ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: ಡಾ.ಎನ್.ರಾಜಮ್, ಪಂಡಿತ್ ಉಲ್ಲಾಸ್ ಕಾಶಲ್ಕರ್ ಅವರಿಗೆ ಶ್ರೀ ಸತ್ಯ ಸಾಯಿ ಸಂಗೀತ ಶಿರೋಮಣಿ ಪುರಸ್ಕಾರ

ತಾಲ್ಲೂಕಿನ ಮುದ್ದೇನಹಳ್ಳಿ ಸತ್ಯ ಸಾಯಿ ಗ್ರಾಮದಲ್ಲಿ ಕಳೆದ ಮೂರು ದಿನಗ ಳಿಂದ ನಡೆದ "ಭಾರತ ಸಂಗೀತ ಸಮ್ಮೇಳನ-2026"ರ ಸಮಾರೋಪ ಸಮಾರಂಭ ಬುಧವಾರ ನಡೆಯಿತು. ಕಾರ್ಯಕ್ರಮದಲ್ಲಿ ಕಲಾವಿದರಾದ ಡಾ.ಎನ್.ರಾಜಮ್ ಮತ್ತು ಪಂಡಿತ್ ಉಲ್ಲಾಸ್ ಕಾಶಲ್ಕರ್ ಅವರಿಗೆ "ಶ್ರೀ ಸತ್ಯ ಸಾಯಿ ಸಂಗೀತ ಶಿರೋಮಣಿ" ಪುರಸ್ಕಾರ ನೀಡಿ ನೀಡಿ ಗೌರವಿಸ ಲಾಯಿತು.

ಭಾರತ ಸಂಗೀತ ಸಮ್ಮೇಳನಕ್ಕೆ ವೈಭವದ ತೆರೆ

-

Profile
Ashok Nayak Jul 15, 2026 9:34 PM

ಚಿಕ್ಕಬಳ್ಳಾಪುರ: ತಾಲ್ಲೂಕಿನ ಮುದ್ದೇನಹಳ್ಳಿ ಸತ್ಯ ಸಾಯಿ ಗ್ರಾಮದಲ್ಲಿ ಕಳೆದ ಮೂರು ದಿನಗ ಳಿಂದ ನಡೆದ "ಭಾರತ ಸಂಗೀತ ಸಮ್ಮೇಳನ-2026"ರ ಸಮಾರೋಪ ಸಮಾರಂಭ ಬುಧವಾರ ನಡೆಯಿತು. ಕಾರ್ಯಕ್ರಮದಲ್ಲಿ ಕಲಾವಿದರಾದ ಡಾ.ಎನ್.ರಾಜಮ್ ಮತ್ತು ಪಂಡಿತ್ ಉಲ್ಲಾಸ್ ಕಾಶಲ್ಕರ್ ಅವರಿಗೆ "ಶ್ರೀ ಸತ್ಯ ಸಾಯಿ ಸಂಗೀತ ಶಿರೋಮಣಿ" ಪುರಸ್ಕಾರ ನೀಡಿ ನೀಡಿ ಗೌರವಿಸ ಲಾಯಿತು.

ಕಾರ್ಯಕ್ರಮದಲ್ಲಿ ಅಶೀರ್ವಚನ ನೀಡಿದ ಸದ್ಗುರು ಶ್ರೀ ಮಧುಸೂದನ ಸಾಯಿ, "ದೈನಂದಿನ ಜೀವನದಲ್ಲಿ ಸೃಜನಶೀಲತೆಯಿಂದ ಕೂಡಿದ ಚಟುವಟಿಕೆಗಳನ್ನು ನಡೆಸಿದಾಗ ಆತ್ಮಸಾಕ್ಷಾತ್ಕಾರದ ಆಯಾಮವನ್ನು ಸ್ಪರ್ಶಿಸಿದ ಅನುಭವ ಪಡೆಯುತ್ತೀರಿ. ಸಂಗೀತ-ನೃತ್ಯದಂಥ ಕಲೆಗಳ ಪರಿಚಯ ಎಲ್ಲರಿಗೂ ಇರಬೇಕು ಎಂದು ಸಲಹೆ ಮಾಡಿದರು.

