿದ್ದು, ಎಲ್ಲಾ ರೀತಿಯ ರಾಜಕಾರಣಿಗಳು, ಆಡಳಿತಗಾರರು, ಸಮಾಜ ಸೇವಕರು, ಸಾಮಾನ್ಯ ಯುವಕ ರನ್ನು ಭೇಟಿ ಮಾಡಿದ್ದೇನೆ. ಅಲ್ಲಿನ ಉತ್ತಮ ಆಡಳಿತವನ್ನು ನೋಡಿದ್ದೇವೆ. ಆ ನಗರ, ಪಾಕಪದ್ಧತಿಗಳು, ಸಂಸ್ಕೃತಿಯನ್ನು ಆನಂದಿಸಿದ್ದೇನೆ. ವಿವಿಧ ದೇಶಗಳಿಂದ ಬಂದಿರುವ ಜನರು ಅಲ್ಲಿ ಮನೆಗಳನ್ನು ನಿರ್ಮಿಕೊಂಡಿದ್ದಾರೆ. ಒಂದು ದೇಶ ಒಂದು ಕುಟುಂಬ ಮಿಷನ್ ಗೆ ಸೇರಿದ ಮೊದಲ ದೇಶ ಸಿಂಗಾಪುರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಮಾತನಾಡಿ, ಮುದ್ದೇನಹಳ್ಳಿಯ ಸತ್ಯ ಸಾಯಿ ಸಂಸ್ಥೆಯಲ್ಲಿ ಎಲ್ಲರಿಗೂ ಉಚಿತ ಚಿಕಿತ್ಸೆ, ಉಚಿತ ವೈದ್ಯ ಕೀಯ ಶಿಕ್ಷಣ ನೀಡಲಾಗುತ್ತಿದೆ. ಇದು ಅಸಾಧ್ಯವಾದದ್ದು, ಆದರೆ ಇದನ್ನು ಶ್ರೀ ಮಧು ಸೂದನ ಸಾಯಿ ಅವರು ಸಾಧ್ಯವಾಗಿಸಿದ್ದಾರೆ. ಮುದ್ದೇನಹಳ್ಳಿಯನ್ನು ೩ಎಂ ಎಂದು ಕರೆಯುತ್ತೇನೆ. ಮಧುಸೂದನ ಮುದ್ದೇನಹಳ್ಳಿ ಮಿರಾಕಲ್ ಎಂದು ಮೆಚ್ಚುಗೆ ವ್ಯಕ್ತಪಡಿಸಿ ದರು.
ಸಾರ್ವಜನಿಕ ಸೇವೆ ಮಾಡಲು ಉತ್ತಮ ಗುಣಗಳು ಇರಬೇಕು. ಆಡಳಿತದಲ್ಲಿ ವಿಶೇಷವಾಗಿ ಭಾರತದಲ್ಲಿ ಯೋಜಿತ ಮತ್ತು ಕಠಿಣ ಶಿಸ್ತು ???ಂದಿರುವ ಉತ್ತಮ ನಡವಳಿಕೆಯ ೭ ಅಂಶಗಳ ಸೂತ್ರಗಳು ಇರಬೇಕು. ಸರ್ ಎಂ ವಿಶ್ವೇಶ್ವರಯ್ಯನವರು ದಕ್ಷತೆ, ಸಮಯಪಾಲನೆ ಯನ್ನು ಕಾಪಾಡಿಕೊಂಡವರು. ಅವರು ಬಹಳ ಸಮಯ ಪಾಲನೆ ಮಾಡುವ ಸೌಜನ್ಯ ವನ್ನು ಹೊಂದಿದ್ದರು. ಮಹಾನ್ ವ್ಯಕ್ತಿ ಮತ್ತು ಮಹಾನ್ ನಾಯಕರಲ್ಲಿ ಒಬ್ಬರಾಗಿದ್ದರು ಎಂದು ಹೇಳಿದರು.
ಸಂಜೀವಿನಿ ಆಸ್ಪತ್ರೆ ಮತ್ತು 'ಈಚ್ ಒನ್ ಎಜುಕೇಟ್ ಒನ್ ಸ್ಕಾಲರ್ ಶಿಪ್ ಕಾರ್ಯಕ್ರಮ'ಕ್ಕೆ ಬೆಂಬಲ ನೀಡುತ್ತಿರುವ 'ಸೂರ್ಯ ಫೈನಾನ್ಷಿಯಲ್ ಟೆಕ್ನಾಲಜೀಸ್' ಕಂಪನಿಗೆ 'ಸಿಎಸ್‌ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ' ನೀಡಿ ಗೌರವಿಸಲಾಯಿತು. ಕಂಪನಿಯ ಸಂಸ್ಥಾಪಕರು ಮತ್ತು ಅಧ್ಯಕ್ಷ ಡಿಎನ್ ಪ್ರಸಾದ್ ಅವರು ಪ್ರಶಸ್ತಿ ಸ್ವೀಕರಿಸಿದರು.
