ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chinthamani News: ಹೊಸ ರೂಪದಲ್ಲಿ ಸ್ಮೈಲ್ ನೆಸ್ಟ್: ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ದಂತ ಚಿಕಿತ್ಸಾ ಕೇಂದ್ರ ಲೋಕಾರ್ಪಣೆ

ಕ್ಲಿನಿಕ್‌ನ ವೈದ್ಯರಾದ ಡಾ.ಆರ್ಷಿತ ಮತ್ತು ಡಾ.ಭುವನ್ ಅವರು ಕ್ಲಿನಿಕ್‌ನಲ್ಲಿ ಲಭ್ಯವಿರುವ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.ನಮ್ಮಲ್ಲಿ ಹಲ್ಲಿನ ಎಲ್ಲಾ ಸಮಸ್ಯೆಗಳಿಗೆ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಚಿಕಿತ್ಸೆ ನೀಡಲಾಗುವುದು.ಮುಖ್ಯವಾಗಿ ರೂಟ್ ಕೆನಾಲ್, ಕಾಂಪೋ ಸಿಟ್ ಫಿಲ್ಲಿಂಗ್,ಮತ್ತು ದಂತ ಜೋಡಣೆಯಂತಹ (Orthodontic)ಚಿಕಿತ್ಸೆಗಳು ಲಭ್ಯವಿವೆ ಎಂದು ತಿಳಿಸಿದರು.

ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ದಂತ ಚಿಕಿತ್ಸಾ ಕೇಂದ್ರ ಲೋಕಾರ್ಪಣೆ

-

Profile
Ashok Nayak May 13, 2026 11:44 PM

ಸಾರ್ವಜನಿಕರ ಸೇವೆಗೆ ಸಜ್ಜಾದ ಸ್ಮೈಲ್ ನೆಸ್ಟ್ ಡೆಂಟಲ್ ಕೇರ್:ಗಣ್ಯರ ಸಮ್ಮುಖದಲ್ಲಿ ಅದ್ಧೂರಿ ಉದ್ಘಾಟನೆ

ಚಿಂತಾಮಣಿಯಲ್ಲಿ ಅತ್ಯಾಧುನಿಕ 'ಸ್ಮೈಲ್ ನೆಸ್ಟ್ ಡೆಂಟಲ್ ಕೇರ್' ಉದ್ಘಾಟನೆ: ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಶುಭ ಹಾರೈಕೆ 

ಚಿಂತಾಮಣಿ: ನಗರದ ನಾಗರಿಕರಿಗೆ ಅತ್ಯಾಧುನಿಕ ದಂತ ಚಿಕಿತ್ಸೆ ನೀಡುವ ಉದ್ದೇಶದಿಂದ ನೂತನವಾಗಿ ಸ್ಥಾಪಿಸಲಾಗಿರುವ ಸ್ಮೈಲ್ ನೆಸ್ಟ್ ಡೆಂಟಲ್ ಕೇರ್'ಕ್ಲಿನಿಕ್ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ(Former MLA J.K. Krishnareddy) ರವರು ಭಾಗಿಯಾದರು.

ನಗರದ ಎನ್ ಆರ್ ಬಡಾವಣೆಯ ಖಾಸಗಿ ಮೈಸೂರು ಆಸ್ಪತ್ರೆ ಎದುರುಗಡೆ ಈ ಕ್ಲಿನಿಕ್‌ನ ಉದ್ಘಾಟನಾ ಮಾಡಲಾಯಿತು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿ ಇಂದಿನ ಒತ್ತಡದ ಜೀವನಶೈಲಿಯಲ್ಲಿ ಆರೋಗ್ಯ ರಕ್ಷಣೆ ಬಹಳ ಮುಖ್ಯ.ಅದರಲ್ಲೂ ದಂತ ಸಂಬಂಧಿ ಸಮಸ್ಯೆಗಳಿಗೆ ತಕ್ಷಣದ ಮತ್ತು ಗುಣಮಟ್ಟದ ಚಿಕಿತ್ಸೆ ಅಗತ್ಯವಿರುತ್ತದೆ.

ಚಿಂತಾಮಣಿಯಂತಹ ಬೆಳೆಯುತ್ತಿರುವ ನಗರಕ್ಕೆ ಇಂತಹ ಹೈಟೆಕ್ ಸೌಲಭ್ಯಗಳಿರುವ ಕ್ಲಿನಿಕ್ ಅವಶ್ಯಕತೆಯಿತ್ತು. ಡಾಕ್ಟರ್ ಹರ್ಷಿತ ಮತ್ತು ಭುವನ್ ಅವರ ತಂಡ ಇಲ್ಲಿನ ಜನರಿಗೆ ಉತ್ತಮ ಸೇವೆ ನೀಡಲಿ ಎಂದು ಹಾರೈಸಿದರು.

ಇದನ್ನೂ ಓದಿ: Chikkaballapur News: ಆದಿಚುಂಚನಗಿರಿ ಶ್ರೀ ಅಮೃತ ಹಸ್ತದಿಂದ ಮೇ.13ರಂದು ಒಕ್ಕಲಿಗರ ಸಂಘದ ನೂತನ ವಾಣಿಜ್ಯ ಮಳಿಗೆಗಳ ಲೋಕಾರ್ಪಣೆ

ಕ್ಲಿನಿಕ್‌ನ ವೈದ್ಯರಾದ ಡಾ.ಆರ್ಷಿತ ಮತ್ತು ಡಾ.ಭುವನ್ ಅವರು ಕ್ಲಿನಿಕ್‌ನಲ್ಲಿ ಲಭ್ಯವಿರುವ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.ನಮ್ಮಲ್ಲಿ ಹಲ್ಲಿನ ಎಲ್ಲಾ ಸಮಸ್ಯೆಗಳಿಗೆ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಚಿಕಿತ್ಸೆ ನೀಡಲಾಗುವುದು.ಮುಖ್ಯವಾಗಿ ರೂಟ್ ಕೆನಾಲ್, ಕಾಂಪೋಸಿಟ್ ಫಿಲ್ಲಿಂಗ್,ಮತ್ತು ದಂತ ಜೋಡಣೆಯಂತಹ (Orthodontic)ಚಿಕಿತ್ಸೆಗಳು ಲಭ್ಯವಿವೆ ಎಂದು ತಿಳಿಸಿದರು.

ಇದಲ್ಲದೆ,ಹಲ್ಲುಗಳನ್ನು ಸರಿಪಡಿಸಲು ಹಾಕುವ ಬ್ರೇಸಸ್ ಮತ್ತು ಆಧುನಿಕ ಅಲೈನರ್ಸ್ (Aligners)ಸೌಲಭ್ಯವೂ ಸ್ಮೈಲ್ ನೆಸ್ಟ್‌ನಲ್ಲಿ ದೊರೆಯಲಿದೆ.ದಂತ ಸಮಸ್ಯೆಗಳಿಂದ ಬಳಲು ತ್ತಿರುವ ಸಾರ್ವಜನಿಕರು ಒಮ್ಮೆಯಾದರೂ ಕ್ಲಿನಿಕ್‌ಗೆ ಭೇಟಿ ನೀಡಿ, ಪರಿಣಿತ ವೈದ್ಯರಿಂದ ಸಲಹೆ ಮತ್ತು ಚಿಕಿತ್ಸೆ ಪಡೆಯುವಂತೆ ಅವರು ಮನವಿ ಮಾಡಿದ್ದಾರೆ.

ದಂತ ಆರೋಗ್ಯದ ಬಗ್ಗೆ ಕಾಳಜಿ ವಹಿಸುವವರಿಗೆ ಸ್ಮೈಲ್ ನೆಸ್ಟ್ ಒಂದು ಉತ್ತಮ ಆಯ್ಕೆ ಯಾಗಲಿದೆ ಎಂದು ವೈದ್ಯರು ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಡಿಪೋ ಮಂಜುನಾಥ್, ಅಂಜಪ್ಪ, ರಾಜಣ್ಣ, ಗೌತಮ್, ಅಶ್ವಿನಿ, ಅರುಣ್. ಮಾಜಿನಗರ ಸಭಾ ಸದಸ್ಯರಾದ ವೆಂಕಟರವಣಪ್ಪ ಸೇರಿದಂತೆ ಮತ್ತಿತರರು ಇದ್ದರು.