ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಪುಟ್ಟತಿಮ್ಮನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಂಚನಬಲೆ ಸದಾಶಿವ ನೆರವು

ಶಿಕ್ಷಣವೇ ಎಲ್ಲಾ ವಿಮೋಚನೆಗಳ ಅಸ್ತ್ರ ಎಂದು ಭಾವಿಸಿರುವ ಬೆರಳೆಣಿಕೆಯ ಸಮಾಜ ಸೇವಕರಲ್ಲಿ ಒಬ್ಬರಾಗಿರುವ ಮಂಚನಬಲೆಯ ಸಮಾಜ ಸೇವಕ ಡಾ.ಎಂ.ವಿ.ಸದಾಶಿವ ಅವರು ಕ್ಷೇತ್ರದ ಹತ್ತಾರು ಶಾಲೆಗಳಿಗೆ ನೆರವಿನ ಹಸ್ತ ಚಾಚಿದ್ದಾರೆ.ಇದೀಗ ಪುಟ್ಟತಿಮ್ಮನಹಳ್ಳಿ ಶಾಲೆಗೆ ೫ ಸಾವಿರ ನಗದು ಸಹಾಯ ಮಾಡುವ ಮೂಲಕ ಮತ್ತೊಮ್ಮೆ ಶಿಕ್ಷಣಕ್ಕಾಗಿ ಪ್ರೋತ್ಸಾಹಿಸುವ ತಮ್ಮ ಸೇವಾ ಕಾರ್ಯವನ್ನು ಮುಂದು ವರಿಸಿದ್ದಾರೆ

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಂಚನಬಲೆ ಸದಾಶಿವ ನೆರವು

ತಾಲೂಕಿನ ಪುಟ್ಟತಿಮ್ಮನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಸಮಾಜ ಸೇವಕ ಮಂಚನಬಲೆ ಸದಾಶಿವ ಅವರು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ಸಾಧನ ಸಲಕರಣೆಗಳನ್ನು ಖರೀದಿಸಲು ಧನಸಹಾಯ ಮಾಡಿದರು. -

Ashok Nayak
Ashok Nayak Dec 1, 2025 11:20 PM

ಚಿಕ್ಕಬಳ್ಳಾಪುರ: ತಾಲೂಕಿನ ಪುಟ್ಟತಿಮ್ಮನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಸಮಾಜ ಸೇವಕ ಮಂಚನಬಲೆ ಸದಾಶಿವ ಅವರು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ಸಾಧನ ಸಲಕರಣೆಗಳನ್ನು ಖರೀದಿಸಲು ಧನ ಸಹಾಯ ಮಾಡಿದರು.

ಶಿಕ್ಷಣವೇ ಎಲ್ಲಾ ವಿಮೋಚನೆಗಳ ಅಸ್ತ್ರ ಎಂದು ಭಾವಿಸಿರುವ ಬೆರಳೆಣಿಕೆಯ ಸಮಾಜ ಸೇವಕರಲ್ಲಿ ಒಬ್ಬರಾಗಿರುವ ಮಂಚನಬಲೆಯ ಸಮಾಜ ಸೇವಕ ಡಾ.ಎಂ.ವಿ.ಸದಾಶಿವ ಅವರು ಕ್ಷೇತ್ರದ ಹತ್ತಾರು ಶಾಲೆಗಳಿಗೆ ನೆರವಿನ ಹಸ್ತ ಚಾಚಿದ್ದಾರೆ.

ಇದನ್ನೂ ಓದಿ: Chikkaballapur News: ಕನ್ನಡದ ಬೆಳವಣಿಗೆಗೆ ಸಂಘಸಂಸ್ಥೆಗಳ ಕೊಡುಗೆ ಅಪಾರ: ರಾಜ್ಯಾಧ್ಯಕ್ಷ ಮಂಚನಬಲೆ ಎಂ ಶ್ರೀನಿವಾಸ್

ಇದೀಗ ಪುಟ್ಟತಿಮ್ಮನಹಳ್ಳಿ ಶಾಲೆಗೆ ೫ ಸಾವಿರ ನಗದು ಸಹಾಯ ಮಾಡುವ ಮೂಲಕ ಮತ್ತೊಮ್ಮೆ ಶಿಕ್ಷಣಕ್ಕಾಗಿ ಪ್ರೋತ್ಸಾಹಿಸುವ ತಮ್ಮ ಸೇವಾ ಕಾರ್ಯ ವನ್ನು ಮುಂದುವರಿಸಿದ್ದಾರೆ.

ಶಾಲೆಗೆ ತೆರಳಿ ಮುಖ್ಯ ಶಿಕ್ಷಕರಾದ ಗೋವಿಂದರಾಜು ಅವರಿಗೆ ನೆರವಿನ ಹಣವನ್ನು ನಗದು ರೂಪದಲ್ಲಿ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಕರಾದ ಗೋವಿಂದ್ ರಾಜ್ ಸದಾಶಿವ ಅವರ ಸೇವೆಯನ್ನು ಕೊಂಡಾಡಿದರು ಇವರ ಸೇವೆ ಹೀಗೆ ಮುಂದುವರೆಯಲಿ ಎಂದು ಆಶಿಸಿದರು ಈ ಸಂದರ್ಭದಲ್ಲಿ ಶಿಕ್ಷಕರಾದ ಹಾಗೂ ಶರಣ್ ದೊಡ್ಡತಮ್ಮನಳ್ಳಿ  ಉಪಸ್ಥಿತರಿದ್ದರು.