ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gauribidanur News: ಆರ್.ಎಲ್.ಜಾಲಪ್ಪ ಇಂದಿನ ರಾಜಕಾರಣಿಗಳಿಗೆ ಮಾದರಿ ನಾಯಕ: ಆರ್. ಅಶೋಕ್ ಕುಮಾರ್

ತಾಲ್ಲೂಕಿನಲ್ಲಿ ನೀರಾವರಿ ಅಭಿವೃದ್ಧಿ ಹಾಗೂ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಜಾಲಪ್ಪ ಅವರ ಕೊಡುಗೆ ಅಪಾರವಾಗಿದೆ. ಉತ್ತರ ಪಿನಾಕಿನಿ ನದಿಯ ನೀರು ಹರಿದು ತಾಲ್ಲೂಕಿನ ಏಳು ಕೆರೆಗಳಿಗೆ ತಲುಪುವ ಮೂಲಕ ರೈತರಿಗೆ ಅನುಕೂಲವಾಗಿದೆ. ಈ ಕಾರಣದಿಂದ ಅವರನ್ನು ‘ಆಧುನಿಕ ಭಗೀರಥ’ ಎಂದು ಕರೆಯುವುದು ಸೂಕ್ತ

ಜನ್ಮದಿನದ ಅಂಗವಾಗಿ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ

-

Profile
Ashok Nayak Oct 21, 2026 7:30 AM

ಗೌರಿಬಿದನೂರು: ಹಿಂದುಳಿದ ವರ್ಗ(Backword calss)ಗಳ ಆಶಾಕಿರಣ, ರಾಜಕೀಯ ಮುತ್ಸದ್ದಿ ದಿವಂಗತ ಆರ್.ಎಲ್. ಜಾಲಪ್ಪ(R L Jalappa) ಅವರು ಇಂದಿನ ರಾಜಕಾರಣಿಗಳಿಗೆ ಅನುಕರಣೀಯ ನಾಯಕರು ಎಂದು ತಾಲ್ಲೂಕಿನ ಅಹಿಂದ ಮುಖಂಡ ಆರ್. ಅಶೋಕ್ ಕುಮಾರ್ ಹೇಳಿದರು.

ದಿವಂಗತ ಆರ್.ಎಲ್. ಜಾಲಪ್ಪ ಅವರ ಜನ್ಮದಿನದ ಅಂಗವಾಗಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿ ಮಾತನಾಡಿದರು.

ತಾಲ್ಲೂಕಿನಲ್ಲಿ ನೀರಾವರಿ ಅಭಿವೃದ್ಧಿ ಹಾಗೂ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಜಾಲಪ್ಪ ಅವರ ಕೊಡುಗೆ ಅಪಾರವಾಗಿದೆ. ಉತ್ತರ ಪಿನಾಕಿನಿ ನದಿಯ ನೀರು ಹರಿದು ತಾಲ್ಲೂಕಿನ ಏಳು ಕೆರೆಗಳಿಗೆ ತಲುಪುವ ಮೂಲಕ ರೈತರಿಗೆ ಅನುಕೂಲವಾಗಿದೆ. ಈ ಕಾರಣದಿಂದ ಅವರನ್ನು ‘ಆಧುನಿಕ ಭಗೀರಥ’ ಎಂದು ಕರೆಯುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: Gauribidanur News: ಹಂಪಸಂದ್ರ ಗ್ರಾಮದಲ್ಲಿ ಶಾಂತಿ ಸಭೆ; ಜಾತಿಭೇದ ಮರೆತು ಸೌಹಾರ್ದದಿಂದ ಬದುಕಲು ಕರೆ

ಜಾಲಪ್ಪ ಅವರ ಸೇವೆ ಅನನ್ಯ: ಎಸ್. ರಮೇಶ್

ಕೆಎಂಎಫ್(KMF) ಮಾಜಿ ಅಧ್ಯಕ್ಷ ಎಸ್. ರಮೇಶ್ ಮಾತನಾಡಿ, ಆರ್.ಎಲ್.ಜಾಲಪ್ಪ ಅವರು ತಾಲ್ಲೂಕಿನ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಹಿಂದುಳಿದ ವರ್ಗಗಳ ಹಾಗೂ ದಲಿತ ನಾಯಕರನ್ನು ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ರಾಜಕೀಯ ಜೀವನದಲ್ಲಿ ಹಲವು ಏಳು-ಬೀಳುಗಳನ್ನು ಕಂಡರೂ ರಾಜ್ಯ ಮತ್ತು ಕೇಂದ್ರ ರಾಜಕಾರಣದಲ್ಲಿ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದರು. ಅವರ ಆಡಳಿತ ವೈಖರಿ ಮತ್ತು ಜನಪರ ಸೇವೆಗಳು ಇಂದಿನ ನಾಯಕರಿಗೆ ದಾರಿದೀಪವಾಗಿವೆ ಎಂದು ಸ್ಮರಿಸಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಸಂದ್ರ ಗಂಗಾಧರಪ್ಪ ಮಾತನಾಡಿ, ಜಾಲಪ್ಪ ಅವರು ಇಂದು ನಮ್ಮೊಂದಿಗಿಲ್ಲದಿದ್ದರೂ, ಅವರು ಕೈಗೊಂಡ ಜನಪರ ಕಾರ್ಯಗಳು ಇಂದಿಗೂ ಜನ ಮಾನಸದಲ್ಲಿ ಉಳಿದಿವೆ. ತಾಲ್ಲೂಕಿನ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಕಾಮಗಾರಿ ಗಳನ್ನು ಕೈಗೊಂಡು ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಆಬುಬೇಕರ್, ಚಂದ್ರಣ್ಣ, ಕಲ್ಲಿನಾಯಕನಹಳ್ಳಿ ಗೋಪಿ, ಮುನಿಯಪ್ಪ, ನಾಗಾರ್ಜುನ, ರಾಘು, ವೆಂಕಟೇಶ್, ರಮೇಶ್, ಪ್ರಭಾಕರ್, ಕರವೇ ಅಶ್ವಥ್, ಮಣೆವಾಳ ಗಂಗಾಧರಪ್ಪ, ಎಸ್.ವಿ.ಟಿ. ಲೋಕೇಶ್, ಮದನ್ ಸುಲೇಮಾನ್, ಬಾಬು, ಮೇಳ್ಯಾ ಕಿಟ್ಟಿ, ಕೃಷ್ಣಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.