ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಜೈ ಫೌಂಡೇಶನ್‌ನಿಂದ ಸೇವಾ ಕಾರ್ಯ: ಆಸ್ಪತ್ರೆ ಸಿಬ್ಬಂದಿ, ಗರ್ಭಿಣಿಯರು ಹಾಗೂ ಸಾರ್ವಜನಿಕರಿಗೆ ಹಣ್ಣು–ಹಂಪಲು, ಬ್ರೆಡ್ ವಿತರಣೆ

ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಮಂಚೇನಹಳ್ಳಿ ತಾಲೂಕು ಆಸ್ಪತ್ರೆಯ ಆವರಣದಲ್ಲಿ ಜೈ ಫೌಂಡೇಶನ್ ವತಿಯಿಂದ ಆಸ್ಪತ್ರೆಯ ಕರ್ತವ್ಯನಿರತ ಸಿಬ್ಬಂದಿ, ಗರ್ಭಿಣಿಯರು ಹಾಗೂ ಸಾರ್ವಜನಿಕರಿಗೆ ಹಣ್ಣು–ಹಂಪಲು ಮತ್ತು ಬ್ರೆಡ್ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಹಬ್ಬ ಆಚರಿಸಲಾಯಿತು.

ಜನ್ಮಾಷ್ಟಮಿಯಂದು ಜೈ ಫೌಂಡೇಶನ್‌ನಿಂದ ಸೇವಾ ಕಾರ್ಯ

-

Profile
Ashok Nayak Sep 5, 2026 12:29 PM

ಮಂಚೇನಹಳ್ಳಿ: ಶ್ರೀ ಕೃಷ್ಣ ಜನ್ಮಾಷ್ಟಮಿ(Sri Krishna Janmashtami)ಯ ಅಂಗವಾಗಿ ಮಂಚೇನ ಹಳ್ಳಿ ತಾಲೂಕು ಆಸ್ಪತ್ರೆಯ ಆವರಣದಲ್ಲಿ ಜೈ ಫೌಂಡೇಶನ್ ವತಿಯಿಂದ ಆಸ್ಪತ್ರೆಯ ಕರ್ತವ್ಯನಿರತ ಸಿಬ್ಬಂದಿ, ಗರ್ಭಿಣಿಯರು ಹಾಗೂ ಸಾರ್ವಜನಿಕರಿಗೆ ಹಣ್ಣು–ಹಂಪಲು ಮತ್ತು ಬ್ರೆಡ್ ವಿತರಿಸುವ ಮೂಲಕ ಅರ್ಥಪೂರ್ಣ ವಾಗಿ ಹಬ್ಬ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜೈ ಫೌಂಡೇಶನ್‌ನ ಪದಾಧಿಕಾರಿಗಳು, ಪರರ ಸೇವೆಯಲ್ಲಿ ತೊಡಗಿಸಿಕೊಳ್ಳುವುದೇ ಶ್ರೀ ಕೃಷ್ಣ ಪರಮಾತ್ಮನಿಗೆ ಸಲ್ಲಿಸುವ ಶ್ರೇಷ್ಠ ಪೂಜೆ. ಜನರ ಆರೋಗ್ಯ ಹಾಗೂ ಅವರ ಮುಖದಲ್ಲಿನ ಮಂದಹಾಸವೇ ಸೇವಾ ಕಾರ್ಯಕ್ಕೆ ದೊರೆಯುವ ನಿಜವಾದ ಪ್ರತಿಫಲ ಎಂದರು.

ಇದನ್ನೂ ಓದಿ: Sri Krishna Janmashtami in Gudibande: ಶ್ರೀ ಕೃಷ್ಣನ ಜೀವನಾದರ್ಶಗಳನ್ನು ಯುವಜನತೆ ಅಳವಡಿಸಿಕೊಳ್ಳಲಿ

ಆಸ್ಪತ್ರೆಗೆ ಆಗಮಿಸಿದ್ದ ಗರ್ಭಿಣಿಯರು, ಸಾರ್ವಜನಿಕರು ಹಾಗೂ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯಕೀಯ ಸಿಬ್ಬಂದಿಗೆ ಹಣ್ಣು–ಹಂಪಲು ಮತ್ತು ಬ್ರೆಡ್ ವಿತರಿಸಲಾಯಿತು. ಜನ್ಮಾಷ್ಟಮಿಯ ಪವಿತ್ರ ದಿನದಂದು ಕೈಗೊಂಡ ಈ ಸೇವಾ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.

ಕಾರ್ಯಕ್ರಮದಲ್ಲಿ ಜೈ ಫೌಂಡೇಶನ್‌ನ ಸದಸ್ಯರು ಹಾಗೂ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಪಾಲ್ಗೊಂಡಿದ್ದರು.