ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Adichunchanagiri Shri: ಶ್ರೀನಿವಾಸಸಾಗರದಲ್ಲಿ ದೋಣಿ ವಿಹಾರಕ್ಕೆ ಚಾಲನೆ ನೀಡಿ ಶುಭ ಕೋರಿದ ಶ್ರೀಮಂಗಳನಾಥಸ್ವಾಮೀಜಿ

ತಾಲೂಕಿನಲ್ಲಿ ಜಲಕ್ರೀಡೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತ್ರಿಪುರಿ ಸಾಲ್ವೆಂಟ್ಸ್ ಸಂಸ್ಥೆಯ ಸಂಸ್ಥಾಪಕ ಭೂಷಣ್ ಎಂಬ ಯುವಕ ದೋಣಿವಿಹಾರ ಎಂಬ ಸಾಹಸಕ್ಕೆ ಕೈಹಾಕಿದ್ದಾರೆ. ಈ ಕ್ಷೇತ್ರ ದಲ್ಲಿ ಸರಿಯಾದ ರೀತಿಯಲ್ಲಿ ಬೆಳವಣಿಗೆ ಕಾಣುವ ಮೂಲಕ ಜನಪ್ರೀತಿಗೆ ಪಾತ್ರವಾಗಲಿ. ಅವರ ಸಂಕಲ್ಪ ಕೈಗೂಡಲಿ ಎಂದು ಭೈರವೇಶ್ವರನ ಆಶೀರ್ವಾದ ಈ ಸಂಸ್ಥೆಯ ಮೇಲಿರಲಿ ಎಂದು ಶುಭ ಕೋರಿದರು.

ದೋಣಿ ವಿಹಾರಕ್ಕೆ ಚಾಲನೆ ನೀಡಿ ಶುಭ ಕೋರಿದ ಶ್ರೀಮಂಗಳನಾಥಸ್ವಾಮೀಜಿ

-

Ashok Nayak Ashok Nayak Sep 26, 2025 10:25 AM

ಚಿಕ್ಕಬಳ್ಳಾಪುರ: ಪುರಾಣ ಪ್ರಸಿದ್ಧ ಪ್ರವಾಸಿ ತಾಣವಾದ ಲಕ್ಷ್ಮೀವೆಂಕಟೇಶ್ವರಸ್ವಾಮಿ ನೆಲೆಸಿರುವ ಶ್ರೀನಿವಾಸ ಸಾಗರದಲ್ಲಿ ಗುರುವಾರ ತ್ರಿಪುರಿ ಸಾಲ್ವೆಂಟ್ಸ್ ಸಂಸ್ಥೆ ನೂತನವಾಗಿ ಪ್ರಾರಂಭಿ ಸಿರುವ ದೋಣಿವಿಹಾರಕ್ಕೆ ಚಾಲನೆ ನೀಡಿದ ಆದಿಚುಂಚನಗಿರಿ ಶಾಖಾಮಠದ ಮಂಗಳನಾಥ ಸ್ವಾಮೀಜಿ (Adichunchanagiri Shri Mangalanath Swamiji) ದೋಣಿಯಲ್ಲಿ ಕುಳಿತು ವಿಹಾರ ಮಾಡುವ ಮೂಲಕ ಉದ್ಘಾಟಿಸಿದರು.

ತಾಲೂಕಿನ ಪೋಶೆಟ್ಟಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ಶ್ರೀನಿವಾಸಸಾಗರದ ಯಾತ್ರಿನಿವಾಸದ ಬಳಿ ತ್ರಿಪುರಿ ವಾಟರ್ ಸ್ಪೋರ್ಟ್ಸ್ ಅಂಡ್ ಅಡ್ವೆಂರ‍್ಸ್ ಸಂಸ್ಥೆಯಿಂದ ಆಯೋಜಿಸಿದ್ದ ದೋಣಿವಿಹಾರ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ತಾಲೂಕಿನಲ್ಲಿ ಜಲಕ್ರೀಡೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತ್ರಿಪುರಿ ಸಾಲ್ವೆಂಟ್ಸ್ ಸಂಸ್ಥೆಯ ಸಂಸ್ಥಾಪಕ ಭೂಷಣ್ ಎಂಬ ಯುವಕ ದೋಣಿವಿಹಾರ ಎಂಬ ಸಾಹಸಕ್ಕೆ ಕೈಹಾಕಿದ್ದಾರೆ. ಈ ಕ್ಷೇತ್ರ ದಲ್ಲಿ ಸರಿಯಾದ ರೀತಿಯಲ್ಲಿ ಬೆಳವಣಿಗೆ ಕಾಣುವ ಮೂಲಕ ಜನಪ್ರೀತಿಗೆ ಪಾತ್ರವಾಗಲಿ. ಅವರ ಸಂಕಲ್ಪ ಕೈಗೂಡಲಿ ಎಂದು ಭೈರವೇಶ್ವರನ ಆಶೀರ್ವಾದ ಈ ಸಂಸ್ಥೆಯ ಮೇಲಿರಲಿ ಎಂದು ಶುಭ ಕೋರಿದರು.

ಇದನ್ನೂ ಓದಿ: Adichunchanagiri: ಪರಿಮಳ ಸೂಸುವ ಕುಸುಮದಂತೆ ನಿಮ್ಮ ಜ್ಞಾನದ ಪಯಣವಿರಲಿ : ಚುಂಚಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅಭಿಮತ

ಈ ಬಗ್ಗೆ ಮಾತನಾಡಿರುವ ತ್ರಿಪುರಿ ಸಾಲ್ವೆಂಟ್ಸ್  ಸಂಸ್ಥಾಪಕ ಭೂಷಣ್ ಮಾತನಾಡಿ ಶ್ರೀನಿವಾಸ ಸಾಗರದಲ್ಲಿ ಸಾರ್ವಜನಿಕರಿಗಾಗಿ ಬೋಟಿಂಗ್ ಸೌಲಭ್ಯ ಆರಂಭಿಸಲು ಸಹಾಯ ಮಾಡಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಸಂಸದ ಡಾ.ಕೆ.ಸುಧಾಕರ್, ಶಾಸಕ ಪ್ರದೀಪ್ ಈಶ್ವರ್, ಭರಣಿ ವೆಂಕಟೇಶ್ ಅವರನ್ನು ಕೃತಜ್ಞತೆಯಿಂದ ಸ್ಮರಿಸುತ್ತೇನೆ ಎಂದ ಅವರು ಗುಣಮಟ್ಟದ ಸೇವೆ ಒದಗಿಸುವ ನಿಟ್ಟಿನಲ್ಲಿ ದೋಣಿ ವಿಹಾರ ಮಾಡಲು ಬರುವವರಿಗಾಗಿ ಲೈಫ್‌ ಜಾಕೆಟ್‌ಗಳನ್ನು ಒದಗಿಸುವ ಜೊತೆಗೆ ದೋಣಿವಿಹಾರದ ಪ್ರಯಾಣಿಕರಿಗೆ ಜೀವವಿಮೆಯನ್ನು ಕೂಡ ಒದಗಿಸಲಾಗಿದೆ.

ಪ್ರಯಾಣಿಕರು ಸಂಚರಿಸುವ ಮಾರ್ಗಗಳಲ್ಲೆಲ್ಲಾ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಮದ್ಯ ಪಾನ ಮಾಡಿ ಬರುವವರಿಗೆ ಬೋಟಿಂಗ್ ಪ್ರವೇಶ ಇರುವುದಿಲ್ಲ.ಒಟ್ಟಾರೆ ದೋಣಿವಿಹಾರ ಮಾಡುವವರ ರಕ್ಷನೆಯ ದೃಷ್ಟಿಯಿಂದ ಸರಕಾರದ ನಿಯಮಾನುಸಾರ ಬೇಕಾದ ಕ್ರಮಗಳನ್ನು ನಮ್ಮ ಸಂಸ್ಥೆ ತೆಗೆದುಕೊಂಡಿ ಎಂದರು.

ಶ್ರೀನಿವಾಸಸಾಗರದಲ್ಲಿ ಸದ್ಯ ಸಾರ್ವಜನಿಕರ ಬಳಕೆಗೆ ಎರಡು ದೋಣಿಗಳ ಸೇವೆಯನ್ನು ಒದಗಿಸ ಲಾಗಿದೆ. ಬೇಡಿಕೆ ಮತ್ತು ಜನರ ಆಸಕ್ತಿ ನೋಡಿಕೊಂಡು ಮುಂದಿನ ದಿನಗಳಲ್ಲಿ ಪೆಡಲ್ ಹಾಗೂ ಮ್ಯಾನ್ಯುಯೆಲ್ ಬೋಟ್ಗಳನ್ನು ಹಾಕಲು ತೀರ್ಮಾನಿಸಲಾಗುವುದು. ದೋಣಿ ನಡೆಸುವ ಸಿಬ್ಬಂದಿ ಯು ನ್ಯಾಷನಲ್ ಇನ್ಸ್‌ ಸ್ಟಿಟ್ಯೂಟ್ ಆಫ್ ವಾಟರ್ ಸ್ಪೋರ್ಟ್ಸ್ ಅಡ್ವೆಂರ‍್ಸ್ ಸಂಸ್ಥೆಯಿಂದ ತರಬೇತಿ ಪಡೆದವರಾಗಿದ್ದಾರೆ.ಮಂಗಳೂರು ಉಡುಪಿ ಗೋವಾ ಮತ್ತಿತರ ಸಮುದ್ರ ತೀರಗಳಿಗೆ ಹೋಗಿ ದೋಣಿ ಪ್ರಯಾಣದ ಅನುಭವ ಪಡೆಯುವ ಕನಸು ಕಾಣುತ್ತಿರುವ ಗ್ರಾಮೀಣ ಪ್ರದೇಶದ ಮಂದಿ ಇಲ್ಲಿಗೆ ಬಂದು ಕಡಿಮೆ ದರದಲ್ಲಿ ಬೆಟ್ಟಗುಡ್ಡಗಳ ಪರಿಸರದ ನಡುವೆ ಅನುಭವ ಪಡೆಯುವಂತೆ ಅವಕಾಶ ಕಲ್ಪಿಸಲಾಗಿದೆ ಎಂದರು.

ದೋಣಿ ವಿಹಾರಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ವಿಶ್ವೇಶ್ವರಯ್ಯ ಅವರ ಮೊಮ್ಮಗ ಸತೀಶ್ ಮೋಕ್ಷಗೊಂಡಂ, ಕೆ.ವಿ.ನವೀನ್‌ಕಿರಣ್, ಕೆ.ಎಂ.ಮುನೇಗೌಡ, ಉದ್ಯಮಿ ಮಹೇಶ್, ಯುವ ಮುಖಂಡ ಅಲ್ಲು ಅನಿಲ್, ಬಾಲಕುಂಟಹಳ್ಳಿ ಗಂಗಾಧರ್, ಪಿಳ್ಳಾಂಜಿನಪ್ಪ, ಚೀಗಟೇನಹಳ್ಳಿ ಮಂಜುನಾಥ್, ಬಿ.ವಿ.ಆನಂದ್, ಪೋಶೆಟ್ಟಹಳ್ಳಿ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್, ಕಾಮಗಾನಹಳ್ಳಿ ಸುದರ್ಶನ್ ರೆಡ್ಡಿ ಮತ್ತಿತರರು ಇದ್ದರು.