ಸಾಯಿ ವ್ಹೀಲ್ಸ್ ಮೊಬೈಲ್ ಮೆಡಿಕಲ್ ಯೂನಿಟ್ ಗೆ ಬೆಂಬಲ ನೀಡುತ್ತಿರುವ 'ಶ್ರೀ ಸಾಯಿ ಹೀಲಿಂಗ್ ಟ್ರಸ್ಟ್' ಗೆ 'ಸಿಎಂಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ' ನೀಡಿ ಗೌರವಿಸ ಲಾಯಿತು. ಟ್ರಸ್ಟ್ ನ ಸಂಸ್ಥಾಪಕರು ಹಾಗೂ ಟ್ರಸ್ಟಿ ಎಸ್ ಹೇಮಂತ್ ಕುಮಾರ್ ಪ್ರಶಸ್ತಿ ಸ್ವೀಕರಿಸಿದರು. ಅನ್ನಪೂರ್ಣ ಟ್ರಸ್ಟ್ ಗೆ ಬೆಂಬಲ ನೀಡುತ್ತಿರುವ 'ಟ್ರೆಲ್ಲೆಬೋರ್ಗ್ ಸೀಲಿಂಗ್ ಸಲ್ಯೂಷನ್' ಕಂಪನಿಗೆ 'ಸಿಎಸ್‌ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ' ನೀಡಿ ಗೌರವಿಸ ಲಾಯಿತು. ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ರಾಘವೇಂದ್ರ ನಾಗರಗದ್ದೆ ಅವರು ಪ್ರಶಸ್ತಿ ಸ್ವೀಕರಿಸಿದರು.
ಸಿಂಗಾಪುರ ದೇಶದಲ್ಲಿ ಶಿಕ್ಷಣಕ್ಕೆ ಕೊಡುಗೆ ನೀಡುತ್ತಿರುವ ಆನ್ಸನ್ ಎನ್.ಜಿ ಅವರಿಗೆ 'ಒಂದು ಜಗತ್ತು ಒಂದು ಕುಟುಂಬ ಮಾನವೀಯ ಪುರಸ್ಕಾರ' ನೀಡಿ ಗೌರವಿಸಲಾಯಿತು.
ಸಿಂಗಾಪುರದ ಪ್ರತಿನಿಧಿ ಸೆರೆನಾ ಟಾನ್ ಗೆಕ್ ವೀ ಅವರು ತಮ್ಮ ದೇಶದಲ್ಲಿನ ಕಲೆ, ಸಂಸ್ಕೃತಿ, ಸಂಗೀತ, ಭಾಷೆ, ಪ್ರಸಿದ್ಧ ತಾಣಗಳು, ಖಾದ್ಯಗಳು, ಸಾಂಪ್ರದಾಯಿಕ ಉಡುಪು, ಆಧ್ಯಾತ್ಮಿಕ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಮತ್ತೊಬ್ಬ ಪ್ರತಿನಿಧಿ ಗೀತಿಕಾ ದಾಸ್ ತಮ್ಮ ಜೀವನದಲ್ಲಿನ ಆಧ್ಯಾತ್ಮಿಕ ಬದಲಾವಣೆಯ ಅನುಭವ ಹಂಚಿಕೊಂಡರು.
ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ ಮೂಲಕ ಹೃದಯ ಸಂಬಂಧಿತ ಸಮಸ್ಯೆಯನ್ನು ಅತಿ ಕಡಿಮೆ ಸಮಯದಲ್ಲಿ ಬಗೆಹರಿಸಿಕೊಂಡ ಹಿಂದೂಪುರದ ಶಿಕ್ಷಕಿ ಸ್ನೇಹ ಎಂಬುವರಿಗೆ 'ಗಿಫ್ಟ್ ಆಫ್ ಲೈಫ್' ಪ್ರಮಾಣಪತ್ರ ವಿತರಿಸಲಾಯಿತು. ಸ್ನೇಹಾ ಅವರಿಗೆ ಲಕ್ಷಾಂತರ ರೂಪಾಯಿ ವೆಚ್ಚದ ಅತ್ಯಾಧುನಿಕ ತಂತ್ರಜ್ಞಾನದ ರೋಬೋಟಿಕ್ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಗಿದೆ.