ಯಶಸ್ವಿಯಾಗಿ ನಡೆದ ವಿದ್ಯುತ್ ಸುರಕ್ಷತಾ ಸಪ್ತಾಹ
ದೋಷಪೂರಿತ ವಿದ್ಯುತ್ ಉಪಕರಣಗಳನ್ನು ಬಳಸಬಾರದು, ಬದಲಾಗಿ ಕೇವಲ ಐಎಸ್‌ಐ ಪ್ರಮಾಣೀಕೃತ ವಿದ್ಯುತ್ ಉಪಕರಣಗಳನ್ನೇ ಬಳಸಬೇಕು. ಮಕ್ಕಳು ಸ್ವಿಚ್ ಬೋರ್ಡ್‌ಗಳ ಬಳಿ ಹೋಗದಂತೆ ತಡೆಯಲು ಸಾಕೆಟ್‌ಗಳಿಗೆ ತಮ್ಮ ಮೋಟಾರ್ ಮತ್ತು ಪ್ಯಾನಲ್ ಬಾಕ್ಸ್‌ಗಳ ಆರ್ಥಿಂಗ್ ಸಂಪರ್ಕವನ್ನು ನಿಯಮಿತವಾಗಿ ಪರಿಶೀಲಿಸಬೇಕು.
-
ಗೌರಿಬಿದನೂರು: ಸಾರ್ವಜನಿಕರಲ್ಲಿ ವಿದ್ಯುತ್ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ, ಬೆಸ್ಕಾಂ ಇಲಾಖೆಯ ವತಿಯಿಂದ ನಗರದಲ್ಲಿ 'ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ'ವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಬೆಸ್ಕಾಂ ಸಿಬ್ಬಂದಿಗಳು ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ
ಸಾರ್ವಜನಿಕರಿಗೆ ವಿದ್ಯುತ್ ಅವಘಡಗಳನ್ನು ತಪ್ಪಿಸುವ ಕುರಿತು ಮಾಹಿತಿ ನೀಡುವ ಕರಪತ್ರ ಗಳನ್ನು ಹಂಚಿ ಅರಿವು ಮೂಡಿಸಿದರು.
ಈ ಕುರಿತು ಮಾತನಾಡಿದ ಬೆಸ್ಕಾಂ ಎಇಇ ಪರಮೇಶ್ವರಪ್ಪ, ಇಂದಿನ ಮುಂಜಾಗ್ರತೆ, ನಾಳಿನ ಸುರಕ್ಷತೆ ಎಂಬ ಮಂತ್ರವನ್ನು ಸಾರ್ವಜನಿಕರು ಅಳವಡಿಸಿಕೊಳ್ಳಬೇಕು. ವಿದ್ಯುತ್ ಸಂಬಂಧಿತ ಯಾವುದೇ ಕೆಲಸಗಳನ್ನು ಮಾಡುವಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕು, ಸಾರ್ವಜನಿಕರು
ಅರ್ಥಿಂಗ್ ವ್ಯವಸ್ಥೆ ಮಾಡಿಕೊಳ್ಳಬೇಕು.
ಇದನ್ನೂ ಓದಿ: Gauribidanur News: ಅರ್ಹ ಮತದಾರರ ಹೆಸರು ಕೈಬಿಟ್ಟು ಹೋಗದಂತೆ ಜವಾಬ್ದಾರಿ ವಹಿಸಿ: ಎನ್. ಎಚ್.ಶಿವಶಂಕರರೆಡ್ಡಿ ಕರೆ
ದೋಷಪೂರಿತ ವಿದ್ಯುತ್ ಉಪಕರಣಗಳನ್ನು ಬಳಸಬಾರದು, ಬದಲಾಗಿ ಕೇವಲ ಐಎಸ್‌ಐ ಪ್ರಮಾಣೀಕೃತ ವಿದ್ಯುತ್ ಉಪಕರಣಗಳನ್ನೇ ಬಳಸಬೇಕು. ಮಕ್ಕಳು ಸ್ವಿಚ್ ಬೋರ್ಡ್‌ಗಳ ಬಳಿ ಹೋಗದಂತೆ ತಡೆಯಲು ಸಾಕೆಟ್‌ಗಳಿಗೆ ತಮ್ಮ ಮೋಟಾರ್ ಮತ್ತು ಪ್ಯಾನಲ್ ಬಾಕ್ಸ್‌ಗಳ ಆರ್ಥಿಂಗ್ ಸಂಪರ್ಕವನ್ನು ನಿಯಮಿತವಾಗಿ ಪರಿಶೀಲಿಸಬೇಕು. ವಿದ್ಯುತ್ ತಂತಿಗಳ ಸಮೀಪ ಅಡಿಕೆ, ತೆಂಗಿನ ಕಾಯಿ ಕೀಳುವಾಗ ಲೋಹದ ಹಿಡಿಕೆಗಳನ್ನು ಬಳಸಬಾರದು ಎಂದರು.
ಸಣ್ಣ ನಿರ್ಲಕ್ಷ್ಯವೂ ದೊಡ್ಡ ಅಪಾಯಕ್ಕೆ ದಾರಿ ಮಾಡಿಕೊಡಬಹುದು, ಆದ್ದರಿಂದ ಪ್ರತಿಯೊಬ್ಬರೂ ವಿದ್ಯುತ್ ಬಳಕೆಯ ವಿಷಯದಲ್ಲಿ ಜವಾಬ್ದಾರಿಯುತವಾಗಿ ಮತ್ತು ಎಚ್ಚರಿಕೆಯಿಂದ ನಡೆದುಕೊಳ್ಳ ಬೇಕು ಎಂದು ಎಚ್ಚರಿಸಿದರು.