ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಗೌನಿಪಲ್ಲಿ ಗ್ರಾಮವನ್ನು ಪಟ್ಟಣ ಪಂಚಾಯಿತಿ ಮಾಡಲು ಪೌರಾಡಳಿತ ಸಚಿವರಿಗೆ ಮನವಿ

18 ದಿನಗಳ ಪಾದಯಾತ್ರೆ ಮೂಲಕ ತಮ್ಮ ಗ್ರಾಮದಿಂದ ಬೆಳಗಾವಿ ಸುವರ್ಣ ಸೌಧದ ವರಿವಿಗೂ ಹೋಗಿ ಶ್ರೀನಿವಾಸಪುರ ಕ್ಷೇತ್ರದ ಶಾಸಕರಾದ ವೆಂಕಟಶಿವಾರೆಡ್ಡಿ ರವರ ಸಮ್ಮುಖದಲ್ಲಿ ಪೌರಾಡಳಿತ ಸಚಿವ ರಾದ ರಹೀಮ್ ಖಾನ್ ರವರಿಗೆ, ಗೌನಿಪಲ್ಲಿ ಗ್ರಾಮವನ್ನು ಪಟ್ಟಣ ಪಂಚಾಯತಿ ಕೂಡಲೆ ಪಟ್ಟಣ ಪಂಚಾಯತಿ ಮಾಡುವಂತೆ ಮನವಿ ಪತ್ರವನ್ನು ಸಲ್ಲಿಸಿದರು

3 ನೇ ಬಾರಿ ಪಾದಯಾತ್ರೆ ನಡೆಸಿ ಸರ್ಕಾರದ ಗಮನ ಸೆಳೆದ ಅಮ್ಜದ್

-

Ashok Nayak
Ashok Nayak Dec 8, 2025 10:46 PM

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ಗ್ರಾಮದ ಯುವ ಮುಖಂಡ ಸ್ಥಳೀಯ ಉದ್ಯಮಿ ಅಮ್ಜದ್ ಖಾನ್ ಎನ್ನುವರು ಎರಡು ವರ್ಷಗಳ ಹಿಂದೆ ಬೆಳಗಾವಿ ಸುವರ್ಣಸೌಧದಲ್ಲಿ ಅಧಿವೇಶನ ನೆಡೆಯುತ್ತಿದ್ದ ಸಂದರ್ಭದಲ್ಲಿ ಸರ್ಕಾರದ ಗಮನ ಸೆಳೆಯಲು ಬೆಳಗಾವಿ ಸುವರ್ಣ ಸೌಧಕ್ಕೆ ಗಾಂಧಿ ಟೋಪಿ ಧರಿಸಿ ಗೌನಪಲ್ಲಿಯಿಂದ ಬೆಳಗಾವಿಗೆ 14 ದಿನಗಳ ಪಾದಯಾತ್ರೆ ಮೂಲಕ ಹೋಗಿ ಗೌನಿಪಲ್ಲಿ ಗ್ರಾಮವನ್ನು ಪಟ್ಟಣ ಪಂಚಾಯನ್ನಾಗಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು.

ಇದನ್ನೂ ಓದಿ: Chikkaballapur News: ಅಂಬೇಡ್ಕರ್ ರೀತಿ ನಿರಂತರ ಅಧ್ಯನಶೀಲರಾಗುವ ಮೂಲಕ ದೇಶದ ಆಸ್ತಿಯಾಗಬೇಕು: ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಬಣ್ಣನೆ

ಮತ್ತೆ ಪುನಹ 18 ದಿನಗಳ ಪಾದಯಾತ್ರೆ ಮೂಲಕ ತಮ್ಮ ಗ್ರಾಮದಿಂದ ಬೆಳಗಾವಿ ಸುವರ್ಣ ಸೌಧದ ವರಿವಿಗೂ ಹೋಗಿ ಶ್ರೀನಿವಾಸಪುರ ಕ್ಷೇತ್ರದ ಶಾಸಕರಾದ ವೆಂಕಟಶಿವಾರೆಡ್ಡಿ ರವರ ಸಮ್ಮುಖದಲ್ಲಿ ಪೌರಾಡಳಿತ ಸಚಿವರಾದ ರಹೀಮ್ ಖಾನ್ ರವರಿಗೆ, ಗೌನಿಪಲ್ಲಿ ಗ್ರಾಮವನ್ನು ಪಟ್ಟಣ ಪಂಚಾಯತಿ ಕೂಡಲೆ ಪಟ್ಟಣ ಪಂಚಾಯತಿ ಮಾಡುವಂತೆ ಮನವಿ ಪತ್ರವನ್ನು ಸಲ್ಲಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಇದರ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ರವಿಕುಮಾರ್, ರಾಮ್ ಮೋಹನ್, ಉಪಾಧ್ಯಕ್ಷರಾದ ವೆಂಕಟರಮಣಪ್ಪ, ಗ್ರಾಮದ ಮುಖಂಡರಾದ ಆಬಿದ್ ಪಾಷಾ, ನಯಾಜ್ ಪಾಷಾ, ಬಾಬಾ ಜಾನ್, ಮಾಲೀಕ್, ಮುನೀರ್ ಪಾಷಾ, ಅಯೂಬ್ ಖಾನ್ ಇದ್ದರು.