ಇದನ್ನೂ ಓದಿ: Chikkaballapur News: ಪೆರೇಸಂದ್ರ ಕ್ಷೇತ್ರದ 50 ಹಾಲು ಉತ್ಪಾದಕರಿಗೆ ಎನ್‌ಡಿಡಿಬಿ ಆನಂದ್ ಡೈರಿಗೆ ಉಚಿತ ಅಧ್ಯಯನ ಪ್ರವಾಸಕ್ಕೆ ಚಾಲನೆ

"ನಮ್ಮ ಶಾಲೆಗಳಲ್ಲಿ ಆರನೇ ತರಗತಿಯಿಂದಲೇ ಮಕ್ಕಳಿಗೆ ಭಜನೆಗಳನ್ನು ಕಲಿಸಲಾಗುತ್ತದೆ. ಸಂಗೀತ ಮೂಲ ರಾಗಗಳ ಪರಿಚಯ ಮಾಡಿಸಲಾಗುತ್ತದೆ. ನಿರ್ದಿಷ್ಟ ಭಜನೆಯು ಯಾವ ರಾಗಕ್ಕೆ ಸೇರಿದೆ ಎಂಬ ವಿಷಯಗಳನ್ನೂ ಅವರಿಗೆ ತಿಳಿಸಿಕೊಡಲಾಗುತ್ತದೆ" ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಾದ ಗುರುಕುಲಂ ನಿರ್ದೇಶಕರಾದ ರೇವತಿ ರಾಮಮಂದ್ರನ್, ಪ್ರಶಾಂತಿ ಬಾಲ ಮಂದಿರ ಅಧ್ಯಕ್ಷರಾದ ಡಾ ಬಿ.ಎನ್. ನರಸಿಂಹಮೂರ್ತಿ, ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಆಡಳಿತ ವಿಭಾಗದ ರಿಜಿಸ್ಟ್ರಾರ್ ಹನುಮಂತ ರಾವ್ ನಾಯ್ದು ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭಕ್ಕೂ ಮುನ್ನ ನಡೆದ ವಿವಿಧ ಗೋಷ್ಠಿಗಳಲ್ಲಿ ಖ್ಯಾತ ಕಲಾವಿದರು ಮತ್ತು ವಿದ್ವಾಂಸರಾದ ರಮಾ ಭಾರದ್ವಾಜ್, ಡಾ.ವೀಣಾ ಮೂರ್ತಿ ವಿಜಯ್, ತನೂಶ್ರೀ ಶಂಕರ್, ಮಧು ಸೂದನ್ ಕಲೈಚೆಲ್ಟನ್, ಹರ್ಷ್ ನಾರಾಯಣ್, ಡಾ ಗಾಯತ್ರಿ ಗಿರೀಶ್, ಪ್ರೊ ಲವ್ಲಿ ಶರ್ಮಾ ಅವರು ಹಲವು ವಿಚಾರಗಳನ್ನು ಹಂಚಿಕೊಂಡರು.

unnamed ok

ವಿಶಿಷ್ಟ ಶೈಲಿಯಿಂದ ಮನೆಮಾತಾದ ಎನ್.ರಾಜಮ್

"ಶ್ರೀ ಸತ್ಯ ಸಾಯಿ ಸಂಗೀತ ಶಿರೋಮಣಿ" ಪುರಸ್ಕಾರಕ್ಕೆ ಪಾತ್ರರಾದ ವಿದುಷಿ ಎನ್.ರಾಜಮ್ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ವಿಶ್ವವಿಖ್ಯಾತ ಪಿಟೀಲು (ವಯಲಿನ್) ವಾದಕಿ. ಕರ್ಣಾಟಕ ಸಂಗೀತ ಶೈಲಿಯಲ್ಲಿ ಅಭ್ಯಾಸ ಆರಂಭಿಸಿದ ಅವರು, ನಂತರ ಹಿಂದೂಸ್ತಾನಿ ಸಂಗೀತವನ್ನು ಅವಳಡಿಸಿಕೊಂಡು ತಮ್ಮದೇ ಆತ ವಿಶಿಷ್ಟ 'ಗಾಯಕಿ ಅಂಗ' ವಾದನ ಶೈಲಿಯನ್ನು ರೂಪಿಸಿದರು. ಈ ಶೈಲಿಯಲ್ಲಿ ಪಿಟೀಲಿನ ಮೂಲಕ ಮಾನವ ಕಂಠಸಿರಿಯ ಭಾವ, ನಾದ ಮತ್ತು ಸೂಕ್ಷ್ಮತೆಯನ್ನು ಮನೋಜ್ಞವಾಗಿ ಅಭಿವ್ಯಕ್ತಿಸಲಾಗುತ್ತದೆ. ಈ ವಿಶಿಷ್ಟ ಶೈಲಿಯಿಂದಾಗಿ ಅವರು ಅಪಾರ ಖ್ಯಾತಿ ಪಡೆದಿದ್ದಾರೆ.

ವಾರಾಣಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಸುದೀರ್ಘಕಾಲ ಪ್ರಾಧ್ಯಾಪಕಿಯಾಗಿ ಹಾಗೂ ಸಂಗೀತ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸಿ, ಅನೇಕ ಪ್ರತಿಭಾವಂತ ಸಂಗೀತಗಾರ ರನ್ನು ರೂಪಿಸಿದ್ದಾರೆ. ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ಪರಂಪರೆಯ ಸಂರಕ್ಷಣೆಯಲ್ಲಿ ಮಹತ್ತರ ಕೊಡುಗೆ ನೀಡಿದ್ದಾರೆ. ಇವರ ಅಮೂಲ್ಯ ಕೊಡುಗೆಯನ್ನು ಪರಿಗಣಿಸಿದ ಕೇಂದ್ರ ಸರ್ಕಾರವು ಪದ್ಮಶ್ರೀ, ಪದ್ಮಭೂಷಣ ಹಾಗೂ ಪದ್ಮವಿಭೂಷಣ ಸೇರಿದಂತೆ ಅನೇಕ ಪ್ರತಿಷ್ಠಿತ ಗೌರವಗಳಿಂದ ಸನ್ಮಾನಿಸಿದೆ. 

ಖ್ಯಾತ ಗಾಯಕ ಪಂಡಿತ್ ಉಲ್ಲಾಸ್ ಕಶಾಲ್ಕರ್

"ಶ್ರೀ ಸತ್ಯ ಸಾಯಿ ಸಂಗೀತ ಶಿರೋಮಣಿ" ಪುರಸ್ಕಾರಕ್ಕೆ ಪಾತ್ರರಾದ ಪಂಡಿತ್ ಉಲ್ಲಾಸ್ ಕಶಾಲ್ಕರ್ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದ ಶ್ರೇಷ್ಠ ಗಾಯಕರಲ್ಲಿ ಒಬ್ಬರು. ಗ್ವಾಲಿಯರ್, ಜೈಪುರ-ಅತ್ರೌಲಿ ಮತ್ತು ಆಗ್ರಾ ಘರಾನೆಗಳ ಗಾಯನ ಪರಂಪರೆಯನ್ನು ಸಮನ್ವಯಗೊಳಿಸಿದ ಅಪರೂಪದ ಹಾಡುಗಾರಿಕೆಯ ಶೈಲಿಗೆ ಅವರು ಹೆಸರುವಾಸಿಯಾಗಿದ್ದಾರೆ.

ರಾಗಗಳ ಶುದ್ಧತೆ, ಭಾವಪೂರ್ಣ ಅಭಿವ್ಯಕ್ತಿ ಹಾಗೂ ಆಕರ್ಷಕ ಗಾಯನ ಪ್ರಸ್ತುತಿ ಅವರ ವೈಶಿಷ್ಟ್ಯ. ಸಂಗೀತ ಶಿಕ್ಷಣಕ್ಕೂ ತಮ್ಮನ್ನು ಸಮರ್ಪಿಸಿಕೊಂಡು ಅನೇಕ ಪ್ರತಿಭಾವಂತ ಶಿಷ್ಯರನ್ನು ರೂಪಿಸಿ ದ್ದಾರೆ. ಭಾರತೀಯ ಶಾಸ್ತ್ರೀಯ ಸಂಗೀತದ ಸಂರಕ್ಷಣೆ ಮತ್ತು ಪ್ರಸಾರದಲ್ಲಿ ಅವರ ಸೇವೆ ಅಪಾರ ವಾಗಿದೆ. ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿದ ಅಪಾರ ಕೊಡುಗೆಗಾಗಿ ಕೇಂದ್ರ ಸರ್ಕಾರವು ಅವರಿಗೆ ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.