Protest: ಜಿಲ್ಲಾಡಳಿತದ ನಿರ್ಲಕ್ಷ್ಯ ಹಾಗೂ ದಲಿತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ
ಸಿ.ಜಿ.ಗಂಗಪ್ಪ ಮಾತನಾಡಿ ಇತ್ತೀಚಿಗೆ ನಮ್ಮ ಜಿಲ್ಲೆಯಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ತೀವ್ರ ಗೊಂಡಿದ್ದು ಪೋಲಿಸ್ ಇಲಾಖೆಯು ದಲಿತರ ಮೇಲಿನ ದೌರ್ಜನ್ಯ ತಡೆಯುವ ಬದಲು ದಲಿತರ ಮೇಲೆಯೇ ಕೌಂಟರ್ ಕೇಸ್ ದಾಖಲಿಸುತ್ತಿರುವುದು ಖಂಡನೀಯ ಎಂದರು
Source : Chikkaballapur Reporter
ಗೌರೀಬಿದನೂರು: ದಲಿತರ ಮೂಲಭೂತ ಸಮಸ್ಯೆಗಳು ಮತ್ತು ದಲಿತರ ಮೇಲಿನ ದೌರ್ಜನ್ಯ ಗಳ ಬಗ್ಗೆ ಜಿಲ್ಲಾಡಳಿತದ ನಿರ್ಲಕ್ಷ್ಯ ಹಾಗೂ ದಲಿತ ವಿರೋಧಿ ನೀತಿಯನ್ನು ಖಂಡಿಸಿ ಜಿಲ್ಲಾದ್ಯಂತ ಏಕ ಕಾಲದಲ್ಲಿ ಹಮ್ಮಿಕೊಂಡಿರುವ ಅನಿರ್ದಿಷ್ಠಾವಧಿ ಧರಣಿ ಸತ್ಯಾಗ್ರಹವನ್ನು ತಾಲ್ಲೂಕು ಕಚೇರಿಯ ಅವರಣದಲ್ಲಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಅರಂಭಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಡಿಎಸ್‌ಎಸ್ ಜಿಲ್ಲಾ ಸಂಚಾಲಕರಾದ ಸಿ.ಜಿ.ಗಂಗಪ್ಪ ಮಾತನಾಡಿ ಇತ್ತೀಚಿಗೆ ನಮ್ಮ ಜಿಲ್ಲೆಯಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ತೀವ್ರಗೊಂಡಿದ್ದು ಪೋಲಿಸ್ ಇಲಾಖೆಯು ದಲಿತರ ಮೇಲಿನ ದೌರ್ಜನ್ಯ ತಡೆಯುವ ಬದಲು ದಲಿತರ ಮೇಲೆಯೇ ಕೌಂಟರ್ ಕೇಸ್ ದಾಖಲಿಸುತ್ತಿರುವುದು ಖಂಡನೀಯ ಎಂದರು.
ದಲಿತರು ಮತ್ತು ಹಿಂದುಳಿದವರ ಆರ್ಥಿಕ ಪ್ರಗತಿಗಾಗಿ ಸ್ಥಾಪನೆಗೊಂಡ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಆದಿಜಾಂಬವ,ಭೋವಿ ನಿಗಮಗಳಂತೂ ವ್ಯಾಪಾರ ಕೇಂದ್ರಗಳಾಗಿ ಮಾರ್ಪಟ್ಟಿವೆ. ಹಣ ಕೊಟ್ಟವರು ಮಾತ್ರ ಸಬ್ಸಿಡಿ ಸಾಲ ಸೌಲಭ್ಯಗಳು ದೊರೆಯುತ್ತವೆ ಬಡವರಿಗೆ ಸೌಲಭ್ಯ ಸಿಗುತ್ತಿಲ್ಲ ಎಂದು ಅವರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ತಾಲ್ಲೂಕ್ ಸಂಚಾಲಕ ಪಿ.ನರಸಿಂಹಮೂತಿ೯ ಮಾತನಾಡಿ ಜೀಲಾಕುಂಟೆ, ಹಕ್ಕಿಪಿಕ್ಕಿ ಕಾಲೋನಿ, ಕುಡುಮಲಕುಂಟೆ, ಗುವ್ವಲಹಳ್ಳಿ, ಮರಿಪಡುಗು, ನಗರಗೆರೆ ಮಲ್ಲೇನಹಳ್ಳಿ, ತೋಕಲಹಳ್ಳಿ ಗ್ರಾಮಗಳ ನಿವೇಶನ ರಹಿತ ದಲಿತರಿಗೆ ನಿವೇಶನ ಮಂಜೂರು ಮಾಡಬೇಕೆಂದರು. ತಾಲ್ಲೂಕಿನ ಜೋಡಿ ಗ್ರಾಮಗಳ ಗೇಣಿದಾರರ ಭೂ ಸಮಸ್ಯೆಯನ್ನು ಕೂಡಲೇ ಇತ್ಯರ್ಥ ಮಾಡಬೇಕು. ಅಪೂರ್ಣಗೊಂಡ ಅಂಬೇಡ್ಕರ್ ಭವನಗಳನ್ನು ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘಟನಾ ಸಂಚಾಲಕ ಜೆ.ಎನ್.ಆದಿನಾರಾಯಣಪ್ಪ, ನಾರಾಯಣಸ್ವಾಮಿ , ಬಾಲಪ್ಪ, ಸೋಮಯ್ಯ, ಕೆ.ಎಸ್.ತಿಪ್ಪಯ್ಯ, ಚಂದ್ರಶೇಖರ್, ನಗರಗೆರೆ ಲಕ್ಷ್ಮೀನಾರಾಯಣ, ಧರ್ಮಿ ಕುಮಾರ್, ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಕಾಯ೯ಕತ೯ರು ಭಾಗವಹಿಸಿದ್ದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ ಮಹೇಶ ಪತ್ರಿ ಅವರು ಮನವಿ ಪತ್ರ ಸ್ವೀಕರಿಸಿ ಜಿಲ್ಲಾಧಿಕಾರಿಗಳ ಗಮನಕ್ಕೆ ಸಲ್ಲಿಸಲಾಗುವುದೆಂದು ತಿಳಿಸಿದರು.
ಇದನ್ನೂ ಓದಿ: Chikkaballapur News: ರಸ್ತೆ ಸುರಕ್ಷತಾ ನಿಯಮ ಪಾಲಿಸಿ: ಆರ್ ಟಿ ಓ ಅಧಿಕಾರಿ ವಿವೇಕಾನಂದ